Narendra Modi: ರೈತರಿಗೆ ಮತ್ತೊಂದು ಸಿಹಿ ಸುದ್ದಿ ಘೋಷಣೆ ಮಾಡಲಿರುವ ನರೇಂದ್ರ ಮೋದಿ?? ನೇರವಾಗಿ ಈ ಬಾರಿ ಅಕೌಂಟ್ ಗೆ ಬೀಳುವುದು ಎಷ್ಟು ಗೊತ್ತೇ?

Narendra Modi might announce extra amount for Farmers as part of PM Kisan Scheme

Narendra Modi: ನಮಸ್ಕಾರ ಸ್ನೇಹಿತರೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು(Narendra Modi) ಅಧಿಕಾರಕ್ಕೆ ಬಂದ ಮೇಲೆ ಕೂಡ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ದೇಶದ ಬೆನ್ನೆಲುಬು ರೈತನ ಬಗ್ಗೆ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರಾಶಸ್ತ್ಯವನ್ನು ವಹಿಸಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿರುವ ಪ್ರಕಾರ ರೈತರಿಗಾಗಿ ಸರ್ಕಾರ ಜಾರಿಗೆ ತಂದಿರುವಂತಹ ಪಿಎಂ ಕಿಸಾನ್ ಯೋಜನೆ(pm Kisan scheme) ಅಡಿಯಲ್ಲಿ ಸಿಗುವಂತಹ ಹಣದಲ್ಲಿ ಹೆಚ್ಚಳ ಮಾಡಲಾಗುತ್ತಿದೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದನ್ನು ಕೂಡ ಓದಿ:: ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Narendra Modi might announce extra amount for Farmers as part of PM Kisan Scheme

ಕಳೆದ ವರ್ಷ ಕಿಸಾನ್ ಸಂಘ ಇದೆ ವಿಚಾರದ ಕುರಿತಂತೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ದೊಡ್ಡ
ಮಟ್ಟದಲ್ಲಿ ರಾಲಿ ನಡೆಸಿದ್ದು ಎನ್ನುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದ್ದು ಸರ್ಕಾರ (Narendra Modi) ಈಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎನ್ನುವುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈಗ ಪಿಎಂ ಕಿಸಾನ್ ಯೋಜನೆಯ ಹಣವನ್ನು ಹೆಚ್ಚಳ ಮಾಡುವಂತಹ ನಿರ್ಧಾರಕ್ಕೆ ಬಂದಿದೆ ಎನ್ನಬಹುದಾಗಿದೆ.

2019ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ರೈತರಿಗಾಗಿ ಈ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದರು. ಆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರನ್ನು ಈ ಯೋಜನೆ ಅಡಿಯಲ್ಲಿ ನೋಂದಾವಣೆ ಕೂಡ ಮಾಡಿಸಿಕೊಳ್ಳಲಾಗಿತ್ತು. ಕೆಲವೇ ಸಮಯಗಳ ನಂತರ ಈ ಯೋಜನೆಯ ಬಗ್ಗೆ ರೈತರು ಕೂಡ ನಿರ್ಲಕ್ಷ್ಯ ವಹಿಸುತ್ತಾರೆ ಹಾಗೂ ಅಧಿಕಾರಿಗಳು ಕೂಡ ಸರಿಯಾದ ರೀತಿಯಲ್ಲಿ ಸ್ಪಂದಿಸುವುದನ್ನು ಮರೆತುಬಿಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಅದಾದ ನಂತರ ನಕಲಿ ದಾಖಲೆಗಳನ್ನು ಉಪಯೋಗಿಸುವ ಮೂಲಕ ಇದನ್ನು ದುರುಪಯೋಗಪಡಿಸಿಕೊಳ್ಳಲು ಕೂಡ ಸಾಕಷ್ಟು ಜನರು ಪ್ರಯತ್ನಪಟ್ಟಿದ್ದಾರೆ. ನೂರಾರು ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಅರ್ಹವಿಲ್ಲದ ವ್ಯಕ್ತಿಗಳು ಬೇರೆ ಯಾರದು ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಸರ್ಕಾರ ಈ ವಿಚಾರದ ಬಗ್ಗೆ ಕಠಿಣ ಕ್ರಮವನ್ನು ಜಾರಿಗೆ ತಂದಿದ್ದು ಕೇವಲ ಅರ್ಹ ರೈತರಿಗೆ ಮಾತ್ರ ಈ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ಈಗ ಕಾರ್ಯಪ್ರವೃತ್ತವಾಗಿದೆ.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹೆಚ್ಚಿನ ಹಣ ಯಾವಾಗಿಂದ ಸಿಗುತ್ತೆ:

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಮೂರು ಕಂತುಗಳಲ್ಲಿ ರೈತರಿಗೆ 6000 ಹಣವನ್ನು ನೀಡಲಾಗುತ್ತಿತ್ತು ಆದರೆ ಇದನ್ನು ಈಗ ಹೆಚ್ಚಳ ಮಾಡಬೇಕು ಎನ್ನುವಂತಹ ಕೂಗು ಕೇಳಿ ಬರುತ್ತಿದ್ದು 2024ರ ಚುನಾವಣೆ ಕೂಡ ಹತ್ತಿರದಲ್ಲೇ ಇದ್ದು ಇದೇ ಕಾರಣಕ್ಕಾಗಿ ರೈತರ ಈ ಕೋರಿಕೆಯನ್ನು ನೆರವೇರಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವುದಾಗಿ ಮಾಧ್ಯಮ ಮೂಲಗಳ ರಿಪೋರ್ಟುಗಳು ಕಂಡುಬಂದಿವೆ. ಪಿಎಂ ಕಿಸಾನ್ ಯೋಜನೆಯ ಹಣವನ್ನು 6,000 ಗಳಿಂದ 8,000 ಗಳಿಗೆ ಹೆಚ್ಚಳ ಮಾಡುವಂತಹ ನಿರ್ಧಾರವನ್ನು ಕೈ ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಅಂದರೆ 8000ಗಳ ಹಣವನ್ನು ಯೋಜನೆ ಅಡಿಯಲ್ಲಿ ನಾಲ್ಕು ಕಂತುಗಳಲ್ಲಿ ರೈತರಿಗೆ ನೀಡುವಂತಹ ಯೋಜನೆ ಮಾಡಲಾಗುತ್ತಿದೆ. ಅಂದರೆ 2023 ಹಾಗೂ 24ರ ಯೋಜನೆ ಅಡಿಯಲ್ಲಿ 60,000 ಬಜೆಟ್ ಗೆ ಇನ್ನೂ ಹೆಚ್ಚಳ 20,000 ಕೋಟಿ ರೂಪಾಯಿ ಬಜೆಟ್ ಅನ್ನು ಹೆಚ್ಚಿಸಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಮಧ್ಯಂತರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಈ ಯೋಜನೆಯ ಹೆಚ್ಚಳದ ಕುರಿತಂತೆ ವಿವಿಧ ಇಲಾಖೆಗಳ ಜೊತೆಗೆ ಹಣಕಾಸು ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್(Nirmala sitaraman) ರವರು ಈ ಯೋಜನೆ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.