ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ತನ್ನದು ಏನು ಇಲ್ಲ, ಕಷ್ಟವೆಲ್ಲ ಅನುಷ್ಕಾದ್ದು. ಹೆಂಡತಿ ಮಾಡಿದ ತ್ಯಾಗದ ಬಗ್ಗೆ ವಿರಾಟ್ ಹೇಳಿದ್ದೇನು ಗೊತ್ತೇ??

45

Get real time updates directly on you device, subscribe now.

Cricket News: ಕ್ರಿಕೆಟ್ ಪ್ರಪಂಚದಲ್ಲಿ ಕಿಂಗ್ ಕೊಹ್ಲಿ ಎಂದೇ ಹೆಸರು ಮಾಡಿರುವವರು ವಿರಾಟ್ ಕೊಹ್ಲಿ (Virat Kohli), ವರ್ಲ್ಡ್ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಅವರು ಕೆಲ ಸಮಯ ಫಾರ್ಮ್ ನಲ್ಲಿ ಇರಲಿಲ್ಲ, ಆದರೆ ಈಗ ಮತ್ತೆ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಮುಂದಿನ ತಿಂಗಳಿನಿಂದ ಐಪಿಎಲ್ ಶುರುವಾಗಲಿದ್ದು ಅದರ ತಯಾರಿಯಲ್ಲಿದ್ದಾರೆ ವಿರಾಟ್. ಈ ನಡುವೆ ವಿರಾಟ್ ಆರ್ಸಿಬಿ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಮಗೆ ಬಂದ ಕಷ್ಟಗಳಿಗಿಂತ ಪತ್ನಿ ಅನುಷ್ಕಾ (Anushka Sharma) ಎದುರಿಸುತ್ತಿರುವ ಕಷ್ಟಗಳು ಹೆಚ್ಚು ಎಂದು ಹೇಳಿದ್ದಾರೆ ಕಿಂಗ್ ಕೊಹ್ಲಿ. “ಎರಡು ವರ್ಷಗಳಿಂದ ಮಗು ನಮ್ಮ ಜೊತೆಯಲ್ಲಿದೆ, ತಾಯಿಯ ಸ್ಥಾನದಲ್ಲಿರುವ ಅನುಷ್ಕಾ ಅವರ ತ್ಯಾಗ ದೊಡ್ಡದು, ಅನುಷ್ಕಾ ಪಡುವ ಕಷ್ಟಗಳು ಎದುರಿಸುವ ವಿಚಾರಗಳನ್ನು ನೋಡಿದರೆ, ನನ್ನ ಕಷ್ಟ ಅದರ ಮುಂದೆ ಏನು ಅಲ್ಲ ಎಂದು ಅನ್ನಿಸುತ್ತದೆ. ನಿಮ್ಮ ವ್ಯಕ್ತಿತ್ವ ಏನು, ನೀವು ಎಂಥಹ ವ್ಯಕ್ತಿ ಎಂದು ನಿಮ್ಮ ಮನೆಯವರಿಗೆ ಗೊತ್ತಿರುತ್ತದೆ. ಅದು ಗೊತ್ತಿದ್ದಾಗ ಬೇರೆ ಯಾವ ನಿರೀಕ್ಷೆ ಕೂಡ ಬೇಡ. ನಿಮಗೆ ಪ್ರೇರಣೆ ಸ್ಪೂರ್ತಿ ಬೇಕು ಎಂದರೆ ಅದು ನಿಮ್ಮ ಮನೆಯಲ್ಲೇ ಸಿಗುತ್ತದೆ. ಅನುಷ್ಕಾ ನನಗೆ ಸಿಕ್ಕ ದೊಡ್ಡ ಪ್ರೇರಣೆ.. ಇದನ್ನು ಓದಿ..Cricket News: ಸೋತರು ಬುದ್ಧಿ ಕಲಿಯದ ಆಸ್ಟ್ರೇಲಿಯನ್ನರು: ಟೀಮ್ ಇಂಡಿಯಾ ಗೆ ವಾರ್ನಿಂಗ್ ಕೊಟ್ಟು ಬ್ರೆಟ್ ಲೀ ಹೇಳಿದ್ದೇನು ಗೊತ್ತೆ?

ಪ್ರೀತಿ ಆಗುವುದಕ್ಕಿಂತ ಮೊದಲು ಇದ್ದದ್ದೇ ಬೇರೆ ರೀತಿ. ಪ್ರೀತಿಯಾದ ನಂತರ ನನ್ನ ಜೀವನ ಇರುವುದೇ ಬೇರೆ ರೀತಿ, ನನ್ನಲ್ಲಿ ತುಂಬಾ ಬದಲಾವಣೆಗಳು ಆಗಿದೆ. ಅನುಷ್ಕಾ ಇಂದ ಬದುಕು ನೋಡುವ ರೀತಿ ಬದಲಾಗಿದೆ, ದಿನದಿಂದ ದಿನಕ್ಕೆ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದೆ. ನಾನು ನೋವಿನಲ್ಲಿರುವುದು ಅನುಷ್ಕಾ ಮತ್ತು ನನ್ನ ಜೊತೆಗಿದ್ದು ನನ್ನನ್ನು ಪ್ರೀತಿ ಮಾಡುವವರಿಗೆ ಅರ್ಥ ಆಗುವುದಿಲ್ಲ. ನಮಗೆ ಪ್ರೋತ್ಸಾಹ ಕೊಡುವ ಜನ ಇದ್ದಾಗ, ನಾವು ಹೀಗೆ ಇರುವುದು ಚೆನ್ನಾಗಿರುವುದಿಲ್ಲ ಎಂದು ನನಗೆ ಅರ್ಥವಾಗಿದೆ..” ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ. ಈ ರೀತಿಯಾಗಿ ಅನುಷ್ಕಾ ಅವರಿಂದ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆ ಮತ್ತು ಅವರ ತ್ಯಾಗ ಎಂಥದ್ದು ಎಂದು ತಿಳಿಸಿದ್ದಾರೆ. ಇದನ್ನು ಓದಿ..RCB IPL 2023: ಆರ್ಸಿಬಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಬಿಗ್ ಶಾಕ್: ಪ್ರಮುಖ ಬೌಲರ್ ಆಟವಾಡುವುದೇ ಅನುಮಾನ. ಈತನಿಲ್ಲದೆ ಹೇಗೆ??

Get real time updates directly on you device, subscribe now.