Bhoomika: ಅವರು ಮಲಗಿಕೊಂಡ್ರೆನೇ ಚಾನ್ಸ್ ಕೊಡೋದು- ಇಲ್ಲ ಅಂದ್ರೆ ಕೊಡಲ್ಲ- ಹಿರಿಯ ನಟಿಯ ಷಾಕಿಂಗ್ ಹೇಳಿಕೆ.
Bhoomika Chawla shocking comments about film industry.
Bhoomika: ಕ್ಯಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದಲ್ಲಿ ಬಹಳ ಹಿಂದಿನಿಂದಲೂ ಇದೆ. ಆದರೆ ಮೊದಲೆಲ್ಲಾ ಈ ವಿಷಯಾದ ಬಗ್ಗೆ ಯಾರೂ ಓಪನ್ ಆಗಿ ಮಾತನಾಡುತ್ತಿರಲಿಲ್ಲ. ಎಲ್ಲವೂ ಒಳಗೆ ಮುಚ್ಚಿಹೋಗುತ್ತಿದ್ದವು. ಆದರೆ ಈಗ ಮೀ ಟೂ ಶುರುವಾದ ನಂತರ ಎಲ್ಲಾ ಕಲಾವಿದೆಯರು ಮುಚ್ಚುಮರೆ ಇಲ್ಲದೆ ತಮಗಾದ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡುತ್ತಿದ್ದಾರೆ.
ಈಗಿನ ನಟಿಯರು ಮಾತ್ರವಲ್ಲದೆ, ಹಿರಿಯ ಕಲಾವಿದೆಯರು ಕೂಡ ಈ ವಿಚಾರದ ಬಗ್ಗೆ ಮಾತನಾದುತ್ತಿದ್ದು, ತಮ್ಮ ಅನುಭವ ಹಾಗೂ ಅದರಿಂದ ಆಗಿರುವ ನೋವುಗಳನ್ನು ಹಂಚಿಕೊಳ್ಳುತ್ತಿದ್ದರು. ಇಂಥ ಘಟನೆಗಳಲ್ಲಿ ಕೆಲವು ನಮಗೆ ಆಶ್ಚರ್ಯ ತರುವುದು ಉಂಟು. ಸಂದರ್ಶನಗಳಲ್ಲಿ ಹಾಗೂ ಇನ್ನಿತರ ಸಂದರ್ಭಗಳಲ್ಲಿ ನಟಿಯರು ತಮಗಾದ ಮೀಟು ಅನುಭವದ ಬಗ್ಗೆ ಮಾತನಾಡುತ್ತಿದಾರೆ, ಇದೀಗ ಈ ನಟಿ ಭೂಮಿಕಾ ಮೀಟು ಬಗ್ಗೆ ಮಾತನಾಡಿದ್ದಾರೆ.
ನಟಿ ಭೂಮಿಕಾ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಬಾಲಿವುಡ್ ಮತ್ತು ಸೌತ್ ಎರಡು ಕಡೆ ಗುರುತಿಸಿಕೊಂಡಿರುವ ಖ್ಯಾತ ನಟಿ ಇವರು. ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಟಿಸಿರುವ ಭೂಮಿಕಾ ಅವರು ಕನ್ನಡದಲ್ಲಿಯು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಆಗೊಮ್ಮೆ ಈಗೊಮ್ಮೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ. ಇತ್ತೀಚೆಗೆ ಇವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.. ಅಂದು ಸುದೀಪ್ ರವರ ಕಣ್ಣಲ್ಲಿ ನೀರು ಬಂದಿತ್ತು- ಅದಕ್ಕೆ ಕಾರಣ ಅಣ್ಣಾವ್ರು- ಯಾಕೆ ಗೊತ್ತೇ? ಅಂದು ತೆರೆ ಹಿಂದೆ ಏನಾಗಿತ್ತು ಗೊತ್ತೇ?
ಭೂಮಿಕಾ ಅವರು ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಅವರಿಗೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಸಹ ಪ್ರಶ್ನೆ ಕೇಳಲಾಯಿತು. ಆಗ ತಮಗಾದ ಅನುಭವದ ಬಗ್ಗೆ ಮಾತನಾಡಿದ ನಟಿ, “ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹಲವಾರು ಜನರು ಮಾತನಾಡುವುದನ್ನು ಕೇಳಿದ್ದೀನಿ..ಆದರೆ ನಾನು ನನ್ನ ಕೆರಿಯರ್ ನಲ್ಲಿ ಕ್ಯಾಸ್ಟಿಂಗ್ ಕೌಚ್ ಎದುರಿಸಿಲ್ಲ. ಯಾವುದಾದರೂ ಅವಕಾಶ ಬಂದರೆ ನನ್ನ ಮ್ಯಾನೇಜರ್ ಅನ್ನು ಕಳಿಸುತ್ತೇನೆ..
ನಾನು ಡೈರೆಕ್ಟ್ ಆಗಿ ಎಲ್ಲಿಯು ಹೋಗುತ್ತಿರಲಿಲ್ಲ. ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇಲ್ಲ ಅಂತ ನಾನು ಹೇಳುತ್ತಿಲ್ಲ. ಕೆಲವರು ಇದರ ಬಗ್ಗೆ ನೆಗಟಿವ್ ಆಗಿ ಥಿಂಕ್ ಮಾಡ್ತಾರೆ. ತಮ್ಮ ಇಷ್ಟಗಳು ನೆರವೇರಿದರೆ ಮಾತ್ರವೇ ಅವಕಾಶ ಕೊಡೋದು ಅಂತ ಯೋಚನೆ ಮಾಡುವಂಥವರು ಬಹಳ ಕಡಿಮೆ. ಆ ಥರ ವ್ಯಕ್ತಿಯನ್ನು ನಾನು ನೋರಿಲ್ಲ. ಆದರೆ ಅಂಥವರು ಇಂಡಸ್ಟ್ರಿಯಲ್ಲಿದ್ದಾರೆ ಅಂತ ನನಗೆ ಗೊತ್ತಿದೆ.. ಒಂದು ರೀತಿಯಲ್ಲಿ ಹೇಳಬೇಕು ಎಂದರೆ, ಮಲಗಿಕೊಂಡ್ರೆನೇ ಕೆಲವರಿಗೆ ಚಾನ್ಸ್ ಎಂಬ ಪರಿಸ್ಥಿತಿ ಇದೆ, ಆದರೆ ನನಗೆ ಎದುರಾಗಿಲ್ಲ.” ಎಂದು ಹೇಳಿದ್ದಾರೆ ನಟಿ ಭೂಮಿಕಾ.. ಒಂದು ಕಾಲದ ಟಾಪ್ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಕನ್ನಡದಲ್ಲಿಯೂ ನಟಿಸಿರುವ ಚೆಲುವೆ ಈಗ ಹೇಗಾಗಿದ್ದರೆ ಗೊತ್ತೇ?