Loan: ಕಡಿಮೆ ಬಡ್ಡಿ- ಬೇಗ ಲೋನ್ ಬೇಕು ಎಂದರೆ, ದೇಶದ ಪ್ರತಿಷ್ಠಿತ ಸಂಸ್ಥೆ LIC ಇಂದ ಲೋನ್ ಪಡೆಯಿರಿ.

Loan Against LIC Policy – Interest Rates, Eligibility Criteria, Features of Loan Against LIC Policy and documents required.

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಯಾವುದೇ ವೈಯಕ್ತಿಕ ಖರ್ಚುಗಳಿಗೆ ಪಾವತಿ ಮಾಡಲು ಹಣದ ಶಾರ್ಟೆಜ್ ನಲ್ಲಿ ಇದ್ರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. LIC ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಯಾವುದೇ ರೀತಿಯ ಸಂದರ್ಭದಲ್ಲಿ ಆರ್ಥಿಕ ಸಹಾಯ ಸಿಗದೇ ಹೋದಲ್ಲಿ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಎಲ್ ಐ ಸಿ ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಕುಟುಂಬ ಸುರಕ್ಷತೆಗಾಗಿ LIC ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ ಆದರೆ ಸಾಕಷ್ಟು ಕಡಿಮೆ ಜನರಿಗೆ ತಿಳಿದಿರುವುದು ಏನೆಂದರೆ ಎಲ್ಐಸಿ ಪಾಲಿಸಿ ಮೂಲಕ ಲೋನ್ ಕೂಡ ಪಡೆದುಕೊಳ್ಳಬಹುದು. ನಿಮ್ಮ ಬಳಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೂ ಕೂಡ ನೀವು ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳಬಹುದು ಆದರೆ ನಿಮ್ಮ ಬಳಿ ಎಲ್ಐಸಿ ಪಾಲಿಸಿ ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗಿರುತ್ತದೆ. ಹಾಗಿದ್ರೆ ಬನ್ನಿ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳುವುದು ಯಾವ ರೀತಿಯಲ್ಲಿ ಮರುಪಾವತಿ ಮಾಡಬಹುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನಿಯಲ್ಲಿ ನಿಮಗೆ ನೀಡುತ್ತೇವೆ.

ಇದನ್ನು ಕೂಡ ಓದಿ: Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

LIC ಪಾಲಿಸಿ ಲೋನ್ ಯಾವ ರೀತಿಯಲ್ಲಿ ಸಿಗುತ್ತೆ?- How You can Get Loan.

ಸಾಮಾನ್ಯವಾಗಿ ಒಂದು ವೇಳೆ ನೀವು ಬ್ಯಾಂಕಿಗೆ ಹೋಗಿ ಪರ್ಸನಲ್ ಲೋನ್ ಕೇಳಿದ್ರೆ ಆ ಸಂದರ್ಭದಲ್ಲಿ ನಿಮ್ಮ ಬಳಿ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್, ನಿಮ್ಮ ಆದಾಯ ಸ್ಟೇಟಸ್ ಹಾಗೂ ಸ್ಯಾಲರಿ ಸ್ಲಿಪ್ ಸೇರಿದಂತೆ ಸಾಕಷ್ಟು ಡಾಕ್ಯುಮೆಂಟ್ಗಳನ್ನು ಹಾಗೂ ಮಾಹಿತಿಗಳನ್ನು ಪಡೆದುಕೊಂಡು ಸಂತೃಪ್ತಿ ಆದಲ್ಲಿ ಮಾತ್ರ ಬ್ಯಾಂಕುಗಳು ನಿಮಗೆ ಐದರಿಂದ ಹತ್ತು ದಿನಗಳ ಒಳಗೆ ಲೋನ್ ನೀಡುತ್ತಾರೆ.

Loan Against LIC Policy – Interest Rates, Eligibility Criteria, Features of Loan Against LIC Policy and documents required.
Loan Against LIC Policy – Interest Rates, Eligibility Criteria, Features of Loan Against LIC Policy and documents required.

