IRCTC Package: ಕಡಿಮೆ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದರೆ, IRCTC ನ ಈ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ, ಮಸ್ತ್ ಮಜಾ, ದುಡ್ಡು ಮಾತ್ರ ಕಡಿಮೆ.

IRCTC Package: ಕಡಿಮೆ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದರೆ, IRCTC ನ ಈ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ, ಮಸ್ತ್ ಮಜಾ, ದುಡ್ಡು ಮಾತ್ರ ಕಡಿಮೆ.

IRCTC Package: ಸ್ನೇಹಿತರೇ, ಬೇಸಿಗೆ ರಜಾ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮುಗಿಯಲಿದ್ದು ಇಷ್ಟು ದಿನಗಳಾದರೂ ಯಾವ ಟೂರ್ ಹಾಗೂ ಟ್ರಿಪ್ ಗಳಿಗೆ ಹೋಗದೆ ಇರುವವರು ಅತಿ ಕಡಿಮೆ ಹಣದಲ್ಲಿ ಸುಂದರವಾದ ತಾಣಗಳಿಗೆ ಭೇಟಿ ನೀಡುವ ಯೋಜನೆಯಲ್ಲಿದ್ದರೆ ಐ ಆರ್ ಸಿ ಟಿ ಸಿ ಪ್ರವಾಸಿಗರಿಗೆ ವಿಶೇಷ ಅವಕಾಶವನ್ನು ಕರುಣಿಸುತ್ತಿದೆ. ಹೌದು ಗೆಳೆಯರೇ ಅತಿ ಕಡಿಮೆ ಅವಧಿಯಲ್ಲಿ ಬಹಳ ರಮಣೀಯವಾಗಿರುವಂತಹ ಸ್ಥಳಗಳನ್ನು ಕಣ್ಣು ತುಂಬಿಕೊಳ್ಳುವಂತಹ ಅವಕಾಶ ಇದಾಗಿದ್ದು, 4 ರಾತ್ರಿ ಮತ್ತು 5 ಟೂರ್ ಪ್ಯಾಕೇಜನ್ನು ರೈಲ್ವೆ ಕರುಣಿಸುತ್ತಿದೆ.

ಹೌದು ಗೆಳೆಯರೇ IRCTC ದೇಶ ಮತ್ತು ವಿದೇಶಗಳಲ್ಲಿ ಪ್ರಯಾಣಿಸಲು ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ (IRCTC Package) ಅನ್ನು ಪ್ರಾರಂಭಿಸುತ್ತಿದ್ದು ಇವುಗಳಲ್ಲಿ ಪ್ರವಾಸಿ ಸ್ಥಳಗಳು ಹಾಗೂ ರಮಣೀಯ ಸ್ಥಳಗಳು ಸೇರಿಕೊಂಡಿದ್ದು, ಜೂನ್ 1 ರಿಂದ ಈ ಒಂದು ಪ್ಯಾಕೇಜ್ ಪ್ರಾರಂಭವಾಗಲಿದ್ದು, ನಾಲ್ಕು ರಾತ್ರಿ ಹಾಗೂ ಐದು ಹಗಲುಗಳ ಕಾಲ ಪ್ರಯಾಣಿಸುವ ಮೂಲಕ ಸುಂದರವಾದ ತಾಣವನ್ನು ಕಣ್ತುಂಬಿಕೊಳ್ಳಬಹುದು (IRCTC Package). ಹೌದು ಜೂನ್ ಒಂದರಂದು ರಾತ್ರಿ 9:05ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ 12671 ನೀಲಗಿರಿ ಎಕ್ಸ್ಪ್ರೆಸ್ ಹತ್ತಬೇಕು. 10 Lacs Loan: ಕೊನೆಗೂ ಆದೇಶ ಪಾಲಿಸಲು ಮುಂದಾದ ಬ್ಯಾಂಕ್ ಗಳು- ಇನ್ನು ಮುಂದೆ ಸುಲಭವಾಗಿ ಸಿಗಲಿದೆ 10 ಲಕ್ಷದ ಲೋನ್. ನೀವೇನು ಮಾಡಬೇಕು ಗೊತ್ತೇ??

ಹೀಗೆ ಪ್ರಯಾಣಿಕರು ಬೆಳಿಗ್ಗೆಯಾಗುವಷ್ಟರಲ್ಲಿ ಮೆಟ್ಟುಪಾಲ್ಯಂಗೆ ತಲುಪುತ್ತಾರೆ. ಅಲ್ಲಿ ನಿಮ್ಮನ್ನು ರೈಲ್ವೆ ನಿಲ್ದಾಣದಿಂದ ಪಿಕ್ ಮಾಡಿ ರಸ್ತೆಯ ಮೂಲಕ ಊಟಿಗೆ ಕರೆದೊಯ್ಯಲಾಗುವುದು. ಈ ಒಂದು ಪ್ಯಾಕೇಜ್ನ ಹೆಸರು ಊಟಿ-ಮಧುಮಲೈ ಪ್ಯಾಕೇಜ್ (IRCTC Package) ಆಗಿದ್ದು ಇದರಲ್ಲಿ ನೀವು ಊಟಿ ಹಾಗೂ ಮಧುಮಲೈ ಜೊತೆಗೆ ಕೂನೂರ ನಂತಹ ಪ್ರದೇಶಗಳನ್ನು ಕೂಡ ಕಣ್ತುಂಬಿಕೊಳ್ಳಬಹುದಾಗಿದೆ. ಊಟಿಗೆ ತಲುಪಿ ಹೋಟೆಲ್ನಲ್ಲಿ ಚೆಕ್ ಇನ್ ಆದ ಬಳಿಕ ಬೆಟ್ಟದ ತುದಿಗೆ ಮತ್ತು ಟೀ ಮ್ಯೂಸಿಯಂಗೆ ಹೊರಡುವಿರಿ.

ಸುಂದರವಾದ ಸರೋವರ ಸಸ್ಯೋದ್ಯಮಕ್ಕೆ ಭೇಟಿ ನೀಡಿ ಊಟಿಯಲ್ಲಿ ರಾತ್ರಿ ತಂಗಿದ ನಂತರ ಮರುದಿನ ಬೆಳಗ್ಗೆ ಫೈಕಾರ ಜಲಪಾತ ಮತ್ತು ಸರೋವರ ಸೇರಿದಂತೆ ಚಲನಚಿತ್ರಗಳ ಶೂಟಿಂಗ್ ಸ್ಪಾಟ್ಗೆ ತರಲಿ ರಮಣೀಯವಾದಂತಹ ಪ್ರದೇಶವನ್ನು ಕಣ್ತುಂಬಿಕೊಳ್ಳುವಿರಿ. ಮಧುಮಲೈ ವನ್ಯಜೀವಿ ಅಭಯಾರಣ್ಯ, ಆನೆ ಶಿಬಿರ, ವೈಲ್ಡ್ ರೈಡ್ ಅನ್ನು ಕೂಡ ಈ ಒಂದು ಪ್ಯಾಕೇಜ್ ಮೂಲಕ ಅನುಭವಿಸಬಹುದಾಗಿದೆ. ಅಲ್ಲದೆ ರಾತ್ರಿ ಊಟಿಯಲ್ಲಿಯೇ ತಂಗುವಂತಹ ಸೌಲಭ್ಯವನ್ನು ಐಆರ್ಸಿಟಿಸಿ ನಿಮಗೆ ಕರುಣಿಸುತ್ತಾರೆ.

ಇನ್ನು ನಾಲ್ಕನೆಯ ದಿನ ಊಟಿಯಲ್ಲಿ ಸೀಮ್ಸ್ ಪಾರ್ಕ್, ಲ್ಯಾಂಬ್ಸ್ ರಾಕ್ ಮತ್ತು ಡಾಲ್ಫಿನ್ ನೋಸ್ ವಿವಿಧ ರೀತಿಯಾದಂತಹ ಸ್ಥಳಗಳನ್ನು ಕಣ್ತುಂಬಿಕೊಂಡು, ಹೋಟೆಲ್ನಿಂದ ಚಕೌಟ್ ಮಾಡಿದ ನಂತರ ಕುನೂರ್ ತಲುಪಿ ಪ್ರಕೃತಿದತ್ತವಾದ ಸೌಂದರ್ಯವನ್ನು ಅನುಭವಿಸುತ್ತೀರಾ. ಹೀಗೆ ರಸ್ತೆಯ ಮೂಲಕ ಮಟ್ಟುಪಲ್ಯಂ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಚೆನ್ನೈಗೆ ಹಿಂದಿರುಗಲು ಐದನೇ ದಿನ ಬೆಳಗ್ಗೆ ಪ್ರಾರಂಭ ಮಾಡುವಿರಿ.

ಹೀಗೆ ಸುಂದರವಾದ ತಾಣಗಳ ವೀಕ್ಷಣೆಯ ಜೊತೆಗೆ ರೈಲು ಬುಕ್ಕಿಂಗ್ ಹೋಟೆಲ್, ವಾಸ್ತವ್ಯದ ಬಾಡಿಗೆ ಮತ್ತು ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ವೆಚ್ಚವನ್ನೆಲ್ಲ IRCTC ಹೊತ್ತಿದ್ದು, ಇದೆಲ್ಲವನ್ನು ಸೇರಿ ಒಟ್ಟು 20,750 ಗಳು ಖರ್ಚು ಮಾಡಬೇಕಾಗುತ್ತದೆ. ನೀವೇನಾದ್ರೂ ಎರಡು ಜನರ ಜೋಡಿಯಲ್ಲಿ ಹೊರಟರೆ ಕೇವಲ 10860 ಗಳು ಹಾಗೂ ಮೂರು ಜನರನ್ನು ಬುಕ್ ಮಾಡಲು 8,300 ದರವನ್ನು ವೆಚ್ಚ ಮಾಡಬೇಕಾಗುತ್ತದೆ.