ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಸೋಲಿಸಿದ್ದ ರಮಣ ರೆಡ್ಡಿ ಮನೆ ಧ್ವಂಸ- ಕಾರಣ ತಿಳಿದರೆ ಭೇಷ್ ಅಂತೀರಾ.

ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಸೋಲಿಸಿದ್ದ ರಮಣ ರೆಡ್ಡಿ ಮನೆ ಧ್ವಂಸ- ಕಾರಣ ತಿಳಿದರೆ ಭೇಷ್ ಅಂತೀರಾ.

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ನಿಜಕ್ಕೂ ಒಂದು ಆಶ್ಚರ್ಯ ಪಲಿತಾಂಶ ಎದುರಾಗಿತ್ತು. ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಎಲ್ಲೆಡೆ ಪ್ರಭಾವ ಬೀರಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ರೇವಂತ್ ರೆಡ್ಡಿ ಇಬ್ಬರನ್ನು ಕೂಡ ಒಬ್ಬ ಸಾಮಾನ್ಯ ವ್ಯಕ್ತಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಇಬ್ಬರಿಗೂ ಸೋಲಿನ ರುಚಿ ತೋರಿಸಿದರು..

ಒಂದು ಕಡೆ ಎರಡು ಬಾರಿ ಅಧಿಕಾರ ಅನುಭವಿಸಿ ಹಾಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಬಾರಿ ಹೆಸರು ಮಾಡಿದ್ದ ಕೆಸಿಆರ್ ಹಾಗೂ ಮತ್ತೊಂದೆಡೆ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆಯನ್ನು ಸೃಷ್ಟಿಸಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹಾಗೂ ಇಂದಿನ ಮುಖ್ಯಮಂತ್ರಿ ಆಗಿರುವ ಸಿಎಂ ರೇವಂತ್ ರೆಡ್ಡಿ ಇಬ್ಬರೂ ಕೂಡ ಈತನ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ ಇಬ್ಬರನ್ನು ಸೋಲಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ ರವರು ಐತಿಹಾಸಿಕ ಗೆಲುವನ್ನು ಕಂಡಿದ್ದರು.

ನಾನು ಮೊದಲೇ ಹೇಳುತ್ತಿದ್ದೇನೆ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಸೋಲಿಸುತ್ತೇನೆ ಎಂದು ಭಾಷಣಗಳನ್ನು ಮಾಡುತ್ತಿದ್ದಾಗ ವೆಂಕಟರಮಣ ರೆಡ್ಡಿರವರು ಕೊಂಚ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಎಲ್ಲರಿಗೂ ಅನಿಸುತ್ತಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ ಎಲ್ಲರೂ ಕೂಡ ಒಂದು ಕ್ಷಣ ಅಚ್ಚರಿ ಪಟ್ಟಿದ್ದರು ಹಾಗೂ ಈತನ ಹೋರಾಟಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿ ಜನರು ಇಬ್ಬರು ಘಟಾನುಘಟಿ ವ್ಯಕ್ತಿಗಳನ್ನು ಸೋಲಿಸಿ ಚುನಾವಣೆ ಗೆದ್ದಿದ್ದೀರಾ ಎಂದ ಮೇಲೆ ಜನರು ನಿಮ್ಮ ಮೇಲೆ ಸಾಕಷ್ಟು ಭರವಸೆಗಳನ್ನು ಇಟ್ಟಿರುತ್ತಾರೆ ಅದನ್ನು ನೆರವೇರಿಸಿ ಎಂಬ ಮಾತುಗಳನ್ನು ಕೂಡ ಹೇಳಿದರು.

ಅದೇ ಜನರ ಭರವಸೆ ಸುಳ್ಳಾಗದಂತೆ ಇಂದು ಈಗಾಗಲೇ ವೆಂಕಟರಮಣ ರೆಡ್ಡಿರವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದಾರೆ ಹಾಗೂ ಯಾರಿಗೂ ಶಾಸಕರ ಮನೆಗಳಿಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲದಂತೆ ಪ್ರತಿ ಗ್ರಾಮದಲ್ಲಿಯೂ ಕೂಡ ಪೋಸ್ಟ್ ಬಾಕ್ಸ್ ರೀತಿಯಲ್ಲಿ ಒಂದು ಬಾಕ್ಸ್ ಅನ್ನು ಇರಿಸಿ ನಿಮ್ಮ ಸಮಸ್ಯೆಗಳನ್ನು ಅದರಲ್ಲಿ ಬರೆದು ಹಾಕಿ ನಾನು ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇನೆ ಎಂದು ಇತ್ತೀಚಿಗೆ ಕೆಲವು ದಿನಗಳ ಹಿಂದೆ ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು ಇದು ಎಲ್ಲರಿಗೂ ತಿಳಿದಿರುವ ವಿಷಯವೇ.

ಆದರೆ ಇದೇ ಅಭ್ಯರ್ಥಿ ಇಂದು ಯಾರು ಮಾಡದಂತಹ ಕೆಲಸವನ್ನು ಮಾಡಿದ್ದಾರೆ ಹೌದು. ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿರುವ ವೆಂಕಟರಮಣ ರೆಡ್ಡಿರವರು ತಮ್ಮ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡಲು ನಿರ್ಧಾರ ಮಾಡಿ ಜನರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ತೆಗೆದು ಹಾಕಲು ಮುಂದಾಗಿದ್ದರು ಆದರೆ ಈ ಸಮಯದಲ್ಲಿ ಅವರಿಗೆ ರಸ್ತೆ ಅಗಲೀಕರಣ ಮಾಡಲು ಅಡ್ಡ ಬಂದಿದ್ದು ಸ್ವತಃ ಕಷ್ಟಪಟ್ಟು ಅವರು ಕಟ್ಟಿಕೊಂಡಿದ್ದ ಕೋಟಿ ಕೋಟಿ ಬೆಲೆ ಬಾಳುವ ಮನೆ. ಹೌದು ರಸ್ತೆ ಅಗಲೀಕರಣ ಮಾಡಲು ಅವರಿಗೆ ಅಡ್ಡಬದ್ದದ್ದು ಅವರ ಮನೆ.

ಇದನ್ನು ಕಂಡ ವೆಂಕಟರಮಣ ರೆಡ್ಡಿರವರು ಹಿಂದೆ ಮುಂದೆ ಎರಡು ಕ್ಷಣ ಕೂಡ ಆಲೋಚನೆ ಮಾಡದೆ ನೇರ ತಾವು ವಾಸ ಮಾಡುತ್ತಿದ್ದ ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡಿದ್ದಾರೆ. ಖಾಲಿ ಮಾಡಿದಾಗ ಎಲ್ಲರೂ ಇದೊಂದು ರಾಜಕೀಯ ಸ್ಟಂಟ್ ಬೇರೆ ಕಾರಣಗಳನ್ನು ನೀಡಿ ಮನೆ ಒಡೆಯುವುದಿಲ್ಲ ಎಂದು ಭಾವಿಸಿದ್ದರು. ಆದರೆ ಕಳೆದ ಶನಿವಾರ ಏಕಾಏಕಿ ಬಂದ ಜೆಸಿಬಿ ಗಳು ಹಾಗೂ ಅಧಿಕಾರಿಗಳು ವೆಂಕಟರಮಣ ರೆಡ್ಡಿ ಅವರ ಮನೆಯವನ್ನು ಒಡೆಯಲು ಮುಂದಾಗಿ ಮನೆಯನ್ನು ಸಂಪೂರ್ಣ ನೆಲೆಸಮ ಮಾಡಿದ್ದಾರೆ.

ಅಚ್ಚರಿ ವಿಷಯ ಏನು ಎಂದರೆ ಇದು ಅವರ ವೈಯಕ್ತಿಕ ಜಾಗದಲ್ಲಿ ಕಟ್ಟಿಕೊಂಡ ಮನೆ ಹಾಗೂ ಅಧಿಕಾರಿಗಳು ಒಡೆಯುವಾಗ ಪಕ್ಕದಲ್ಲಿ ನಿಂತಿದ್ದ ವೆಂಕಟರಮಣ ರೆಡ್ಡಿ ರವರು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿದೆ ಈ ಜಾಗವನ್ನು ಯಾವುದೇ ಆಲೋಚನೆ ಮಾಡದೆ ಸಂಪೂರ್ಣ ಧ್ವಂಸ ಮಾಡಿ ಎಂದು ಆದೇಶ ನೀಡಿ ಅಧಿಕಾರಿಗಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸಿ ತಮ್ಮ ಮನೆಯನ್ನು ತಾವೇ ಧ್ವಂಸ ಮಾಡಿದ್ದಾರೆ. ಸತ್ಯ ಹೇಳುತ್ತೇವೆ ಯಾವುದೇ ರಾಜಕೀಯ ಪಕ್ಷದ ನಾಯಕರು ಈ ರೀತಿ ಮಾಡಿದ್ದನ್ನು ನಾವು ಇಲ್ಲಿಯವರೆಗೂ ನೋಡಿಲ್ಲ, ಒಂದು ವೇಳೆ ನೀವು ನೋಡಿದ್ದರೂ ಕೂಡ ಯಾರೇ ಮಾಡಿದರೂ ಇದು ಒಳ್ಳೆಯ ಕೆಲಸವೇ. ನಿಜಕ್ಕೂ ವೆಂಕಟರಮಣ ರೆಡ್ಡಿ ಅವರಿಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್