LIC ಮೂಲಕ ಲೋನ್ ಪಡೆದುಕೊಳ್ಳಲು ಇಚ್ಚಿಸಿದ್ದರೆ ಇನ್ನು ಸುಲಭವಾಗುತ್ತದೆ ಯಾಕೆಂದರೆ ಅದಾಗಲೇ ಕಂಪನಿಯವರ ಬಳಿ ನಿಮ್ಮ ಎಲ್ಐಸಿ ಪಾಲಿಸಿ ಇರುತ್ತದೆ ಹೀಗಾಗಿ ಸೆಕ್ಯೂರಿಟಿ ಹಾಗೂ ಮಾಹಿತಿಯ ವಿಚಾರದಲ್ಲಿ ನೀವು ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಹೀಗಾಗಿ ಹೆಚ್ಚು ಸಮಯ ಕಾಯದೇ ನಿಮ್ಮ ಲೋನ್ ಅಪ್ರುವಲ್ ಇಲ್ಲಿ ಸುಲಭ ರೀತಿಯಲ್ಲಿ ಆಗುತ್ತದೆ. ಇಲ್ಲಿ ಎರಡು ದಿನಗಳಲ್ಲಿ ಲೋನ್ ಸುಲಭವಾಗಿ ಅಪ್ರುವಲ್ ಆಗುತ್ತದೆ. ಕೆಟ್ಟದಾದ ಸಿಬಿಲ್ ಸ್ಕೋರ್ ಇದ್ದರೂ ಕೂಡ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಸುಲಭವಾಗಿ ಲೋನ್ ಸಿಗುತ್ತದೆ.

ಎಲ್ಐಸಿ ಪರ್ಸನಲ್ ಲೋನ್ ಅನ್ನು ಒಂದೇ ವಾಕ್ಯದಲ್ಲಿ ವಿವರಿಸುವುದಾದರೆ ಉದಾಹರಣೆಗೆ ನೀವು ಗೋಲ್ಡ್ ಲೋನ್ ನಲ್ಲಿ ಯಾವ ರೀತಿಯಲ್ಲಿ ಸೆಕ್ಯೂರಿಟಿ ರೂಪದಲ್ಲಿ ಗೋಲ್ಡ್ ಅನ್ನು ನೀಡುತ್ತಿರೋ, ಅದೇ ರೀತಿ ಇಲ್ಲಿ ಸೆಕ್ಯೂರಿಟಿ ರೂಪದಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಈ ರೀತಿಯಲ್ಲಿ ನೋಡುವುದಾದರೆ ನೀವು ಎಲ್ಐಸಿ ಪಾಲಿಸಿಯ ಆಧಾರದ ಮೇಲೆ ಲೋನ್ ಪಡೆದುಕೊಳ್ಳುತ್ತಿದ್ದೀರಿ ಒಂದು ವೇಳೆ ಲೋನ್ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ ಐ ಸಿ ಪಾಲಿಸಿಯಲ್ಲಿರುವಂತಹ ಹಣವನ್ನು ಕಡಿತಗೊಳಿಸುತ್ತದೆ.

ಯಾರು ಎಲ್ಐಸಿ ಪಾಲಿಸಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು? – Eligibility To get Loan

  1. 18 ವರ್ಷ ವಯಸ್ಸಿನ ಮೇಲಿರುವವರು ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಲೋನ್ಗಾಗಿ ಅರ್ಜಿ ಸಲ್ಲಿಸುವವರು ಎಲ್ಐಸಿಯಲ್ಲಿ ಪಾಲಿಸಿ ಅಥವಾ ವಿಮೆಯನ್ನು ಹೊಂದಿರಬೇಕಾಗಿರುತ್ತದೆ.
  3. ಕನಿಷ್ಠಪಕ್ಷ ನಿಮ್ಮ ಎಲ್ಐಸಿ ಪಾಲಿಸಿಯಲ್ಲಿ ಮೂರು ವರ್ಷಗಳ ಪ್ರೀಮಿಯಂ ಅನ್ನು ನೀವು ಕಟ್ಟಿರಬೇಕಾಗಿರುತ್ತದೆ.
  4. ಯಾವ ಎಲ್ಐಸಿ ಪಾಲಿಸಿಯ ಮೇಲೆ ನೀವು ಲೋನ್ ಪಡೆದುಕೊಳ್ಳಲು ಹೋಗುತ್ತಿದ್ದೀರಾ ಅದು ಸರಂಡರ್ ವ್ಯಾಲ್ಯೂ ವನ್ನು ಹೊಂದಿರಬೇಕು.
  5. ಕೇವಲ ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರಬೇಕಾಗಿರುತ್ತದೆ.

LIC ಲೋನ್ ಪಡೆದುಕೊಳ್ಳುವಂತಹ ಹಂತಗಳು- Steps to get a Loan

LIC Service ಮೂಲಕ ನೀವು ಸುಲಭ ರೂಪದಲ್ಲಿ ಎಲ್ಐಸಿ ಪಾಲಿಸಿಯ ಮೇಲೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಇದನ್ನು ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ನೀವು ಪಡೆದುಕೊಳ್ಳಬಹುದಾಗಿದ್ದು, ಬನ್ನಿ ಸರಿಯಾದ ವಿಧಾನವನ್ನು ತಿಳಿದುಕೊಳ್ಳೋಣ.

  1. ಮೊದಲಿಗೆ ಎಲ್ಐಸಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿ ಓಪನ್ ಮಾಡಿಕೊಳ್ಳಬೇಕಾಗುತ್ತದೆ.
  2. ಇಲ್ಲಿ ನಿಮಗೆ Registered User ಆಕ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ಇಲ್ಲಿ ಸೈನ್ ಇನ್ ಮಾಡುವುದಕ್ಕೆ ನಿಮ್ಮ ಅಧಿಕೃತ ಮೊಬೈಲ್ ನಂಬರ್ ಇಲ್ಲ ಇಮೇಲ್ ಐಡಿ ಮೂಲಕ ಈ ಪ್ರಕ್ರಿಯೆಯನ್ನು ನೀವು ಪೂರ್ಣಗೊಳಿಸಬಹುದಾಗಿದೆ.
  3. ಸೈನ್ ಇನ್ ಮಾಡಿದ ನಂತರ ಕೆಳಗೆ ಹೋದಮೇಲೆ ಹೋಂ ಪೇಜ್ ನಲ್ಲಿ ನಿಮಗೆ Service Request ಆಪ್ಷನ್ ಅನು ಆಯ್ಕೆ ಮಾಡಬೇಕಾಗಿರುತ್ತದೆ.
  4. ಅಲ್ಲಿ ನಿಮಗೆ ಸೆಲೆಕ್ಟ್ ಸರ್ವಿಸ್ ಆಪ್ಶನ್ ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬಾಣದ ಗುರುತಿರುತ್ತದೆ. ಅಲ್ಲಿ ಕ್ಲಿಕ್ ಮಾಡಿದ ಮೇಲೆ ನಿಮಗೆ ಎಲ್ಲಾ ಆಪ್ಷನ್ಗಳು ಕೂಡ ಕಾಣಿಸುತ್ತವೆ. ಅಲ್ಲಿ ನಿಮಗೆ ಲೋನ್ ಆಪ್ಶನ್ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಿ ಪ್ರೋಸಿಡ್ ಮಾಡಿ.
  5. ಅಲ್ಲಿ ನಿಮಗೆ ಇನ್ಸೂರೆನ್ಸ್ ಹಾಗೂ ಈ ಲೋನ್ ಪಡೆದುಕೊಳ್ಳುವಂತಹ ಕಂಡಿಶನ್ಗಳ ಬಗ್ಗೆ ಕೂಡ ತಿಳಿಸಲಾಗುತ್ತದೆ ನಿಮಗೆ ಕಂಡಿಶನ್ ಒಪ್ಪಿಗೆ ಆಗಿದ್ದಲ್ಲಿ ಅಲ್ಲಿ ಪ್ರೋಸಿಡ್ ಕ್ಲಿಕ್ ಮಾಡಿ ಮುಂದುವರಿಯಬೇಕಾಗುತ್ತದೆ.
  6. ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗಿರುತ್ತದೆ ಅದನ್ನು ಇಲ್ಲಿ ಸಬ್ಮಿಟ್ ಮಾಡಬೇಕು. ಇದಾದ ನಂತರ ಇನ್ಸೂರೆನ್ಸ್ ಮೇಲೆ ಲೋನ್ ಪಡೆದುಕೊಳ್ಳಬೇಕು ಎನ್ನುವ ಆಯ್ಕೆಯಲ್ಲಿ ನಿಮಗೆ ಎಷ್ಟು ಲೋನ್ ಸಿಗುತ್ತದೆ ಎನ್ನುವಂತಹ ಆಯ್ಕೆಯನ್ನು ಕೂಡ ತೋರಿಸಲಾಗುತ್ತದೆ. ಒಂದು ವೇಳೆ ನಿಮ್ಮ ಇನ್ಸೂರೆನ್ಸ್ ಹಣದ ಪೂರ್ತಿ ಪ್ರಮಾಣದ ಸಾಲವನ್ನು ಪಡೆದುಕೊಳ್ಳಬೇಕು ಎಂದಾಗಿದ್ದಲ್ಲಿ Full ಹಾಗೂ ಕಡಿಮೆ ಪ್ರಮಾಣದ ಹಣವನ್ನು ಪಡೆದುಕೊಳ್ಳಬೇಕು ಎಂದಾದಲ್ಲಿ Partial ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಇದಾದ ನಂತರ ಬೇಕಾಗಿರುವ ಹಣದ ಮೊತ್ತವನ್ನು ಅಲ್ಲಿ ಆಯ್ಕೆ ಮಾಡಿ. ಲೋನ್ ಅಮೌಂಟ್ ಅನ್ನು ಹಾಕಿದ ನಂತರ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ ಮುಂದಿನ ಪ್ರಕ್ರಿಯೆಗೆ ಹೋಗಿ.
  7. ನೆಕ್ಸ್ಟ್ ಪೇಜ್ ಗೆ ಹೋದಮೇಲೆ ನಿಮ್ಮ ಬ್ಯಾಂಕ್ ಡೀಟೇಲ್ಸ್, ಎಷ್ಟು ಹಣವನ್ನು ಪಡೆಯುತ್ತಿದ್ದೀರಿ ಎನ್ನುವ ಡಿಟೇಲ್ಸ್ ಎಲ್ಲವನ್ನೂ ಕೂಡ ದಾಖಲಾಗಿರಿಸಲಾಗುತ್ತದೆ. ಅಲ್ಲಿ ನೀವು ಕನ್ಫರ್ಮ್ ನೀಡಬೇಕಾಗಿರುತ್ತದೆ.
  8. ನಂತರ ನೀವು ಸಪೋರ್ಟಿಂಗ್ ಡಾಕ್ಯುಮೆಂಟ್ ಗಳ ಪೇಜ್ ಗೆ ಹೋಗುತ್ತಿರಿ ಹಾಗೂ service request ಹಾಗೂ policy loan application ಆಯ್ಕೆ ಸಿಗುತ್ತದೆ ಹಾಗೂ ಇದರಲ್ಲಿ ಇರುವಂತಹ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದಾದ ನಂತರ ಎಸ್ ಆಯ್ಕೆ ಮಾಡಿ.
  9. ಡೌನ್ಲೋಡ್ ಮಾಡಿರುವಂತಹ ಡಾಕ್ಯೂಮೆಂಟ್ ಜೊತೆಗೆ ಲೋನ್ ಫಾರ್ಮ್ ಅನ್ನು ಹಿಡಿದುಕೊಂಡು ಹತ್ತಿರದಲ್ಲಿರುವಂತಹ ಎಲ್ಐಸಿ ಆಫೀಸಿಗೆ ಹೋಗಿ. ಅಲ್ಲಿ ಅವರಿಗೆ ಇರುವಂತಹ ಡಾಕ್ಯುಮೆಂಟ್ ಹಾಗೂ ಲೋನ್ ಫಾರ್ಮ್ ಅನ್ನು ತೋರಿಸಿ ಹಾಗೂ ಅವರು ನೀಡುವಂತಹ ಕೆಲವೊಂದು ಮಾರ್ಗದರ್ಶನಗಳನ್ನು ಫಾಲೋ ಮಾಡುವ ಮೂಲಕ ನೀವು ಲೋನ್ ಅನ್ನು ಪಡೆದುಕೊಳ್ಳಬಹುದು.

