Best Electric Cars: ಪೆಟ್ರೋಲ್ ಅಗತ್ಯಾನೇ ಇಲ್ಲ. ಕರೆಂಟ್ ಬಿಲ್ಲ ಜಾಸ್ತಿ ಬರಲ್ಲ- ಬೆಸ್ಟ್ ಎಲೆಕ್ಟ್ರಿಕ್ ಕಾರ್ ಗಳು.
Top Best Electric Cars in India – Explained Clearly in Kannada – By Automobile Kannada News Team.
Best Electric Cars: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಬೇಡಿಕೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು ಬನ್ನಿ ಇವತ್ತಿನ ಲೇಖನಿಯಲ್ಲಿ ನಿಮಗೆ ಒಂದು ವೇಳೆ ನೀವು ಕೂಡ ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ ಬೆಸ್ಟ್ ಎಲೆಕ್ಟ್ರಿಕ್ ಕಾರುಗಳು(Best Electric Cars) ಯಾವುವು ಎಂಬುದನ್ನು ನಿಮಗೆ ಇವತ್ತಿನ ಲೇಖನಿಯಲ್ಲಿ ತೋರಿಸಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಟಾಪ್ ಕಾರುಗಳು ಯಾವೆಲ್ಲ ಎಂಬುದನ್ನು ತಿಳಿಯೋಣ.
Top Best Electric Cars in India – Explained Clearly in Kannada – By Automobile Kannada News Team.
MG Cormet: ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಎಲೆಕ್ಟ್ರಿಕ್ ಕಾರ್ MG Cormet ಆಗಿದೆ. MG Cormet ಎಲೆಕ್ಟ್ರಿಕ್ ಕಾರ್ ನಿಮಗೆ 7.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರ್ ನಿಮಗೆ ಬರೋಬ್ಬರಿ 238 km ಗಳ ರೇಂಜ್ ಅನ್ನು ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ. ಒಂದೊಳ್ಳೆ ಲಾಂಗ್ ರೇಂಜ್ ಹಾಗೂ ಕೈಗೆಟಕುವ ಬಜೆಟ್ ನಲ್ಲಿ ಖಂಡಿತವಾಗಿ ಇದೊಂದು ಒಳ್ಳೆಯ ಕಾರ್ ಆಪ್ಶನ್ ಆಗಿದೆ ಎಂದು ಹೇಳಬಹುದಾಗಿದೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ಎರಡನೇ ಸ್ಥಾನದಲ್ಲಿ ಟಾಟಾ ಸಂಸ್ಥೆಯ ಟಿಯಾಗೋ ಕಾರ್ ಕಾಣಿಸಿಕೊಳ್ಳುತ್ತದೆ. Tata Tiago ಕಾರ್ ಕೂಡ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಪೈಕಿಯಲ್ಲಿ ವೇಗವಾಗಿ ಬೆಳೆಯುತ್ತಿರುವಂತಹ ಬ್ರಾಂಡ್ ಆಗಿದೆ ಎಂದು ಹೇಳಬಹುದಾಗಿದೆ. Tata Tiago ನಿಜಕ್ಕೂ ಕೂಡ ಒಂದೊಳ್ಳೆ ಬೆಳೆಯಲ್ಲಿ ನಿಮಗೆ ಉತ್ತಮ ಎಲೆಕ್ಟ್ರಿಕ್ ಕಾರ್ ಅನುಭವವನ್ನು ನೀಡುವಂತಹ ಕಾರ್ ಆಗಿದೆ. ಸಿಂಗಲ್ ಚಾರ್ಜ್ ನಲ್ಲಿ ನಿಮಗೆ Tata Tiago ಕಾರು 316km ರೇಂಜ್ ಅನ್ನು ನೀಡುತ್ತಿರುವುದು ನಿಜಕ್ಕೂ ಕೂಡ ಮೆಚ್ಚಿ ಬೇಕಾಗಿರುವ ವಿಚಾರವಾಗಿದ್ದು ಇನ್ನೂ ಇದರ ಬೆಲೆ 8.69 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆಯಾಗಿದ್ದು ಬೆಲೆಯಲ್ಲಿ ಕೂಡ ಇದು ಉತ್ತಮ ಲಾಭವನ್ನು ನೀಡುವ ಕೆಲಸವನ್ನು ಮಾಡುತ್ತಿದೆ.
Citroen EC3 ಎಲೆಕ್ಟ್ರಿಕ್ ಕಾರು ಈ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. 11 ರಿಂದ 12 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರು ಎಲೆಕ್ಟ್ರಿಕ್ ಕಾರ್ ಗಳ ಸೆಗ್ಮೆಂಟ್ ನಲ್ಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಜನರ ಮನಸ್ಸನ್ನು ಗೆಲ್ಲುತ್ತಿರುವ ಬ್ರಾಂಡ್ ಆಗಿದೆ ಎಂದು ಹೇಳಬಹುದಾಗಿದೆ. Citroen EC3 ವಿದೇಶಿ ಬ್ರ್ಯಾಂಡ್ ಆಗಿದ್ದರೂ ಕೂಡ ಭಾರತ ದೇಶದಲ್ಲಿ ಭಾರತದ ಗ್ರಾಹಕರಿಗೆ ತಕ್ಕಂತೆ ಫೀಚರ್ಸ್ ಗಳನ್ನು ನೀಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಕೂಡ ಕಮಾಲ್ ಮಾಡುತ್ತಿದೆ. Citroen EC3 ಎಲೆಕ್ಟ್ರಿಕ್ ಕಾರ್ ನಿಮಗೆ ಬರೋಬ್ಬರಿ 320 ಕಿಲೋಮೀಟರ್ಗಳ ಲಾಂಗ್ ರೇಂಜ್ ಅನ್ನು ನೀಡುತ್ತದೆ.
Tata Nexon ಕಾರು ಲಿಸ್ಟ್ ನಲ್ಲಿ ಕಾಣಿಸಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಯಾಕೆಂದರೆ ಸದ್ಯದ ಮಟ್ಟಿಗೆ ಭಾರತದ ಎಲೆಕ್ಟ್ರಿಕ್ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ Tata Nexon ಮುಂಚೂಣಿಯಲ್ಲಿರುವಂತಹ ಕಾರು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. 14 ರಿಂದ 19 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಬಹುದಾಗಿದೆ. ಕಂಪನಿ ಹೇಳುವ ಪ್ರಕಾರ Tata Nexon ಎಲೆಕ್ಟ್ರಿಕ್ ಕಾರು ಬರೋಬ್ಬರಿ 465 km ಗಳ ಸಿಂಗಲ್ ಚಾರ್ಜ್ ನಲ್ಲಿ ಲಾಂಗ್ ರೇಂಜ್ ಅನ್ನು ನೀಡುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಖಂಡಿತವಾಗಿ ಈ ಮೇಲೆ ಹೇಳಿರುವಂತಹ ನಾಲ್ಕು ಕಾರುಗಳು ಕೂಡ ನಿಮಗೆ ಎಲೆಕ್ಟ್ರಿಕ್ ಕಾರುಗಳ ಖರೀದಿಯಲ್ಲಿ ಬೆಸ್ಟ್ ಕಾರ್ ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಏನು ಕೆಲಸ ಮಾಡೋದು ಬೇಡ- ATM ಒಂದು ಸ್ಥಾಪಿಸಿ, ಅದೇ ನಿಮಗೆ ಕೈತುಂಬಾ ಹಣ ಕೊಡುತ್ತೆ. ನಿಮ್ಮ ಊರಿನಲ್ಲಿ ATM ಹಾಕೋದು ಹೇಗೆ ಗೊತ್ತೇ? – ATM Business Idea