KL Rahul: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್- ಕೊಹ್ಲಿ, ಧೋನಿ, ರೋಹಿತ್ ಇವರಲ್ಲಿ ಬೆಸ್ಟ್ ಯಾರು ಅಂತೇ ಗೊತ್ತೇ?? ನಿಯತ್ತು ಇಲ್ಲವೇ ಎಂದ ಫ್ಯಾನ್ಸ್.

KL Rahul: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್- ಕೊಹ್ಲಿ, ಧೋನಿ, ರೋಹಿತ್ ಇವರಲ್ಲಿ ಬೆಸ್ಟ್ ಯಾರು ಅಂತೇ ಗೊತ್ತೇ?? ನಿಯತ್ತು ಇಲ್ಲವೇ ಎಂದ ಫ್ಯಾನ್ಸ್.

KL Rahul: ಸ್ನೇಹಿತರೆ, ಸ್ಟಾರ್ ಸೆಲೆಬ್ರಿಟಿಗಳನ್ನು ಸಂದರ್ಶಕರು ತಮ್ಮ ಕೆಲ ಪ್ರಶ್ನೆಗಳ ಮೂಲಕವೇ ಕಟ್ಟಿಹಾಕಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದಂತಹ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳ ಬಯಸುತ್ತಾರೆ. ಹೀಗೆ ಕ್ರಿಕೆಟ್ ಹೊರತಾಗಿಯೂ ಸಂದರ್ಶನಗಳಲ್ಲಿ ಮಾಧ್ಯಮದವರು ಕೇಳುವಂತಹ ಪ್ರಶ್ನೆಯಿಂದ ಸ್ಟಾರ್ ಕ್ರಿಕೆಟಿಗರು ಬಿಕ್ಕಟಿನ ಪರಿಸ್ಥಿತಿಯನ್ನು ಎದುರಿಸಬೇಕಾದಂತಹ ಪ್ರಸಂಗ ಬರುವುದು. 

ಇದೇ ರೀತಿ ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಂತೆ ಕೆ ಎಲ್ ರಾಹುಲ್ಗೆ (KL Rahul) ಹೇಳಿ ಕೊಹ್ಲಿ ಧೋನಿ ಹಾಗೂ ರೋಹಿತ್ ಶರ್ಮರವರ ಹೆಸರನ್ನು ಮುಂದೆ ಇಟ್ಟಾಗ ರಾಹುಲ್ ಆಯ್ಕೆ ಮಾಡಿಕೊಂಡದ್ದು ಯಾರನ್ನ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಗೆಳೆಯರೇ ಭಾರತದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಸೇರಿಕೊಂಡಿರುವಂತಹ ಕೆ ಎಲ್ ರಾಹುಲ್ ಇಂಜುರಿ ಇಂದಾಗಿ ಇನ್ನಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 

ಹೌದು ಕೊನೆಯ ಬಾರಿಗೆ ಐಪಿಎಲ್ 2023ರ ಲಕ್ನವು ಸೂಪರ್ ಜೈನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಲವಾದ ಪೆಟ್ಟು ಬಿದ್ದು ಇನ್ಜುರಿ ಇಂದ ಐಪಿಎಲ್ 2023ರ ಪಂದ್ಯಗಳಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಅದರಂತೆ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿಯೂ ಟೀಮ್ ಇಂಡಿಯಾ ಪರವಾಗಿ ರಾಹುಲ್ ಆಡಿಲ್ಲ. 

ಇನ್ನು ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಂತಹ ಕೆ ಎಲ್ ರಾಹುಲ್ (KL Rahul) ಅವರು “ನಾನು ಮಹೇಂದ್ರ ಸಿಂಗ್ ಧೋನಿ ಅವರಿಂದ ಬಹಳಷ್ಟು ಕಲಿತಿದ್ದೇನೆ, ಪ್ರತಿ ಪರಿಸ್ಥಿತಿಯಲ್ಲಿ ಹೇಗೆ ಶಾಂತವಾಗಿರಬೇಕು ಮತ್ತು ಆಟಗಾರರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವುದು ಹೇಗೆ? ಎಂಬುದನ್ನು ನಾನು ಎಂಎಸ್ ಧೋನಿ ಅವರಿಂದ ಕಲಿತ್ತಿದ್ದೇನೆ” ಎಂದು ಹೆಮ್ಮೆಯಿಂದ ಕೂಲ್ ಕ್ಯಾಪ್ಟನ್ ಕುರಿತು ಕೆ ಎಲ್ ರಾಹುಲ್ ಹಾಡಿ ಹೊಗಳಿದರು. 

ಅಷ್ಟೇ ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಅವರೇ ನನ್ನ ಮೊದಲ ನಾಯಕ ನಿಜವಾಗಿಯೂ ಅವರ ನಾಯಕತ್ವದಲ್ಲಿ ಆಡಲು ಬಹಳ ಅದೃಷ್ಟಶಾಲಿಯಾಗಿದ್ದೇನೆ ಎಂದು ಕೆ ಎಲ್ ರಾಹುಲ್ (KL Rahul) ಕ್ಯಾಪ್ಟನ್ ಎಂ ಎಸ್ ಧೋನಿ ಅವರ ಗುಣಗಾನ ಮಾಡಿದ್ದಾರೆ. ಇದನ್ನು ಕಂಡಂತಹ ಇತರ ಸ್ಟಾರ್ ಕ್ರಿಕೆಟ್ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದ ಉದಾಹರಣೆಗಳು ಇವೆ.