ಎಲ್ಐಸಿ ಲೋನ್ ನಲ್ಲಿ ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಹಾಗೂ ವಿಧಿಸುವ ಬಡ್ಡಿ- Interest rates and Loan Limit

ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ಸಾಮಾನ್ಯ ರೂಪದಲ್ಲಿ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ ಆದರೆ ಇದು ಪ್ರತಿಯೊಬ್ಬರ ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧಾರಿತವಾಗಿರುತ್ತದೆ ಹಾಗೂ ಅದು ವಿಭಿನ್ನವಾಗಿರುತ್ತದೆ. ಇನ್ನು ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಲೋನ್ ಹಣವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಪೆಡ್ ಆಪ್ ಪಾಲಿಸಿಗಳ 85 ಪ್ರತಿಶತ ಮೌಲ್ಯದ ಹಣವನ್ನು ಲೋನ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಲೋನ್ ಅನ್ನು ಮರುಪಾವತಿ ಮಾಡುವಂತಹ ಅವಧಿ ಕನಿಷ್ಠಪಕ್ಷ ಆರು ತಿಂಗಳಿಂದ ಪ್ರಾರಂಭಿಸಿ ಮ್ಯಾಕ್ಸಿಮಮ್ ಐದು ವರ್ಷಗಳವರೆಗೆ ಇರುತ್ತದೆ.

ಯಾವ ಪಾಲಿಸಿಯಲ್ಲಿ ಎಲ್ಐಸಿಯಲ್ಲಿ ಲೋನ್ ಪಡೆದುಕೊಳ್ಳಬಹುದು?

