IPL 2023 JIO: ಐಪಿಎಲ್ ಅನ್ನು ಉಚಿತವಾಗಿ ನೋಡಲು ಕೊಟ್ಟ ಅಂಬಾನಿ: 23,800 ಕೋಟಿ ಖರ್ಚು ಮಾಡಿ ಉಚಿತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತೇ?

ಐಪಿಎಲ್ ಅನ್ನು ಉಚಿತವಾಗಿ ನೋಡಲು ಕೊಟ್ಟ ಅಂಬಾನಿ: 23,800 ಕೋಟಿ ಖರ್ಚು ಮಾಡಿ ಉಚಿತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತೇ?

IPL 2023 JIO: ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ನಾವು ಐಪಿಎಲ್ ನೋಡಬೇಕು ಎಂದರೆ ಹಾಟ್ ಸ್ಟಾರ್ ಚಂದದಾರಿಕೆಯನ್ನು ಪಡೆಯಲು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿತ್ತು. ಆದರೆ ಅಂಬಾನಿ ರವರು ಈ ಬಾರಿ 23800 ಕೋಟಿ ರೂಪಾಯಿ ಖರ್ಚು ಮಾಡಿ ತನ್ನ ಷೇರುಗಳು ಹೆಚ್ಚಿರುವ ವಿಡಿಯೋಕಾನ್ ಕಂಪನಿಯ ಸಹಭಾಗಿತ್ವದಲ್ಲಿರುವ ನೆಟ್ವರ್ಕ್ 18 ಕಂಪನಿಯ ಹಕ್ಕುಗಳನ್ನು ಆಧಾರದ ಮೇರೆಗೆ ಐಪಿಎಲ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿದ್ದಾರೆ ಹಾಗೂ ಇಷ್ಟು ಸಾವಿರ ಕೋಟಿ ಖರ್ಚು ಮಾಡಿದರೂ ಕೂಡ ಐಪಿಎಲ್ ಅನ್ನು ಇಡೀ ದೇಶದ ಜನರಿಗೆ ಉಚಿತವಾಗಿ ತೋರಿಸುತ್ತಿದ್ದಾರೆ.

ಏನಪ್ಪಾ ಇದೇ ಐಪಿಎಲ್ ಹಕ್ಕುಗಳನ್ನು ಹಾಟ್ ಸ್ಟಾರ್ ಖರೀದಿ ಮಾಡಿ, ನಮಗೆ ಚಂದದಾರಿಕೆಯ ಮೂಲಕ ಹಣ ಪಡೆದುಕೊಂಡು ಐಪಿಎಲ್ ತೋರಿಸುತ್ತಿತ್ತು, ಆದರೆ ಅಂಬಾನಿ ರವರು ಅದು ಹೇಗೆ 23800 ಕೋಟಿ ಖರ್ಚು ಮಾಡಿ ಕೂಡ ಉಚಿತವಾಗಿ ಐಪಿಎಲ್ ತೋರಿಸುತ್ತಿದ್ದಾರೆ ಎಂಬ ಆಲೋಚನೆ ನಿಮ್ಮ ತಲೆಯಲ್ಲಿ ಇದ್ದರೆ ಈ ಕುರಿತು ಎಲ್ಲಾ ಪ್ರಶ್ನೆಗಳಿಗೆ ನಾವು ಸಂಕ್ಷಿಪ್ತವಾದ ಉತ್ತರವನ್ನು ಹೇಳುತ್ತೇವೆ ಕೇಳಿ. ಇದನ್ನು ಓದಿ: ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?

ಸ್ನೇಹಿತರೇ ಮೊದಲನೆಯದಾಗಿ ಕಳೆದ ಕೆಲವು ವರ್ಷಗಳ ಹಿಂದೆ ಒಂದು GB ರಿಚಾರ್ಜ್ ಮಾಡಿಸಿಕೊಳ್ಳಬೇಕು ಎಂದರೇ ನಾವು ಕನಿಷ್ಠ 200 ರೂಪಾಯಿ ಖರ್ಚು ಮಾಡಬೇಕಾಗಿತ್ತು, ಆದರೆ ಇಡೀ ದೇಶದ ಜನರಿಗೆ ಮೂರು ತಿಂಗಳು ನಂತರ ಮತ್ತೊಮ್ಮೆ ಮೂರು ತಿಂಗಳು ಒಟ್ಟಾಗಿ ಆರು ತಿಂಗಳುಗಳ ಕಾಲ ದಿನಕ್ಕೆ ಒಂದು GB ಇಂಟರ್ನೆಟ್ ಎಂಬಂತೆ ಸಂಪೂರ್ಣವಾಗಿ ಉಚಿತ ಇಂಟರ್ನೆಟ್ ನೀಡಿದ್ದರು, ಇದಾದ ಬಳಿಕ ಮೂರು ತಿಂಗಳಿಗೆ 600 ರಿಂದ 700 ರೂಪಾಯಿ ಲೆಕ್ಕದಲ್ಲಿ ವಿವಿಧ ರಿಚಾರ್ಜ್ ಪ್ಯಾಕ್ ಗಳ ಮೂಲಕ ದಿನಕ್ಕೆ 1.5 ಜಿಬಿ ಡೇಟಾ ಅಥವಾ ಎರಡು ಜಿಬಿ ಡೇಟಾ ನೀಡುವಂತೆ ಮಾಡಿದ ಕೀರ್ತಿ ಅಂಬಾನಿ ರವರಿಗೆ ಸಲ್ಲುತ್ತದೆ, ಈ ಮೊದಲು ಸಿಮ್ ಕಂಪನಿ ಗಳು, 1 GB ಗೆ 250 ರೂಪಾಯಿ ಪಡೆದು ಗ್ರಾಹಕರನ್ನು ದೋಚುತ್ತಿದ್ದವು.

ಇದೀಗ ಅಂಬಾನಿ ರವರ ತಲೆಯಲ್ಲಿ ಹೊಸ ಯೋಜನೆ ಮೂಡಿದ್ದು ಈ ಬಾರಿ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಿಗೆ ಕಡಿವಾಣ ಹಾಕಿ ಅದರ ಜೊತೆಗೆ ತನ್ನ ಪ್ರಮುಖ ಸಂಸ್ಥೆಯಾಗಿರುವ ಜಿಯೋ ಸಿನಿಮಾ ಆಪ್ ಬಳಸುವವರ ಸಂಖ್ಯೆಯನ್ನು ಹೆಚ್ಚು ಮಾಡುವುದು ಇದರ ಮೊದಲ ಚಿಕ್ಕ ಉದ್ದೇಶ, ಹೌದು ಇದು ಕೇವಲ ಚಿಕ್ಕ ಈ ಉದ್ದೇಶವಷ್ಟೇ ಇದರಿಂದ ಅಂಬಾನಿ ರವರು ಹೇಗೆ ದುಡ್ಡು ಮಾಡುತ್ತಾರೆ ಯಾವ ಯಾವ ರೀತಿ ಈಗಾಗಲೇ ಆಲೋಚನೆ ನಡೆಸಿದ್ದಾರೆ ಎಂಬುದರ ಕುರಿತು ಮುಂದೆ ಹೇಳುತ್ತೇವೆ ಕೇಳಿ.

ಮೊದಲನೆಯದಾಗಿ, ಸಾಮಾನ್ಯವಾಗಿ ಐಪಿಎಲ್ ಅನ್ನು ಇಷ್ಟು ದಿವಸ ದುಡ್ಡು ಕೊಟ್ಟು ನೋಡುತ್ತಿದ್ದ ಜನರ ಸಂಖ್ಯೆ ಒಂದು ಕೋಟಿಯಿಂದ ಕೇವಲ ಎರಡು ಕೋಟಿ ಆಗಿತ್ತು, ಆದರೆ ಇಂದು ಉಚಿತವಾಗಿ ಸಿಗುತ್ತಿರುವ ಕಾರಣ ಪ್ರತಿ ಪಂದ್ಯದಲ್ಲಿಯೂ ಕೂಡ ಸಾಮಾನ್ಯವಾಗಿ ಕನಿಷ್ಠ ಮೂರರಿಂದ ಐದು ಕೋಟಿ ಪ್ರೇಕ್ಷಕರು ಪಂದ್ಯಗಳನ್ನು ನೋಡಲು ಆಸಕ್ತಿ ತೋರುತ್ತಿದ್ದಾರೆ, ಇದರಿಂದ ಮಾರುಕಟ್ಟೆಯಲ್ಲಿ ಜಿಯೋ ಸಿನಿಮಾದ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತದೆ. ಒಮ್ಮೆಲೇ ಅಷ್ಟು ಜನ ಬರದೇ ಇದ್ದರೂ, ಒಟ್ಟು ವೀಕ್ಷಕರ ಸಂಖ್ಯೆ 3 ಕೋಟಿ ದಾಟುತ್ತಿದೆ.

