Ration Card: ಕರ್ನಾಟಕದ ಜನತೆಗೆ ಮತ್ತೊಂದು ಕಹಿ ಸುದ್ದಿ ಕೊಟ್ಟ ಸಿದ್ದು ಸರ್ಕಾರ- 3.26 ಲಕ್ಷ ರೇಷನ್ ಕಾರ್ಡ್ ರದ್ದು. ನಿಮ್ಮದ್ದು ಆಗಿದ್ಯಾ ನೋಡಿಕೊಳ್ಳಿ

Government decided to cancel 3.6 lac ration card due to below reasons.

Ration Card: ನಮಸ್ಕಾರ ಸ್ನೇಹಿತರೇ ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಸುದ್ದಿ ಹೊರಬಂದಿದ್ದು ಸಾಕಷ್ಟು ಜನರ ರೇಷನ್ ಕಾರ್ಡ್(ration card) ರದ್ದಾಗುವಂತಹ ಆದೇಶವನ್ನು ಹೊರಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಕಳೆದ ಆರು ತಿಂಗಳಿಂದ ರೇಷನ್ ಪಡೆಯದೇ ಇರುವವರಿಗೆ ಈ ರೀತಿಯ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಎನ್ನುವಂತೆ ಅರ್ಜಿ ಸಲ್ಲಿಸಿರುವಂತಹ ಹೊಸ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಅನ್ನು ಕೂಡ ವಿತರಣೆ ಮಾಡಲಾಗುತ್ತದೆ. ಇನ್ನು ಅರ್ಹ ಅಲ್ಲದವರು ಕೂಡ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದು ಅದನ್ನು ರದ್ದುಪಡಿಸಿ ಅವರ ಅರ್ಹತೆಗೆ ತಕ್ಕನಾಗಿರುವ ರೇಷನ್ ಕಾರ್ಡ್(ration card) ಅನ್ನು ನೀಡಲಾಗುವುದು ಎಂಬುದಾಗಿ ಕೂಡ ಇಲಾಖೆ ತಿಳಿಸಿದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Government decided to cancel 3.6 lac Ration Card due to below reasons.

ಆಹಾರ ಇಲಾಖೆ, ಒಟ್ಟುಗೂಡಿಸಿರುವ ಮಾಹಿತಿಯ ಪ್ರಕಾರ ಕಳೆದ ಆರು ತಿಂಗಳಿಂದ ರೇಷನ್ ಪಡೆಯದೇ ಇರುವಂತಹ ಒಟ್ಟಾರೆ 3.26 ಲಕ್ಷ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ಹುಡುಕಿ ರದ್ದು ಮಾಡಲಾಗಿದೆ. ಅದು ಕೂಡ ಇವಿಷ್ಟು ರೇಷನ್ ಕಾರ್ಡ್ ಗಳನ್ನು ಇದೇ ವಾರದಲ್ಲಿ ರದ್ದು ಮಾಡಲಾಗುತ್ತದೆ. ಅಂತ್ಯೋದಯ, PHH, NPHH ಹಾಗೂ BPL ration card ಎಲ್ಲಾ ವಿಭಾಗಗಳಲ್ಲಿ ಕೂಡ ಕಳೆದ ಆರು ತಿಂಗಳಿನ ರೇಷನ್ ಪಡೆಯದೇ ಇರುವಂತಹ 3.26 ಲಕ್ಷ ಬಳಕೆದಾರರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತಿದೆ. ಇದಕ್ಕಿಂತ ಮುಂಚೆ ಮರಣ ಹೊಂದಿರುವ 4.62 ಲಕ್ಷ ಪಡಿತರ ಚೀಟಿದಾರರ ರೇಷನ್ ಕಾರ್ಡ್ ಅನ್ನು ಕೂಡ ರದ್ದು ಮಾಡಲಾಗಿದೆ.

3.26 ಲಕ್ಷ ರೇಷನ್ ಕಾರ್ಡ್ ಗಳಲ್ಲಿ ಎಲ್ಲಾ ರೇಷನ್ ಕಾರ್ಡ್ ಗಳು ಕೂಡ ಶಾಶ್ವತವಾಗಿ ರದ್ದಾಗುವುದಿಲ್ಲ ಬದಲಾಗಿ ಕಳೆದ ಕೆಲವು ಸಮಯಗಳಿಂದ ಅಂದರೆ ಆರು ತಿಂಗಳುಗಳಿಂದ ಕೆಲವರು ವೃದ್ಧಾಪ್ಯದಲ್ಲಿ ಇರುವವರು ಕೂಡ ರೇಷನ್ ಪಡೆಯಲು ಬರಲು ಸಾಧ್ಯವಾಗಿರುವುದಿಲ್ಲ. ಅಂಥವರಿಗೆ ಕೂಡ ಗುರುತಿಸಿ ಮತ್ತೆ ಅವರ ರೇಷನ್ ಕಾರ್ಡ್ ಅನ್ನು ವಾಪಸ್ ಹಿಂದಿರುಗಿಸಲಾಗುತ್ತದೆ. ಫುಡ್ ಇನ್ಸ್ಪೆಕ್ಟರ್(food inspector) ಬಂದು ಆರು ತಿಂಗಳ ಕಾಲ ಯಾಕೆ ರೇಷನ್ ಪಡೆದುಕೊಂಡಿಲ್ಲ ಎನ್ನುವುದನ್ನು ಚೆಕ್ ಮಾಡಿ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.