  1. ಜೀವನ ಪ್ರಗತಿ
  2. ಜೀವನ್ ಲಾಭ್
  3. ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್.
  4. ನ್ಯೂ ಎಂಡೋಮೆಂಟ್ ಪ್ಲಾನ್
  5. ನ್ಯೂ ಜೀವನ್ ಆನಂದ್
  6. ಜೀವನ್ ರಕ್ಷಕ್
  7. ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್
  8. ಜೀವನ್ ಲಕ್ಷ್ಯ

ಎಲ್ಐಸಿ ಪರ್ಸನಲ್ ಲೋನ್ ಗೆ ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get a Loan

  1. ಪಾಸ್ಪೋರ್ಟ್ ಸೈಜ್ ಫೋಟೋ ಜೊತೆಗೆ ಅಪ್ಲಿಕೇಷನ್ ಫಾರ್ಮ್.
  2. ಮೂಲ ಪಾಲಿಸಿಯ ಡಾಕ್ಯುಮೆಂಟ್ಸ್.
  3. ಐಡೆಂಟಿಟಿ ಪ್ರೂಫ್ ಗ್ರೂಪಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅನ್ನು ನೀಡಬಹುದಾಗಿದೆ.
  4. ಅಡ್ರೆಸ್ ಪ್ರೂಫ್ ರೂಪದಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬೇರೆ ರೀತಿಯ ಯುಟಿಲಿಟಿ ಬಿಲ್ ಗಳನ್ನು ಕೂಡ ನೀಡಬಹುದಾಗಿದೆ. ಉದಾಹರಣೆಗೆ ಎಲೆಕ್ಟ್ರಿಸಿಟಿ ಬಿಲ್.
  5. ಆದಾಯ ಪ್ರಮಾಣ ಪತ್ರದ ರೂಪದಲ್ಲಿ ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬಹುದಾಗಿದೆ.
  6. ಇವುಗಳನ್ನು ಹೊರತುಪಡಿಸಿ ಎಲ್ಐಸಿ ಸಂಸ್ಥೆ ಕೇಳುವಂತಹ ಕೆಲವೊಂದು ಪ್ರಮುಖ ದಾಖಲೆಗಳು. ಆಫ್ಲೈನ್ ಮೂಲಕ ಎಲ್ಐಸಿ ಲೋನ್ ಅಪ್ಲೈ ಮಾಡೋದು ಹೇಗೆ?

ಇದಕ್ಕಾಗಿ ನೀವು ನಿಮ್ಮ ಹತ್ತಿರದ ಎಲ್ಐಸಿ ಏಜೆಂಟ್ ಅಥವಾ ಬ್ರಾಂಚ್ ಬಳಿ ಹೋಗಬೇಕು. ಲೋನ್ ಫಾರ್ಮ್ ಪಡೆದುಕೊಂಡು ಅದರಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು ಹಾಗೂ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ನೀಡಬೇಕು. ಇದರ ಜೊತೆಗೆ ನಿಮ್ಮ ಎಲ್ಐಸಿ ಪಾಲಿಸಿಯ ಒರಿಜಿನಲ್ ಡಾಕ್ಯುಮೆಂಟ್ ನೀಡಬೇಕು. ಎಲ್ಐಸಿ ಅಧಿಕಾರಿಗಳು ನಿಮ್ಮ ಡಾಕ್ಯುಮೆಂಟ್ ಗಳನ್ನು ಸರಿಯಾದ ಪ್ರೀತಿಯಲ್ಲಿ ಚೆಕ್ ಮಾಡಿದ ನಂತರ ನಿಮ್ಮ ಎಲ್ಐಸಿ ಪಾಲಿಸಿಯ 90% ಮೌಲ್ಯದ ಹಣವನ್ನು ರೂಪದಲ್ಲಿ ನೀಡಲಾಗುವುದು. ಇನ್ನು ಈ ಸಂದರ್ಭದಲ್ಲಿ ನೀವು ಎಷ್ಟು ಹಣವನ್ನು ಲೋನ್ ರೂಪದಲ್ಲಿ ಪಡೆದುಕೊಳ್ಳಲು ಇಚ್ಚಿಸುತ್ತೀರಿ ಎಂಬುದು ಕೂಡ ಪ್ರಮುಖ ವಾಗುತ್ತದೆ.

ಎಲ್ಐಸಿ ಕಸ್ಟಮರ್ ಕೇರ್ ನಂಬರ್- LIC Loan Customer Care Number

ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಈ ಸಂದರ್ಭದಲ್ಲಿ ಎದುರಿಸಿದರೆ ಸಲಹೆ ಹಾಗೂ ಪರಿಹಾರಕ್ಕಾಗಿ 9222492224 ನಂಬರ್ ಗೆ ಕರೆ ಮಾಡುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. (Explore the Loan Options From LIC official Website)