Finance Tips: 30ನೇ ವಯಸ್ಸಿನಲ್ಲಿ ಈ ಕೆಲಸಗಳನ್ನ ಮಾಡಿ. ಮುಂದಿನ ಜೀವನ ಸಂಪೂರ್ಣ ಆರ್ಥಿಕವಾಗಿ ಬಲಿಷ್ಠವಾಗಿರುತ್ತದೆ.

Finance Tips: Do these things in your 30’s to get Financial freedom and you can have strong financial life

Finance Tips: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹಿರಿಯರು ಕೂಡ ನಮಗೆ 25 ಹಾಗೂ 30ರ ಹರೆಯದಲ್ಲಿ ಇರಬೇಕಾದರೆ ಚೆನ್ನಾಗಿ ದುಡಿರಿ ಈಗ ಚೆನ್ನಾಗಿ ದುಡಿದರೆ ಮಾತ್ರ ಮುಂದೆ ನೀವು ಸುಖವಾಗಿ ಬದುಕಲು ಸಾಧ್ಯ ಎನ್ನುವಂತಹ ಮಾಹಿತಿಯನ್ನು ನೀಡುತ್ತಲೇ ಇರುತ್ತಾರೆ. ಮಾತೇನೋ ನಿಜ ಆದರೆ ಅದನ್ನು ಪ್ರಾಕ್ಟಿಕಲ್ ಆಗಿ ಯಾವ ರೀತಿ ಕಾರ್ಯರೂಪಕ್ಕೆ ತರಬೇಕು ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ದುಡಿದ ಹಣವನ್ನು ಕೇವಲ ಸೇವಿಂಗ್ ಮಾಡುವುದರಿಂದ ನಿಮ್ಮ ಮುಂದಿನ ಜೀವನ ಚೆನ್ನಾಗಿರುವುದಿಲ್ಲ.

Finance Tips: Do these things in your 30’s to get Financial freedom and you can have strong financial life

ಯಾಕೆಂದರೆ ಸೇವಿಂಗ್ ಕೇವಲ ನೀವು ಎಷ್ಟು ಹಣವನ್ನು ಉಳಿತಾಯ ಮಾಡಿದ್ದೀರೋ ಅದನ್ನೇ ಮುಂದುವರಿಸಿಕೊಂಡು ಹೋಗುತ್ತದೆ. ಮೂವತ್ತರ ಹರೆಯದ ಆಸು ಪಾಸಿನಲ್ಲಿ ಇರುವಂತಹ ಪ್ರತಿಯೊಬ್ಬರು ಕೂಡ ತಾವು ದುಡಿದಂತಹ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಕಲಿತುಕೊಳ್ಳಬೇಕು. ಸಂದರ್ಭದಲ್ಲಿ ಒಳ್ಳೆಯ ಹೂಡಿಕೆ(Best Investment Plans) ಮಾಡಿದರೆ ಮಾತ್ರ ಮುಂದೊಂದು ದಿನ ನಿಮಗೆ ಅದರ ರಿಟರ್ನ್ ರಿಟೈರ್ಮೆಂಟ್ ಲೈಫ್ ಅನ್ನು ಕೂಡ ಒಳ್ಳೆ ರೀತಿಯಲ್ಲಿ ನಡೆಸಲು ಸಹಾಯಕವಾಗುತ್ತದೆ. ಹಾಗಿದ್ರೆ ಬನ್ನಿ ಇದಕ್ಕಾಗಿ ಏನು ಮಾಡಬೇಕು ಅನ್ನೋದನ್ನ ತಿಳಿಯೋಣ.

Direct Equity: ಶೇರು ಮಾರುಕಟ್ಟೆಯ ಡೈರೆಕ್ಟ್ ಇಕ್ವಿಟಿಯಲ್ಲಿ ನೇರವಾಗಿ ಹೂಡಿಕೆ ಮಾಡುವುದು ರಿಸ್ಕ್ ಅನ್ನು ಕೂಡ ಒಳಗೊಂಡಿದೆ ಆದರೆ ಇದರಲ್ಲಿ ಹೂಡಿಕೆಯನ್ನು ಮಾಡಿದರೆ ನೀವು ದೊಡ್ಡ ಪ್ರಮಾಣದಲ್ಲಿ ರಿಟರ್ನ್ ಅನ್ನು ಕೂಡ ಲಾಭ ರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವುದು ನಿಶ್ಚಿತವಾಗಿದೆ. ಅಂದ್ರೆ ನಷ್ಟ ಕೂಡ ಆದರೆ ಆಗಬಹುದು ಆದರೆ ಲಾಭ ಆದ್ರೆ ಮಾತ್ರ ದೊಡ್ಡ ಮಟ್ಟದಲ್ಲಿ ಲಾಭ ಆಗಿರುತ್ತದೆ. ರಿಸ್ಕ್ ಇಲ್ಲದೆ ಯಾವುದೇ ಯೋಜನೆಯಲ್ಲಿ ಕೂಡ ಹಣವನ್ನು ಹೂಡಿಕೆ ಮಾಡುವುದು ಸಾಧ್ಯವಿಲ್ಲ ಅನ್ನೋದನ್ನು ನೀವು ಅರ್ಥಮಾಡಿಕೊಳ್ಳಬೇಕು.

