Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.
TATA Capital Personal Loan details- EMI, Interest rate, Eligibility, required documents explained in Kannada
Personal Loan from TATA Capital: ನಮಸ್ಕಾರ ಸ್ನೇಹಿತರೇ, ನಮ್ಮ ದೇಶದಲ್ಲಿ ಹಲವಾರು ಜನರು ಬೇರೆ ಬೇರೆ ವಿವಿಧ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ರೀತಿಯ ಲೋನ್ಗಳ ಅವಶ್ಯಕತೆ ಹೊಂದಿದ್ದಾರೆ. ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿ ಮಾಡಿಕೊಳ್ಳಲು ಉದ್ಯಮವನ್ನು ಆರಂಭಿಸುವುದರಿಂದ ಹಿಡಿದು ಉದ್ಯಮವನ್ನು ಆರಂಭಿಸಿದ ನಂತರ ಅದನ್ನು ವಿಸ್ತರಿಸುವವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಕೆಲವರಿಗೆ ಪರ್ಸನಲ್ ಲೋನ್ ಬೇಕಾಗಿದ್ದರೆ ಕೆಲವರಿಗೆ ಹೆಲ್ತ್ ಲೋನ್ ಬೇಕಾಗಿರುತ್ತದೆ. ಇನ್ನು ಈ ಫೈನಾನ್ಸಿಯಲ್ ಲೋಕದಲ್ಲಿ ನಮ್ಮ ನಿಮ್ಮಂತಹ ಜನಸಾಮಾನ್ಯರಿಗೆ ಲೋನ್ ನೀಡುವುದಕ್ಕೆ ಈಗ Tata Capital ಸಂಸ್ಥೆ ಕೂಡ ಸಿದ್ಧವಾಗಿ ನಿಂತಿದೆ. ಬನ್ನಿ ಸಂಸ್ಥೆ ಕೊಡುವಂತಹ ಸಾಲದ ಬಗ್ಗೆ ಹಾಗೂ ಇನ್ನಿತರ ಮಾಹಿತಿ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

Table of Contents
Tata Capital ನಲ್ಲಿ ಸಿಗುವಂತಹ ಲೋನ್- More details about Tata capital Personal Loan
ದೇಶ ವಿದೇಶಗಳಲ್ಲಿ ನಮ್ಮ ಭಾರತ ದೇಶದ ಹೆಮ್ಮೆಯ ಕಂಪನಿ ಆಗಿರುವಂತಹ ಟಾಟಾ ಸಂಸ್ಥೆ ಬೇರೆ ಬೇರೆ ಕ್ಯಾಟಗರಿಗಳಲ್ಲಿ ದೊಡ್ಡ ಮಟ್ಟದ ಕಂಪನಿಗಳನ್ನು ಹೊಂದಿದೆ. ಈಗ ಫೈನಾನ್ಸಿಯಲ್ ವಿಭಾಗದಲ್ಲಿ ಕೂಡ Tata Capital ಎನ್ನುವಂತಹ ಕಂಪನಿಯನ್ನು ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಟಾಟಾ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು ಸಾಲವನ್ನು ಬಯಸುವಂತಹ ಜನರು ಇಲ್ಲಿ 75,000 ಗಳಿಂದ 35 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕೇವಲ 10.99 ಪ್ರತಿಶತ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಅನ್ನು Tata Capital ಕಂಪನಿ ನೀಡ್ತಾ ಇರೋದು ಮತ್ತೊಂದು ಮೆಚ್ಚ ಬೇಕಾಗಿರುವ ವಿಚಾರ.
ಇದನ್ನು ಕೂಡ ಓದಿ: Get Instant Personal Loan: ಅರ್ಜಿ ಹಾಕುವುದೇ ತಡ, ಕೇವಲ 30 ನಿಮಿಷದಲ್ಲಿ ನಿಮಗೆ ಲಕ್ಷ ಲಕ್ಷ ಲೋನ್ ಕೊಡುತ್ತಾರೆ. ಎಲ್ಲರಿಗೂ ಸಿಕ್ಕಿದೆ ನಿಮಗೂ ಸಿಗುತ್ತದೆ
Tata Capital ನಲ್ಲಿ ಲೋನ್ ಸಿಗುವಂತಹ ಸಮಯ- Tata capital Personal Loan Speed.
ಸಾಕಷ್ಟು ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಅಥವಾ ಡಿಜಿಟಲ್ ಲೋನ್ ಅಪ್ಲಿಕೇಶನ್ ಗಳಲ್ಲಿ ನೀವು ಗಮನಿಸಿರಬಹುದು ಅರ್ಜೆಂಟ್ ಪರಿಸ್ಥಿತಿಗಳಲ್ಲಿ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಪರಿಸ್ಥಿತಿಯಲ್ಲಿ ಇರುತ್ತೀರಿ ಆದರೆ ನೀವೊಂದು ಕೊಂಡಷ್ಟು ವೇಗವಾಗಿ ಹಣ ಸಿಗೋದಿಲ್ಲ. ಇದೇ ಕಾರಣಕ್ಕಾಗಿ Tata Capital ಸಂಸ್ಥೆ ಪರ್ಸನಲ್ ಲೋನ್ ಪಡೆದುಕೊಳ್ಳಲು ನಿಮಗೆ ಹೇಳಿ ಮಾಡಿಸಿದ ಸ್ಥಳವಾಗಿದೆ ಎಂದು ಹೇಳಬಹುದಾಗಿದೆ. ಕೇವಲ ಐದು ನಿಮಿಷಗಳಲ್ಲಿ ನೀವು ಲೋನ್ ಅಪ್ರೂವ್ ಆದ ನಂತರ ಹಣವನ್ನು ಪಡೆದುಕೊಳ್ಳಬಹುದಾಗಿದೆ.
Tata Capital ನಲ್ಲಿ ಲೋನ್ ಪಡೆದುಕೊಳ್ಳುವ ವಿಧಾನ- How to get Tata capital Loan
Personal Loan Application Link – ಪ್ಯಾನ್ ಕಾರ್ಡ್ ನಲ್ಲಿರುವಂತಹ ಮಾಹಿತಿ ಪ್ರಕಾರ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಗಳನ್ನು ತುಂಬಬೇಕು. ನಿಮಗೆ ಬೇಕಾಗಿರುವಂತಹ ಸಾಲದ ಮೊತ್ತವನ್ನು ತುಂಬಿಸಿ ಬ್ಯಾಂಕ್ ಮಾಹಿತಿಗಳನ್ನು ಕೂಡ ನೀಡಬೇಕು. ನಿಮ್ಮ ಬ್ಯಾಂಕಿನ ಖಾತೆಯಿಂದ ಪ್ರತಿ ತಿಂಗಳು EMI ಕಡಿತಗೊಳಿಸಲು ಅನುಮತಿ ನೀಡುವಂತಹ ಫಾರ್ಮ್ ಅನ್ನು ಭರಿಸಿ ನೀಡಬೇಕು. ಇದಾದ ನಂತರ ನೀವು ಪಡೆದುಕೊಳ್ಳುವ ಇನ್ಸೂರೆನ್ಸ್ ಅನ್ನು ಆಯ್ಕೆ ಮಾಡಬೇಕು ಮತ್ತು ಟರ್ಮ್ ಹಾಗೂ ಕಂಡೀಶನ್ ಗಳಿಗೆ ಒಪ್ಪಿಗೆಯನ್ನು ಸೂಚಿಸಿದ ನಂತರ ನೀವು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಈ ಮೂಲಕ ನೀವು ಅಪ್ರೂವ್ ಅದ್ಮೇಲೆ ನಿಮಿಷಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿದೆ.
Tata Capital ನಲ್ಲಿ ಸಾಲವನ್ನು ಪಡೆದುಕೊಳ್ಳುವುದು ಲಾಭದಾಯಕ ಯಾಕೆ?- Benefits of getting loan from TATA Capital
ಯಾವುದೇ ಕಾರಣಕ್ಕೂ ಕೂಡ ನೀವು ಪಡೆದುಕೊಂಡಿರುವಂತಹ ಸಾಲದ ಮೇಲೆ ಟಾಟಾ ಕ್ಯಾಪಿಟಲ್ ಸಂಸ್ಥೆಯಲ್ಲಿ ಆಸ್ತಿ ಅಥವಾ ಯಾವುದೇ ಚಿನ್ನವನ್ನು ಗಿರವಿ ಇಡಬೇಕಾದ ಅಗತ್ಯವಿಲ್ಲ. ನಿಗದಿತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಮತ್ತೆ ಸುಲಭ ರೂಪದಲ್ಲಿ ನಿಮಗೆ ಇಲ್ಲಿ ಸಾಲ ಸೌಲಭ್ಯ ದೊರಕುತ್ತದೆ. ಅವಧಿಗೂ ಮುಂಚೆ ನೀವು ಸಾಲವನ್ನು ಕಟ್ಟಿದರೆ ಅದಕ್ಕೆ ಹೆಚ್ಚಿನ ಶುಲ್ಕವನ್ನು ಕೂಡ ನೀವು ಇಲ್ಲಿ ಪಾವತಿ ಮಾಡಬೇಕಾದ ಅಗತ್ಯವಿಲ್ಲ.
Tata Capital ನಲ್ಲಿ ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು- Eligibility to get a Tata capital Personal Loan
ನೀವು ಒಂದು ವೇಳೆ ಉದ್ಯೋಗಿಯಾಗಿದ್ದರೆ ಪ್ರತಿ ತಿಂಗಳು ಕನಿಷ್ಠ ಪಕ್ಷ 20,000 ಆದಾಯ ನಿಮಗೆ ಬರುತ್ತಿರಬೇಕು. ಇನ್ನು ನೀವು ಭಾರತೀಯರು ಎಂಬುದನ್ನು ಸಾಬೀತುಪಡಿಸುವಂತಹ ಡಾಕ್ಯುಮೆಂಟ್ಗಳು ನಿಮ್ಮ ಬಳಿ ಇದ್ದರೆ ಸಾಕು. ನಿಮ್ಮ ಆದಾಯವನ್ನು ಸಾಬೀತುಪಡಿಸುವಂತಹ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಒದಗಿಸಿದ್ರೆ ಸಾಕು ನಿಮಗೆ ಸುಲಭ ರೂಪದಲ್ಲಿ ಹಣ ಸಿಗುತ್ತದೆ.