Kannada News: ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತ ಪಾತ್ರದ ಮೂಲಕ ಮನಗೆದ್ದಿರುವ ಲಾವಣ್ಯ ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ??
Kannada News: ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತ ಪಾತ್ರದ ಮೂಲಕ ಮನಗೆದ್ದಿರುವ ಲಾವಣ್ಯ ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ??
Kannada News: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಜನರಿಂದ ಒಳ್ಳೆಯ ಅಭಿಪ್ರಾಯ ಗಲಿಸುತ್ತಿದೆ. ದಿನದಿಂದ ದಿನಕ್ಕೆ ಈ ಧಾರವಾಹಿ ನೋಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮಾಧವನ ಸೊಸೆ ಪೂರ್ಣಿ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ. ಪೂರ್ಣಿ ಬಹಳ ಮುಗ್ಧ ಮತ್ತು ಸರಳ ಸ್ವಭಾವದ ಹುಡುಗಿ, ಮಾವಾನೆ ತಂದೆ ಎಂದು, ಗಂಡನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮಾವ ಮತ್ತು ಗಂಡ ಚೆನ್ನಾಗಿ ಮಾತನಾಡುವ ಹಾಗೆ ಆಗಬೇಕು ಎಂದು ಶ್ರಮ ಪಡುತ್ತಿದ್ದಾಳೆ ಪೂರ್ಣಿ.
ಈ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ಹೆಸರು ಲಾವಣ್ಯ. ಇವರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಲಾವಣ್ಯ ಅವರು ಈ ಮೊದಲು ಮೂರ್ನಾಲ್ಕು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಪ್ಪಟ ಬೆಂಗಳೂರಿನ ಹುಡುಗಿ ಆದ ಲಾವಣ್ಯ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಪದವಿ ಓದಿ ಮುಗಿಯುತ್ತಿದ್ದ ಹಾಗೆಯೇ ನಟನೆ ಶುರು ಮಾಡಿದರು. ಇವರು ನಟಿಸಿದ ಮೊದಲ ಧಾರವಾಹಿ ರಾಧಾರಮಣ. ಈ ಧಾರವಾಹಿ ನಂತರ ಒಂದು ಬ್ರೇಕ್ ಪಡೆದು, ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದನ್ನು ಓದಿ..Kannada News: ಪುರುಷರ ಪ್ರಾಬಲ್ಯವು ಸಿನಿಮಾ ರಂಗದಲ್ಲಿ ಹೇಗೆ ಬೆಳೆದಿದೆ ಅಂತೇ ಗೊತ್ತೇ?? ನಟಿ ರಾಕುಲ್ ಪ್ರೀತಿ ಸಿಂಗ್ ಹೇಳಿದ್ದೇನು ಗೊತ್ತೆ??
ಬಳಿಕ ರಾಜ ರಾಣಿ ಧಾರವಾಹಿ ಆಫರ್ ಬಂದಾಗ, ಬಹಳ ಯೋಚಿಸಿ ಕೊನೆಗೆ ಕಲೆಯನ್ನು ಆರಿಸಿಕೊಂಡು ಕಾರ್ಪೋರೇಟ್ ಕಂಪನಿಯ ಕೆಲಸ ಬಿಟ್ಟು, ನಟನೆಗೆ ಬಂದರು. ರಾಜ ರಾಣಿ ಧಾರವಾಹಿಯಲ್ಲಿ ಹೀರೋ ತಂಗಿ ಪಾತ್ರದಲ್ಲಿ ನಟಿಸಿದ್ದರು ಲಾವಣ್ಯ. ಬಳಿಕ ಕಲರ್ಸ್ ಕನ್ನಡ ವಾಹಿನಿಯ ದಾಸ ಪುರಂಧರ ಧಾರವಾಹಿಯಲ್ಲಿ ಶ್ರೀನಿಯ ಮಲತಾಯಿ ಪದ್ಮ ಪಾತ್ರದಲ್ಲಿ ನಟಿಸಿದ್ದರು.
ಲಾವಣ್ಯ ಅವರು ಇನ್ನು ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಘರ್ಷ ಎನ್ನುವ ಧಾರವಾಹಿಯಲ್ಲಿ ಸಹ ನಟಿಸಿದ್ದಾರೆ. ಲಾವಣ್ಯ ಅವರು ತಮ್ಮ ಜೊತೆ ನಟಿಸಿದ್ದ ಶಶಿ ಅವರ ಜೊತೆಗೆ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ನೆಗಟಿವ್ ಮತ್ತು ಪಾಸಿಟಿವ್ ಎರಡು ರೀತಿಯ ಪಾತ್ರಗಳಲ್ಲಿ ಉತ್ತಮವಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ಲಾವಣ್ಯ. ಇತ್ತೀಚೆಗೆ ಇವರು ತಮ್ಮ ಕೆರಿಯರ್ ಬಗ್ಗೆ ಮಾತನಾಡಿದ್ದು ಹೀಗೆ.. ಇದನ್ನು ಓದಿ..Kannada News: ಕಿರುತೆರೆ ನಟಿ ಮೇಘ ಶೆಟ್ಟಿ ರವರಿಗೆ ಖಡಕ್ ಮಾತುಗಳ ಮೂಲಕ ಕುಟುಕಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ. ಅದೊಂದು ವಿಡಿಯೋ ಇಂದ ಏನಾಗಿದೆ ಗೊತ್ತೇ?
“ಆಕ್ಟಿಂಗ್ ಒಂದು ಕ್ರಿಯೇಟಿವ್ ಪ್ಲಾಟ್ ಫಾರ್ಮ್, ಈ ಫೀಲ್ಡ್ ನಲ್ಲಿ ವಿಭಿನ್ನವಾದ ರೀತಿಯ ಜನರು, ವಿಭಿನ್ನವಾದ ಅವಕಾಶಗಳು, ಪಾತ್ರಗಳು ಅದರ ಜೊತೆಗೆ ಬಹಳಷ್ಟು ವಿಚಾರಗಳನ್ನು ಕಲಿಯುವ ಅವಕಾಶ ಇದೆ. ಒಬ್ಬ ವ್ಯಕ್ತಿಯಾಗಿ ನಮ್ಮ ಸಾಮರ್ಥ್ಯ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳೋದಕ್ಕೆ ಇದು ಉತ್ತಮವಾದ ವೇದಿಕೆ ಆಗಿದೆ. ಪಾತ್ರ ಹೇಗಿರಬೇಕು ಎಂದರೆ ಸ್ಟ್ರಾಂಗ್ ಆಗಿರಬೇಕು ಮತ್ತು ಕ್ರಿಯೇಟಿವ್ ಆಗಿರಬೇಕು. ನಟನೆ ಮಾಡೋದಕ್ಕೆ ಚಾಲೆಂಜಿಂಗ್ ಆಗಿರಬೇಕು..” ಎಂದು ಹೇಳಿದ್ದಾರೆ ನಟಿ ಲಾವಣ್ಯ.
“ಆಕ್ಟಿಂಗ್ ಇಂದ ಬಹಳಷ್ಟು ವಿಚಾರಗಳನ್ನು ಕಲಿಯಬಹುದು. ವೈಯಕ್ತಿಕ ಜೀವನಕ್ಕೂ ಅನ್ವಯಿಸುವ ಸಾಕಷ್ಟು ವಿಚಾರಗಳನ್ನು ನಟನೆಯಿಂದ ಕಲಿಯಬಹುದು.ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವುದಲ್ಲಿ ಈ ಥರದ ಥ್ರಿಲ್ ಸಿಗುವುದಿಲ್ಲ..” ಎಂದು ನಟಿ ಲಾವಣ್ಯ ಹೇಳಿದ್ದಾರೆ. ಈಗ ಒಳ್ಳೆಯ ಪಾತ್ರ ಸಿಗುತ್ತಿದ್ದು, ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆ ಇದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಖ್ಯಾತ ನಟನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ನಟಿ ಅಂಜಲಿ. ಏನಾಗಿದೆ ಅಂತೇ ಗೊತ್ತೇ? ನಟ ಮಾಡಿದ್ದೇನು ಗೊತ್ತೆ??