Loan Scheme: ಮಹಿಳೆಯರಿಗೆ ಉಚಿತವಾಗಿ 25,000 ರೂ. ಪಡೆಯಲು ಅರ್ಜಿ ಆಹ್ವಾನ. ಅರ್ಜಿ ಹಾಕಿರಿ, ಬ್ಯಾಂಕ್ ಖಾತೆಗೆ ಹಣ ಬೀಳಲಿದೆ.

Loan Scheme: ಶ್ರಮಶಕ್ತಿ ಯೋಜನೆ ಎಂದರೇನು?? Below is the Complete details Sharma Shakti Yojana Explined.

Loan Scheme: ನಮಸ್ಕಾರ ಸ್ನೇಹಿತರೆ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ನೀಡುವಂತಹ ಸಾಕಷ್ಟು ಯೋಜನೆಗಳನ್ನು ಸರ್ಕಾರಗಳು ಸಮಯಕ್ಕೆ ತಕ್ಕಂತೆ ಜಾರಿಗೆ ತರುತ್ತಲೇ ಇರುತ್ತವೆ. ಅದೇ ರೀತಿಯಲ್ಲಿ ಈಗ ಮಹಿಳೆಯರಿಗೆ 25000 ಸಾಲ ಸೌಲಭ್ಯವನ್ನು ನೀಡುವಂತಹ ಶ್ರಮಶಕ್ತಿ ಯೋಜನೆ(shrama shakti scheme) ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಜೊತೆಗೆ ರಾಜ್ಯ ಸರ್ಕಾರ ಶ್ರಮಶಕ್ತಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತಹ ಶಕ್ತಿಯನ್ನು ಸರ್ಕಾರ ನೀಡುತ್ತಿದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದನ್ನು ಕೂಡ ಓದಿ:: ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Loan Scheme: ಶ್ರಮಶಕ್ತಿ ಯೋಜನೆ ಎಂದರೇನು?? Below is the Complete details Shrama Shakti scheme or Yojana Explained.

ಶ್ರಮಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯೋಗ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಸರ್ಕಾರ ಸಾಲ ಸೌಲಭ್ಯವನ್ನು ನೀಡುವುದು ಎಂಬುದಾಗಿದೆ. ಎಲ್ಲಕ್ಕಿಂತ ಅತ್ಯಂತ ಲಾಭವಾದ ವಿಚಾರ ಏನೆಂದರೆ ಇಲ್ಲಿ ಮಹಿಳೆಯರು ಪಡೆದುಕೊಳ್ಳುವಂತಹ ಸಾಲದ ಮೇಲೆ ಅರ್ಧದಷ್ಟು ಸಾಲವನ್ನು ಸರ್ಕಾರವೇ ತೀರಿಸುತ್ತದೆ. ಕೇವಲ ಪಡೆದುಕೊಂಡಿರುವ ಸಾಲದ ಅರ್ಧಭಾಗವನ್ನು ನೀವು ಕಟ್ಟಿದರೆ ಸಾಕು. 50 ಸಾವಿರ ರೂಪಾಯಿಗಳವರೆಗಿನ ಸಾಲವನ್ನು ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ಇದು ಸಾಮಾನ್ಯವಾಗಿ ಹೊರಗೆ ಸಿಗುವಂತಹ ಸಾಲಗಳಿಗಿಂತ ಕಡಿಮೆ ಬಡ್ಡಿ ದರದ ಸಾಲವಾಗಿದೆ. ಇದರಲ್ಲಿ ಕೇವಲ 50 ಪ್ರತಿಶತವನ್ನು (Loan Scheme) ನೀವು ಮೂರು ವರ್ಷದಲ್ಲಿ ತೀರಿಸುವಂತಹ ಸಮಯವಕಾಶವನ್ನು ಕೂಡ ಸರ್ಕಾರ ನೀಡುತ್ತದೆ.

ಬೇಕಾಗಿರುವ ದಾಖಲೆಗಳು ಹಾಗೂ ಯಾವೆಲ್ಲ ವ್ಯಾಪಾರವನ್ನು ಶುರು ಮಾಡಬಹುದು

ಇನ್ನು ಈ ಯೋಜನೆಯಲ್ಲಿ ಫಲಾನುಭವಿಗಳಾಗಲು ನಿಮ್ಮ ಬಳಿ ನಿಮ್ಮ ಅಲ್ಪಸಂಖ್ಯಾತ ಸಮುದಾಯದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್, ಸ್ವಯಂ ಘೋಷಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನಿಮ್ಮ ಬಳಿ ಇರಬೇಕಾಗಿರುತ್ತದೆ. ಇನ್ನು ಈ ಸಾಲ (Loan Scheme) ಯೋಜನೆಯಿಂದ ಸಿಗುವಂತಹ ಹಣದಿಂದ ನೀವು ಯಾವೆಲ್ಲ ವ್ಯಾಪಾರವನ್ನು ಪ್ರಾರಂಭಿಸಬಹುದು ಎನ್ನುವುದನ್ನು ನೋಡುವುದಾದರೆ, ಚಹಾ ಅಂಗಡಿಯ ವ್ಯಾಪಾರ, ಹೂವು ಹಣ್ಣಿನ ವ್ಯಾಪಾರ, ಮೀನು ಮಾಂಸದ ವ್ಯಾಪಾರ, ಹಾಲಿನ ವ್ಯಾಪಾರದ ರೀತಿಯ ಚಿಕ್ಕ ಪುಟ್ಟ ವ್ಯಾಪಾರಗಳನ್ನು ಕೂಡ ನೀವು ಈ ಹಣದಲ್ಲಿ ಸುಲಭವಾಗಿ ಮಾಡಬಹುದಾಗಿದೆ ಹಾಗೂ ವ್ಯಾಪಾರ ಬೆಳೆಯುತ್ತಾ ಹೋದಂತೆ ದೊಡ್ಡ ಮಟ್ಟದಲ್ಲಿ ಲಾಭವನ್ನು ಕೂಡ ಸಂಪಾದನೆ ಮಾಡಬಹುದು.

ಜಸ್ಟ್ 10 ನಿಮಿಷದಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷೀನ್- ಕಡಿಮೆ ಬೆಲೆ, ಹೆಚ್ಚಿನ ಕೆಲಸ. Portable Washing Machine

ಸಾಲ ಪಡೆಯಲು ಇರಬೇಕಾಗಿರುವ ಅರ್ಹತೆಗಳು

ಈ ಸಾಲವನ್ನು ಪಡೆದುಕೊಳ್ಳಲು ನೀವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. 18 ರಿಂದ 55 ವರ್ಷಗಳ ನಡುವಿನ ವಯಸ್ಸಿನ ಪರಿಧಿಯಲ್ಲಿ ನೀವು ಇರಬೇಕು ಹಾಗೂ ಕರ್ನಾಟಕದ ನಿವಾಸಿಗಳಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಕೂಡ ಕಳೆದ ಐದು ವರ್ಷಗಳಿಂದ ಭಾಗಿಯಾಗಿರಬಾರದು ಎನ್ನುವಂತಹ ನಿಯಮಗಳನ್ನು ಕೂಡ ನಿಗದಿಪಡಿಸಲಾಗಿದೆ.

ಹೇಗೆ ಅರ್ಜಿ ಸಲ್ಲಿಸುವುದು

ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ (Loan Scheme) ಅರ್ಜಿ ಸಲ್ಲಿಸುವಂತಹ ಆಪ್ಷನ್ ಮೇಲೆ ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ಅನ್ನು ಅಧಿಕೃತವಾಗಿ ನಮೂದಿಸಿ ಓಟಿಪಿ ಜನರೇಟ್ ಮಾಡಿ ಓಟಿಪಿಯನ್ನು ಸಬ್ಮಿಟ್ ಮಾಡಿ. ಇದಾದ ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಅರ್ಜಿ ಸಲ್ಲಿಕೆಯಾಗುತ್ತದೆ. ಈ ಯೋಜನೆ ಅಡಿಯಲ್ಲಿ ಒಂದು ವೇಳೆ ನಿಮಗೆ ಗೊತ್ತಿರುವವರು ತಮ್ಮ ಜೀವನವನ್ನು ಸರಿಪಡಿಸಿಕೊಳ್ಳಬಹುದೇ ಎಂಬುದಾಗಿ ನೀವು ಭಾವಿಸಿದರೆ ಅವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.