Bank Strike: ಕರ್ನಾಟಕ ಬಂದ್ ಬೆನ್ನಲ್ಲೇ ಬ್ಯಾಂಕ್ ಸ್ಟ್ರೈಕ್. 13 ದಿನ ಬಂದ್- ಯಾವಾಗ ಎಂದು ತಿಳಿಯಿರಿ. ನಿಮ್ಮ ಕೆಲಸ ಮುಗಿಸಿಕೊಳ್ಳಿ.

Bank Strike: Indian Banks decided to do protest on different days. Find all the details here..

Bank Strike: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನಿನ್ನೆ ಅಂದರೆ ಸೆಪ್ಟೆಂಬರ್ 30 ರಂದು ಇಡೀ ಕರ್ನಾಟಕ ಬಂದ್(Karnataka Bandh) ನಡೆಯುತ್ತಿದ್ದು ಅದರ ಬೆನ್ನಲ್ಲೇ ಈಗ ಬ್ಯಾಂಕಿನ ವಲಯದಲ್ಲಿ ಕೂಡ ಮುಷ್ಕರ ನಡೆಯಲಿದೆ ಎನ್ನುವಂತಹ ಸುದ್ದಿಗಳು ಅಧಿಕೃತವಾಗಿ ಹೇಳಿ ಬಂದಿದೆ. ಹೌದು ಡಿಸೆಂಬರ್ 4 ರಿಂದ ಜನವರಿ 20ರವರೆಗೆ ಎರಡು ಹಂತಗಳ 13 ದಿನಗಳ ಮುಷ್ಕರ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

Bank Strike: Indian Banks decided to do protest on different days. Find all the details here..

All India Bank Employees Association ಸಂಸ್ಥೆ ಬ್ಯಾಂಕಿಂಗ್ ಉದ್ಯೋಗಿಗಳ ಅತ್ಯಂತ ದೊಡ್ಡ ಸಂಸ್ಥೆಯಾಗಿದ್ದು ಇದರಿಂದಲೇ 13 ದಿನಗಳ ಕಾಲ ಮುಷ್ಕರ ನಡೆಸುವಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಉದ್ಯೋಗಿಗಳ ಹಲವಾರು ಬೇಡಿಕೆಗಳು ಇದರಲ್ಲಿ ಇರುವ ಕಾರಣಕ್ಕಾಗಿ ಹಾಗೂ ಅವುಗಳನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದಾಗಿ ಈ ಮುಷ್ಕರವನ್ನು ನಿರ್ಧರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. 13 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಇಲ್ಲದೆ ಇರುವುದು ನಿಜಕ್ಕೂ ಕೂಡ ಎಷ್ಟು ಕಷ್ಟಕರವಾಗಿರಬಹುದೆಂಬುದನ್ನು ನೀವು ಊಹಿಸಬಹುದಾಗಿದೆ.

ಈ ಸಂಸ್ಥೆಯ ಪ್ರಮುಖ ವ್ಯಕ್ತಿ ಸಮಸ್ಯೆಯ ಬಗ್ಗೆ ಮಾತನಾಡುತ್ತಾ ಗುಮಾಸ್ತರು ಹಾಗೂ ಕೆಲ ವರ್ಗದ ಕೆಲಸಗಾರರ ಸಂಖ್ಯೆಯನ್ನು ಕಡಿಮೆ ಮಾಡಿ ಮೇಲ್ವರ್ಗದ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ. ಕೈಗಾರಿಕಾ ಕಾಯ್ದೆಯ ಅಡಿಯಲ್ಲಿ ಈ ರೀತಿ ವಿವಾದಾತ್ಮಕ ನಿಯಮವನ್ನು ಜಾರಿಗೆ ತರುವಂತಹ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ಕೂಡ ಸಾಕಷ್ಟು ಉದ್ಯೋಗಿಗಳ ಕೆಲಸವನ್ನು ಕಸಿಯುತ್ತಿದೆ ಎಂಬುದನ್ನು ಕೂಡ ಇಲ್ಲಿ ಅವರು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಹೇಳಿದ್ದಾರೆ ಎನ್ನಬಹುದಾಗಿದೆ. ಮೇಲ್ವರ್ಗದ ಉದ್ಯೋಗಿಗಳಿಗೆ ಭರ್ತಿ ಮಾಡಿಕೊಳ್ಳುವ ಕಾರಣಕ್ಕಾಗಿ ಕೆಲವರ್ಗದ ಗುಮಾಸ್ತ ಹಾಗೂ ಇನ್ನಿತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಾಗುತ್ತಿದೆ.

ಸಾಮಾನ್ಯವಾಗಿ ನೌಕರರ ಬದಲಿಗೆ ಕಾಂಟ್ರಾಕ್ಟ್ ಮೂಲಕ ಬಂದಿರುವಂತಹ ಕೆಲಸಗಾರರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎನ್ನುವುದಾಗಿ ಕೂಡ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಸಂಸ್ಥೆ ಡಿಸೆಂಬರ್ 4 ರಿಂದ 11ರವರೆಗೆ ಮೊದಲು ಸುತ್ತಿನ ಏಳು ದಿನಗಳ ಮುಷ್ಕರವನ್ನು ನಡೆಸಲಿದೆ. ನಂತರ ಜನವರಿ 2 ರಿಂದ 6ರವರೆಗೆ ನಾಲ್ಕು ದಿನಗಳ ಕಾಲ, ಅದಾದ ನಂತರ ಜನವರಿ 19 ಮತ್ತು 20 ರಂದು ಪ್ರಮುಖ ದಿನಗಳ ಮುಷ್ಕರವನ್ನು ನಡೆಸಲಾಗುತ್ತದೆ ಅಂದರೆ ಒಟ್ಟಾರೆ 13 ದಿನಗಳ ಕಾಲ ಮುಷ್ಕರವನ್ನು ಈ ಸಂದರ್ಭದಲ್ಲಿ ನಡೆಸಲಾಗುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಮುಷ್ಕರದಲ್ಲಿ ವಿವಿಧ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ಕೂಡ ಪಾಲ್ಗೊಳ್ಳಲಿವೆ ಎಂಬುದಾಗಿ ತಿಳಿದು ಬಂದಿದೆ.

ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಬ್ಯಾಂಕುಗಳು ಮುಷ್ಕರವನ್ನು ನಡೆಸಲಿದ್ದು ಇದು ಮುಂದಿನ ದಿನಗಳಲ್ಲಿ ಅಂದರೆ ಈ 13 ದಿನಗಳ ಸಂದರ್ಭದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಕೂಡ ಕಾದು ನೋಡಬೇಕಾಗಿದೆ ಯಾಕೆಂದರೆ ಬ್ಯಾಂಕಿಂಗ್ ವ್ಯವಸ್ಥೆ(Banking System) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಮುಷ್ಕರದಿಂದ ಅದರಲ್ಲೂ ವಿಶೇಷವಾಗಿ 13 ದಿನಗಳ ಮುಷ್ಕರದಿಂದಾಗಿ ನಿಜಕ್ಕೂ ಕೂಡ ಇದರಲ್ಲಿ ವ್ಯತ್ಯಯ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.