ATM Business Idea: ಏನು ಕೆಲಸ ಮಾಡೋದು ಬೇಡ- ATM ಒಂದು ಸ್ಥಾಪಿಸಿ, ಅದೇ ನಿಮಗೆ ಕೈತುಂಬಾ ಹಣ ಕೊಡುತ್ತೆ. ನಿಮ್ಮ ಊರಿನಲ್ಲಿ ATM ಹಾಕೋದು ಹೇಗೆ ಗೊತ್ತೇ?
ATM Business Idea Explained in Kannada – here is details of how to get ATM franchise in India.
ATM Business Idea: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಕೆಲಸಕ್ಕಿಂತ ಹೆಚ್ಚಾಗಿ ತಮ್ಮದೇ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಿ ಕಡಿಮೆ ಹೂಡಿಕೆಯ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ಆಸೆ ಹೊಂದಿರುತ್ತಾರೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ಹೆಚ್ಚಿನ ಜನಸಂಖ್ಯೆ ಹೊಂದಿರುವಂತಹ ಪ್ರದೇಶದಲ್ಲಿ ಎಟಿಎಂ ಮಷೀನ್ ಹಾಕುವುದಕ್ಕೆ ಜಾಗ ಇದ್ದರೆ ನೀವು ಕೂಡ ಎಟಿಎಂ ಮಷೀನ್ ಗಳ Franchise ಅನ್ನು ಪಡೆದುಕೊಳ್ಳಬಹುದಾಗಿದೆ.
ಇತ್ತೀಚಿಗಷ್ಟೇ ನೀವು ಗಮನಿಸಿರಬಹುದು UPI ATM ಪರಿಚಿತವಾಗಿ ಇನ್ನು ಮುಂದೆ ಎಟಿಎಂ ಮಷೀನ್ ನಲ್ಲಿ ಹಣವನ್ನು ತೆಗೆಯಲು ಎಟಿಎಂ ಕಾರ್ಡ್ ಅಗತ್ಯವಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಕೇವಲ UPI ಅಪ್ಲಿಕೇಶನ್ ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ನೀವು ಇಂತಹ ಎಟಿಎಂ ಮಷೀನ್ ಗಳಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಮಾರುಕಟ್ಟೆಗೆ ಹಿತಾಚಿ ಎಟಿಎಂ ಜಾರಿಗೆ ತರುತ್ತಿದ್ದು ನೀವು ಕೂಡ ಇದರಲ್ಲಿ Franchise ಅನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme
ATM Business Idea Explained in Kannada – here is details of how to get ATM franchise in India.
Hitachi ATM ಪ್ರಕಾರ ನೀವು ಫ್ರಾಂಚೈಸಿಯನ್ನು ಪ್ರಾರಂಭಿಸಲು 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಇದರಲ್ಲಿ ಒಂದು ಲಕ್ಷ ರೂಪಾಯಿ ನಿಮಗೆ ರಿಫಂಡ್ ಸಿಗುತ್ತದೆ ಹಾಗೂ ಐವತ್ತು ಸಾವಿರ ರೂಪಾಯಿಗಳನ್ನು ನೀವು ಶುಲ್ಕ ರೂಪದಲ್ಲಿ ಭರಿಸಬೇಕಾಗುತ್ತದೆ. ಇನ್ನೊಂದು ಕಡೆ ಹಣವನ್ನು ಹಿಂಪಡೆಯೋ ಎಟಿಎಂ ಅನ್ನು ಮಾಡಬೇಕಂತ ಅನ್ಸಿದ್ರೆ ಆ ಸಂದರ್ಭದಲ್ಲಿ 1.25 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಅದರಲ್ಲಿ 75,000 ರೂಪಾಯಿ ರಿಫಂಡ್ ಹಾಗೂ 50,000 ಶುಲ್ಕವಾಗಿರುತ್ತೆ. ಈ ಹೊಸ ಟೆಕ್ನಾಲಜಿಯ ಎಟಿಎಂ ಮೂಲಕ ನೀವು Cash ಹಾಗೂ Cashless Transaction ಮೇಲೆ ತಿಂಗಳಿಗೆ ಸುಲಭವಾಗಿ 50,000 ರೂಪಾಯಿ ಸಂಪಾದನೆಯನ್ನು ಮಾಡಬಹುದು.
ಇದನ್ನು ಕ್ರಮವಾಗಿ ತಿಳಿದುಕೊಳ್ಳೋದಾದ್ರೆ 700 ರೂಪಾಯಿಯಿಂದ 1400 ರೂಪಾಯಿವರೆಗಿನ ವಹಿವಾಟಿನ ಮೇಲೆ ಏಳು ರೂಪಾಯಿ, 1401 ರಿಂದ 2000 ವರೆಗೆ ಪ್ರತಿ ವಹಿವಾಟಿನ ಮೇಲೆ ನಿಮಗೆ 8.5 ರೂಪಾಯಿ 2001ಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮೇಲೆ ನೀವು ಯಾವುದೇ ಹಣವನ್ನು ಪಡೆಯೋದಿಲ್ಲ. ಒಂದು ವೇಳೆ ನಿಮ್ಮ ಎಟಿಎಂ ನಲ್ಲಿ 2001 ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತಾ ಇದ್ದರೆ ಆ ಸಂದರ್ಭದಲ್ಲಿ 701-1400 ನಡುವಿನ ಪ್ರತಿವಾಹಿವಾಟಿನ ಮೇಲೆ ಎಂಟು ರೂಪಾಯಿ, 1401-2000 ಪ್ರತಿವಹಿವಾಟಿನ ಮೇಲೆ 9.5 ರೂಪಾಯಿ ಹಣ ಸಿಗುತ್ತದೆ. 2000 ಕ್ಕಿಂತ ಹೆಚ್ಚಿನ ವಹಿವಾಟಿಗೆ 10.5 ರೂಪಾಯಿ ನಿಮಗೆ ಸಿಗಲಿದೆ.
ಫ್ರಾಂಚೈಸಿ (ATM Business Idea) ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದಕ್ಕಾಗಿ ನೀವು 40 ರಿಂದ 60 ಸ್ಕ್ವೇರ್ ಫೀಟ್ ಜಾಗವನ್ನು ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಲಾಭವನ್ನು ಪಡೆದುಕೊಳ್ಳುವುದಕ್ಕೆ ನಿಮ್ಮ ATM ಹೆಚ್ಚಿನ ಜನಸಂಖ್ಯೆ ಇರುವಂತಹ ಜನನಿಬಿಡ ಪ್ರದೇಶಗಳಲ್ಲಿ ಇರಬೇಕು. ಅತ್ಯಂತ ಹೆಚ್ಚು ಜನರು ಓಡಾಡುವಂತಹ ಬಸ್ಟ್ಯಾಂಡ್ ಅಥವಾ ಮಾರುಕಟ್ಟೆ ಪ್ರದೇಶಗಳಲ್ಲಿ ನೀವು ATM ಮಷೀನ್ ಅನ್ನು ಇಟ್ಟರೆ ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
Hitachi Money Spot ಎನ್ನುವುದು ಪೇಮೆಂಟ್ ಸಿಸ್ಟಮ್ ನ ವೈಟ್ ಲೇಬಲ್ ಬ್ರಾಂಡ್ ಆಗಿದೆ. ಭಾರತ ದೇಶದಲ್ಲಿರುವಂತಹ ಹಲವಾರು ಪ್ರಮುಖ ಬ್ಯಾಂಕುಗಳ 65 ಸಾವಿರಕ್ಕೂ ಅಧಿಕ ಎಟಿಎಂ ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ದೇಶಾದ್ಯಂತ 9,300ಕ್ಕೂ ಅಧಿಕ ವೈಟ್ ಲೇಬಲ್ ಎಟಿಎಂ ಮಷೀನ್ ಗಳಿವೆ. RBI ಕೂಡ ಅನುಮತಿಯನ್ನು ನೀಡಿದ್ದು ಭಾರತ ದೇಶದ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೂಡ ಈ ವೈಟ್ ಲೇಬಲ್ ಎಟಿಎಂ ಮಷೀನ್ ಗಳಿವೆ(White Label ATM Machine). Master Franchise ಅನ್ನು ನೀವು ಪಡೆದುಕೊಂಡರೆ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು (ATM Business Idea) ಯಾಕೆಂದರೆ ಅಧೀನದಲ್ಲಿ ಸುತ್ತಮುತ್ತಲಿನ ಹಳ್ಳಿಯ ಅಥವಾ ನಗರದ Franchise ಗಳು ಕಂಡುಬರುತ್ತವೆ. ಹೀಗಾಗಿ ಇದು ಒಂದೊಳ್ಳೆ ಹಣವನ್ನು ಸಂಪಾದಿಸುವ ಮಾರ್ಗವಾಗಿದೆ ಎಂದು ಹೇಳಬಹುದು.
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10