Rohit Sharma: ರೋಹಿತ್ ತಪ್ಪಿನ ನಿರ್ಧಾರಗಳಿಂದ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಟಾಪ್ 5 ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ? ಕನ್ನಡಿಗನು ಲಿಸ್ಟ್ ನಲ್ಲಿ.

ರೋಹಿತ್ ತಪ್ಪಿನ ನಿರ್ಧಾರಗಳಿಂದ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಟಾಪ್ 5 ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ? ಕನ್ನಡಿಗನು ಲಿಸ್ಟ್ ನಲ್ಲಿ.

Rohit Sharma: ನಮಸ್ಕಾರ ಸ್ನೇಹಿತರೇ ರೋಹಿತ್ ಶರ್ಮ ರವರು ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ತಂಡವನ್ನು ಏಕದಿನ ಟೆಸ್ಟ್ ಹಾಗೂ ಟಿ ಟ್ವೆಂಟಿ ಸೇರಿ ಮೂರು ಮಾದರಿಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ, ಆರಂಭಿಕ ಆಟಗಾರನಾಗಿರುವ ರೋಹಿತ್ ಶರ್ಮ ಕಳೆದ ಹಲವಾರು ತಿಂಗಳುಗಳಿಂದ ಫಾರ್ಮ್ ನಲ್ಲಿ ಇಲ್ಲ, ಅಪರೂಪಕ್ಕೆ ಕೆಲವೊಂದು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರೂ ಕೂಡ ನಾಯಕನಾಗಿ ತಂಡವನ್ನು ಮುಂದೆ ನಿಂತು ಗೆಲ್ಲಿಸಿ ಕೊಡುವಂತಹ ಪ್ರದರ್ಶನ ಇದುವರೆಗೂ ಹೆಚ್ಚಾಗಿ ನೀಡಿಲ್ಲ.

ಅದೇ ಸಮಯದಲ್ಲಿ ನಾಯಕನಾಗಿ ತಂಡವನ್ನು ಆಯ್ಕೆ ಮಾಡುವ ರೋಹಿತ ಶರ್ಮಾ ಅವರು ಅನಗತ್ಯವಾಗಿ ಹಲವಾರು ಆಟಗಾರರಿಗೆ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ, ಅದರಂತೆ ಕೆಲವೊಂದು ವಿಚಾರಗಳನ್ನು ಗಣನೆಗೆ ತೆಗೆದುಕೊಂಡರೇ ರೋಹಿತ್ ಶರ್ಮ ರವರು 5 ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳದೆ ಕಡೆಗಣಿಸಿದ ಕಾರಣ ಬಹುತೇಕ ಐವರು ಆಟಗಾರರ ಕ್ರಿಕೆಟ್ ಜೀವನ ಮುಗಿದಂತೆ ಕಾಣುತ್ತಿದೆ, ಇದರಲ್ಲಿ ಕನ್ನಡಿಗನು ಕೂಡ ಇರುವುದು ವಿಪರ್ಯಾಸವೇ ಸರಿ.

ಈ ಲಿಸ್ಟಿನಲ್ಲಿ ನಮಗೆ ಟಾಪ್ 5 ನೇ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಅವರ ಹೆಸರು ಕೇಳಿ ಬರುತ್ತಿದ್ದು, ಕೆಲವೊಂದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಭುವನೇಶ್ವರ್ ಕುಮಾರ್ ರವರು ಕಳೆದ ವರ್ಷದವರೆಗೂ ಕೂಡ ಭಾರತ ತಂಡದಲ್ಲಿ ಖಾಯಂ ಬೌಲರ್ ಆಗಿದ್ದರು, ಇಂಗ್ಲೆಂಡ್ನಲ್ಲಿ ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಸೋತ ನಂತರ ಇವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಏಷ್ಯಾಕಪ್ ನಲ್ಲಿ ಹಾಗೂ ಕಳೆದ ಎರಡು ವರ್ಷಗಳಲ್ಲಿ ನಡೆದ ವಿವಿಧ ಸರಣಿಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಸರಣಿ ಶೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿರುವ ಭುವನೇಶ್ವರ್ ಕುಮಾರ್ ರವರಿಗೆ ಅವಕಾಶ ನೀಡದೆ, ರೋಹಿತ್ ಶರ್ಮ ರವರು ಪದೇಪದೇ ಅವರನ್ನು ಕಡೆಗಣಿಸುತ್ತಿದ್ದಾರೆ. JIO: ಐಪಿಎಲ್ ಅನ್ನು ಉಚಿತವಾಗಿ ನೋಡಲು ಕೊಟ್ಟ ಅಂಬಾನಿ: 23,800 ಕೋಟಿ ಖರ್ಚು ಮಾಡಿ ಉಚಿತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತೇ?

ಇನ್ನು ನಾಲ್ಕನೇ ಸ್ಥಾನದಲ್ಲಿ ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ ಆರ್ಸಿಬಿ ತಂಡಕ್ಕೆ ಕಳೆದ ವರ್ಷ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ದಿನೇಶ್ ಕಾರ್ತಿಕ್ ರವರ ಹೆಸರಿಗಿದ್ದು, ಇವರು ವರ್ಲ್ಡ್ ಕಪ್ ನಂತರ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲೇ ಇಲ್ಲ, ಸೆಮಿ ಫೈನಲ್ ಪಂದ್ಯದಲ್ಲಿ ಕೂಡ ಇವರನ್ನು ತಂಡದಿಂದ ಹೊರಗಿಡಲಾಗಿತ್ತು, ರಿಷಬ್ ಪಂತ್ ಇದ್ದಿದ್ದರೇ, ಯುವ ಆಟಗಾರ ಎಂದು ಸ್ಥಾನ ಕೊಡುವುದರಲ್ಲಿ ಅರ್ಥ ವಿತ್ತು, ಆದರೆ ಅವರು ಇಲ್ಲದೆ ಇದ್ದರೂ ಕೂಡ ದಿನೇಶ್ ಕಾರ್ತಿಕ್ ರವರನ್ನು ತಂಡಕ್ಕೆ ಸೇರಿಸಿಕೊಳ್ಳದ ಕಾರಣ ಬಹುತೇಕ ಭಾರತೀಯ ಕ್ರಿಕೆಟ್ ತಂಡದಲ್ಲಿ ದಿನೇಶ್ ಕಾರ್ತಿಕ್ ರವರು ಮರಳಿ ಸ್ಥಾನ ಪಡೆಯುವುದು ಅನುಮಾನವೇ ಸರಿ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ತೋರುತ್ತಿದ್ದರೂ ಕೂಡ ರೋಹಿತ್ ಶರ್ಮ ರವರು ನಾಯಕನಾದ ಬಳಿಕ ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅಜಿಂಕ್ಯ ರಹಾನೆ ರವರನ್ನು ರೋಹಿತ್ ಶರ್ಮ ಇದುವರೆಗೂ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ, ಉಪ ನಾಯಕನಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದ ಅಜಿಂಕ್ಯ ರಹಾನೆ ರವರು ಕಳಪೆ ಫಾರ್ಮ್ ನಿಂದ ತಂಡದಿಂದ ಹೊರ ಬಿದ್ದಿದ್ದರೂ ಅದರಲ್ಲಿ ಎರಡು ಮಾತಿಲ್ಲ. ಆದರೆ, ಕಳೆದ ವರ್ಷ ರಣಜಿಯಲ್ಲಿ 57.64 ಸರಾಸರಿಯಲಿ 634 ರನ್ ಗಳಿಸಿರುವ ಅಜಿಂಕ್ಯ ರಹಾನೆ ರವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ರವರು ಆಯ್ಕೆ ಮಾಡಿರಲಿಲ್ಲ, ಇವರ ಬದಲಾಗಿ ಶ್ರೇಯಸ್ ಅಯ್ಯರ್ ಅವರನ್ನು ಸದಾ ಆಯ್ಕೆ ಮಾಡುತ್ತಿರುವ ರೋಹಿತ್ ಶರ್ಮಾ ರವರು ಪದೇ ಪದೇ ವಿಫಲವಾದರೂ ಕೂಡ ಅವರಿಗೆ ಅವಕಾಶ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ ಏನಾಗಿತ್ತು ಗೊತ್ತಾ??

ಇನ್ನು ಈ ಸಾಲಿನಲ್ಲಿ ಕರ್ನಾಟಕದ ನತದೃಷ್ಟ ಆಟಗಾರ ಎಂದೆ ಕುಖ್ಯಾತಿ ಪಡೆದು ಕೊಂಡಿರುವ ಮಯಾಂಕ್ ಅಗರ್ವಾಲ್ ರವರು ಎರಡನೇ ಸ್ಥಾನ ಪಡೆದಿದ್ದಾರೆ, ಟಿ ಟ್ವೆಂಟಿ ಹಾಗೂ ಏಕದಿನ ಸರಣಿಯಲ್ಲಿ ಅಷ್ಟಾಗಿ ಹೇಳಿಕೊಳ್ಳುವ ಪ್ರದರ್ಶನ ನೀಡದೆ ಹೋದರೂ, ಟೆಸ್ಟ್ ಎಂದು ಬಂದಾಗ ಮಯಾಂಕ್ ಅಗರ್ವಾಲ್ ರವರು ಸದಾ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ, ಅದರಲ್ಲಿಯೂ ಕಳೆದ ವರ್ಷ ನಡೆದ ರಣಜಿ ಟ್ರೋಫಿಯಲ್ಲಿ 13 ಇನ್ನಿಂಗ್ಸ್ ನಲ್ಲಿ 82.50 ಸರಾಸರಿಯಲ್ಲಿ 990 ರನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ ಆರು ಅರ್ಧ ಶತಕಗಳು ಸೇರಿವೆ, ಒಂದು ಕಡೆ ರಾಹುಲ್ ಕಳೆಪೆ ಪ್ರದರ್ಶನ ನೀಡುತ್ತಿದ್ದರೂ ಕೂಡ ಅವರ ಬದಲಾಗಿ ಇವರಿಗೆ ಅವಕಾಶ ನೀಡುವ ಆಲೋಚನೆ ಕೂಡ ರೋಹಿತ್ ಶರ್ಮ ರವರು ಮಾಡಲಿಲ್ಲ ಎಂಬುದೇ ವಿಪರ್ಯಾಸ.

ಇನ್ನು ಮೊದಲನೇ ಸ್ಥಾನದಲ್ಲಿ ಹನುಮ ವಿಹಾರಿ ರವರ ಹೆಸರು ಕೇಳಿ ಬರುತ್ತಿದ್ದು, ಚೇತೇಶ್ವರ ಪೂಜಾರ್ ರವರ ಬದಲಿ ಆಟಗಾರ ಎಂದೇ ಹೆಸರಾಗಿದ್ದ ಇವರು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಭಾರತೀಯ ತಂಡದಲ್ಲಿ ಅವಕಾಶವನ್ನು ಪಡೆಯಲಿಲ್ಲ, ಆಸರಣೆಯಲ್ಲಿ ಇವರು ಹೆಚ್ಚು ಪ್ರಭಾವ ಬೀರಲಿಲ್ಲ ಅದು ಒಪ್ಪಿಕೊಳ್ಳುತ್ತೇವೆ, ಆದರೆ ಬಲಾಢ್ಯ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿದ್ದ ಹನುಮ ವಿಹಾರಿ ರವರಿಗೆ ಮತ್ತಷ್ಟು ಅವಕಾಶ ನೀಡಿದ್ದರೇ ಖಂಡಿತ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?