Business Idea: ಸರ್ಕಾರವೇ ದುಡ್ಡು ಕೊಡುತ್ತೆ ಈ ಬಿಸಿನೆಸ್ ಮಾಡಿದ್ರೆ- ಸ್ವಂತ ಉದ್ಯಮಿ ಆಗಲು ಒಳ್ಳೆಯ ಅವಕಾಶ.

Business Idea: This is a best opportunity to start your own business because the government will pay you money if you do it.

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಕೆಲಸಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಕನಸನ್ನು ಕಾಣುತ್ತಾರೆ ಆದರೆ ವ್ಯಾಪಾರವನ್ನು ಪ್ರಾರಂಭಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಮೊದಲಿಗೆ ಯಾವ ರೀತಿಯ ವ್ಯಾಪಾರ(Business) ಮಾಡಬೇಕು ಎನ್ನುವಂತಹ ಸ್ಪಷ್ಟ ಚಿತ್ರಣ ಇರಬೇಕು ಮತ್ತು ಅದಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳವನ್ನು ಕೂಡ ಹೂಡಬೇಕಾಗುತ್ತದೆ. ಕೆಲ ಬಂಡವಾಳ ಹಾಗೂ ಖರ್ಚನ್ನು ಮಾಡಿದರು ಕೂಡ ಲಾಭ ಖಂಡಿತವಾಗಿ ಸಿಕ್ಕೇ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಬನ್ನಿ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಕೈ ತುಂಬಾ ಆದಾಯವನ್ನು ಗ್ಯಾರಂಟಿಯಾಗಿ ನೀಡುವಂತಹ ಬಿಸಿನೆಸ್ ಬಗ್ಗೆ ಹೇಳಲು ಹೊರಟಿದ್ದೇವೆ. ಇದನ್ನು ನೀವು ಎಲ್ಲಾ ಸೀಸನ್ ಅಲ್ಲಿ ಕೂಡ ಲಾಭದ ದೃಷ್ಟಿಯಿಂದ ನೋಡಬಹುದಾಗಿದೆ.

ಪೆಟ್ರೋಲ್ ಅಗತ್ಯಾನೇ ಇಲ್ಲ. ಕರೆಂಟ್ ಬಿಲ್ಲ ಜಾಸ್ತಿ ಬರಲ್ಲ- ಬೆಸ್ಟ್ ಎಲೆಕ್ಟ್ರಿಕ್ ಕಾರ್ ಗಳು. Best Electric Cars

Business Idea: This is a best opportunity to start your own business because the government will pay you money if you do it.

