Personal Loan: ದೇಶದ ಪ್ರತಿಷ್ಠಿತ ಕೆನೆರಾ ಬ್ಯಾಂಕ್ ನಿಂದ ಲೋನ್ ಪಡೆಯಿರಿ- ವೈಯಕ್ತಿಕ ಸಾಲ, ಗ್ಯಾರಂಟಿ ಬೇಡ.

Canara Bank Personal Loan details- Interest, Types, Processing charges, Eligibility and documents explained

Personal Loan: ನಮಸ್ಕಾರ ಸ್ನೇಹಿತರೆ ಈಗ ಇರುವಂತಹ ದುನಿಯಾದಲ್ಲಿ ದಿನನಿತ್ಯಕ್ಕಾಗಿ ಬಳಸುವಂತಹ ಪ್ರತಿಯೊಂದು ವಸ್ತುಗಳು ಕೂಡ ಸಾಕಷ್ಟು ದುಬಾರಿಯಾಗಿವೆ ಎಂಬುದನ್ನು ನೀವೇ ಕಣ್ಣ ಮುಂದೆ ನೋಡಬಹುದು. ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಿರುವುದು ಅಗತ್ಯವಾಗಿರುತ್ತದೆ ಆದರೆ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಹ ಹಣವನ್ನು ನಾವು ದುಡಿಯೋದು ಕೂಡ ಕಷ್ಟ ಸಾಧ್ಯವೇ ಸರಿ. ಇನ್ನು ಬ್ಯಾಂಕುಗಳಿಂದಲೂ ಕೂಡ ಅಷ್ಟೊಂದು ಸುಲಭದಲ್ಲಿ ಲೋನ್ ಸಿಗೋದಿಲ್ಲ ಅನ್ನೋದನ್ನ ಕೂಡ ನಾವು ಇಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ. ಸಾಕಷ್ಟು ನಿಯಮಗಳು ಹಾಗೂ ಕ್ರೆಡಿಟ್ ಸ್ಕೋರ್ ಸೇರಿದಂತೆ ಸಾಕಷ್ಟು ವಿಚಾರಗಳು ಕೂಡ ಇದರಲ್ಲಿ ಅಡಕವಾಗಿವೆ. ಇವತ್ತಿನ ಲೇಖನಿಯಲ್ಲಿ Canara Bank ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ.

Canara Bank Personal Loan details- Interest, Types, Processing charges, Eligibility and documents explained
Canara Bank Personal Loan details- Interest, Types, Processing charges, Eligibility and documents explained

Canara Bank ಪರ್ಸನಲ್ ಲೋನ್- Personal Loan

ಯಾವುದೇ ಬ್ಯಾಂಕಿನಲ್ಲಿ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಅವುಗಳ ಕಂಡೀಶನ್ ಗಳನ್ನು ಹಾಗೂ ಎಷ್ಟು ಬಡ್ಡಿ ದರದಲ್ಲಿ ಅವರು ಪರ್ಸನಲ್ ನೀಡುತ್ತಿದ್ದಾರೆ ಎನ್ನುವುದನ್ನು ಪ್ರಮುಖವಾಗಿ ಲೆಕ್ಕಾಚಾರ ಹಾಕಬೇಕಾಗಿರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು Canara Bank ಪರ್ಸನಲ್ ಲೋನ್ ಬಗ್ಗೆ ಹಾಗೂ ಇದರ ಬಡ್ಡಿದರ 11.10 ಪ್ರತಿಶತ ಪ್ರತಿ ವರ್ಷದ ಬಡ್ಡಿದರದಿಂದ ಪ್ರಾರಂಭವಾಗುತ್ತದೆ.