ಹೀಗೆ ಕೋಟ್ಯಾಂತರ ಜನರು ಪಂದ್ಯಗಳನ್ನು ವೀಕ್ಷಿಸುತ್ತಿರುವಾಗ ಮೊದಲನೆಯದಾಗಿ ಅಂಬಾನಿ ರವರು ಜಾಹೀರಾತುಗಳನ್ನು ತೋರಿಸುವ ಮೂಲಕ ಕಂಪನಿಗಳ ಬಳಿ ಹಣವನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರ ಕಂಪನಿಗಳಿಗೆ ಉಚಿತ ಜಾಹೀರಾತುಗಳನ್ನು ಹೆಚ್ಚು ಸಂಖ್ಯೆಯಲ್ಲಿ ತೋರಿಸುತ್ತಾರೆ, ಇದರಿಂದ ಕೂಡ ಸಾವಿರಾರು ಕೋಟಿ ಹಣ ಉಳಿಸಬಹುದು. ಹೀಗೆ ಹೆಚ್ಚು ಜನರು ನೋಡಿದಷ್ಟು ಕಂಪನಿಗಳು ಜಾಹೀರಾತು ನೀಡಲು ಹೆಚ್ಚು ಹಣ ನೀಡುತ್ತವೆ. (Business)

ಇನ್ನು ಹೀಗೆ ಬಳಕೆದಾರು ಹೆಚ್ಚಾಗುವ ಕಾರಣ ವಿದೇಶಿ ಕಂಪನಿಗಳಾದ ನೆಟ್ ಫ್ಲಿಕ್ಸ್, ಅಮೆಜಾನ್, ಹಾಟ್ ಸ್ಟಾರ್ ಸೇರಿದಂತೆ ವಿವಿಧ ಓಟಿಟಿ ಪ್ಲಾಟ್ ಫಾರ್ಮ್ ಗಳ ಮಾರುಕಟ್ಟೆ ಪಾಲನ್ನು ಜಿಯೋ ಸಿನಿಮಾ ಪಡೆದುಕೊಳ್ಳಲು ಆರಂಭಿಸುತ್ತದೆ. ಇನ್ನು ಎಷ್ಟು ವರ್ಷಗಳ ಉಚಿತ ಇರುತ್ತದೆ ಎಂದು ನೋಡುವುದಾದರೇ, ಹೆಚ್ಚು ವರ್ಷಗಳ ಕಾಲ ಉಚಿತವಾಗಿ ಇರುವುದಿಲ್ಲ, ಖಂಡಿತವಾಗಲೂ ಒಂದು ಅಥವಾ ಎರಡು ವರ್ಷ ಮುಗಿದ ನಂತರ ಅಂಬಾನಿ ರವರು ಐಪಿಎಲ್ ನೋಡಲು ಕೂಡ ದರವಿಧಿಸುತ್ತಾರೆ.

ಆದರೆ ಇದರ ಬೆಲೆ ಬೇರೆ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಿಗೆ ಹೋಲಿಕೆ ಮಾಡಿ ನೋಡಿದರೆ ಬಹಳ ಕಡಿಮೆ ಇರಲಿದೆ ಎಂಬುದು ಪಂಡಿತರ ಲೆಕ್ಕಾಚಾರ, ಇಷ್ಟೇ ಅಲ್ಲದೆ ಪಂದ್ಯಗಳನ್ನು ವೀಕ್ಷಣೆ ಮಾಡಲು ಕೂಡ ಇಂಟರ್ನೆಟ್ ಪ್ಯಾಕ್ ಬೇಕು, ಅದಕ್ಕಾಗಿ ಜಿಯೋ ಹೊಸದಾಗಿ ಐಪಿಎಲ್ ಪ್ಯಾಕ್ ಎಂದು ವಿಶೇಷ ಪ್ಯಾಕನ್ನು ಘೋಷಣೆ ಮಾಡಲಾಗಿದೆ ಈ ವಿಶೇಷ ಪ್ಯಾಕೇಜ್ ನ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಐಪಿಎಲ್ ನೋಡುವುದಕ್ಕಾಗಿಯೇ, ಚಿಲ್ಲರೆ ಬೆಲೆಗೆ ಇಂಟರ್ನೆಟ್ ಪ್ಯಾಕ್ ಘೋಷಣೆ ಮಾಡಿದ ಅಂಬಾನಿ: ಮುಗಿಬಿದ್ದು ರಿಚಾರ್ಜ್ ಮಾಡಿಕೊಳ್ಳುತ್ತಿರುವ ಜನರು.

ಇದೆಲ್ಲ ಒಂದು ಲೆಕ್ಕ ಆದರೆ ಕೊನೆಯಲ್ಲಿ ಮತ್ತೊಂದು ಲೆಕ್ಕದಲ್ಲಿ ಪ್ಲಾನ್ ಮಾಡಿರುವ ಅಂಬಾನಿ ರವರು ಹೊಸದಾಗಿ ಬಿಡುಗಡೆ ಮಾಡುತ್ತಿರುವ ಕೀಪ್ಯಾಡ್ ಮೊಬೈಲ್ ನಲ್ಲಿ ಜಿಯೋ ಸಿನಿಮಾ ಆ್ಯಪ್ ಬರುವಂತೆ ಮಾಡುತ್ತಾರೆ. ಇದರಿಂದ ಯಾವುದೇ ಮೂಲೆಯಲ್ಲಿ ಹಳ್ಳಿಹಳ್ಳಿಯಲ್ಲಿಯೂ ಕೂಡ ಕೀಪ್ಯಾಡ್ ಫೋನ್ ಬಳಸುವ ಬಳಕೆದಾರರು ಮೊದಲೇ ಇನ್ಸ್ಟಾಲ್ ಆಗಿರುವ ಆಪ್ ನ ಮೂಲಕ ಐಪಿಎಲ್ ಅನ್ನು ನೋಡಬಹುದಾಗಿದೆ, ಇದರಿಂದ ಮತ್ತಷ್ಟು ಕೋಟಿಗಳ ಸಂಖ್ಯೆಯಲ್ಲಿ ವೀಕ್ಷಕರು ಹೆಚ್ಚಾಗಿ ರಿಚಾರ್ಜ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ.

ಈ ಮೇಲೆ ಹೇಳಿರುವ ಎಲ್ಲಾ ಯೋಜನೆಗಳಲ್ಲಿಯೂ ಐದು ವರ್ಷ ಹೌದು ಐದು ವರ್ಷ ಸತತವಾಗಿ ಅಂಬಾನಿ ರವರು ಹಣ ಗಳಿಸಲಿದ್ದಾರೆ. ಯಾಕೆಂದರೆ ಐಪಿಎಲ್ ಹರಾಜಿನ ಮೊತ್ತ 5 ವರ್ಷಕ್ಕೆ 23,800 ಕೋಟಿ. ಹೀಗೆ ಸಾವಿರಾರು ಕೋಟಿ ಯೋಜನೆ ಗಳಿಸುವ ಮಾಸ್ಟರ್ ಪ್ಲಾನ್ ಮಾಡಿರುವ ಅಂಬಾನಿ ರವರು ನಮಗೆ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ, ನನಗೂ ಕೂಡ ಈ ವರ್ಷ ಹಾಟ್ ಸ್ಟಾರ್ 399 ಚಂದಾದಾರಿಕೆ ಪಡೆಯುವ ಹಣ ಉಳಿಯಿತು. ಜಾಹೀರಾತು ತಾನೇ ತೋರಿಸಿಕೊಳ್ಳಲಿ ಎನ್ನುವ ಜನರು ಕೂಡ ಹೆಚ್ಚಾಗಿ ಇದ್ದಾರೆ. ಈ ಅಂಬಾನಿ ರವರ ಐಡಿಯಾ ಹೇಗಿದೆ ಎಂಬುದರ ಕುರಿತು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಇದನ್ನು ಓದಿ: ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತ ಪಾತ್ರದ ಮೂಲಕ ಮನಗೆದ್ದಿರುವ ಲಾವಣ್ಯ ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ??