Karnataka Election: ಅಖಾಡಕ್ಕೆ ಇಳಿದ ರಾಜಹುಲಿ – ಸಿದ್ದಾಂತ, ಪಕ್ಷ ಮರೆತು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್ ಸವದಿ, ಶೆಟ್ಟರ್ ಗೆ ಬಿಗ್ ಶಾಕ್. ಸೋಲು ಖಚಿತವಾಯಿತೆ?? ಏನಾಗಿದೆ ಗೊತ್ತಾ?

Karnataka Election: ಅಖಾಡಕ್ಕೆ ಇಳಿದ ರಾಜಹುಲಿ – ಸಿದ್ದಾಂತ, ಪಕ್ಷ ಮರೆತು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್ ಸವದಿ, ಶೆಟ್ಟರ್ ಗೆ ಬಿಗ್ ಶಾಕ್. ಸೋಲು ಖಚಿತವಾಯಿತೆ?? ಏನಾಗಿದೆ ಗೊತ್ತಾ?

Karnataka Election: ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ವಿಧಾನಸಭೆಯ ಕಾವು ಹೆಚ್ಚಾಗುತ್ತಿದೆ, ಪಕ್ಷಾಂತರಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು ಅದರಲ್ಲಿಯೂ ಬಿಜೆಪಿ ಪಕ್ಷದಲ್ಲಿ ಘಟಾನುಘಟಿ ನಾಯಕರು ಎನಿಸಿಕೊಂಡಿದ್ದ ಹಲವಾರು ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ಟಿಕೆಟ್ ಪಡೆಯುತ್ತಿದ್ದಾರೆ. ಮುಂದಿನ 30 ರಿಂದ 40 ವರ್ಷದ ಆಲೋಚನೆಯ ಮೇರೆಗೆ ಬಿಜೆಪಿ ಪಕ್ಷ ಯುವಕರಿಗೆ ಸ್ಥಾನ ನೀಡುವ ನಿರ್ಧಾರ ಮಾಡಿದ್ದು ಹೊಸ ಮುಖಗಳಿಗೆ ಮಣೆ ಹಾಕಿದೆ. ಕೆಲವೊಂದು ಕುಟುಂಬಗಳಿಗೆ ಟಿಕೆಟ್ ನೀಡಿದರೂ ಕೂಡ ಬಹುತೇಕ ಶಾಸಕರು ಹಾಗೂ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಇನ್ನು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ರವರು ಕೂಡ ಟಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದು, ಬಿಜೆಪಿ ಪಕ್ಷ ಬೇರೆ ನಾಯಕರಿಗೆ ಮಣೆ ಹಾಕಿದೆ, ಲಕ್ಷ್ಮಣ್ ಸವದಿ ರವರಿಗೆ ಮಹೇಶ್ ಕುಮ್ಮಟಳ್ಳಿ ರವರಿಗೆ ಟಿಕೆಟ್ (Karnataka Election) ನೀಡುವ ಕಾರಣ ಟಿಕೆಟ್ ಕೈತಪ್ಪಿದ್ದರೇ ಮತ್ತೊಂದು ಕಡೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಲು ಭವಿಷ್ಯದ ದೃಷ್ಟಿಯಿಂದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗಿಲ್ಲ. ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ರೋಹಿತ್ ತಪ್ಪಿನ ನಿರ್ಧಾರಗಳಿಂದ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಟಾಪ್ 5 ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ? ಕನ್ನಡಿಗನು ಲಿಸ್ಟ್ ನಲ್ಲಿ.

ಇದನ್ನೇ ಗಂಭೀರವಾಗಿ ತೆಗೆದುಕೊಂಡ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿರವರು ಇತರ ನಾಯಕರಂತೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳದೆ ಬಿಜೆಪಿ ಪಕ್ಷದ ವಿರುದ್ಧ ಬಂಡಾಯ ಬಾವುಟ ಆರಿಸಿ, ಬಿಜೆಪಿ ಪಕ್ಷಕ್ಕೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದರು. ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ರವರಿಂದ ಬಿಜೆಪಿ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಹೇಳಲಾಗುತ್ತಿತ್ತು, ಲಿಂಗಾಯಿತ ಮತಗಳು ಬಿಜೆಪಿ ಪಕ್ಷದಿಂದ ದೂರವಾಗುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಎಸ್ ಯಡಿಯೂರಪ್ಪನವರು ಇವರಿಬ್ಬರಿಗೂ ಒಮ್ಮೆಲೇ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಸ್ನೇಹಿತರೇ ಯಡಿಯೂರಪ್ಪನವರು ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ಲಿಂಗಾಯತ ಸಮುದಾಯವನ್ನು ಒಂದು ಪಕ್ಷದ ಕಡೆಗೆ ತಿರುಗಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ, ಕೆಜೆಪಿ ಪಕ್ಷ ನಿರ್ಮಿಸಿ, ಮತಗಳನ್ನು ವಿಭಜನೆ ಮಾಡಿದ ಕಾರಣ ಅಂದು ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಏರಿತ್ತು, ಅಂದು ಕೆಜೆಪಿ ಪಕ್ಷ ಕಟ್ಟಿ ನಾನು ಅಪರಾಧ ಮಾಡಿದ್ದೇನೆ ಎಂದು ಯಡಿಯೂರಪ್ಪನವರು ಕೂಡ ಇದೀಗ ಒಪ್ಪಿಕೊಂಡಿದ್ದರು, ಇದೀಗ ಇಂತಹ ಲಿಂಗಾಯತ ಸಮುದಾಯದ ಬಲಾಢ್ಯ ನಾಯಕ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ರವರಿಗೆ ಶಾಕ್ ನೀಡಿ ಸವಾಲೆಸೆದಿದ್ದಾರೆ. ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಕೋಟ್ಯಂತರ ರೂಪಾಯಿ ಲಾಭ ನೀಡುವ ಪೆಟ್ರೋಲ್ ಬಂಕ್ ಅನ್ನು ಆರಂಭಿಸಬೇಕು ಎಂದರೆ ಏನು ಮಾಡಬೇಕು ಗೊತ್ತೇ? ಇದಕ್ಕಿಂದ ಲಾಭ ಬೇಕೇ??

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಬಿಎಸ್ ಯಡಿಯೂರಪ್ಪನವರು ನರೇಂದ್ರ ಮೋದಿ ರವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ, ವಿಶ್ವದಲ್ಲಿ ಭಾರತ ದೇಶಕ್ಕೆ ಉನ್ನತ ಸ್ಥಾನ ಇದೆ. ಇಂತಹ ಸಮಯದಲ್ಲಿ ಟಿಕೆಟ್ ಆಸೆಗಾಗಿ ಶೆಟ್ಟರ್ ಅವರು ನಮ್ಮ ಪಕ್ಷದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ, ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷ ಎಲ್ಲಾ ಸ್ಥಾನವನ್ನು ನೀಡಿತ್ತು, ಅಂದು ನಾನು ಮತ್ತು ಅನಂತ್ ಕುಮಾರ್ ಸೇರಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಕೂಡ ಮಾಡಿದ್ದೆವು.. Karnataka Election

ಇಂತಹ ಪಕ್ಷಕ್ಕೆ ಯಾವುದೇ ಸ್ಥಾನ ಸಿಗದಿದ್ದರೂ ಕೂಡ ದೇಶಕ್ಕಾಗಿ ಹಾಗೂ ಪಕ್ಷಕ್ಕಾಗಿ ಶೆಟ್ಟರ್ ಶ್ರಮಿಸಬೇಕಾಗಿತ್ತು, ಬಿಜೆಪಿ ಪಕ್ಷದಲ್ಲಿ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಕೂಡ ಪಕ್ಷದ ಬೆಂಬಲವಿಲ್ಲದೆ ಮೇಲಕ್ಕೆ ಏರಲು ಸಾಧ್ಯವಿಲ್ಲ ಹಾಗೂ ಆತ ಮುಖ್ಯಮಂತ್ರಿ ಆಗಲು ಸಾಧ್ಯವಾಗಿರುತ್ತಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಇನ್ನು ಲಕ್ಷ್ಮಣ್ ಸವದಿ ರವರಿಗೆ ಚುನಾವಣೆಯಲ್ಲಿ ಸೋತರೂ ಕೂಡ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿತ್ತು, ಖಂಡಿತ ಪಕ್ಷದಲ್ಲಿ ಇದ್ದಿದ್ದರೆ ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಗುತ್ತಿದ್ದವು, ಇವರಿಬ್ಬರು ಕಾಂಗ್ರೆಸ್ ಸೇರಿ ನಂಬಿಕೆ ಮತ್ತು ವಿಶ್ವಾಸ ದ್ರೋಹವನ್ನು ಎಸೆದಿದ್ದಾರೆ. ಇದೇ ಕಾರಣಕ್ಕಾಗಿ ನಾನು ಇವರಿಬ್ಬರ ಕ್ಷೇತ್ರಗಳು ವೈಯಕ್ತಿಕವಾಗಿ ಪ್ರವಾಸ ಮಾಡಿ ಜನರಿಗೆ ಸತ್ಯ ಸಂಗತಿಯನ್ನು ತಿಳಿಸಿ ಇವರಿಬ್ಬರನ್ನು ಅವರ ಕ್ಷೇತ್ರದಲ್ಲಿ ಸೋಲಿಸಿ ಬಿಜೆಪಿ ಪಕ್ಷವನ್ನು ಗೆಲ್ಲುವಂತೆ ಮಾಡುತ್ತೇನೆ ಎಂದು ಬಹಿರಂಗವಾಗಿ ಸವಾಲು ಎಸೆದಿದ್ದಾರೆ. ಲಿಂಗಾಯತ ಮತಗಳನ್ನು ನಂಬಿಕೊಂಡಿರುವ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ರವರು ಬಿಎಸ್ ಯಡಿಯೂರಪ್ಪನವರ ವಿರುದ್ಧ ನಿಂತು ಲಿಂಗಾಯತ ಮತಗಳನ್ನು ಪಡೆದುಕೊಂಡು ಗೆಲ್ಲುವುದು ನಿಜಕ್ಕೂ ಅಸಾಧ್ಯದ ಸಂಗತಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. IPL 2023 JIO: ಐಪಿಎಲ್ ಅನ್ನು ಉಚಿತವಾಗಿ ನೋಡಲು ಕೊಟ್ಟ ಅಂಬಾನಿ: 23,800 ಕೋಟಿ ಖರ್ಚು ಮಾಡಿ ಉಚಿತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತೇ?