Gruhalakshmi Scheme: ಹಣ ಬಂದಿಲ್ಲ ಅಂತ ಚಿಂತೆಯಲ್ಲಿ ಇರುವ ಜನರಿಗೆ ಸಚಿವೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??

Lakshmi Hebbalkar gives more clarity about Gruhalakshmi Scheme

Gruhalakshmi Scheme: ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ತಾನು ವಾಗ್ದಾನ ಮಾಡಿದ್ದ ಐದು ಯೋಜನೆಗಳನ್ನು ಕೂಡ ರಾಜ್ಯದ ಜನರಿಗೆ ನೀಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆ ಜನಪ್ರಿಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ(Gruhalakshmi Scheme: ) ಕೂಡ ಅತ್ಯಂತ ಜನಪ್ರಿಯ ಯೋಜನೆಯಾಗಿ ಕಾಣಿಸಿಕೊಂಡಿತ್ತು ಹಾಗೂ ಇದು ಪ್ರಾರಂಭ ಆಗಿದ್ದು ಇದೆ ಆಗಸ್ಟ್ 30 ರಿಂದ.

ಯಾವುದೇ ಪತ್ರ, ಗ್ಯಾರೆಂಟಿ ಕೇಳದೆ ಸಿಗುತ್ತೆ 10 ಲಕ್ಷ ಸಾಲ. ಹೀಗೆ ಅರ್ಜಿ ಹಾಕಿದರೆ ಲೋನ್ ಕೊಟ್ಟೆ ಕೊಡುತ್ತಾರೆ. —Loan

Lakshmi Hebbalkar gives more clarity about Gruhalakshmi Scheme

ಆದರೆ ಗೃಹಲಕ್ಷ್ಮಿ ಯೋಜನೆ ಜಾರಿ ಆದ ಮೇಲಿಂದ ಸಾಕಷ್ಟು ಮಹಿಳೆಯರಿಗೆ ಇದರ ಹಣ ದೊರೆತಿಲ್ಲ ಎನ್ನುವುದಾಗಿ ದೊಡ್ಡ ಮಟ್ಟದಲ್ಲಿ ಗೊಂದಲ ಹಾಗೂ ಅಸಮಾಧಾನಗಳು ಕೇಳಿ ಬರುತ್ತಿವೆ. ಕೆಲವರಿಗೆ ಮೊದಲ ಕಂತು ಸಿಕ್ಕಿದ್ದರೆ ಎರಡನೇ ಕಂತು ಸಿಕ್ಕಿಲ್ಲ. ಇನ್ನು ಕೆಲವರಿಗೆ ಎರಡು ಕಂತು ಕೂಡ ಸಿಕ್ಕಿಲ್ಲ ಅನ್ನೋದಾಗಿ ತಿಳಿದು ಬಂದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ರಾಜ್ಯದಲ್ಲಿರುವಂತಹ 9.44 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ದೊರೆತಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದರ ಕುರಿತಂತೆ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರು ಹೇಳಿಕೆಯನ್ನು ನೀಡಿದ್ದು ಬನ್ನಿ ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ವಿಶೇಷ ಸೂಚನೆ: ನೀವು ಒಂದು ವೇಳೆ ರೈತರಾಗಿದ್ದರೆ- ಈ ಲೇಖನದ ಕೊನೆಯಲ್ಲಿ ನಿಮಗೊಂದು ಸಿಹಿ ಸುದ್ದಿ ಇದೆ- ಏನು ಮಾಡದೆ ಮನೆಯಲ್ಲಿಯೇ ಅರ್ಜಿ ಹಾಕಿ, ಮೂರು ಲಕ್ಷ ರೂಪಾಯಿ ಸಿಗುವುದು- ಇದು ರೈತರಿಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಲೇಖನದ ಕೊನೆಯಲ್ಲಿ ನೋಡಿ.

ಆಗಸ್ಟ್ ತಿಂಗಳಲ್ಲಿ ಕೋಟಿ ಜನರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಫಲಾನುಭವಿಗಳಾಗಲು ಅರ್ಹತೆಯನ್ನು ಪಡೆದುಕೊಂಡಿದ್ದರು. ಗೃಹಲಕ್ಷ್ಮಿ ಯೋಜನೆ ಕಾರಣಕ್ಕಾಗಿ 2169 ಕೋಟಿ ರೂಪಾಯಿ ಅನುದಾನವನ್ನು ಕೂಡ ಬಿಡುಗಡೆ ಮಾಡಲಾಗಿತ್ತು ಎಂಬುದಾಗಿ ಸರ್ಕಾರದ ಕಡೆಯಿಂದ ಅಧಿಕೃತವಾಗಿ ತಿಳಿದು ಬಂದಿದೆ. ಇನ್ನು ನೋಂದಣಿ ಮಾಡಿಕೊಂಡಿರುವಂತಹ ಮಹಿಳೆಯರಲ್ಲಿ 93 ಲಕ್ಷ ಜನರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. 5.5 ಲಕ್ಷ ಜನರಿಗೆ Direct Bank Transfer ತಂತ್ರಜ್ಞಾನದ ಮೂಲಕ ಕೂಡ ಹಣವನ್ನು ವರ್ಗಾವಣೆ ಮಾಡಲಾಗಿದೆ ಆದರೆ 9.44 ಲಕ್ಷ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವುದು ಬಾಕಿ ಉಳಿದಿದೆ ಎಂಬುದಾಗಿ ಸಚಿವರೇ ಖುದ್ದಾಗಿ ಹೇಳಿಕೊಂಡಿದ್ದಾರೆ.

ಮನೆಯ ಕನಸು ಹೊತ್ತಿರುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಹಾಯಧನ. ಇಂದೇ ಅರ್ಜಿ ಸಲ್ಲಿಸಿ. ಲಕ್ಷ ಲಕ್ಷ ಹಣ ಪಡೆಯಿರಿ.. —Home Loan Kannada News

ಈ ಹಣವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿತರಣೆ ಮಾಡದೇ ಇರುವುದಕ್ಕೆ ಕೆಲವೊಂದು ವ್ಯಾಲಿಡ್ ಎನಿಸುವಂತಹ ಕಾರಣಗಳನ್ನು ಕೂಡ ನೀಡಿದ್ದಾರೆ. ಮೊದಲನೇದಾಗಿ ಇಷ್ಟು ಜನರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಅರ್ಜಿಗಳನ್ನು ಅನರ್ಹಗೊಳಿಸಲಾಗಿದೆ. ಇನ್ನು ಉಳಿದಂತೆ 5.96 ಲಕ್ಷ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಮಾಡಿಸಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ಇದೊಂದು ಸಮಸ್ಯೆ ಕಾರಣಕ್ಕಾಗಿ ಅವರ ಖಾತೆಗೆ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ. 1.75 ಲಕ್ಷ ಜನರ ಅಡ್ರೆಸ್ ಪ್ರೂಫ್ ಸರಿಯಾಗಿಲ್ಲ ಅನ್ನೋ ಕಾರಣಕ್ಕಾಗಿ ಕೂಡ ಈ ಸಮಸ್ಯೆಯನ್ನು ಅವರು ಎದುರಿಸುತ್ತಿದ್ದಾರೆ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೊಂಡಿದ್ದಾರೆ.

ಇನ್ನು ಈ ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ಸಂಖ್ಯೆ ಹೆಚ್ಚಾಗಿದ್ದು ಒಟ್ಟಾರೆಯಾಗಿ 1.14 ಕೋಟಿ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಬರುತ್ತಾರೆ ಹಾಗೂ ಇದೇ ಕಾರಣಕ್ಕಾಗಿ ಸರ್ಕಾರ ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ 2280 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಬಗೆಹರಿಸಿ ಪ್ರತಿಯೊಂದು ಮನೆಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ನಾವು ಮಾಡುತ್ತೇವೆ ಎಂಬುದಾಗಿ ಸಚಿವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಸಮುದಾಯದ ರೈತರಿಗೂ ಸಿಹಿ ಸುದ್ದಿ- ಒಂದು ಅರ್ಜಿ ಹಾಕಿದರೆ ಮೂರು ಲಕ್ಷ ರೂಪಾಯಿ. ಅರ್ಜಿ ಹಾಕಿ, ಸುಲಭವಾಗಿ ಹಣ ಪಡೆಯಿರಿ. Kisan Credit Card Loan