Toyota Innova Hycross GX: ಬಿಡುಗಡೆ ಆಯ್ತು ನೋಡಿ ಟೊಯೋಟಾ ಸಂಸ್ಥೆಯ ಹೊಸ ಕಾರು. ಬೆಲೆ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Toyota Innova Hycross GX car features and specification details explained in Kannada

Toyota Innova Hycross GX: ನಮಸ್ಕಾರ ಸ್ನೇಹಿತರೇ ನಮ್ಮ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಪ್ರಭಾವ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲೂ ವಿಶೇಷವಾಗಿ ವೇಗದ ಕಾರುಗಳಿಗೆ ಹೆಸರುವಾಸಿ ಆಗಿರುವಂತಹ ಟೊಯೋಟಾ ಕಿರ್ಲೋಸ್ಕರ್(Toyota Kirloskar) ಕಂಪನಿಯ ಕಾರುಗಳು ಭಾರತದ ರೋಡುಗಳಲ್ಲಿ ರಾಜ್ಯಭಾರ ಮಾಡುತ್ತಿವೆ. ಇವತ್ತಿನ ಲೇಖನಿಯಲ್ಲಿ ಕೂಡ ಹೊಸದಾಗಿ ಲಾಂಚ್ ಆಗಿರುವಂತಹ Toyota Innova Hycross GX ಕಾರಿನ ಬಗ್ಗೆ ಮಾತನಾಡಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

Toyota Innova Hycross GX ಕಾರಿನಲ್ಲಿ ನೀವು ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್ ಅನ್ನು ಕಾಣಬಹುದಾಗಿದೆ. 18 ಇಂಚುಗಳ ದೊಡ್ಡದಾದ ಅಲಾಯ್ ವೀಲ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದು. Toyota Innova Hycross GX ಕಾರಿನ ಒಳ ವಿನ್ಯಾಸದಲ್ಲಿ ಸಾಕಷ್ಟು ನವೀಕರಣವನ್ನು ಮಾಡಿರುವುದನ್ನು ಕೂಡ ನೀವು ಕಾಣಬಹುದಾಗಿದೆ. ಡ್ಯಾಶ್ ಬೋರ್ಡ್ ಹಾಗೂ ಡೋರ್ ಟ್ರಿಮ್ ನಲ್ಲಿ ಬ್ರೌನ್ ಫಿನಿಷ್ ಅನ್ನು ನೀವು ಕಾಣಬಹುದಾಗಿದೆ. Toyota Innova Hycross GX ಕಾರಿನಲ್ಲಿ ನೀವು ಏಳು ಹಾಗೂ ಎಂಟು ಸೀಟ್ ಕೆಪಾಸಿಟಿಯ ವೇರಿಯಂಟ್ಗಳನ್ನು ಕೂಡ ಕಾಣಬಹುದಾಗಿದೆ.

Toyota Innova Hycross GX car features and specification details explained in Kannada
Toyota Innova Hycross GX car features and specification details explained in Kannada

Toyota Innova Hycross GX ಕಾರಿನ ಇಂಜಿನ್- Toyota Innova Hycross GX Engine

Toyota Innova Hycross GX ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ ಈ ಲಿಮಿಟೆಡ್ ಎಡಿಶನ್ ಕಾರು 2.0 ಲೀಟರ್ NA ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. 172Hp ಪವರ್ ಹಾಗೂ 205 ಎನ್ಎಂ ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಈ ಇಂಜಿನ್ ಹೊಂದಿದೆ. ಇದು ಎಷ್ಟರ ಮಟ್ಟಿಗೆ ಸ್ಪೆಷಲ್ ಆಗಿದೆ ಎಂದು ನೋಡೋದಾದ್ರೆ ಈ ಸ್ಟಾಕ್ ಕೇವಲ ಡಿಸೆಂಬರ್ ತಿಂಗಳವರೆಗೆ ಮಾತ್ರ ಇರಲಿದೆ ಎನ್ನುವುದಾಗಿ ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ.

ಇದನ್ನು ಕೂಡ ಓದಿ: Personal Loan: ಯಾರು ಕೊಡಲಿಲ್ಲ ಅಂದ್ರು ಇವರು ಕೊಡ್ತಾರೆ ಲೋನ್- ಪಂಜಾಬ್ ನ್ಯಾಷನಲ್ ಬ್ಯಾಂಕ್ ಲೋನ್ | Punjab National Bank Personal Loan

Toyota Innova Hycross GX ಕಾರಿನ ಫೀಚರ್ಸ್- Toyota Innova Hycross GX features

Toyota Innova Hycross GX ಕಾರಿನಲ್ಲಿ ನೀವು ಆಟೋ ಹೈ ಬೀಮ್, dynamic radar cruise control, ಲೇನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್ ಗಳನ್ನು ಕೂಡ ನೀವು ಕಾಣಬಹುದಾಗಿದೆ. ಸುರಕ್ಷತೆಯ ಕಾರಣಗಳಿಗಾಗಿ ಆರು ಏರ್ ಬ್ಯಾಗ್ ಗಳನ್ನು ಕೂಡ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಂತೆ ನೀವು ಈ ಕಾರಿನಲ್ಲಿ ಸಾಕಷ್ಟು ಸುರಕ್ಷಿತ ಹಾಗೂ ಹೈ ಅಡ್ವಾನ್ಸ್ ಟೆಕ್ನಾಲಜಿಯ ಫೀಚರ್ ಗಳನ್ನು ಕೂಡ ಕಾಣಬಹುದಾಗಿದೆ.

Toyota Innova Hycross GX ಕಾರಿನ ಬೆಲೆ- Toyota Innova Hycross GX Price details

ಇದು ಟೊಯೋಟಾ ಸಂಸ್ಥೆಯ ಲಿಮಿಟೆಡ್ ಅಡಿಷನ್ ಕಾರ್ ಆಗಿದ್ದು ಕೇವಲ ಡಿಸೆಂಬರ್ ವರೆಗೆ ಮಾತ್ರ ಇದರ ಸ್ಟಾಕ್ ಇರಲಿದೆ ಎಂಬುದಾಗಿ ಕೂಡ ಕಂಪನಿ ಮೂಲಗಳಿಂದ ತಿಳಿದು ಬಂದಿದೆ. ಇದು ಸಾಮಾನ್ಯ ಸ್ಟ್ಯಾಂಡರ್ಡ್ GX ಕಾರಿಗಿಂತ 40,000 ಹೆಚ್ಚಿನ ಬೆಲೆಯನ್ನು ಹೊಂದಿದ್ದು 20.07 ರಿಂದ 20.22 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು Toyota Innova Hycross GX ಕಾರನ್ನು ಖರೀದಿ ಮಾಡಬಹುದಾಗಿದೆ.