HDFC Business Loan: ಬಿಸಿನೆಸ್ ಮಾಡುವುದಕ್ಕೆ HDFC ಲೋನ್ ಪಡೆಯಿರಿ- ಬಡ್ಡಿ ದರ, ಅರ್ಹತೆಯ ಡೀಟೇಲ್ಸ್

HDFC business loan details in Kannada – Interest, Eligibility, features and document required.

HDFC Business Loan: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮದೇ ಆದಂತಹ ಬಿಸಿನೆಸ್ ಅನ್ನು ಪ್ರಾರಂಭಿಸಬೇಕು ಎನ್ನುವ ಆಸೆ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು HDFC Business Loan ಮೂಲಕ ಯಾವ ರೀತಿಯಲ್ಲಿ ಬಿಸಿನೆಸ್ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ನಿಮಗೆ ಹೇಳಲು. ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

Below is the complete details of HDFC Business Loan- Interest rates, Loan eligibility and documents required to get loan Explained in Kannada

  • HDFC Loan ಮೂಲಕ ನೀವು ಯಾವುದೇ ಬಿಜಿನೆಸ್ ಲೋನ್ ರೂಪದಲ್ಲಿ 40 ಲಕ್ಷ ರೂಪಾಯಿಗಳನ್ನು ಕೂಡ ಯಾವುದೇ ಸೆಕ್ಯೂರಿಟಿ ಇಲ್ಲದೆ ಪಡೆದುಕೊಳ್ಳಬಹುದಾಗಿದ್ದು ಕೆಲವು ನಗರಗಳಲ್ಲಿ 50 ಲಕ್ಷ ರೂಪಾಯಿಗಳಿಗೂ ಇದನ್ನು ವಿಸ್ತರಿಸಲಾಗಿದೆ.
  • ಒಂದು ವೇಳೆ ಈಗಾಗಲೇ ನಿಮ್ಮ ಬಿಸಿನೆಸ್ ಮೇಲೆ ಲೋನ್ ನಡಿತಾ ಇದ್ರೆ ಅದನ್ನು HDFC Loan ಗೆ ಟ್ರಾನ್ಸ್ಫರ್ ಮಾಡುವ ಮೂಲಕ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮೇಲೆ ನಿಮಗೆ 15.75 ಪ್ರತಿಶತ ಬಡ್ಡಿ ತಗಲುತ್ತದೆ. ಇದರ ಪ್ರೋಸೆಸಿಂಗ್ ಫೀಸ್ ಕೇವಲ 0.99% ಆಗಿದೆ.
  • HDFC ನಿಮಗೆ ಯಾವುದೇ ಗ್ಯಾರಂಟಿ ಇಲ್ಲದೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ. ಓವರ್ ಡ್ರಾಫ್ಟ್ ಲಿಮಿಟ್ ಐದರಿಂದ 15 ಲಕ್ಷ ರೂಪಾಯಿಗಳ ವರೆಗೂ ಕೂಡ ಇರುತ್ತದೆ ಹಾಗೂ ಇದನ್ನು ಕಟ್ಟುವಂತಹ ಅವಧಿ 12 ರಿಂದ 48 ತಿಂಗಳುಗಳವರೆಗೆ ಇರುತ್ತದೆ.
  • ಇನ್ನು ನೀವು ಬಿಸಿನೆಸ್ ಲೋನ್ ಪಡೆದುಕೊಳ್ಳೋಕೆ ಅರ್ಹರು ಇಲ್ಲವೋ ಎನ್ನುವುದನ್ನು ನಿಮ್ಮ ಹತ್ತಿರದ HDFC ಬ್ಯಾಂಕಿನಲ್ಲಿ ಸುಲಭ ರೂಪದಲ್ಲಿ 60 ಸೆಕೆಂಡ್ ಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.
  • ಲೋನ್ ಜೊತೆಗೆ ನೀವು ಇನ್ಸೂರೆನ್ಸ್ ಅನ್ನು ಕೂಡ ಪಡೆದುಕೊಳ್ಳಬಹುದು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ನೀವು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪಾಲಿಸಿದಾರನ ಮರಣದ ನಂತರ ಆ ಪಾಲಿಸಿ ಆತನ ಕುಟುಂಬವನ್ನು ರಕ್ಷಣೆ ಮಾಡುತ್ತದೆ.

ನಿಮಗೆ ಟಾಟಾ ಕಂಪನಿ ಇಂದ ಲೋನ್ ಬೇಕೇ ಹೆಚ್ಚಿನ ಮಾಹಿತಿಗಾಗಿ – Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