ಇದನ್ನು ಕೂಡ ಓದಿ: Personal Loan: ಯಾರು ಕೊಡಲಿಲ್ಲ ಅಂದ್ರು ಇವರು ಕೊಡ್ತಾರೆ ಲೋನ್- ಪಂಜಾಬ್ ನ್ಯಾಷನಲ್ ಬ್ಯಾಂಕ್ ಲೋನ್

Canara Bank ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಯಾಗಿರಬೇಕು.
  2. ಪ್ರತಿಷ್ಠಿತ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಬೇಕು.
  3. ಪ್ರತಿಷ್ಠಿತ ಕಾರ್ಪೊರೇಟ್ ಅಂದರೆ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇದ್ರು ಪರವಾಗಿಲ್ಲ. ಪ್ರೊಫೆಸರ್ ಅಥವಾ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರೂ ಕೂಡ ಪರವಾಗಿಲ್ಲ.

Canara Bank ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Personal Loan

  1. ಪಾಸ್ಪೋರ್ಟ್ ಸೈಜ್ ಫೋಟೋ ಜೊತೆಗೆ ಲೋನ್ ಗಾಗಿ ಅರ್ಜಿ ಸಲ್ಲಿಸಿರುವ ಫಾರ್ಮ್.
  2. ‌ ಆದಾಯದ ಪ್ರೂಫ್ ರೂಪದಲ್ಲಿ ನೀವು ಕಳೆದ ಮೂರು ವರ್ಷದ ಐಟಿ ರಿಟರ್ನ್ ಸಲ್ಲಿಕೆ ಮಾಡಿರುವಂತಹ ಡಾಕ್ಯುಮೆಂಟ್ ಗಳನ್ನು ಒದಗಿಸಬೇಕು. ಇಲ್ಲವೇ ಫಾರ್ಮ್ 16 ಅನ್ನು ಕೂಡ ಒದಗಿಸಬೇಕಾಗುತ್ತದೆ.
  3. ಒಂದು ವೇಳೆ ನೀವು ಜಾಯಿಂಟ್ ಲೋನ್ ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಸ್ಯಾಲರಿ ಸರ್ಟಿಫಿಕೇಟ್ ಹಾಗೂ Obligation ಫಾರ್ಮ್ ಅನ್ನು ನೀಡಬೇಕಾಗಿರುತ್ತದೆ.

ಸಾಮಾನ್ಯ ಜನರ Canara ಪೆನ್ಷನ್

  1. ಈ ರೀತಿಯ ಲೋನ್ ಕೇವಲ ಪೆನ್ಷನ್ ಪಡೆಯುವವರಿಗೆ ಮಾತ್ರ ಸಿಗುತ್ತದೆ.
  2. ನಿಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಈ ರೀತಿಯ ಲೋನ್ ಪಡೆದುಕೊಳ್ಳಬಹುದಾಗಿದೆ.
  3. 70 ವರ್ಷಕ್ಕಿಂತ ಕಡಿಮೆ ಇರುವಂತಹ ಜನರಿಗೆ 10 ಲಕ್ಷ ರೂಪಾಯಿಗಳ ಲೋನ್ ಅನ್ನು ಕೂಡ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
  4. ಇದನ್ನು ಚುಕ್ತಾ ಮಾಡಲು ನಿಮಗೆ ಐದು ವರ್ಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  5. ಎಪ್ಪತ್ತು ವರ್ಷ ವಯಸ್ಸಿಗಿಂತ ಹೆಚ್ಚಿರುವವರು 5 ಲಕ್ಷ ರೂಪಾಯಿಗಳ ಲೋನ್ ಅನ್ನು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಹಾಗೂ ಇದನ್ನು ಮೂರು ವರ್ಷಗಳ ಒಳಗೆ ಕಟ್ಟಬೇಕಾಗುತ್ತದೆ.

ರಕ್ಷಾ ಪೆನ್ಷನ್

ಈ ರೀತಿಯ ಲೋನ್ ಗಳನ್ನು ಪ್ರಮುಖವಾಗಿ ಡಿಫೆನ್ಸ್ ಕ್ಷೇತ್ರದಲ್ಲಿ ಅಂದರೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ನೀಡಲಾಗುತ್ತದೆ.

  1. 50 ವರ್ಷದ ವ್ಯಕ್ತಿಗೆ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಏಳು ವರ್ಷಗಳಿಗೆ ತೀರಿಸುವ ರೀತಿಯಲ್ಲಿ ಯೋಜನೆ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.
  2. 50 ರಿಂದ 60 ವರ್ಷಗಳ ನಡುವಿನ ವ್ಯಕ್ತಿಗಳಿಗೆ 8 ಲಕ್ಷ ರೂಪಾಯಿ ಸಾಲವನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ.
  3. 60 ರಿಂದ 70 ವರ್ಷಗಳ ನಡುವಿನ ವ್ಯಕ್ತಿಗಳಿಗೆ 6 ಲಕ್ಷ ಸಾಲವನ್ನು ನಾಲ್ಕು ವರ್ಷಗಳ ಅವಧಿಗೆ ನೀಡಲಾಗುತ್ತದೆ.
  4. 70 ರಿಂದ 75 ವರ್ಷದ ನಡುವಿನ ವ್ಯಕ್ತಿಗಳಿಗೆ 5 ಲಕ್ಷ ಹಣವನ್ನು 2 ವರ್ಷಗಳ ಅವಧಿಗೆ ನೀಡಲಾಗುತ್ತದೆ.

ಫ್ಯಾಮಿಲಿ ಪೆನ್ಷನರ್

  1. ಈ ರೀತಿಯ ಲೋನ್ ನಲ್ಲಿ ನೀವು ಅಂದರೆ 70 ವರ್ಷದ ನಡುವೆ ಇರುವಂತಹ ವ್ಯಕ್ತಿಗಳು ಐದು ವರ್ಷಗಳ ಅವಧಿಗೆ 5 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
  2. 70 ರಿಂದ 75 ವರ್ಷದ ವ್ಯಕ್ತಿಗಳಿಗೆ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ ಹಾಗೂ ಇದನ್ನು ಮೂರು ವರ್ಷಗಳ ಒಳಗೆ ತೀರಿಸಬೇಕಾಗಿರುತ್ತದೆ.

ಟೀಚರ್ ಲೋನ್

  1. ಆರು ತಿಂಗಳ ಗ್ರಾಸ್ ಸಾಲರಿ ಹಾಗೂ ಕಡಿಮೆ ಅಂದರೂ 2 ಲಕ್ಷ ಸಾಲ ನೀಡಲಾಗುತ್ತದೆ. ಕ್ರೆಡಿಟ್ ಮ್ಯಾನೇಜರ್ ಅಥವಾ ಬ್ರಾಂಚ್ ಮ್ಯಾನೇಜರ್ ಮೂಲಕ ಇದು ಅನುಮೋದಿತವಾಗುತ್ತದೆ.
  2. 10 ತಿಂಗಳ ಗ್ರಾಫ್ ಸ್ಯಾಲರಿ ಅಥವಾ ಹೆಚ್ಚೆಂದರೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸಿಗುತ್ತೆ. ಇದು ಕೂಡ ಬ್ಯಾಂಕಿನ ಕೆಲವೊಂದು ನಿರ್ದಿಷ್ಟ ಅಧಿಕಾರಿಗಳ ಮಂಜೂರಾತಿ ಪಡೆದ ನಂತರ ಸಾಲ ಸಿಗುತ್ತದೆ.
  3. ಸಾಲವನ್ನು ಕಟ್ಟುವಂತಹ ಅವಧಿ ನಾಲ್ಕು ವರ್ಷಗಳನ್ನು ನೀಡಲಾಗುತ್ತದೆ ಹಾಗೂ ಪ್ರೋಸೆಸಿಂಗ್ ಫೀಸ್ ಕೇವಲ ಒಂದು ಪ್ರತಿಶತ ಆಗಿರುತ್ತದೆ.

Canara Bank ಪರ್ಸನಲ್ ಲೋನಿನ ವಿಶೇಷತೆಗಳು- features of Personal Loan

  1. ಇಲ್ಲಿ ಕೆನರಾ ಬ್ಯಾಂಕ್ ಮೂಲಕ ನೀವು 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಇಲ್ಲಿ ಲೋನ್ ತೀರಿಸಲು ನಿಮಗೆ 84 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  3. Canara Bank ಇಲಿ ತನ್ನ ಗ್ರಾಹಕರಿಗೆ ಸಾಕಷ್ಟು ವೈವಿಧ್ಯಮಯ ಲೋನ್ ಗಳನ್ನು ನೀಡುತ್ತದೆ.
  4. ಇವುಗಳನ್ನು ಅತ್ಯಂತ ಸುಲಭ ರೀತಿಯಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಪಡೆದುಕೊಳ್ಳಬಹುದಾಗಿದೆ.

Canara Bank ಪರ್ಸನಲ್ ಲೋನ್ ಶುಲ್ಕ ಹಾಗೂ ಇನ್ನಿತರ ಚಾರ್ಜಸ್ ಗಳು- Processing Charges and Other Charges

  1. ಪ್ರೊಸೆಸಿಂಗ್ ಫೀಸ್ ಕೇವಲ ಒಂದು ಪ್ರತಿಶತ.
  2. ಯಾವುದೇ ಪೂರ್ವಭಾವಿ ಶುಲ್ಕ ಇರುವುದಿಲ್ಲ.
  3. ಸ್ಟ್ಯಾಂಪ್ ಶುಲ್ಕ ನಿಯಮಗಳಿಗನುಸಾರವಾಗಿ ನಿರ್ಧರಿಸಲಾಗುತ್ತದೆ.
  4. ಒಂದು ವೇಳೆ ಚೆಕ್ ಬೌನ್ಸ್ ಆದರೆ ಅದಕ್ಕೆ ಶುಲ್ಕದ ಹಣವನ್ನು ಬ್ಯಾಂಕ್ ನಿರ್ಧಾರ ಮಾಡುತ್ತದೆ.
  1. ಮೊದಲಿಗೆ ಕೆನರಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು.
  2. ಇದಾದ ನಂತರ ಹೋಂ ಪೇಜ್ ಓಪನ್ ಆಗುತ್ತದೆ ಅಲ್ಲಿ ಪರ್ಸನಲ್ ಲೋನ್ ಆಪ್ಶನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು.
  3. ಇಲ್ಲಿ ಸಾಕಷ್ಟು ವಿಭಿನ್ನ ಪ್ರಕಾರದ ಪರ್ಸನಲ್ ಲೋನ್ ಆಯ್ಕೆಗಳು ಕೂಡ ನಿಮ್ಮ ಮುಂದೆ ಕಂಡುಬರುತ್ತದೆ ನಿಮಗೆ ಬೇಕಾಗಿರುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  4. ಇಲ್ಲಿ ಅರ್ಜಿ ಫಾರ್ಮ್ ನಲ್ಲಿ ಕೇಳಲಾಗಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತುಂಬಬೇಕು ಹಾಗು ಅದರ ಜೊತೆಗೆ ಅಗತ್ಯವಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಬೇಕು.
  5. ನಿಮ್ಮ ಅರ್ಜಿ ಫಾರ್ಮ್ ಲೋನ್ ಪಡೆದುಕೊಳ್ಳುವುದಕ್ಕೆ ಯೋಗ್ಯವಾಗಿದೆಯೋ ಇಲ್ಲವೋ ಎನ್ನುವುದನ್ನು ಬ್ಯಾಂಕಿನ ಅಧಿಕಾರಿಗಳು ವೆರಿಫಿಕೇಶನ್ ಮಾಡುತ್ತಾರೆ.
  6. ಇದಾದ ನಂತರ ಬ್ಯಾಂಕಿನ ಅಧಿಕಾರಿಗಳು ನಿಮಗೆ ಕರೆ ಮಾಡಿ ನಿಮ್ಮ ಲೋನ್ ಅಪ್ರೂವ್ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ನೀಡುತ್ತಾರೆ ಹಾಗೂ ಅಪ್ರೂವ್ ಆಗಿದ್ದರೆ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಯಾವುದೇ ರೀತಿಯ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ನೀವು ಎದುರಿಸಿದಲ್ಲಿ, 1800-425-0018, 1800-103-0018, 1800-208-3333, 1800-3011-3333 ,ಕಸ್ಟಮರ್ ಕೇರ್ ನಂಬರ್ ಗಳಿಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. Explore the Canara Bank Personal Loan More details