Kisan Credit Card Loan: ಎಲ್ಲಾ ಸಮುದಾಯದ ರೈತರಿಗೂ ಸಿಹಿ ಸುದ್ದಿ- ಒಂದು ಅರ್ಜಿ ಹಾಕಿದರೆ ಮೂರು ಲಕ್ಷ ರೂಪಾಯಿ. ಅರ್ಜಿ ಹಾಕಿ, ಸುಲಭವಾಗಿ ಹಣ ಪಡೆಯಿರಿ.

Kisan credit card loan complete details, eligibility and process completely explained in Kannada

Kisan Credit Card Loan: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಎನ್ನುವುದು ವೈಜ್ಞಾನಿಕವಾಗಿ ಹಾಗೂ ಟೆಕ್ನಾಲಜಿ ವಿಚಾರದಲ್ಲಿ ಎಷ್ಟೇ ಮುಂದುವರೆದರು ಕೂಡ ನಮ್ಮ ಭಾರತ ದೇಶದ ಬೆನ್ನೆಲುಬು ಎನ್ನುವುದಾಗಿ ಕರೆಯೋದು ರೈತರನ್ನ(Farmer’s Are Backbone Of India). ರೈತರೇ ನಮ್ಮ ದೇಶದ ಪ್ರಮುಖ ಜೀವಾಳ ಅಂತ ಹೇಳಬಹುದು. ಪ್ರತಿಯೊಬ್ಬ ಭಾರತೀಯರು ಕೂಡ ಯಾವುದೇ ಅನುಮಾನವಿಲ್ಲದೇ ಹೆಚ್ಚಾಗಿ ನಂಬೋದು ಹಾಗೂ ಗೌರವ ಕೊಡುವುದು ಕೂಡ ರೈತರಿಗೆ ಮತ್ತು ಸೈನಿಕರಿಗೆ ಅನ್ನೋದನ್ನ ಕೂಡ ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಪಶುಸಂಗೋಪನೆಗಾಗಿ ರೈತರಿಗೆ ಪ್ರೋತ್ಸಾಹ ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್(Kisan credit card loan) ಅನ್ನು ನೀಡುವಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

Kisan credit card loan complete details, eligibility and process completely explained in Kannada

ಕುರಿ, ಕೋಳಿ, ಹಂದಿ, ದನವನ್ನು ಸಾಕುವುದು ಇದೇ ರೀತಿ ಹೈನುಗಾರಿಕೆಯ ಸಾಗಾಣಿಕೆ ಕಾರ್ಯಗಳಿಗಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಸ್ಕೀಮ್ ಮೂಲಕ ಸಾಲವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುವ ಮೂಲಕ ರೈತರು ಈ ರೀತಿಯ ಹೈನುಗಾರಿಕೆ ಕೆಲಸವನ್ನು ಪ್ರಾರಂಭ ಮಾಡಬಹುದಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ಹಣವನ್ನು ನೀಡುವುದಕ್ಕಾಗಿ ಸ್ವತಹ ಭಾರತ ಸರ್ಕಾರವೇ(Government Of India) ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಕೂಡ ಹಣವನ್ನು ಪಡೆಯೋದಕ್ಕೆ ಮಾಡಿಕೊಟ್ಟಿದೆ.

ಇದನ್ನು ಕೂಡ ಓದಿ: ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Idea In Kannada

ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆ ಅಡಿಯಲ್ಲಿ ನೀವು 10 ಲಕ್ಷ ರೂಪಾಯಿಗಳವರೆಗು ಕೂಡ ಯಾವುದೇ ಸೆಕ್ಯೂರಿಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಅದರಲ್ಲಿ 3 ಲಕ್ಷ ರೂಪಾಯಿಗಳ ಸಾಲಕ್ಕೆ ಬಡ್ಡಿಯ ರಿಯಾಯಿತಿ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಎರಡು ಪ್ರತಿಶತ ಬಡ್ಡಿಯ ಸಹಾಯಧನವನ್ನು ನೀಡಲಾಗುತ್ತಿದ್ದು ಇದೇ ಸಂದರ್ಭದಲ್ಲಿ ನೀವು ಸರಿಯಾದ ರೀತಿಯಲ್ಲಿ ಸಾಲವನ್ನು ಕಟ್ಟಿಕೊಂಡು ಹೋದರೆ 3 ಪ್ರತಿಶತದವರೆಗೂ ಕೂಡ ಬಡ್ಡಿಯ ಸಹಾಯಧನದ ಪ್ರಯೋಜನವನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳ ಬಹುದಾಗಿದೆ. ಹೀಗಾಗಿ ಈ ಮೂಲಕ ಭಾರತ ಸರ್ಕಾರದಿಂದ ಒಟ್ಟಾರೆಯಾಗಿ 5 ಪ್ರತಿಶತ ಬಡ್ಡಿ ದರದ ರಿಯಾಯಿತಿಯನ್ನು ಈ ಸಂದರ್ಭದಲ್ಲಿ ರೈತರು ನಿಯಮಗಳನ್ನು ಪಾಲಿಸಿ ಸರಿಯಾದ ರೀತಿಯಲ್ಲಿ ಕಂತುಗಳನ್ನು ಕಟ್ಟಿಕೊಂಡು ಹೋದರೆ ಪಡೆದುಕೊಳ್ಳಬಹುದಾಗಿದೆ.

ಹಾಗಿದ್ರೆ ಬನ್ನಿ ಯೋಜನೆ ಅಡಿಯಲ್ಲಿ ಎಷ್ಟು ಸಾಲ ಯಾವ ವಿಭಾಗಕ್ಕೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಹೈನುಗಾರಿಕೆ(dairy farming) ಮೊದಲಿಗೆ ಮಿಶ್ರ ತಳಿಗಳ ಬಗ್ಗೆ ಮಾತನಾಡುವುದಾದರೆ ಎರಡು ಹಸುಗಳಿಗೆ ಅಂದರೆ ಒಂದು ಹಸುವಿಗೆ ತಲಾ 18 ಸಾವಿರ ರೂಪಾಯಿಗಳ ಲೆಕ್ಕಾಚಾರದಲ್ಲಿ 36,000 ರೂಪಾಯಿಗಳನ್ನು ನೀಡಲಾಗುತ್ತದೆ. ಎಮ್ಮೆಗಳ ವಿಚಾರಕ್ಕೆ ಬರೋದಾದ್ರೆ ಜೋಡಿಗೆ 42 ಸಾವಿರ ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ಕುರಿ ಸಾಕಾಣಿಕೆ ಕೂಡ ಬರುತ್ತದೆ ಹಾಗೂ 11 ಕುರಿಗಳ ನಿರ್ವಹಣೆಯಲ್ಲಿ ಕಟ್ಟಿ ಬೆಳೆಸಿದರೆ 29,950 ಹಾಗೂ ಬಯಲಿನಲ್ಲಿ ಬಿಟ್ಟು ಬೆಳೆಸಿದರೆ 14700 ಇದೇ ರೀತಿಯಲ್ಲಿ ಇನ್ನೂ ಬೇರೆ ಬೇರೆ ವಿಧದ ಕುರಿಗಳ ಹಾಗೂ ಕುರಿ ಮರಿಗಳ ಸಾಲವನ್ನು ಕೂಡ ನೀಡಲಾಗುತ್ತದೆ. ಮೇಕೆ ಸಾಕಾಣಿಕೆ ಕ್ಷೇತ್ರ ಕೂಡ ಇದೇ ರೀತಿಯ ಸಾಲವನ್ನು ಪಡೆದುಕೊಳ್ಳುತ್ತದೆ.

ಮನೆಯ ಕನಸು ಹೊತ್ತಿರುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಹಾಯಧನ. ಇಂದೇ ಅರ್ಜಿ ಸಲ್ಲಿಸಿ. ಲಕ್ಷ ಲಕ್ಷ ಹಣ ಪಡೆಯಿರಿ.. —Home Loan Kannada News

ಹಂದಿ ಸಾಕಾಣಿಕೆಯಲ್ಲಿ ಕೂಡ ಎಂಟು ತಿಂಗಳ ಅವಧಿಗೆ ಹತ್ತು ಹಂದಿಗಳನ್ನು ದಷ್ಟಪುಷ್ಟವಾಗಿ ಬೆಳೆಸಲು 60,000 ಸಾಲವನ್ನು ನೀಡಲಾಗುತ್ತದೆ. ಕೋಳಿ ಸಾಕಾಣಿಕೆಯಲ್ಲಿ(poultry farming) ಮಾಂಸದ ಕೋಳಿಗೆ ಒಂದು ಕೋಳಿಗೆ 80 ಲೆಕ್ಕದಲ್ಲಿ ಸಾವಿರ ಕೋಳಿಗೆ 80000 ವರೆಗೂ ಕೂಡ ಸಾಲವನ್ನು ನೀಡಲಾಗುತ್ತದೆ. ಮೊಟ್ಟೆ ಕೋಳಿಗೆ ಈ ಜಾಗದಲ್ಲಿ 180 ರೂಪಾಯಿಗಳನ್ನು ನೀಡಲಾಗುತ್ತದೆ ಹಾಗೂ ಆ ಸಂದರ್ಭದಲ್ಲಿ ಗರಿಷ್ಠ 1.80 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಮೊಲಸಾಕಾಣಿಕೆ ವಿಚಾರಕ್ಕೆ ಬಂದರೆ 60 ಮೊಲಗಳ ಸಾಕಾಣಿಕೆಗಾಗಿ 50,000 ಗಳ ವರೆಗೆ ಸಾಲವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.