HDFC Business Loan ಅರ್ಹತೆಗಳು- Eligibility to get a Business loan from HDFC

  • ಸೆಲ್ಫ್ ಎಂಪ್ಲೋಯ್ಡ್, ಉದ್ಯಮಿ, ಯಾವುದೇ ಪ್ರೈವೇಟ್ ಸಂಸ್ಥೆಯ ಉದ್ಯೋಗಿ, ಟ್ರೇಡಿಂಗ್ ಮಾಡುವಂತಹ ವ್ಯಕ್ತಿಗಳು, ನಿರ್ದಿಷ್ಟ ಆದಾಯವನ್ನು ಹೊಂದಿರುವಂತಹ ವ್ಯಕ್ತಿಗಳು ಈ ಯೋಜನೆಯಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ.
  • ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ವಯಸ್ಸು 21ರಿಂದ 65 ವರ್ಷಗಳ ವರೆಗೆ ಇರಬೇಕು ಹಾಗೂ ಅವರ ಬಿಸಿನೆಸ್ ನ ವಾರ್ಷಿಕ ಟರ್ನ್ ಓವರ್ 40 ಲಕ್ಷ ರೂಪಾಯಿ ಮಿನಿಮಮ್ ಇರಬೇಕು.
  • ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗೆ ವ್ಯಾಪಾರದಲ್ಲಿ ಕಡಿಮೆ ಅಂದ್ರೂ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು ಹಾಗೂ ಸದ್ಯಕ್ಕೆ ಮಾಡುತ್ತಿರುವಂತಹ ವ್ಯಾಪಾರದಲ್ಲಿ ಮೂರು ವರ್ಷಗಳ ಎಕ್ಸ್ಪೀರಿಯನ್ಸ್ ಹೊಂದಿರಬೇಕು.
  • ಆ ವ್ಯಕ್ತಿ ಬಿಸಿನೆಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಫಿಟ್ ನಲ್ಲಿ ಇರಬೇಕು. ಒಂದು ವರ್ಷದಲ್ಲಿ ಕನಿಷ್ಠಪಕ್ಷ 1.5 ಲಕ್ಷಗಳ ಲಾಭವನ್ನು ಹೊಂದಿರಬೇಕು.

HDFC Business Loan ನ ಬಡ್ಡಿದರ ಹಾಗೂ ಬೇರೆ ಚಾರ್ಜಸ್ ಗಳು.- Processing charges and interest rates of HDFC Business Loan

Business Loan ನಲ್ಲಿ ಪಡೆದುಕೊಳ್ಳುವಂತಹ ಸಾಲದ ಮೇಲೆ ಕಡಿಮೆ ಎಂದರು ಬಡ್ಡಿದರ ಪ್ರತಿ ವರ್ಷಕ್ಕೆ 11.9 ರಿಂದ 21.35 ಪ್ರತಿಶತ ಇರುತ್ತದೆ. ಇನ್ನು ಈ ಸಾಲದ ಮೇಲಿನ ಪ್ರೊಸೆಸಿಂಗ್ ಫೀಸ್ ವಿಚಾರಕ್ಕೆ ಬರೋದಾದ್ರೆ 2.50 ಪ್ರತಿಶತ ಅಥವಾ ಸಾವಿರ ರೂಪಾಯಿ ಇರುತ್ತದೆ. ಸಂಬಳವನ್ನು ಪಡೆಯುವ ಉದ್ಯೋಗಿಗಳ ಮೇಲೆ 25,000 ಹಾಗೂ ಸೆಲ್ಫ್ ಎಂಪ್ಲಾಯೀದೆ ಮೇಲೆ 75,000ವನ್ನು ಶುಲ್ಕ ರೂಪದಲ್ಲಿ ವಿಧಿಸಲಾಗುತ್ತದೆ. ಇನ್ನು ಈ ಲೋನ್ನಲ್ಲಿ ಪ್ರಿ ಪೇಮೆಂಟ್ ಮಾಡಲು ಕನಿಷ್ಠಪಕ್ಷ 6 EMI ಗಳನ್ನು ಕಟ್ಟಿರಬೇಕಾಗಿರುತ್ತದೆ.

HDFC Business Loan ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟುಗಳು- Documents required to get a Business loan from HDFC

  • ಮೊದಲಿಗೆ ಐಡೆಂಟಿಟಿ ಪ್ರೂಫ್ ರೂಪದಲ್ಲಿ ಇವುಗಳಲ್ಲಿ ಒಂದರ ಜೆರಾಕ್ಸ್ ಪ್ರತಿಯನ್ನು ನೀವು ನೀಡಬೇಕು. ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಪಾಸ್ಪೋರ್ಟ್.
  • ಎರಡನೇದಾಗಿ ಅಡ್ರೆಸ್ ಪ್ರೂಫ್ ಗ್ರೂಪಲ್ಲಿ ಇವುಗಳಲ್ಲಿ ಒಂದರ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್.
  • ಇವುಗಳ ಜೊತೆಗೆ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಒದಗಿಸಬೇಕಾಗುತ್ತದೆ. ಹಿಂದಿನ ಎರಡು ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್. ನಿಮ್ಮ ವ್ಯಾಪಾರದ ಲಾಭ ಹಾಗೂ ನಷ್ಟದ ರಿಪೋರ್ಟ್ ಮತ್ತು ಬ್ಯಾಲೆನ್ಸ್ ಶೀಟ್. ನಿಮ್ಮ ಸಹಭಾಗಿತ್ವ ಇಲ್ಲವೇ ಮಾಲೀಕತ್ವದ ಸರ್ಟಿಫಿಕೇಟ್ ಕೂಡ ನೀಡಬೇಕಾಗುತ್ತದೆ.
  • ಇವಿಷ್ಟು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ನೀವು Business Loan ಅಡಿಯಲ್ಲಿ ನಿಮಗೆ ಅರ್ಹ ಆಗಿರುವಂತಹ ಲೋನ್ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.