ಕರುನಾಡ ವಾಣಿ
ಇದು ನಿಮ್ಮ ಧ್ವನಿ

Film News: ಈಕೆಯ ಸಿನೆಮಾವನ್ನು ಜನ ಯಾಕೆ ನೋಡುತ್ತಿಲ್ಲ ಅಂತೇ ಗೊತ್ತೇ? ಚಿತ್ರಗಳ ಸೋಲಿಗೆ ನಟನೆ, ಕಥೆ ಕಾರಣ ಅಲ್ಲ ಅಂತೇ. ಮತ್ತೇನು ಗೊತ್ತೆ?

194

Get real time updates directly on you device, subscribe now.

Film News: ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡು ಕಡೆ ಸ್ಟಾರ್ ನಟಿಯಾಗಿ ಹೆಸರು ಮಾಡಿರುವವರು ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh). ಇವರಿಗೆ ತೆಲುಗು ಮತ್ತು ತಮಿಳು ಚಿತ್ರರಂಗದ ಮೂಲಕ ಒಳ್ಳೆಯ ಹೆಸರು ಸಿಕ್ಕಿತು. ಆದರೆ ರಾಕುಲ್ ಅವರು ಈಗ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಮತ್ತು ಸಿನಿಮಾಗಳಿವೆ, ಆದರೆ ರಾಕುಲ್ ಅವರ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿಲ್ಲ. ರನ್ ವೇ34, ಡಾಕ್ಟರ್ ಜೀ ಸೇರಿದಂತೆ ಬಹುತೇಕ ಸಿನಿಮಾಗಳು ಫ್ಲಾಪ್ ಆಗಿದೆ. ತಮ್ಮ ಸೋಲಿಗೆ ಕಾರಣ ಎನ್ನುವುದನ್ನು ರಾಕುಲ್ ಪ್ರೀತ್ ಸಿಂಗ್ ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ಉಳಿಯುವುದಕ್ಕೆ ಬಾಕ್ಸ್ ಆಫೀಸ್ ನ ಕಲೆಕ್ಷನ್ ಎಷ್ಟು ಮುಖ್ಯವಾಗುತ್ತದೆ ಎಂದು ಪ್ರಶ್ನೆ ಕೇಳಿದ್ದಕ್ಕೆ ಉತ್ತರ ಕೊಟ್ಟಿರುವ ರಾಕುಲ್ ಪ್ರೀತ್ ಸಿಂಗ್ ಅವರು, ನಾನು ಮಾಡಿರುವ ಕೆಲಸಕ್ಕೆ ಬಾಕ್ಸ್ ಆಫೀಸ್ ನಂಬರ್ ಗಳು ವ್ಯಾಖ್ಯಾನ ಕೊಡಲು ಆಗುವುದಿಲ್ಲ ಎಂದಿದ್ದಾರೆ ರಾಕುಲ್. ಜನರ ಬಳಿ ಹೆಚ್ಚಿನ ಹಣವಿಲ್ಲ. ವಾರಕ್ಕೆ ಎರಡು ಮೂರು ಸಿನಿಮಾಗಳು ಬಿಡುಗಡೆ ಆಗುತ್ತದೆ, ಎಲ್ಲಾ ಸಿನಿಮಾಗಳನ್ನು ಜನರು ಬಂದು ನೋಡುತ್ತಾರೆ ಎಂದು ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ, ಅವರ ಬಳಿ ಹೆಚ್ಚು ಹಣವಿಲ್ಲದ ಕಾರಣ, ತಿಂಗಳಿಗೆ ಒಂದು ಸಿನಿಮಾವನ್ನು ಆಯ್ಕೆಮಾಡಿಕೊಳ್ಳುತ್ತಾರೆ ಎಂದಿದ್ದಾರೆ ರಾಕುಲ್. ಇದನ್ನು ಓದಿ..Kannada News: ಕಿರುತೆರೆ ನಟಿ ಮೇಘ ಶೆಟ್ಟಿ ರವರಿಗೆ ಖಡಕ್ ಮಾತುಗಳ ಮೂಲಕ ಕುಟುಕಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ. ಅದೊಂದು ವಿಡಿಯೋ ಇಂದ ಏನಾಗಿದೆ ಗೊತ್ತೇ?

ಸಿನಿಪ್ರಿಯರು ನಮ್ಮ ಸಿನಿಮಾ ನೋಡಿಲ್ಲ ಎನ್ನುವುದರ ಅರ್ಥ ನಾವು ಮಾಡಿರುವ ಸಿನಿಮಾ ಕೆಟ್ಟದ್ದಾಗಿದೆ ಎಂದು ಅಲ್ಲ. ಸಿನಿಮಾ ವೀಕ್ಷಣೆ ಈಗ ದುಬಾರಿ ಆಗಿದೆ ಎನ್ನುವ ಕಾರಣದಿಂದ ಎಂದು ಸಹ ರಾಕುಲ್ ಹೇಳಿದ್ದಾರೆ. ಬಾಕ್ಸ್ ಆಫೀಸ್ ಸಂಖ್ಯೆಗಳು ಒಂದು ನಂಬರ್ ಅಷ್ಟೇ, ಅದೆಲ್ಲಕ್ಕಿಂತ ಮುಖ್ಯ ಜನರ ಪ್ರೀತಿ..ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರಾದೇಶಿಕ ಸಿನಿಮಾ ಮತ್ತು ಬಾಲಿವುಡ್ ಎರಡು ಕಡೆ ನಟಿಸುತ್ತಿರುವ ಬಗ್ಗೆ ಮಾತನಾಡಿ, ಈಗ ಎರಡು ಬೇರೆ ಬೇರೆ ಎಂದು ಹೇಳೋಕೆ ಆಗಲ್ಲ, ಜನರು ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದಾರೆ, ಕಂಟೆಂಟ್ ಚೆನ್ನಾಗಿದ್ದರೆ ಯಾವ ಸಿನಿಮಾ ಆದರೂ ನೋಡುತ್ತಾರೆ ಎಂದಿದ್ದಾರೆ ರಾಕುಲ್. ಇದನ್ನು ಓದಿ..Kannada News: ದಿಡೀರ್ ಎಂದು ಅಣ್ಣಾವ್ರ ಮ್ಯಾಟರ್ ಕೆಣಕಿದ ಕಿಶೋರ್: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದಕ್ಕೆ ಅಣ್ಣಾವ್ರ ಬಗ್ಗೆ ಏನಾದ್ರು ಗೊತ್ತೇ??

Get real time updates directly on you device, subscribe now.