I.N.D.I.A: ನಿತೀಶ್ ಗೆ ಕೈ ಕೊಟ್ಟ ಕಾಂಗ್ರೆಸ್- I.N.D.I.A ಗುಂಪಿನಲ್ಲಿ ಮೊದಲ ಎರಡು ದಿನದಲ್ಲಿಯೇ ತಲ್ಲಣ, ಬಿರುಕು ಬಿಟ್ಟ ಮೈತ್ರಿ.
Nithish kumar is not happy about congress party behavior after bangalore meeting- and this directly helps bjp
I.N.D.I.A- ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಮೋದಿ ಎಂಬ ಅಲೆ ಅಲ್ಲ ಅಲ್ಲ ಸುನಾಮಿ ಯಲ್ಲಿ ವಿಪಕ್ಷಗಳು ಕೊಚ್ಚಿಕೊಂಡು ಹೋಗಿವೆ, ಮೋದಿ ಎಂಬ ಹೆಸರನ್ನು ಇಟ್ಟುಕೊಂಡು ಬಿಜೆಪಿ ಪಕ್ಷ ಕಳೆದ ಬಾರಿ 300ರ ಗಡಿ ದಾಟಿದೆ. ಇನ್ನು ಹೀಗಿರುವ ಟ್ರೆಂಡ್ ನೋಡಿದರೆ ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಕಾಣುತ್ತಿಲ್ಲ ಎಂದು ಚುನಾವಣಾ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಆದರೆ ವಿಪಕ್ಷಗಳು ಹೇಗಾದರೂ ಮಾಡಿ ಮೋದಿಯನ್ನು ಸೋಲಿಸಬೇಕು ಈ ಬಾರಿ ತಮ್ಮದೇ ಆದ ನಿರ್ದಿಷ್ಟ ಸರ್ಕಾರವನ್ನು ಜಾರಿಗೆ ತರಬೇಕು ಎಂಬ ಆಲೋಚನೆ ಇಟ್ಟುಕೊಂಡು ನರೇಂದ್ರ ಮೋದಿ ಅವರ ವಿರುದ್ಧ ಹಲವಾರು ದೊಡ್ಡ ದೊಡ್ಡ ಪಕ್ಷಗಳು ಕಾಂಗ್ರೆಸ್ ಪಕ್ಷದ ಜೊತೆ ಸೇರಿ ಮಹಾಘಟಬಂಧನ್ ರಚನೆ ಮಾಡುತ್ತಿದ್ದಾರೆ, ಕಳೆದ ಬಾರಿ ಕೂಡ ಇದೆ ರೀತಿ ಕಾಂಗ್ರೆಸ್ ಪಕ್ಷ ಹಲವಾರು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು, ಆದರೆ ಮೋದಿ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಮಾತ್ರವಲ್ಲ ಬಹುತೇಕ ಪಕ್ಷಗಳು ಕೊಚ್ಚಿಕೊಂಡು ಹೋಗಿದ್ದವು. ಕೆಲವೊಂದು ರಾಜ್ಯಗಳಲ್ಲಿ ಇರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡದ್ದು ಗಮನಾರ್ಹ ಸಂಗತಿ. ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??
ಹೀಗಿರುವಾಗ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂಬ ಆಲೋಚನೆಯಲ್ಲಿ ಈಗಾಗಲೇ ಹಲವಾರು ಪಕ್ಷಗಳು ಮೈತ್ರಿಕೂಟವನ್ನು ರಚಿಸಲು ಸಿದ್ಧವಾಗಿವೆ, ಅದರಲ್ಲಿಯೂ ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ರವರು ತಮಗೆ ಇರುವ ವರ್ಚಸ್ಸನ್ನು ಇಟ್ಟುಕೊಂಡು ವಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಉತ್ತರ ಪ್ರದೇಶದಿಂದ ಸಮಾಜವಾದಿ ಪಾರ್ಟಿ, ಪಶ್ಚಿಮ ಬಂಗಾಳದಿಂದ ಮಮತಾ ಬ್ಯಾನರ್ಜಿ ರವರ ಟಿಎಂಸಿ ಇದರ ಜೊತೆಗೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಸ್ಟಾಲಿನ್ ರವರು ಸೇರಿದಂತೆ ಕೇಜ್ರಿವಾಲ್ ರವರು ಕೂಡ ಇದೇ ಮೈತ್ರಿಕೂಟವನ್ನು ಸೇರಲಿದ್ದು ಇದರ ಜೊತೆಗೆ ಜಾರ್ಖಂಡ್, ಕೇರಳ ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಹಲವಾರು ಪಕ್ಷಗಳು ಮೋದಿರವರನ್ನು ಸೋಲಿಸಲು ಪಣತೊಟ್ಟಿವೆ.
ಆದರೆ ಇಲ್ಲಿ ಅಚ್ಚರಿಯಂತೆ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಆಗುವುದು ಬಹುತೇಕ ಅನುಮಾನವಿದ್ದು ಇನ್ನುಳಿದ ಎಲ್ಲಾ ಪಕ್ಷದ ಪ್ರಮುಖರು ಕೂಡ ತಾವು ಪ್ರಧಾನಿಯಾಗುತ್ತೇವೆ ಎಂಬ ಆಲೋಚನೆಯಲ್ಲಿ ಹೊಸ ಗುಂಪನ್ನು ರಚಿಸಿಕೊಳ್ಳುತ್ತಿವೆ ಇಂತಹ ಸಮಯದಲ್ಲಿ ಮೋದಿ ಅವರನ್ನು ಸೋಲಿಸಲು ಮೊದಲ ಬಾರಿಗೆ ಕಹಳೆ ಊದಿದ ಹಾಗೂ ವಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಿದ ನಿತೀಶ್ ಕುಮಾರ್ ರವರಿಗೆ ಕಾಂಗ್ರೆಸ್ ಪಕ್ಷ ಮೊದಲನೇ ಶಾಕ್ ಕೊಡುವಲ್ಲಿ ಯಶಸ್ವಿಯಾಗಿದೆ. ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
ಎಲ್ಲ ವಿಪಕ್ಷಗಳಿಗೂ ತಮ್ಮದೇ ನಾಯಕ ಪ್ರಧಾನಿಯಾಗಬೇಕು ಎಂಬ ಆಸೆ ಇರುವುದು ಸರ್ವೇಸಾಮಾನ್ಯ ಇಂತಹ ಸಮಯದಲ್ಲಿ ನಿತೀಶ್ ಕುಮಾರ್ ರವರು ತಾನು ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದರೆ ಈ ವಿಪಕ್ಷಗಳ ತಂಡವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಪ್ರತಿ ಸಭೆಗೂ ತಾವೇ ಮುಂದಾಳತ್ವ ಹೊತ್ತು ಕೊಳ್ಳುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ವಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ನಿರತವಾಗಿರುವ ಸಮಯದಲ್ಲಿ ಬೆಂಗಳೂರಿನಲ್ಲಿ ಸಭೆ ಆ ಯೋಜನೆ ಮಾಡಿದ ಕಾಂಗ್ರೆಸ್ ಏಕಾಏಕಿ ವಿಪಕ್ಷಗಳ ತಂಡಕ್ಕೆ I.N.D.I.A ಎಂಬ ಹೆಸರು ಇಟ್ಟಿದೆ, ಆದರೆ ಇದರ ಕುರಿತು ನಿತೀಶ್ ಕುಮಾರ್ ರವರನ್ನು ಯಾವುದೇ ಅಭಿಪ್ರಾಯ ಕೇಳಲಿಲ್ಲ.
ಇದೇ ಸಮಯದಲ್ಲಿ ಮೈತ್ರಿಯನ್ನು ಹೈಚಾಕ್ ಮಾಡಿಸಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್ ಪಕ್ಷದವರೇ ಆಗಬೇಕು ಎಂಬುವ ಹಾದಿಗೆ ಎಲ್ಲ ವಿಪಕ್ಷಗಳನ್ನು ಒಟ್ಟಗೂಡಿಸುವ ಪ್ರಯತ್ನ ಮಾಡುತ್ತದೆ, ಇನ್ನು ಇಷ್ಟೆಲ್ಲಾ ನಡೆಯುತ್ತಿರುವಾಗ ಈ ಗುಂಪಿನ ಕುರಿತು ಕೋರ್ಟ್ ನಲ್ಲಿ ಕೂಡ ಕೇಸ್ ದಾಖಲಾಗಿದ್ದು I.N.D.I.A ಹೆಸರನ್ನು ಬಳಸದಿರುವಂತೆ ಕೇಸ್ ದಾಖಲಿಸಲಾಗಿದೆ, ಇದೇ ಸಮಯದಲ್ಲಿ ಮಾತನಾಡಿರುವ ಟಿಎಂಸಿ ಸಂಸದೆ ಶತಾಬ್ದಿ ರೈ ರವರು ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ, ಹಾಗೂ ಈ ಕುರಿತು ಘೋಷಣೆಯಾದರೆ ಖಂಡಿತ ನಮಗೆಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ.