Volvo C40 Recharge: 530 KM ರೇಂಜ್ ನೊಂದಿಗೆ ಬಿಡುಗಡೆಯಾಗಿದೆ VOLVO ಕಾರ್- ಒಳ್ಳೆಯ ಬೆಲೆ, ವಿಶೇಷತೆಯ ಡೀಟೇಲ್ಸ್.
ಹೇಗಿದೆ Volvo C40 Recharge ಎಲೆಕ್ಟ್ರಿಕ್ ಕಾರ್?? Volvo C40 Recharge Price, Colors, Specifications and features explained Kannada
Volvo C40 Recharge: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು ಅವರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಲು ಈಗ ವೋಲ್ವೋ ಸಂಸ್ಥೆ Volvo C40 Recharge ಎಲೆಕ್ಟ್ರಿಕ್ ಕಾರ್ ಅನ್ನು ಲಾಂಚ್ ಮಾಡಿದ್ದು, ಪ್ರತಿಯೊಬ್ಬರು ಕೂಡ ಈ ಕಾರ್ ಅನ್ನು ಖರೀದಿಸುವುದಕ್ಕೆ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಬಹುದು. ಇದು ಪ್ರೀಮಿಯಂ ಸೆಗ್ಮೆಂಟ್ ನ ಎಲೆಕ್ಟ್ರಿಕ್ ಕಾರುಗಳ ಸೆಗ್ಮೆಂಟ್ನಲ್ಲಿ ಕಾಣಿಸಿಕೊಳ್ಳುತ್ತದೆ. ವೋಲ್ವೋ ಕಂಪನಿಯ ಎಲೆಕ್ಟ್ರಿಕ್ ಕಾರುಗಳ ಭವಿಷ್ಯವನ್ನು ಖಂಡಿತವಾಗಿ Volvo C40 Recharge ಕಾರು ಉಜ್ವಲ ಗೊಳಿಸಲಿದೆ ಎಂದು ಹೇಳಬಹುದಾಗಿದೆ.
ಸ್ನೇಹಿತರೇ, ಈ ಕಾರ್ ಬಗ್ಗೆ ತಿಳಿಯುವ ಸಮಯದಲ್ಲಿ ಒಂದು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಅಥವಾ ಇನ್ಯಾವುದೋ ಡಾಕ್ಯುಮೆಂಟ್ ಸರಿ ಇಲ್ಲ ಅಂತ ಬ್ಯಾಂಕ್ ಲೋನ್ ನೀಡುತ್ತಿಲ್ಲವೇ? ಹಾಗಿದ್ದರೆ, ಈ ಲೇಖನದ ಕೊನೆಯಲ್ಲಿ ನಿಮಗೊಂದು ಸಿಹಿ ಸುದ್ದಿ ಇದೆ. ಯಾವುದೇ ಡಾಕ್ಯುಮೆಂಟ್ ಇಲ್ಲದೆ, ಕ್ರೆಡಿಟ್ ಸ್ಕೋರ್ ಇಲ್ಲ ಅಂದ್ರು , ಲೋನ್ ಕೊಡ್ತಾರೆ. ಹೇಗೆ ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.
ಹೇಗಿದೆ Volvo C40 Recharge ಎಲೆಕ್ಟ್ರಿಕ್ ಕಾರ್?? Volvo C40 Recharge Price, Colors, Specifications and features explained Kannada
Volvo C40 Recharge ಕಾರು ಸಂಪೂರ್ಣವಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ನಿಂದ ಚಾಲನೆ ಆಗುವಂತಹ ಕಾರ್ ಆಗಿದೆ. ಕಾರಿನ ಡಿಸೈನ್ ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ರಿವರ್ಸ್ ಲೈಟ್ ಹಾಗೂ ಟೈಲ್ ಲ್ಯಾಂಪ್ ಡಿಸೈನ್ ಕೂಡ ಸ್ಟೈಲಿಶ್ ಆಗಿದೆ. ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. 19 ಇಂಚಿಗಳ ಡುಯಲ್ ಟೋನ್ ಅಲಾಯ್ ವೀಲ್ ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿರುವಂತಹ ಹೊರ ವಿನ್ಯಾಸ ಪಕ್ಕ ಈ ಕಾರನ್ನು ಕೂಪ್ ಡಿಸೈನ್ ನಲ್ಲಿ ಕಾಣುವಂತೆ ಮಾಡುತ್ತದೆ.
Volvo C40 Recharge ಕಾರಿನಲ್ಲಿರುವಂತಹ ಡಿಸೈನ್ ಹಾಗೂ ಫೀಚರ್ ಗಳನ್ನು ನೀವು ಬೇರೆ ಯಾವುದೇ ವೋಲ್ವೋ ಕಾರಿನಲ್ಲಿ ಕೂಡ ಕಾಣುವುದು ಅಸಾಧ್ಯವೇ ಸರಿ ಎಂದು ಹೇಳಬಹುದು. ಇದರಲ್ಲಿರುವಂತಹ ಸಾಕಷ್ಟು ಡಿಸೈನ್ಗಳು ಕಾರಿನ ಏರೋ ಡೈನಾಮಿಕ್ ಅನ್ನು ಇನ್ನಷ್ಟು ಉತ್ತಮವಾಗಿರುತ್ತದೆ. ಕಾರಿನ ಹಿಂಭಾಗದ ಡಿಸೈನ್ ಈ ಕಾರನ್ನು ಸ್ಪೋರ್ಟ್ಸ್ ಕಾರ್ ರೀತಿಯಲ್ಲಿ ಕಾಣುವಂತೆ ಮಾಡುತ್ತದೆ.
Volvo C40 Recharge ಕಾರಿನ ಒಳಗೆ ಏನಿದೆ?? volvo c40 recharge interior
Volvo C40 Recharge ಕಾರಿನ ಒಳಗೆ ಟಿಪಿಕಲ್ ವೋಲ್ವೋ ಶೈಲಿಯ ಡ್ಯಾಶ್ ಬೋರ್ಡ್ ಕಾಣೋದಕ್ಕೆ ಸಿಗುತ್ತೆ. 9 ಇಂಚುಗಳ ಇಂಫೋಟೈನ್ಮೆಂಟ್ ಸ್ಕ್ರೀನ್ ಸಿಸ್ಟಮ್ ಕೂಡ ಕಾಣುವುದಕ್ಕೆ ಸಿಗುತ್ತದೆ. ಎಸಿ ವೆಂಟ್ಸ್ ಗಳನ್ನು ಕೂಡ ಇದರಲ್ಲಿ ಜೋಡಿಸಲಾಗಿದೆ. ಸೆಂಟರ್ ಕನ್ಸೋಲ್ ಅನ್ನು ಸಿಂಪಲ್ ಆಗಿರಿಸಲು ಪ್ರಯತ್ನ ಪಡಲಾಗಿದೆ.
ಇಲ್ಲಿ ಹೆಚ್ಚಿನ ಬಟನ್ಗಳನ್ನು ಇರಿಸಲಾಗಿಲ್ಲ ಈ ಮೂಲಕ ಚಾಲಕನಿಗೆ ಕಾರನ್ನು ಸುಲಭವಾಗಿ ಸೌಲಭ್ಯವನ್ನು ನೀಡಲಾಗಿದೆ. 12.3 ಇಂಚುಗಳ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕೂಡ ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ ಸೆನ್ಸಾರ್ ಹಾಗೂ ಹೀಟಿಂಗ್ ಮತ್ತು ಕೂಲಿಂಗ್ ತಂತ್ರಜ್ಞಾನವನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. Harman Kardon ಮ್ಯೂಸಿಕ್ ಸಿಸ್ಟಮ್ ಕಾರಿನಲ್ಲಿ ಪ್ರೀಮಿಯಂ ಕ್ವಾಲಿಟಿಯ ಸೌಂಡ್ ಅನ್ನು ನೀಡುತ್ತದೆ.
ಇನ್ನು ಕಾರಿನ ಒಳಗೆ ಇರುವಂತಹ ಬೇರೆ ವಿಚಾರಗಳ ಬಗ್ಗೆ ಮಾತನಾಡುವುದಾದರೆ 413 ಲೀಟರ್ಗಳ ಬೂಟ್ಸ್ ಸ್ಪೇಸ್ ಅನ್ನು ಕೂಡ ಕಾಣಬಹುದಾಗಿದೆ. ಇನ್ನು ಸನ್ರೂಫ್ ಭಾಗದಲ್ಲಿ ಈ ಕಾರು ಸ್ವಲ್ಪಮಟ್ಟಿಗೆ ಇಳಿಮುಖವಾಗಿ ಕಾಣಿಸಿಕೊಳ್ಳುವುದರಿಂದಾಗಿ ಹೆಡ್ರೂಮ್ ಗೆ ಸ್ವಲ್ಪಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಇನ್ನು ಈ ಕಾರಿನಲ್ಲಿ ಸಂಪೂರ್ಣ ಲೆದರ್ ಫ್ರೀ, ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳಿಗೆ ಇದರಿಂದಾಗಿ ಯಾವುದೇ ಹಾನಿ ಆಗಬಾರದು ಎನ್ನುವ ಕಾರಣಕ್ಕಾಗಿ 2025ರ ಒಳಗೆ ತನ್ನ ಪ್ರತಿಯೊಂದು ಕಾರಿನಲ್ಲಿ ಕೂಡ ಚರ್ಮದ ವಸ್ತುಗಳನ್ನು ತೆಗೆದುಹಾಕುವಂತಹ ಯೋಜನೆಗೆ ವೋಲ್ವೋ ಸಿದ್ಧವಾಗಿದೆ.
Volvo C40 Recharge ಎಲೆಕ್ಟ್ರಿಕ್ ಕಾರ್ ಅನ್ನು CMA ಆಧಾರಿತವಾಗಿ ತಯಾರು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಕೇವಲ 4.7 ಸೆಕೆಂಡ್ಗಳಲ್ಲಿ ಸೊನ್ನೆಯಿಂದ 100 ಕಿಲೋಮೀಟರ್ ಹೋಗುವ ಸಾಮರ್ಥ್ಯವನ್ನು ಇದು ಹೊಂದಿದೆ. ಎಲೆಕ್ಟ್ರಿಕಲ್ ಆಗಿದ್ರೂ ಕೂಡ 100 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಹೋಗುವ ಸಾಮರ್ಥ್ಯವನ್ನು ಹೊಂದಿದೆ.
Volvo C40 Recharge ಕಾರಿನಲ್ಲಿರುವ ಬ್ಯಾಟರಿ ಹಾಗೂ ಅದು ನೀಡುವ ರೇಂಜ್ | Volvo C40 Recharge Range
Volvo C40 Recharge ಎಲೆಕ್ಟ್ರಿಕ್ ಕಾರ್ 530 ಕಿಲೋಮೀಟರ್ಗಳ ವರೆಗೆ ಕೂಡ ರೇಂಜ್ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದ್ದು, ICAT ಪ್ರಕಾರ ಇದು 683 ಕಿಲೋ ಮೀಟರ್ ವರೆಗೂ ಕೂಡ ವಿಸ್ತರಿಸಬಹುದಾಗಿದೆ. ಇದರಲ್ಲಿ ಅಳವಡಿಸಲಾಗಿರುವಂತಹ ಬ್ಯಾಟರಿ ಪ್ಯಾಕ್ ಇಷ್ಟೊಂದು ಅತ್ಯುತ್ತಮ ಫಲಿತಾಂಶಕ್ಕೆ ಕಾರಣ ಎಂದು ಹೇಳಬಹುದು. 150kwh ಡಿಸಿ ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. 27 ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಇದು ಚಾರ್ಜ್ ಆಗುತ್ತದೆ.
Volvo C40 Recharge ಬೆಲೆ:
ವಿಶೇಷತೆಗಳನ್ನು ಹಾಗೂ ಫೀಚರ್ಸ್ ಮತ್ತು ರೇಂಜ್ ಗಳನ್ನು ನೀಡುವಂತಹ ವೋಲ್ವೋ ಸಂಸ್ಥೆಯ ಈ Volvo C40 Recharge ಎಲೆಕ್ಟ್ರಿಕ್ ಕಾರ್ ಪ್ರೀಮಿಯಂ ಸೆಗ್ಮೆಂಟ್ ಎಲೆಕ್ಟ್ರಿಕ್ ಕಾರ್ ನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಬೆಲೆ 61.25 ಲಕ್ಷ ರೂಪಾಯ್ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ.