Top Mileage bikes: ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು. ಕಡಿಮೆ ಬೆಲೆಗೆ ಹೆಚ್ಚು ಓಡಾಟ.

Below are top mileage bikes in India: – Automobile News in Kannada

Top Mileage bikes: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಕ್ಕೆ ಒಂದು ಟ್ರಾನ್ಸ್ಪೋರ್ಟ್ ಮಾದ್ಯಮ ಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ತಮ್ಮದೇ ಆದಂತಹ ಸ್ವಂತವಾದ ವಾಹನವನ್ನು ಪಡೆಯುವ ಕಾತುರತೆ ಪ್ರತಿಯೊಬ್ಬರಲ್ಲಿ ಕೂಡ ಇರುತ್ತೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗಬಲ್ಲಂತಹ ಒಳ್ಳೆಯ ಮೈಲೇಜ್ ನೀಡುವಂತಹ ಬಜೆಟ್ ಬೈಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

Below are top mileage bikes in India: – Automobile News in Kannada

Hero HF Deluxe: ಆರಾಮದಾಯಕ ಸೀಟ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಅನ್ನು ಕೂಡ ಈ ಬೈಕ್ ಹೊಂದಿದೆ. 97.2 ಸಿಸಿ ಇಂಜಿನ್ ಸಾಮರ್ಥ್ಯವನ್ನು ಹೊಂದಿರುವಂತಹ ಈ ಬೈಕಿನಲ್ಲಿ 9.6 ಲೀಟರ್ಗಳ ಇಂಧನದ ಸಾಮರ್ಥ್ಯವನ್ನು ಹೊಂದಿರುವ ಟ್ಯಾಂಕ್ ಇದೆ. ಪ್ರತಿ ಲೀಟರ್ಗೆ 65km ಗಳನ್ನು ನೀಡುವಂತಹ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ. ಇದರ ಬೆಲೆ 59,890 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗಲಿದೆ.

TVS Sports: ಕಳೆದ ಸಾಕಷ್ಟು ವರ್ಷಗಳಿಂದ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವಂತಹ ಬೈಕುಗಳಲ್ಲಿ TVS Sports ಕೂಡ ಒಂದಾಗಿದೆ. ಈಗಾಗಲೇ ಭಾರತ ದೇಶದಲ್ಲಿ ಈ ಬೈಕ್ 25 ಲಕ್ಷಕ್ಕೂ ಅಧಿಕ ಬೈಕ್ ಮಾರಾಟ ಆಗಿದೆ. ಈ ಬೈಕಿನಲ್ಲಿ 109 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಬರೋಬ್ಬರಿ 70 ಕಿಲೋಮೀಟರ್ ಮೈಲೇಜ್ ನೀಡುವಂತಹ ಈ ಬೈಕು ನಿಜಕ್ಕೂ ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಬೈಕ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. 10 ಲೀಟರ್ಗಳ ಇಂಧನ ಕೆಪಾಸಿಟಿಯನ್ನು ಹೊಂದಿರುವಂತಹ ಟ್ಯಾಂಕ್ ಅನ್ನು ಇದು ಹೊಂದಿದ್ದು, ಇನ್ನು ಈ ಬೈಕಿನ ಬೆಲೆ 63950 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.

Bajaj Platina 100: ಒಂದು ಲೀಟರ್ ಪೆಟ್ರೋಲ್ ನಲ್ಲಿ 72 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುವ ಮೂಲಕ ಭಾರತ ದೇಶದ ದ್ವಿಚಕ್ರ ವಾಹನಗಳಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವಂತಹ ಬೈಕ್ ಎನ್ನುವ ಖ್ಯಾತಿಗೆ ಒಳಗಾಗಿದೆ. Bajaj Platina 100 ಬೈಕ್ 102 ಸಿಸಿ ಇಂಜಿನ್ ಅನ್ನೋ ಹೊಂದಿದೆ. 11 ಲೀಟರ್ಗಳ ಪೆಟ್ರೋಲ್ ಟ್ಯಾಂಕ್ ಅನ್ನು ಕೂಡ ಹೊಂದಿರುವಂತಹ ಈ ಬೈಕು ನಿಮಗೆ 63130 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗುತ್ತದೆ.

ಎಲ್ಲಾ ಸಮುದಾಯದ ರೈತರಿಗೂ ಸಿಹಿ ಸುದ್ದಿ- ಒಂದು ಅರ್ಜಿ ಹಾಕಿದರೆ ಮೂರು ಲಕ್ಷ ರೂಪಾಯಿ. ಅರ್ಜಿ ಹಾಕಿ, ಸುಲಭವಾಗಿ ಹಣ ಪಡೆಯಿರಿ. Kannada News

Hero Splendor Plus: ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಈ ಬೈಕ್ ಬೇರೆ ಬೇರೆ ರೀತಿಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ ಹಾಗೂ ಇಂದಿಗೂ ಕೂಡ ಬಜೆಟ್ ಬೈಕ್ ಅನ್ನು ಖರೀದಿಸುವವರ ನೆಚ್ಚಿನ ಬೈಕ್ ಆಗಿದೆ. ಇದರಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಚೆನ್ನಾಗಿದ್ದು 97.2 ಸಿಸಿ ಸಾಮರ್ಥ್ಯದ ಇಂಜಿನ್ ಅನ್ನು ಕೂಡ ಹೊಂದಿದೆ. 9.8 ಲೀಟರ್ ಗಳ ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿಯನ್ನು ಹೊಂದಿರುವಂತಹ ಈ ಬೈಕಿನ ಬೆಲೆ 72,728 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಪ್ರಾರಂಭವಾಗುತ್ತದೆ. 60 ಕಿಲೋಮೀಟರ್ಗಳ ಮೈಲೇಜ್ ಕೂಡ ಇದರ ಮತ್ತೊಂದು ವಿಶೇಷತೆ ಆಗಿದ್ದು ಇದೇ ಕಾರಣಕ್ಕಾಗಿ ಭಾರತ ದೇಶದಲ್ಲಿ ಇದರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ.

Bajaj CTX 100: ಅತ್ಯಂತ ಹೆಚ್ಚು ಮೈಲೇಜ್ ನೀಡುವಂತಹ ಬೈಕುಗಳಲ್ಲಿ ಈ ಬೈಕ್ ಕೂಡ ಕಾಣಿಸಿಕೊಳ್ಳುತ್ತದೆ ಹಾಗೂ ಇದು ಕೇವಲ ಒಂದು ಲೀಟರ್ ಪೆಟ್ರೋಲ್ ಗೆ ನಿಮಗೆ ಬರೋಬ್ಬರಿ 70 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುತ್ತದೆ. 69,216 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಇನ್ನೂ ಸಾಕಷ್ಟು ವೇರಿಯಂಟ್ಗಳಿದ್ದು ಅವುಗಳಲ್ಲಿ ಕೂಡ ನೀವು ಒಳ್ಳೆಯ ಮೈಲೇಜ್ ಹಾಗೂ ಕಡಿಮೆ ಬಜೆಟ್ ಅನ್ನು ನಿರೀಕ್ಷೆ ಮಾಡಬಹುದಾಗಿದೆ. ಇವಿಷ್ಟು ಟಾಪ್ 5 ಮೈಲೇಜ್ ನೀಡುವಂತಹ ಬೈಕುಗಳಲ್ಲಿ ನಿಮ್ಮ ಫೇವರಿಟ್ ಬೈಕ್ ಯಾವುದು ಎಂಬುದನ್ನು ಕೂಡ ನೀವು ಕಾಮೆಂಟ್ ಮೂಲಕ ತಿಳಿಸಬಹುದಾಗಿದೆ.