ತಿಳಿಯದೆ ಬರುವ ಸೈಲೆಂಟ್ ಹೃದಯಾಘಾತದ ಬಗ್ಗೆ ನಿಮಗೆ ಗೊತ್ತೇ? ತಿಳಿದು ಬಚಾವಾಗಿ- ಪ್ರಾಣ ಉಳಿಸಿಕೊಳ್ಳಿ.
ತಿಳಿಯದೆ ಬರುವ ಸೈಲೆಂಟ್ ಹೃದಯಾಘಾತದ ಬಗ್ಗೆ ನಿಮಗೆ ಗೊತ್ತೇ? ತಿಳಿದು ಬಚಾವಾಗಿ- ಪ್ರಾಣ ಉಳಿಸಿಕೊಳ್ಳಿ.
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯುವಜನತೆಯಲ್ಲಿ ಹೃದಯಾ’ ಘಾತ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಯುವಜನತೆಯಲ್ಲಿ ಹಾರ್ಟ್ ಅಟ್ಯಾಕ್ ಸೈಲೆಂಟ್ ಆಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದು ಆಗುವ ಮುನ್ನ ನಿಮ್ಮ ದೇಹದಲ್ಲಿ ಸಾಕಷ್ಟು ಗುಣಲಕ್ಷಣಗಳು ಕೂಡ ಕಂಡುಬರುತ್ತವೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ.
ಮೊದಲನೆ ಸಮಯದಲ್ಲಿ ಕೇವಲ ವಯಸ್ಸಾದವರಿಗೆ ಅಥವಾ ಯಾವುದಾದರೂ ಕೆಟ್ಟ ಅಭ್ಯಾಸಗಳನ್ನು ಹೊಂದಿರುವಂತಹ ಅಂದರೆ ಕುಡಿತ ಅಥವಾ ಧೂಮಪಾನ ಸೇರಿದಂತೆ ಇನ್ನಿತರ ಅಭ್ಯಾಸಗಳನ್ನು ಹೊಂದಿದಂತಹ ಜನರಿಗೆ ಮಾತ್ರ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಈಗ ನೀವು ಯಾವುದೇ ರೀತಿಯ ಕೆಟ್ಟಚಟಗಳನ್ನು ಹೊಂದಿರದಿದ್ದರೂ ಕೂಡ ಹಾಗೂ ಅತ್ಯಂತ ಚಿಕ್ಕ ವಯಸ್ಸಿನವರ ಮೇಲೆ ಕೂಡ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದೇ ಎಲ್ಲರೂ ತಲೆ ಬಿಸಿ ಮಾಡಿಕೊಳ್ಳಬೇಕಾಗಿರುವ ವಿಚಾರವಾಗಿದೆ. ಹಾಗಿದ್ರೆ ಬನ್ನಿ ಹೃದಯಾ’ಘಾತ ಆಗುವುದಕ್ಕಿಂತ ಮುಂಚೆ ಕಂಡುಬರುವಂತಹ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.
- ಪ್ರತಿ ಬಾರಿ ಯಾವುದೇ ಕೆಲಸ ಮಾಡುವಾಗಲೂ ಕೂಡ ಸದಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ ನೀವು ಒಂದೇ ಸಮನೆ ನೀವು ಆಯಾಸವಾದಂತೆ ಭಾವಿಸಿದರೆ ಅದು ಹೃದಯ’ಘಾತದ ಲಕ್ಷಣ ಆಗಿರಬಹುದು. ಆದರೆ ಎಲ್ಲಾ ಬಾರಿ ಆಯಾಸ ಆಗುವುದನ್ನು ನೀವು ಇದರ ಲಕ್ಷಣ ಎಂಬುದಾಗಿ ಭಾವಿಸಲು ಸಾಧ್ಯವಿಲ್ಲ.
- ಇನ್ನು ಸೈಲೆಂಟ್ ಹೃದಯಾಘಾ’ ತದ ಪ್ರಮುಖ ಲಕ್ಷಣವಾಗಿ ಕೆಲವೊಮ್ಮೆ ಕೆಲಸ ಮಾಡುತ್ತಿರುವಾಗ ಒಂದೇ ಸಮನೆ ಉಸಿರಾಟದ ತೊಂದರೆಯನ್ನು ಅನುಭವಿಸುವುದು ಕೂಡ ಆಗಿರುತ್ತದೆ. ಇಂತಹ ಸಾಕಷ್ಟು ಘಟನೆಗಳಲ್ಲಿ ಮುನ್ಸೂಚನೆಯ ರೂಪದಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದಿರುವುದು ಸಾಕಷ್ಟು ಬಾರಿ ಕಂಡು ಬಂದಿದೆ.
- ದೇಹದ ಮೇಲ್ಭಾಗದಲ್ಲಿ ಕಂಡುಬರುವಂತಹ ಕೆಲವೊಂದು ಅಂಗಗಳ ಅಸ್ವಸ್ಥತೆ ಕೂಡ ಹೃದಯಘಾ’ತಕ್ಕೆ ಪ್ರಮುಖ ಮುಖ್ಯ ಲಕ್ಷಣವಾಗಿ ಕಂಡು ಬರಬಹುದಾಗಿದೆ. ಸಾಕಷ್ಟು ಜನರು ಈ ಸಂದರ್ಭದಲ್ಲಿ ಅಸಿಡಿಟಿ ಇರಬಹುದು ಎಂಬುದಾಗಿ ನಿರ್ಲಕ್ಷ ಮಾಡುತ್ತಾರೆ ಆದರೆ ಇದು ನಿರ್ಲಕ್ಷ ಮಾಡುವಂತಹ ವಿಚಾರ ಅಲ್ಲ ಎನ್ನುವುದನ್ನು ನೀವು ಈ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ.
- ಕೆಲವೊಂದು ಸಂದರ್ಭದಲ್ಲಿ ಹೃದಯಘಾತ ಆಗುವುದಕ್ಕಿಂತ ಮುಂಚೆ ವಾಕರಿಕೆ ಅಥವಾ ತಲೆತಿರುಗುವಂತಹ ಸಮಸ್ಯೆಯನ್ನು ಆ ವ್ಯಕ್ತಿ ಕಾಣುವ ಸಾಧ್ಯತೆ ಕೂಡ ಇರುತ್ತದೆ. ಬಿಪಿ ಲೋ ಆದ ಸಂದರ್ಭದಲ್ಲಿ ಈ ರೀತಿಯ ಮುನ್ಸೂಚನೆಗಳು ದೈಹಿಕವಾಗಿ ಕಂಡುಬರುತ್ತವೆ.
- ಇನ್ನು ಸಾಕಷ್ಟು ಸಂದರ್ಭದಲ್ಲಿ ವೈದ್ಯಕೀಯವಾಗಿ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಹೃದಯಘಾ* ತ ಆಗುವುದಕ್ಕಿಂತ ಮುಂಚೆ ಅನಗತ್ಯವಾಗಿ ಹೆಚ್ಚಾಗಿ ಬೆವರುವುದು ಕೂಡ ಕಂಡು ಬರುತ್ತದೆ.
ಇನ್ನು ಈ ರೀತಿಯ ಸೈಲೆಂಟ್ ಹಾರ್ಟ್ ಅ* ಟ್ಯಾಕ್ ನಿಂದ ದೂರ ಇರುವುದಕ್ಕೆ ಪ್ರತಿದಿನ ವ್ಯಾಯಾಮ ಹಾಗೂ ಉತ್ತಮ ಆಹಾರ ವಸ್ತುಗಳನ್ನು ನೀವು ಸೇವಿಸಬೇಕು. ಯಾವುದೇ ಕಾರಣಕ್ಕೂ ಮಧ್ಯಪಾನ ಧೂಮ್ರಪಾನ ಹಾಗೂ ತಂಬಾಕು ಸೇವನೆಯನ್ನು ಮಾಡಬಾರದು. ನಿಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಕಂಟ್ರೋಲ್ ನಲ್ಲಿರಬೇಕು. ಮಧುಮೇಹದಿಂದ ಕೂಡ ಈ ರೀತಿಯ ಸೈಲೆಂಟ್ ಹೃದಯಾ*ಘಾತ ನಡೆಯುವುದು ಹೆಚ್ಚಾಗಿರುತ್ತದೆ. ಇನ್ನು ನಿಮ್ಮ ಕುಟುಂಬದಲ್ಲಿ ಹಿರಿಯರಿಗೆ ಕೂಡ ಹೃದಯದ ಸಂಬಂಧ ಮೂವತೈದು ಪ್ರತಿಶತ ಆ ರೀತಿಯಿಂದ ಕೂಡ ನಿಮಗೆ ಬರುವ ಸಾಧ್ಯತೆ ಇರುತ್ತದೆ ಆದರೆ ಬರಲೇಬೇಕು ಎನ್ನುವಂತಹ ನಿಯಮವೇನು ಇರುವುದಿಲ್ಲ.