Dk Shiva kumar: ಈ ಎಲ್ಲಾ ಗ್ಯಾರಂಟೀ ಗಳು ಐದು ವರ್ಷ ಇರುತ್ತಾ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಇದರ ಅರ್ಥ ಏನು ಸ್ವಾಮಿ??

Dk Shiva kumar: ಈ ಎಲ್ಲಾ ಗ್ಯಾರಂಟೀ ಗಳು ಐದು ವರ್ಷ ಇರುತ್ತಾ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಇದರ ಅರ್ಥ ಏನು ಸ್ವಾಮಿ??

Dk Shiva kumar: ನಮಸ್ಕಾರ ಸ್ನೇಹಿತರೇ, ಮೇ ತಿಂಗಳಿನಲ್ಲಿ ಇದ್ದಂತಹ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಸೇರಿದಂತೆ ಎಲ್ಲಾ ಪಕ್ಷಗಳು ನಾನಾ ರೀತಿಯಾದಂತಹ ತಂತ್ರ ಪ್ರತಿ ತಂತ್ರಗಳನ್ನು ಮಾಡಿದರು. ಕೆಲವರು ಅಖಾಡಕ್ಕಿಳಿದು, ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ಕೋರಿಕೊಂಡರೆ, ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ / ಆಶ್ವಾಸನೆಗಳನ್ನು ನೀಡುವ ಮೂಲಕ ಜನರ ವೋಟ್ ಅನ್ನು ಗೆದ್ದು ಇಂದು ಕರ್ನಾಟಕ ಸರ್ಕಾರದ ಅಧಿಕಾರವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಇನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿರುವ ಹಾಗೆ ಮುಂದಿನ ತಿಂಗಳೊಳಗೆ ಪ್ರಚಾರದ ಸಂದರ್ಭದಲ್ಲಿ ಹೇಳಿದಂತಹ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಮೂಲಕ ದಿನಾಂಕ ಹಾಗೂ ಅವುಗಳಿಗೆ ಬೇಕಾದಂತಹ ಅರ್ಜಿ ಕುರಿತು ಮಾಹಿತಿ ತಿಳಿಸಿದರು. ಈ ಕುರಿತು ಕೆಲವರು ಸಂತಸ ವ್ಯಕ್ತಪಡಿಸಿದರೆ ಇನ್ನು ಕೆಲವರು ಸರ್ಕಾರ ನೀಡ ಹೊರಟಿರುವ ಈ ಯೋಜನೆಗಳ ಕುರಿತು ತಮ್ಮ ನಕಾರಾತ್ಮಕ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹಣದ ಸಮಸ್ಯೆ ಇರುವವರಿಗೆ ನೆಮ್ಮದಿ- ಜಸ್ಟ್ ವಾಟ್ಸ್ ಆಪ್ ನಲ್ಲಿ ಸಿಗಲಿದೆ ಲೋನ್- ನೀವೇನು ಮಾಡ್ಬೇಕು ಗೊತ್ತೇ??

ಇನ್ನು ಸಂದರ್ಶನ ಒಂದರಲ್ಲಿ ಖುದ್ದಾಗಿ ಡಿಸಿಎಂ (DCM Dk shivakumar) ಡಿಕೆ ಶಿವಕುಮಾರ್ ಅವರಿಗೆ ಎಲ್ಲ ಗ್ಯಾರಂಟಿಗಳು ಐದು ವರ್ಷ ಇರುತ್ತಾ? ಎಂದು ಕೇಳಿದ್ದಕ್ಕೆ ಡಿಕೆಶಿ ಅದೆಂತ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ‘ಮನೆಯಲ್ಲಿ ಕೂತಿರೋರಿಗೆಲ್ಲ ವೇತನ ನೀಡೋಕೆ ಆಗಲ್ಲ, ನಿರುದ್ಯೋಗಿಗಳು ಕೆಲಸ ಹುಡುಕಿ ಕೆಲಸ ಮಾಡಬೇಕು, ಸದ್ಯಕ್ಕೆ ಎಲ್ಲಾ ಹೆಣ್ಣು ಮಕ್ಕಳು ಉಚಿತ ಪ್ರಯಾಣ ಮಾಡಬಹುದು.

ಆದರೆ ಮುಂದಿನ ದಿನಗಳಲ್ಲಿ ಇದಕ್ಕೊಂದು ಔಟ್ ಲೈನ್ ಸಿದ್ಧಪಡಿಸುತ್ತೇವೆ, ನಮಗೆ ಬದ್ಧತೆ ಇತ್ತು. ಅದರಂತೆ ಐದು ಗ್ಯಾರಂಟಿ ತಂದಿದ್ದೇವೆ, ಇನ್ನು ಕಾಂಗ್ರೆಸ್ನ ಐದು ಗ್ಯಾರಂಟಿಗಳು 5 ವರ್ಷವೂ ಇರುತ್ತಾ ಎಂಬ ಪ್ರಶ್ನೆಗೆ ಸೈಲೆಂಟ್ ಆದಂತಹ ಡಿಕೆಶಿ (DCM Dk shivakumar) ಅವರು ಯೋಚಿಸಿ, ಮಗು ಈಗಷ್ಟೇ ಹುಟ್ಟಿದೆ ಮುಂದಿನ ದಿನಗಳಲ್ಲಿ ಅದರ ಕುರಿತು ಮಾತನಾಡುತ್ತೇವೆ’ ಎಂದು ಹೇಳುವ ಮೂಲಕ ತಮ್ಮ ಗ್ಯಾರಂಟಿಗಳ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಇನ್ನು ಪ್ರಚಾರದ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ (free bus) ಪ್ರಯಾಣದ ಸೌಲಭ್ಯವನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸಿ ಕೊಡುತ್ತದೆ ಎಂಬ ಆಶ್ವಾಸನೆ ನೀಡಿದ್ದರು ಈ ಕುರಿತು ಮಾತನಾಡಿದ ಡಿಕೆಶಿ (DCM Dk shivakumar) ಫ್ರೀ ಅಂದ ತಕ್ಷಣ 50% ಜಾಸ್ತಿ ಓಡಾಡಬಹುದು ಅಷ್ಟೇ. ಸುಮ್ನೆ ಯಾಕೆ ಓಡಾಡುತ್ತಾರೆ? ಉಚಿತ ಪ್ರಯಾಣ ಸ್ಕಿಂ ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ಕೊಡುತ್ತೆ. ಇನ್ನು 200 ಯೂನಿಟ್ವರೆಗೂ (200 Units rules) ಕರೆಂಟ್ ಫ್ರೀ, ಒಂದು ವರ್ಷದ ಸರಾಸರಿ ತೆಗೆದುಕೊಂಡರೆ ಅದರ ಜೊತೆಗೆ 10% ಸೇರಿಸಿ ಕೊಡುತ್ತೇವೆ ಎಂದು ಹೇಳುವ ಮೂಲಕ ತಮ್ಮ ಕಾಂಗ್ರೆಸ್ ಪಕ್ಷ ನೀಡಿದಂತಹ ಗ್ಯಾರಂಟಿಗಳಿಗೆ ಡಿಕೆಶಿ ತಮ್ಮದೇ ರೀತಿಯಲ್ಲಿ ಸ್ಪಷ್ಟತೆ ನೀಡಿದ್ದಾರೆ. ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?