Reliance SBI Card: ಉಚಿತ ಮೂವಿ ಟಿಕೆಟ್, ಭರ್ಜರಿ ಡಿಸ್ಕೌಂಟ್, ಸಾವಿರಾರು ರೂಪಾಯಿ ಉಚಿತ ವೋಚರ್ ಗಳು- ಇವೆಲ್ಲ ಬೇಕು ಎಂದರೆ ಈ ಕಾರ್ಡ್ ಪಡೆಯಿರಿ.

ಈ Reliance SBI Card ನ ಉಪಯೋಗಗಳೇನು??- Benefits of Reliance SBI Card.

Reliance SBI Card: ನಮಸ್ಕಾರ ಸ್ನೇಹಿತರೇ ಇದೀಗ ಕ್ರೆಡಿಟ್ ಕಾರ್ಡ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರ್ಧಾರವನ್ನು SBI ಮತ್ತು ರಿಲಯನ್ಸ್ ಮಾಡಿದ್ದು, ವಿದೇಶಿ ಕ್ರೆಡಿಟ್ ಕಾರ್ಡ್ ಕಂಪನಿ ಗಳಿಗೆ ಹೊಸದೊಂದು ಶಾಕ್ ಎದುರಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದ್ರೆ SBI ಮತ್ತು ರಿಲಯನ್ಸ್ ಮಾಡಿರುವ ಕೆಲಸ ನೋಡಿದರೆ, ಇತರ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗಳನ್ನು ಜನರು ಇನ್ನು ಮುಂದೆ ತೆಗೆದುಕೊಳ್ಳುವುದು ಅನುಮಾನವೇ ಸರಿ. ಬನ್ನಿ ಈ ಕಾರ್ಡಿನ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.

ಸ್ನೇಹಿತರೇ, ಕ್ರೆಡಿಟ್ ಕಾರ್ಡ್ ದೇಶದ ಎರಡು ದೊಡ್ಡ ಕಂಪನಿಗಳು ಒಂದಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. ಇದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಇದ್ದು, ಈ ಕಾರ್ಡ್ ಅನ್ನು ಹೇಗೆ ಪಡೆಯಬೇಕು, ಇದರ ಲಾಭಗಳೇನು, ಇದರಿಂದ ನಿಮಗೆ ಹೇಗೆಲ್ಲ ಉಪಯೋಗವಾಗುತ್ತದೆ ಹಾಗೂ ಹೇಗೆ ಬಳಸಿದರೆ, ನಿಮಗೆ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ. ಎಲ್ಲವನ್ನು ತಿಳಿದು, ನೀವು ನಿಮಗೆ ಆಸಕ್ತಿ ಇದ್ದರೇ, ಈ ಕಾರ್ಡ್ ಪಡೆದುಕೊಳ್ಳಿ.

ಈ Reliance SBI Card ನ ಉಪಯೋಗಗಳೇನು??- Benefits of Reliance SBI Card.

ಮೊದಲನೆಯದಾಗಿ, ಈ ಕಾರ್ಡು ನಿಮಗೆ ಎರಡು ರೀತಿಯಲ್ಲಿ ಸಿಗುತ್ತದೆ. ಮೊದಲನೆಯದಾಗಿ ನೀವು ಒಂದು ವೇಳೆ ರಿಲಯನ್ಸ್ ಗೆ ‘ರಿಲಯನ್ಸ್ ಎಸ್‌ಬಿಐ ಕಾರ್ಡ್ ಮತ್ತೊಂದು ರಿಲಯನ್ಸ್ ಎಸ್‌ಬಿಐ ಕಾರ್ಡ್ ಪ್ರೈಮ್. ನೀವು ಈ ಕಾರ್ಡುಗಳ ಮೂಲಕ ರಿಲಯನ್ಸ್ ಸಂಸ್ಥೆಯ ಅಡಿಯಲ್ಲಿ ಬರುವ ಯಾವುದೇ ಶೋ ರೂಮ್ ಗಳಲ್ಲಿ ಹಾಗೂ ವಿವಿಧ ರಿಲಯನ್ಸ್ ಔಟ್ಲೆಟ್ ಗಳಲ್ಲಿ ಶಾಪಿಂಗ್ ಮಾಡಿದರೆ, ಅತ್ಯುತ್ತಮ ಪ್ರಯೋಜನಗಳನ್ನು ಹಾಗೂ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ, ನೀವು ಏರ್ಪೋರ್ಟ್ ಗಳಲ್ಲಿ ಉಚಿತ ಲಾಂಜ್ ಆಕ್ಸೆಸ್ ಪಡೆಯಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿಯೂ ಕೂಡ ನಿಮಗೆ ಈ ಕೊಡುಗೆ ಇರುತ್ತದೆ. ಅಷ್ಟೇ ಅಲ್ಲ, ತಿಂಗಳಿಗೆ ಒಂದು bookmyshow ವತಿಯಿಂದ ಸಿನಿಮಾ ಟಿಕೆಟ್ ಕೂಡ ಫ್ರೀ ಸಿಗುತ್ತದೆ.

ರಿಲಯನ್ಸ್ SBI ಕಾರ್ಡ್ ಶುಲ್ಕಗಳು – Reliance SBI Card Cost and benefits

ಸ್ನೇಹಿತರೇ ಈ ಕಾರ್ಡುಗಳನ್ನು ಪಡೆಯಲು ನೀವು ಯಾವುದೇ ಹಣ ನೀಡಬೇಕಾಗಿಲ್ಲ ಆದರೆ ಒಂದು ವರ್ಷಕ್ಕೆ ರಿಲಯನ್ಸ್ ಎಸ್‌ಬಿಐ ಕಾರ್ಡ್‌ನ ಸೇರುವ ಶುಲ್ಕವು 499 ರೂಪಾಯಿಗಳು,ಅಂದರೆ ವಾರ್ಷಿಕ ಶುಲ್ಕ ರೂ 499. ಒಂದು ವೇಳೆ ನೀವು ಕಾರ್ಡ್ ತೆಗೆದುಕೊಂಡ ಒಂದು ವರ್ಷದ ಒಳಗಡೆ 1 ಲಕ್ಷ ರೂಪಾಯಿ ಖರ್ಚು ಮಾಡಿದರೆ ಸಾಕು, ವಾರ್ಷಿಕ ಶುಲ್ಕವನ್ನು ಮನ್ನಾ ಆಗುತ್ತದೆ, ನೀವು ಯಾವುದೇ ಶುಲ್ಕ ಪಾವತಿ ಮಾಡುವ ವಶ್ಯಕತೆ ಇರುವುದಿಲ್ಲ, ಇನ್ನು ಈ ಕಾರ್ಡ್ ಪಡೆದುಕೊಂಡರೆ, ನಿಮಗೆ ಉಚಿತವಾಗಿ 500 ರೂಪಾಯಿ ವೋಚರ್ ಸಿಗುತ್ತದೆ, ಅಷ್ಟೇ ಅಲ್ಲದೆ, 3200 ರೂಪಾಯಿಯ ರಿಲಯನ್ಸ್ ವೋಚರ್ ಸಿಗುತ್ತದೆ. ಆದರೆ ಈ ಕಾರ್ಡ್‌ನೊಂದಿಗೆ ಲೌಂಜ್ ಪ್ರಯೋಜನಗಳು ಲಭ್ಯವಿರುವುದಿಲ್ಲ.

ರಿಲಯನ್ಸ್ SBI ಕಾರ್ಡ್ ಪ್ರೈಮ್ ಶುಲ್ಕಗಳು – Reliance SBI Card PRIME cost and benefits.

ಸ್ನೇಹಿತರೇ ಈ SBI ಕಾರ್ಡ್ ಪ್ರೈಮ್ ಕಾರ್ಡುಗಳನ್ನು ಪಡೆಯಲು ನೀವು ಯಾವುದೇ ಹಣ ನೀಡಬೇಕಾಗಿಲ್ಲ ಆದರೆ ಒಂದು ವರ್ಷಕ್ಕೆ ರಿಲಯನ್ಸ್ ಎಸ್‌ಬಿಐ ಕಾರ್ಡ್‌ನ ಸೇರುವ ಶುಲ್ಕವು 2999. ಇದಲ್ಲದೆ ವಾರ್ಷಿಕ ಶುಲ್ಕವೂ ಒಂದೇ ಆಗಿರುತ್ತದೆ. ಆದರೆ ಒಂದು ವೇಳೆ ನೀವು 3 ಲಕ್ಷ ಖರ್ಚು ಮಾಡಿರೆ ವಾರ್ಷಿಕ ಶುಲ್ಕ ಮನ್ನಾ ಆಗುತ್ತದೆ. ಇನ್ನು ಒಂದು ವೇಳೆ ನೀವು ಕಾರ್ಡ್ ಪಡೆದುಕೊಂಡರೆ, ಮೊದಲಿಗೆ ನೀವು 3000 ರೂಪಾಯಿಗಳ ರಿಲಯನ್ಸ್ ರಿಟೇಲ್ ವೋಚರ್ ಅನ್ನು ಪಡೆಯಬಹುದಾಗಿದೆ, ಅದು ಉಚಿತವಾಗಿ. ಇನ್ನು ಅಷ್ಟೇ ಅಲ್ಲದೆ ಬೇರೆ ಬೇರೆ ರಿಲಯನ್ಸ್ ಬ್ರ್ಯಾಂಡ್‌ಗಳಿಗೆ 11,999 ರೂ ಮೌಲ್ಯದ ಡಿಸ್ಕೌಂಟ್ ವೋಚರ್‌ಗಳು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್‌ನಲ್ಲಿ 8 ದೇಶೀಯ ಮತ್ತು 4 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಲಾಂಜ್ ಪ್ರಯೋಜನಗಳು ಲಭ್ಯವಿರುತ್ತವೆ. ನೀವು ಪ್ರತಿ ತಿಂಗಳು 250 ರೂಪಾಯಿ ಮೌಲ್ಯದ ಚಲನಚಿತ್ರ ಟಿಕೆಟ್ ಅನ್ನು ಉಚಿತವಾಗಿ ಪಡೆಯುತ್ತೀರಿ.

 ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ. — Loan