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಕೂಡ ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದ್ದು ಇದರಲ್ಲಿ ಲಾಕ್ ಇನ್ ಸಮಯ 15 ವರ್ಷಗಳಾಗಿರುತ್ತವೆ ಎಂಬುದನ್ನು ಕೂಡ ಮೊದಲಿಗೆ ನೀವು ನೆನಪಿಟ್ಟುಕೊಳ್ಳಬೇಕು. ಒಂದು ದೀರ್ಘಕಾಲಿಕ ಹೂಡಿಕೆ ಎನ್ನುವುದನ್ನು ಮೊದಲ ನೋಟದಿಂದಲೇ ಅರ್ಥಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಕಡಿಮೆ ಎಂದರೆ 500 ರೂಪಾಯಿಗಳಿಂದ ಪ್ರಾರಂಭಿಸಿ 1.5 ಲಕ್ಷ ರೂಪಾಯಿಗಳ ಮ್ಯಾಕ್ಸಿಮಮ್ ಹಣದ ವರೆಗೂ ಕೂಡ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಇರುವಂತಹ ಮತ್ತೊಂದು ಲಾಭ ಏನೆಂದರೆ ಈ ಹೂಡಿಕೆಯ ಮೇಲೆ ಸಿಗುವಂತಹ ಬಡ್ಡಿ Tax Free ಆಗಿರುತ್ತದೆ. ಹೀಗಾಗಿ ಈ ಹೂಡಿಕೆ ಸಾಕಷ್ಟು ಲಾಭದಾಯಕವಾಗಿದೆ.

Debt Funds Investment: ದೀರ್ಘಕಾಲಿಕವಾಗಿ ದೊಡ್ಡ ಮಟ್ಟದ ರಿಟರ್ನ್ ಅನ್ನು ನೀವು ನಿಯಮಿತವಾಗಿ ಸಂಪಾದಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ನೀವು ಖಂಡಿತವಾಗಿ Debt Fund ನಿಯಮಿತವಾಗಿ ಹೂಡಿಕೆ ಮಾಡುವುದು ನಿಮಗೆ ಲಾಭದಾಯಕವಾಗಿದೆ. NPS Investment: NPS ಅಂದ್ರೆ ನ್ಯಾಷನಲ್ ಪೆನ್ಷನ್ ಸ್ಕೀಮ್. ಇದೊಂದು ಸರ್ಕಾರಿ ಸ್ವಾಮ್ಯದ ಪೆನ್ಷನ್ ಸ್ಕೀಮ್ ಆಗಿದ್ದು ಇದರಲ್ಲಿ ಕೂಡ ನೀವು ಹೂಡಿಕೆ ಮಾಡುವ ಮೂಲಕ ಹಣವನ್ನು ನಿಮ್ಮ ರಿಟೈರ್ಮೆಂಟ್ ಲೈಫ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಕೊನೆಯದಾಗಿ ಒಳ್ಳೆಯ ಇನ್ಸೂರೆನ್ಸ್ ಪ್ಲಾನ್(Insurance Plan) ಅನ್ನು ಕೂಡ ನೀವು ಮಾಡಿಕೊಳ್ಳಬಹುದಾಗಿದೆ. ಇನ್ಸೂರೆನ್ಸ್ ಯೋಜನೆಗಳಲ್ಲಿ ಕೂಡ ಹೂಡಿಕೆ ಮಾಡಬಹುದಾಗಿದ್ದು ಒಳ್ಳೆಯ ರಿಟರ್ನ್ ಜೊತೆಗೆ 1961ರ ಕಾಯ್ದೆ 80 ಡಿ ಪ್ರಕಾರ ಕಟ್ಟುವಂತಹ ಪ್ರೀಮಿಯಂ ಹಣದ ಮೇಲೆ 25000ಗಳವರೆಗೂ ಕೂಡ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ನಿಜಕ್ಕೂ ಕೂಡ ಈ ಎಲ್ಲಾ ಹೂಡಿಕೆಗಳನ್ನು ನೀವು ನಿಮ್ಮ 30ರ ಹರೆಯದಲ್ಲಿ ಪ್ರಾರಂಭಿಸಿದರೆ ನಿವೃತ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ.