Hardik Pandya: ಕೊನೆಗೂ ಬಯಲಾಯ್ತು- ಪಾಕ್ ವಿರುದ್ದದ ಪಂದ್ಯದಲ್ಲಿ ಹಾರ್ಧಿಕ್ ಹೇಳಿದ ಮಂತ್ರ, ಯಾವುದು ಅಂತೇ ಗೊತ್ತೇ?
Hardik Pandya reacts about his mantra- before getting a wicket in India vs Pak Match.
Hardik Pandya: ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ನಮ್ಮ ಭಾರತ ದೇಶದಲ್ಲಿ ಏಕದಿನ ವಿಶ್ವಕಪ್(ODI World Cup 2023) ಭರದಿಂದ ಸಾಗುತ್ತಿದೆ. ವಿಶ್ವದ ಮೂಲೆ ಮೂಲೆಯಿಂದ ನಮ್ಮ ಭಾರತ ದೇಶಕ್ಕೆ ತಮ್ಮ ತಂಡಗಳನ್ನು ಸಪೋರ್ಟ್ ಮಾಡುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಕೂಡ ಬರುತ್ತಿದ್ದಾರೆ ಹಾಗೂ ನಮ್ಮ ಭಾರತದ ಕ್ರಿಕೆಟ್ ಅಭಿಮಾನಿಗಳು ಕೂಡ ಲಕ್ಷ ಸಂಖ್ಯೆಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸಪೋರ್ಟ್ ಮಾಡುವುದಕ್ಕೆ ಕ್ರಿಕೆಟ್ ಸ್ಟೇಡಿಯಂ ಗಳಿಗೆ ಬರುತ್ತಿರುವುದು ಕೂಡ ನೀವು ಈಗಾಗಲೇ ಗಮನಿಸಿದ್ದೀರಿ.
ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan
Hardik Pandya reacts about his mantra- before getting a wicket in India vs Pak Match.
ಅದರಲ್ಲಿ ವಿಶೇಷವಾಗಿ ಇತ್ತೀಚಿಗಷ್ಟೇ ಪಾಕಿಸ್ತಾನದ ವಿರುದ್ಧ ಭಾರತೀಯ ಕ್ರಿಕೆಟ್ ತಂಡ(Indian cricket team) ಆಡಿರುವಂತಹ ವಿಶ್ವಕಪ್ ನ ಮೂರನೇ ಪಂದ್ಯಾಟ ನಿಜಕ್ಕೂ ಕೂಡ ಸಾಕಷ್ಟು ರೋಮಾಂಚಕಾರಿಯಾಗಿ ಮೂಡಿಬಂದಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಸುಲಭವಾಗಿ ಗೆದ್ದಿತ್ತು ನಿಜ ಆದರೆ ಅಲ್ಲಿ ಬಂದಿರುವಂತಹ 1.25 ಲಕ್ಷಕ್ಕೂ ಅಧಿಕ ಜನ ಭಾರತೀಯ ಕ್ರಿಕೆಟ್ ತಂಡಕ್ಕೆ ಸಪೋರ್ಟ್ ಮಾಡಿದ ರೀತಿ ನಿಜಕ್ಕೂ ಕೂಡ ರೋಮವನ್ನು ನವಿರೇಳಿಸುವಂತೆ ಮಾಡಿತ್ತು.
ಅದರಲ್ಲೂ ವಿಶೇಷವಾಗಿ ಇಮಾಮ್ ಉಲ್ ಹಕ್(imam Ul Haq) ಅವರಿಗೆ 13ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬಾಲ್ ಹಿಡಿದುಕೊಂಡು ಏನೋ ಮಂತ್ರ ಹೇಳಿದಂತೆ ಮಾಡಿರುವುದು ಅದಾದ ಮೊದಲ ಎಸೆತದಲ್ಲಿ ವಿಕೆಟ್ ಕಿತ್ತಿದ್ದು ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪ್ರತಿಯೊಬ್ಬರು ಕೂಡ ಹಾರ್ದಿಕ್ ಪಾಂಡ್ಯ ಅವರು ಮಾಟ ಮಂತ್ರ ಕಲಿತಿದ್ದಾರೆ ಎನ್ನುವ ರೀತಿಯಲ್ಲಿ ಕೂಡ ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವಂತಹ ಹಾರ್ದಿಕ್ ಪಾಂಡ್ಯ(Hardik Pandya) ಯಾವ ಮಂತ್ರವೂ ಇಲ್ಲ ನಾನು ಕೇವಲ ಸರಿಯಾದ ಲೈನ್ ಹಾಗೂ ಲೆಂಥ್ ನಲ್ಲಿ ಬೌಲ್ ಬಿದ್ರೆ ಸಾಕು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಸಾಕಷ್ಟು ಜನರ ಮನಸ್ಸಿನಲ್ಲಿ ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದು.
ಈಗಾಗಲೇ ಮೂರರಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡ ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತೀಯ ಕ್ರಿಕೆಟ್ ತಂಡ ತನ್ನ ಮುಂದಿನ ಪಂದ್ಯಾಟವನ್ನು ಅಕ್ಟೋಬರ್ 19ರಂದು ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿದೆ. ಈ ಬಾರಿ ಸಾಕಷ್ಟು ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತಿರುವ ಭಾರತೀಯ ಕ್ರಿಕೆಟ್ ತಂಡ ಕಪ್ ಗೆಲ್ಲುವಂತಹ ಪ್ರತಿಯೊಂದು ಭರವಸೆಗಳನ್ನು ಕೂಡ ಹೆಚ್ಚಿಸಿದೆ.