ಹೌದು ನಾವು ಮಾತಾಡ್ತಾ ಇರೋದು, ಟೊಮೇಟೊ ಸಾಸ್(Tomato Sauce) ಉದ್ಯಮದ ಬಗ್ಗೆ. ವರ್ಷದ 12 ತಿಂಗಳು ಕೂಡ ನೀವು ಮಾರುಕಟ್ಟೆಯಲ್ಲಿ ಟೊಮೇಟೊವನ್ನು ನೋಡಬಹುದಾಗಿದೆ ಹಾಗೂ ಟೊಮ್ಯಾಟೋ ಸಾಸ್ ಬೇಡಿಕೆ ಕೂಡ ಅದೇ ರೀತಿ ಇರುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ(Primer Minister Mudra Scheme) ಮೂಲಕ ನೀವು ಈ ವ್ಯಾಪಾರವನ್ನು ಕೂಡ ಆರ್ಥಿಕ ಸಹಾಯದಿಂದ ಮಾಡಬಹುದಾಗಿದೆ. ಪ್ರಾರಂಭದಲ್ಲಿ ಈ ವ್ಯಾಪಾರವನ್ನು ನೀವು ಪ್ರಾರಂಭಿಸುವುದಕ್ಕಾಗಿ 7.82 ಲಕ್ಷ ರೂಪಾಯಿಗಳ ವರೆಗೂ ಕೂಡ ಬಂಡವಾಳವನ್ನು ಕೂಡ ಬೇಕಾಗಿರುತ್ತದೆ. ಇದನ್ನು ಪ್ರಾರಂಭಿಸಲು ನೀವು ನಿಮ್ಮ ನಿಮ್ಮ ಕೈಯಾರೆ 1.95 ಲಕ್ಷ ರೂಪಾಯಿಗಳನ್ನು ಕೂಡ ಖರ್ಚು ಮಾಡಬೇಕಾಗಿರುತ್ತದೆ. ಹಣವನ್ನು ನೀವು ಮುದ್ರಾ ಯೋಜನೆಯ ಸಾಲದಿಂದಾಗಿ ಒಟ್ಟುಗೂಡಿಸಬಹುದಾಗಿದೆ ಎಂಬುದನ್ನು ಕೂಡ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಯಂತ್ರೋಪಕರಣಗಳನ್ನು ಈ ವ್ಯಾಪಾರವನ್ನು ಪ್ರಾರಂಭಿಸುವುದಕ್ಕಾಗಿ ನೀವು ಮೊದಲಿಗೆ ಖರೀದಿಸಬೇಕಾಗಿರುತ್ತದೆ ಹಾಗೂ ಇದಕ್ಕೆ ಎರಡು ಲಕ್ಷ ರೂಪಾಯಿಗಳ ಖರ್ಚಾಗಬಹುದು. ಟೊಮ್ಯಾಟೋ, ಕಚ್ಚಾವಸ್ತುಗಳು, ನೌಕರರ ಸಂಬಳ ಸೇರಿದಂತೆ ಸಾಕಷ್ಟು ಖರ್ಚುಗಳಿಗಾಗಿ ಕೂಡ 5.82 ಲಕ್ಷ ರೂಪಾಯಿಗಳ ಖರ್ಜನು ನೀವು ಮಾಡಬೇಕಾಗಿರುತ್ತದೆ. ಈ ಟೊಮೆಟೊ ಸಾಸ್ ಉದ್ಯಮಕ್ಕಾಗಿ ನೀವು ಮುದ್ರಾ ಯೋಜನೆ ಅಡಿಯಲ್ಲಿ ಯಾವುದೇ ಬ್ಯಾಂಕ್ ಬಳಿ ಕೂಡ ಸುಲಭವಾಗಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ನೀವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಟೊಮೆಟೊ ಸಾಸ್ (Business Idea In Kannada) ಮಾಡುವುದಕ್ಕಾಗಿ ನೀವು ಯೂನಿಟ್ ನಿರ್ಮಿಸಬೇಕಾಗಿರುತ್ತದೆ ಹಾಗೂ ಅದಕ್ಕೆ ಹೆಚ್ಚಿನ ಜಾಗ ಬೇಕಾದ ಅಗತ್ಯವಿರುವುದಿಲ್ಲ. ಇನ್ನು ಟೊಮ್ಯಾಟೋ ಸಾಸ್ ಹೇಗೆ ಮಾಡುವುದು ಎಂಬುದನ್ನು ನೋಡುವುದಾದರೆ ಎಲ್ಲ ರೀತಿಯ ಟೊಮ್ಯಾಟೋ ಹಣ್ಣುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಕೆಟಲ್ ಸ್ಟೀಮ್ ನಲ್ಲಿ ಬೇಯಿಸಬೇಕು. ಇದಾದ ನಂತರ ಅದನ್ನು ಪಲ್ಪ್(Tomato Pulp) ಮಾಡಿ ಅದರಿಂದ ಬೀಜಗಳನ್ನು ಬೇರ್ಪಡಿಸಬೇಕಾಗಿರುತ್ತದೆ. ಇದರಲ್ಲಿ ಶುಂಠಿ, ಬೆಳ್ಳುಳ್ಳಿ, ಲವಂಗ, ಕರಿ ಮೆಣಸು, ಉಪ್ಪು, ಸಕ್ಕರೆ ಹಾಗೂ ವಿನೆಗರ್ ಅನ್ನು ಕೂಡ ಮಿಶ್ರಣ ಮಾಡಬೇಕಾಗಿರುತ್ತದೆ. ದೀರ್ಘಕಾಲದ ವರೆಗೆ ಹಾಳಾಗಬಾರದು ಎನ್ನುವ ಕಾರಣಕ್ಕಾಗಿ ಇದರ ಜೊತೆಗೆ Preservatives ಅನ್ನು ಕೂಡ ಮಿಶ್ರಣ ಮಾಡಬೇಕಾಗಿರುತ್ತದೆ.

ಸಿಂಹ ರಾಶಿಗೆ ಕಾಲಿಟ್ಟ ಶುಕ್ರ. ಈ ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ. Horoscope Kannada

Tomato Sauce ವ್ಯಾಪಾರದ (Business Idea In Kannada) ಮೂಲಕ ನೀವು ಒಟ್ಟಾರೆಯಾಗಿ ವಾರ್ಷಿಕವಾಗಿ 28.80 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದ್ದು ಇದರಲ್ಲಿ ಖರ್ಚು ರೂಪದಲ್ಲಿ ನೋಡುವುದಾದರೆ 24.22 ಲಕ್ಷ ರೂಪಾಯಿಗಳ ವರೆಗೂ ಕೂಡ ಖರ್ಚಿರುತ್ತದೆ. ಹೀಗಾಗಿ ನೀವು ವರ್ಷದಲ್ಲಿ ಖರ್ಚನ್ನು ಕಳೆದು ಲಾಭ ರೂಪದಲ್ಲಿ 4.58 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದ್ದು ಅಂದರೆ ತಿಂಗಳಿಗೆ 40,000 ವರೆಗೂ ಕೂಡ ನೀವು ಲಾಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ (Business Idea In Kannada) ಎಂಬುದಾಗಿ ತಿಳಿದು ಬರುತ್ತದೆ. ಒಂದು ವೇಳೆ ನೀವು ಕೂಡ ಸಾಸ್ ಬಿಸಿನೆಸ್ ಮಾಡಲು ಇಚ್ಛೆಪಡುತ್ತಿದ್ದರೆ ನಿಮಗೆ ಇದೊಂದು ಒಳ್ಳೆಯ ಆಯ್ಕೆ.