Personal Loan: ಯಾರು ಕೊಡಲಿಲ್ಲ ಅಂದ್ರು ಇವರು ಕೊಡ್ತಾರೆ ಲೋನ್- ಪಂಜಾಬ್ ನ್ಯಾಷನಲ್ ಬ್ಯಾಂಕ್ ಲೋನ್ | Punjab National Bank Personal Loan

Punjab national Bank Personal Loan details explained – Interest rate, EMI options, Eligibility, Required documents and application steps

Personal Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮಗೆ ಯಾವುದಾದರೂ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿ ಹಣದ ಅವಶ್ಯಕತೆ ಇದ್ದಲ್ಲಿ ನೀವು ಬೇರೆ ಯಾವುದೇ ಕಡೆಗಳಲ್ಲಿ ಓಡಾಡಬೇಕಾದ ಅಗತ್ಯ ಇರುವುದಿಲ್ಲ ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank) ನ ಇನ್ಸ್ಟಂಟ್ ಪರ್ಸನಲ್ ಲೋನ್ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನೀವು ಮದುವೆಯಲ್ಲಿ ಕಂಡುಬರುವಂತಹ ಖರ್ಚುಗಳು ಮೆಡಿಕಲ್ ಖರ್ಚುಗಳು ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತಹ ಖರ್ಚುಗಳನ್ನು ಕೂಡ ಪೂರೈಸಿಕೊಳ್ಳಬಹುದಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ್ಕೆ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Table of Contents

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರ್ಸನಲ್ ಲೋನ್(Punjab National Bank Personal Loan)

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪರ್ಸನಲ್ ಲೋನ್ ಅನ್ನು ಕೇವಲ ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀಡಲಾಗುತ್ತದೆ. ಇವುಗಳನ್ನು ಬ್ಯಾಂಕಿಂಗ್ ಭಾಷೆಯಲ್ಲಿ ಅತ್ಯಂತ ಅಸುರಕ್ಷಿತ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಅ ಸುರಕ್ಷಿತ ಎನ್ನುವ ಪದ ಬಳಕೆ ಆಗ್ತಿರೋದು ಗ್ರಾಹಕರಿಗೆ ಅಲ್ಲ ಬದಲಾಗಿ ಬ್ಯಾಂಕುಗಳಿಗೆ. ಯಾಕೆಂದ್ರೆ ಯಾವುದೇ ವಸ್ತುಗಳನ್ನು ಗಿರವಿ ಇಟ್ಟು ಇಲ್ಲಿ ಸಾಲವನ್ನು ಪಡೆಯೋದಿಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪಡೆದುಕೊಳ್ಳಲಾಗುವ ಪರ್ಸನಲ್ ಲೋನ್ ಮೇಲಿನ ಬಡ್ಡಿ ದರ, ಸಿಗುವ ಸಾಲ ಹಾಗೂ ಕಟ್ಟುವಂತಹ ಅವಧಿ- PBN Personal Loan Interest rate, EMI options

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪಡೆಯುವಂತಹ ಪರ್ಸನಲ್ ಲೋನ್ ಸಾಲದ ಮೇಲಿನ ಬಡ್ಡಿ ದರ 10.15 ಪ್ರತಿಶತ ಆಗಿರುತ್ತದೆ ಹಾಗೂ ಪ್ರೊಸಿಂಗ್ ಫೀಸ್ ಕೂಡ ಒಂದು ಪ್ರತಿಶತ ಆಗಿರುತ್ತದೆ. ಇನ್ನು ಇಲ್ಲಿ ಉದ್ಯೋಗಿ ಹಾಗೂ ಉದ್ಯಮಿ ಇಬ್ಬರಿಗೂ ಕೂಡ ಲೋನ್ ನೀಡಲಾಗುತ್ತದೆ. ಇನ್ನು ಕಟ್ಟುವಂತಹ ಅವಧಿಯ ಬಗ್ಗೆ ಮಾತನಾಡುವುದಾದರೆ 72 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ ಹಾಗೂ ಹೆಚ್ಚೆಂದರೆ 20 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಇಲ್ಲಿ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಕೂಡ ನೀವು ಭೇಟಿ ನೀಡಬಹುದಾಗಿದೆ ಇಲ್ಲವೇ ಬ್ಯಾಂಕಿಗೆ ಕರೆ ಮಾಡಿ ಕೂಡ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಎರಡು ರೀತಿಯ ಪರ್ಸನಲ್ ಲೋನ್ ಗಳು ಇರುತ್ತವೆ ಹಾಗೂ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.- Type of Personal loans

ಸಂಬಳ ಪಡೆಯುವ ಉದ್ಯೋಗಿಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್:
  1. ಪ್ರತಿಯೊಂದು ವಿಧದ ಸೆಲ್ಫ್ ಎಂಪ್ಲಾಯ್ಡ್ ವ್ಯಕ್ತಿಗಳು ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  2. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸೆಲ್ಫ್ ಎಂಪ್ಲಾಯ್ಡ್ ವ್ಯಕ್ತಿಗಳು ತಮ್ಮ ಯಾವುದೇ ವೈಯಕ್ತಿಕ ಕಾರಣವನ್ನು ಪೂರೈಸಿಕೊಳ್ಳಲು ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  3. ಇನ್ನು ಇವರು ಹೆಚ್ಚೆಂದರೆ 5 ಲಕ್ಷಗಳ ವರೆಗೆ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.
  4. ಪ್ರೊಸೆಸಿಂಗ್ ಶುಲ್ಕ ಒಂದು ಪ್ರತಿಶತ ಆಗಿರುತ್ತದೆ ಹಾಗೂ ಸಾಲವನ್ನು ಕಟ್ಟುವುದಕ್ಕೆ ಇವರಿಗೆ ಸಮಯಾವಕಾಶವನ್ನು ಹೆಚ್ಚೆಂದರೆ 60 ತಿಂಗಳು ನೀಡಿರುತ್ತಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪಡೆಯುವಂತಹ ಪರ್ಸನಲ್ ಲೋನ್ ನ ವಿಶೇಷತೆಗಳು:
  1. ತಮ್ಮ ಯಾವುದೇ ರೀತಿಯ ವೈಯಕ್ತಿಕ ಅಗತ್ಯತೆಗಳನ್ನು ಈ ಪರ್ಸನಲ್ ಲೋನ್ ಮೂಲಕ ನೀವು ಪೂರೈಸಿಕೊಳ್ಳಬಹುದಾಗಿದೆ.
  2. ಈ ಪರ್ಸನಲ್ ಲೋನ್ ನಲ್ಲಿ ನೀವು 20 ಲಕ್ಷ ರೂಪಾಯಿಗಳವರೆಗು ಕೂಡ ಮ್ಯಾಕ್ಸಿಮಮ್ ಪರ್ಸನಲ್ ಲೋನ್ ಹಣವನ್ನು ಪಡೆದುಕೊಳ್ಳಬಹುದು.
  3. ಸಾಲವನ್ನು ಕಟ್ಟುವುದಕ್ಕೆ 72 ತಿಂಗಳುಗಳ ಅವಕಾಶವನ್ನು ನೀಡಲಾಗುತ್ತದೆ ಹಾಗೂ ಪ್ರೋಸೆಸ್ಸಿಂಗ್ ಶುಲ್ಕ ಕೂಡ ಕೇವಲ ಒಂದು ಪ್ರತಿಶತ.
  4. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಆನ್ಲೈನ್ ಹಾಗೂ ಆಫ್ಲೈನ್ 2 ಮಾರ್ಗವನ್ನು ಕೂಡ ಅನುಸರಿಸಬಹುದಾಗಿದೆ.
  5. ಪೂರ್ವಭಾವಿಯಾಗಿ ನೀವು ಯಾವುದೇ ರೀತಿಯ ಶುಲ್ಕವನ್ನು ಕಟ್ಟಬೇಕಾದ ಅಗತ್ಯ ಇಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು: Eligibility to get Personal Loan from PNB

ಸಂಬಳವನ್ನು ಪಡೆಯುವ ಉದ್ಯೋಗಿಗಳಿಗೆ ಇರಬೇಕಾದ ಅರ್ಹತೆಗಳು:
  1. ಮೊದಲಿಗೆ ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು.
  2. ಕಡಿಮೆ ಅಂದ್ರು ಎರಡು ವರ್ಷಗಳಿಂದ ಕೆಲಸ ಮಾಡುತ್ತಿರಬೇಕು.
  3. ಎಲ್ಲಕ್ಕಿಂತ ಪ್ರಮುಖವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು.
ಸೆಲ್ಫ್ ಎಂಪ್ಲಾಯ್ಡ್ ಗಳಿಗೆ ಇರಬೇಕಾದ ಅರ್ಹತೆಗಳು:
  1. ಪ್ರತಿಯೊಂದು ರೀತಿಯ ಸೆಲ್ಫ್ ಎಂಪ್ಲಾಯ್ಡ್ ವ್ಯಕ್ತಿಗಳು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  2. ಮ್ಯಾಕ್ಸಿಮಮ್ 5 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  3. ಪರ್ಸನಲ್ ಲೋನ್ ಪಡೆದುಕೊಳ್ಳಲು ನಿಮ್ಮ ಆದಾಯ ವಾರ್ಷಿಕವಾಗಿ ಮಿನಿಮಮ್ ಆರು ಲಕ್ಷ ರೂಪಾಯಿ ಆಗಿರಬೇಕು.
  4. ಅರ್ಜಿ ಸಲ್ಲಿಸುವ ವ್ಯಕ್ತಿಯ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿರಬೇಕು.
  5. ಎರಡು ವರ್ಷಗಳಿಂದ ನಿಮ್ಮ ನಿಮ್ಮ ಖಾತೆಯಲ್ಲಿ ಲಾಭಪೂರ್ವಕ ವ್ಯಾಪಾರ ವ್ಯವಹಾರಗಳ ನಡೆದಿರಬೇಕು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅಗತ್ಯವಾದ ಡಾಕ್ಯುಮೆಂಟ್ಗಳು:- Requirement Documents to Get Loan from PNB.

  1. ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ.
  2. ಆದಾಯ ದಾಖಲೆಯ ರೂಪದಲ್ಲಿ ಕಳೆದ ಎರಡು ವರ್ಷದ ಫಾರ್ಮ್ 16 ಕಾಪಿ, ಮೂರು ತಿಂಗಳ ಸ್ಯಾಲರಿ ಸ್ಲಿಪ್, ಮೂರು ತಿಂಗಳಾ ಸ್ಯಾಲರಿ ಕ್ರೆಡಿಟ್ ಆಗಿರುವಂತಹ ಬ್ಯಾಂಕ್ ಸ್ಟೇಟ್ಮೆಂಟ್.
  3. ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ.
  4. ಸೆಲ್ಫ್ ಎಂಪ್ಲಾಯ್ಡ್ ವ್ಯಕ್ತಿಗಳಿಗಾಗಿ ಕಳೆದ ಮೂರು ವರ್ಷದ ಐಟಿ ರಿಟರ್ನ್ ಫೈಲ್.
  5. ಸರಿಯಾದ ರೀತಿಯಲ್ಲಿ ಭರ್ತಿ ಮಾಡಿರುವಂತಹ ಪರ್ಸನಲ್ ಲೋನ್ ಅರ್ಜಿ ಪತ್ರದ ಜೊತೆಗೆ ಬೇರೆ ಕೆಲವೊಂದು ದಾಖಲೆಗಳು ಬೇಕಾಗಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ: How to Apply for PNB Personal Loan

Online ವಿಧಾನ:
  1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ (Punjab national Bank Website Loan Section) ಹೋಗಬೇಕು.
  2. ಅಧಿಕೃತ ವೆಬ್ ಸೈಟ್ ಗೆ ಹೋದ ನಂತರ ಲೋನ್ ಆಪ್ಷನ್ ನಲ್ಲಿ ಇರುವಂತಹ ಪರ್ಸನಲ್ ಲೋನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  3. ನಿಮ್ಮ ಮುಂದೆ ಪರದೆಯಲ್ಲಿ ಪರ್ಸನಲ್ ಲೋನ್ ಗೆ ಸಂಬಂಧಪಟ್ಟಂತಹ ಪ್ರತಿಯೊಂದು ಆಪ್ಷನ್ ಗಳು ಕೂಡ ಸಿಗುತ್ತವೆ ಹಾಗೂ ಆ ಸಂದರ್ಭದಲ್ಲಿ ನೀವು Apply Now ಬಟನ್ ಅನ್ನು ಕ್ಲಿಕ್ ಮಾಡಬೇಕು.
  4. ನಿಮ್ಮ ಮುಂದೆ ಅರ್ಜಿ ಸಲ್ಲಿಸುವಂತಹ ಫಾರ್ಮ್ ಬರುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ನೀವು ತಪ್ಪಿಲ್ಲದಂತೆ ತುಂಬಬೇಕು.
  5. ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ತುಂಬಿದ ನಂತರ ಈ ಫಾರ್ಮ್ ಅನ್ನು ನೀವು ಸಬ್ಮಿಟ್ ಮಾಡಬೇಕು ಹಾಗೂ ಬ್ಯಾಂಕಿನವರು ಇದನ್ನು ಪರೀಕ್ಷಿಸಿದ ನಂತರ ನಿಮ್ಮೊಂದಿಗೆ ಮುಂದಿನ ಲೋನ್ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ.
Offline ವಿಧಾನ:
  1. ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಹತ್ತಿರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೋಗಬೇಕಾಗಿರುತ್ತದೆ.
  2. ಮೊದಲೇ ಯಾವೆಲ್ಲ ಡಾಕ್ಯುಮೆಂಟ್ಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಂಡು ಅವುಗಳನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಬೇಕಾಗಿರುತ್ತದೆ.
  3. ಮೊದಲಿಗೆ ಬ್ಯಾಂಕ್ ಸಿಬ್ಬಂದಿಗಳು ನಿಮ್ಮ ಡಾಕ್ಯುಮೆಂಟ್ ಗಳನ್ನು ಪರಿಶೀಲಿಸುತ್ತಾರೆ ಹಾಗೂ ವೆರಿಫಿಕೇಶನ್ ಆದ ನಂತರ ನೀವು ಫಾರ್ಮ್ ಅನ್ನು ತುಂಬಿಸಬೇಕಾಗಿರುತ್ತದೆ ಹಾಗೂ ಡಾಕ್ಯೂಮೆಂಟ್ ಅನ್ನು ಕೂಡ ಜಮಾ ಮಾಡಬೇಕಾಗಿರುತ್ತದೆ.
  4. ಒಂದು ವೇಳೆ ನಿಮ್ಮ ಅರ್ಜಿ ಸ್ವೀಕೃತಿ ಆಗುತ್ತದೆ ಎಂದಾದಲ್ಲಿ ಸಾಲದ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

EMI ಎಷ್ಟು ಕಟ್ಟಬೇಕು ಎಂಬುದನ್ನು ತಿಳಿಯುವುದು ಹೇಗೆ?- EMI details.

ಲೋನ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಈಗಾಗಲೇ ನೀವು ತಿಳಿದುಕೊಂಡಿದ್ದೀರಿ ಆದರೆ ಈ ಸಂದರ್ಭದಲ್ಲಿ ನೀವು ಮಾಡಬೇಕಾಗಿರುವ ಮತ್ತೊಂದು ಪ್ರಮುಖ ಕೆಲಸ ಎಂದರೆ EMI ಎಷ್ಟು ಬರುತ್ತದೆ ಎಂಬುದನ್ನು ನೋಡಿ ತಿಳಿದುಕೊಳ್ಳಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ personal loan EMI calculator ಎನ್ನುವಂತಹ ಆಯ್ಕೆ ಇರುತ್ತದೆ. ಇಲ್ಲಿ ನೀವು ಪ್ರತಿ ತಿಂಗಳ EMI ಅನ್ನು ಎಷ್ಟು ಕಟ್ಟಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ. ಒಂದು ವೇಳೆ ಯಾವುದೇ ರೀತಿಯ ಸಮಸ್ಯೆಗಳು ಅಥವಾ ಗೊಂದಲಗಳು ಇದ್ದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಕಸ್ಟಮರ್ ಕೇರ್ ನಂಬರ್ ಆಗಿರುವ 1800 180 2222 / 1800 103 2222 ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.