ಇನ್ನು ಹೊಸ ರೇಷನ್ ಕಾರ್ಡ್ ವಿಚಾರಣೆ ಬಗ್ಗೆ ಮಾತನಾಡುವುದಾದರೆ ಈಗಾಗಲೇ 96 ಪ್ರತಿಶತ eKYC ಕೆಲಸ ಮುಗಿದಿರುವ ಹಿನ್ನೆಲೆಯಲ್ಲಿ 2.95 ಲಕ್ಷ ಆದ್ಯತ ರೇಷನ್ ಕಾರ್ಡ್ ಹಾಗೂ 71,410 ಆದ್ಯತೇತರ ರೇಷನ್ ಕಾರ್ಡ್ ಅನ್ನು ನೀಡುವ ಕುರಿತಂತೆ ವಿಚಾರ ಮಾಡಲಾಗಿದೆ. ಪ್ರಸ್ತಾವನೆಯನ್ನು ಕೂಡ ಪರಿಶೀಲಿಸಿರುವಂತಹ ಆಹಾರ ಇಲಾಖೆಯ ವರಿಷ್ಠರು ಆದಷ್ಟು ಶೀಘ್ರದಲ್ಲಿಯೇ ರೇಷನ್ ಕಾರ್ಡ್ ಅನ್ನು ಮಂಜೂರು ಮಾಡುವಂತಹ ನಿರ್ಧಾರವನ್ನು ಕೂಡ ಕೈಗೊಳ್ಳಲಿದ್ದಾರೆ.

ಜಸ್ಟ್ 10 ನಿಮಿಷದಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷೀನ್- ಕಡಿಮೆ ಬೆಲೆ, ಹೆಚ್ಚಿನ ಕೆಲಸ. Portable Washing Machine

ಹೊಸ ರೇಷನ್ ಕಾರ್ಡ್ ವಿಚಾರಣೆಗೆ ಸರ್ಕಾರ ಕೆಲವೊಂದು ಶರತ್ತುಗಳನ್ನು ಕೂಡ ವಿಧಿಸಿದೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದ್ದು ಬನ್ನಿ ಆ ಶರತ್ತುಗಳು ಏನೆಂಬುದನ್ನು ತಿಳಿಯೋಣ. ಸದ್ಯಕ್ಕೆ ಈಗಾಗಲೇ ವಿಲೇವಾರಿ ಆಗಬೇಕಾಗಿರುವಂತಹ 2.96 ಹೊಸ ರೇಷನ್ ಕಾರ್ಡ್ ಗಳ ವಿಲೇವಾರಿ ಆಗುವವರೆಗೂ ಕೂಡ ಹೊಸ ಅರ್ಜಿಯನ್ನು ಪಡೆಯುವ ಹಾಗಿಲ್ಲ. ಸದ್ಯದ ಮಟ್ಟಿಗೆ ಎಪಿಎಲ್ ಕಾರ್ಡ್ ಅರ್ಜಿಯನ್ನು ಸ್ವೀಕರಿಸುವಂತಹ ಕ್ರಿಯೆ ಗೆ ತಡೆಯನ್ನು ಹಾಕಲಾಗಿದೆ. ಹೊಸ 2.96 ಲಕ್ಷ ಕಾರ್ಡ್ಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಆರು ತಿಂಗಳಿಂದ ಪಡಿತರವನ್ನು ಪಡೆದೆ ಇರುವಂತಹ ರೇಷನ್ ಕಾರ್ಡ್ ಹೊಂದಿರುವವರ ಕಾರ್ಡ್ ಅನ್ನು ಕೂಡ ವಾಪಾಸ್ ಪಡೆದುಕೊಳ್ಳಲಾಗುವುದು. ಒಂದು ವೇಳೆ ಮತ್ತೆ ರದ್ದಾಗಿರುವಂತಹ ರೇಷನ್ ಕಾರ್ಡ್ ಅನ್ನು ಪುನರ್ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದಲ್ಲಿ ತಾಲೂಕು ತಹಶೀಲ್ದಾರರೇ ಬಂದು ಪರಿಶೀಲನೆ ಮಾಡಲಿದ್ದಾರೆ.