Relationship: ಎಲ್ಲ ನೀಡಿದರೂ, ಹೆಂಡತಿಯರು ವಿಚ್ಚೇದನ ಪಡೆಯುವುದಕ್ಕೆ ಕಾರಣಗಳೇನು ಗೊತ್ತೇ? ಮಹಿಳೆಯರೇ ಹೇಳಿದ್ದೇನು ಗೊತ್ತೇ??

Relationship: ಎಲ್ಲ ನೀಡಿದರೂ, ಹೆಂಡತಿಯರು ವಿಚ್ಚೇದನ ಪಡೆಯುವುದಕ್ಕೆ ಕಾರಣಗಳೇನು ಗೊತ್ತೇ? ಮಹಿಳೆಯರೇ ಹೇಳಿದ್ದೇನು ಗೊತ್ತೇ??

Relationship: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ದಾಂಪತ್ಯ ಜೀವನ ಎನ್ನುವುದು ಬಹಳ ಮುಖ್ಯ. ಮದುವೆ ಬಗ್ಗೆ ಎಲ್ಲರೂ ಕೂಡ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮದುವೆ ಹೀಗೆ ಇರಬೇಕು, ಇಂತಹ ಹುಡುಗ ಹುಡುಗಿಯ ಜೊತೆಗೆ ನಡೆಯಬೇಕು ಎಂದು ಕನಸು ಕಂಡು, ಮದುವೆ ನಂತರ ಜೀವನದಲ್ಲಿ ತಮ್ಮ ಪಾರ್ಟ್ನರ್ ಜೊತೆಗೆ ಚೆನ್ನಾಗಿ ಸಂಸಾರ ನಡೆಸಬೇಕು ಎಂದು ಎಲ್ಲಾ ದಂಪತಿಗಳು ಕೂಡ ಅಂದುಕೊಳ್ಳುತ್ತಾರೆ.

ಆದರೆ ಅಂದುಕೊಂಡಿದ್ದು ಎಲ್ಲವು ಅದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ದಾಂಪತ್ಯ ಜೀವನದಲ್ಲಿ ಕೋಪ, ಮನಸ್ತಾಪ, ಜಗಳಗಳು ಇದೆಲ್ಲವೂ ನಡೆದೇ ನಡೆಯುತ್ತದೆ. ಕೆಲವು ಗಂಡ ಹೆಂಡತಿಯರು ಅದನ್ನು ಪರಿಹರಿಸಿಕೊಳ್ಳುತ್ತಾರೆ, ಇನ್ನು ಕೆಲವರು ಮನಸ್ತಾಪದಿಂದ ವಿಚ್ಛೇದನ ಪಡೆದು ದೂರವಾಗುತ್ತಾರೆ. ಹೀಗೆ ಗಂಡನಿಗೆ ಹೆಂಡತಿ ವಿಚ್ಛೇದನ ಕೊಡುವ ಹಾಗೆ ಆಗುವುದು ಯಾವ ಕಾರಣಕ್ಕೆ ಗೊತ್ತಾ? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ಹೆಂಡತಿ ಸುಂದರವಾಗಿದ್ದಾಳೆ ಎಂದು ತಾನೇ ಖರ್ಚು ಹಾಕಿ ಮದುವೆಮಾಡಿಕೊಂಡ. ಆದರೆ ಕೊನೆಗೆ ಸುಂದರಿ ಮಾಡಿದ್ದೇನು ಗೊತ್ತೇ??

ದಾಂಪತ್ಯದಲ್ಲಿ ಮೋಸ: ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಯಾವುದೇ ಇದ್ದರು ಕೂಡ, ಹೆಂಡತಿಗೆ ಗಂಡನ ಮೇಲೆ ಅಪಾರವಾದ ಪ್ರೀತಿ ಮತ್ತು ಪೊಸೆಸಿವ್ ನೆಸ್ ಇರುತ್ತದೆ. ವರ್ಷಗಳು ಕಳೆದ ಹಾಗೆ ಕೆಲವು ಗಂಡಂದಿರು ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ಇದರಿಂದ ಹೆಂಡತಿಗೆ ಬಹಳ ನೋವಾಗುತ್ತದೆ. ತಮ್ಮ ಗಂಡನನ್ನು ಮತ್ತೊಬ್ಬ ಹೆಣ್ಣಿನ ಜೊತೆ ನೋಡಲು ಯಾವುದೇ ಹೆಂಡತಿ ಕೂಡ ಬಯಸುವುದಿಲ್ಲ. ಒಂದು ವೇಳೆ ಈ ರೀತಿ ನಡೆದರೆ, ಹೆಂಡತಿಯ ಮನಸ್ಸಿಗೆ ಆಘಾತವಾಗಿ ಆಕೆ ವಿಚ್ಛೇದನ ಕೊಡುವ ನಿರ್ಧಾರಕ್ಕೆ ಬಂದುಬಿಡುತ್ತಾಳೆ.

ಸ್ವಾಭಿಮಾನಕ್ಕೆ ತೊಂದರೆ: ಮನೆ ಮತ್ತು ಸಮಾಜ ಎರಡು ಕಡೆಯಲ್ಲು ಗಂಡ ಮತ್ತು ಹೆಂಡಿತಿ ಅಂದ್ರೆ ಹೆಣ್ಣು ಗಂಡು ಇಬ್ಬರಿಗು ಕೂಡ ಸಮಾನವಾದ ಗೌರವ ಮತ್ತು ಮರಿಯಾದೆ ಇರಬೇಕು. ಹಾಗಿದ್ದಾಗ ಸಂಸಾರ ಚೆನ್ನಾಗಿರುತ್ತದೆ. ಆದರೆ ಕೆಲವು ಕಡೆ ಅಥವಾ ಕೆಲವು ಮನೆಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುತ್ತಾರೆ. ಒಂದು ವೇಳೆ, ಗಂಡ ಆದವನು ಪದೇ ಪದೇ ಹೆಂಡತಿಯನ್ನು ಕೀಳಾಗಿ ಕಾಣುತ್ತಿದ್ದರೆ, ತನಗೆ ಮರಿಯಾದೆ ಸಿಗುತ್ತಿಲ್ಲ ಎಂದು ಆಕೆಗೆ ಅನ್ನಿಸಿದರೆ, ಖಂಡಿತವಾಗಿಯೂ ಹೆಂಡತಿ ಆದವಳು ವಿಚ್ಛೇದನ ಪಡೆಯಬೇಕು ಎಂದು ಬಯಸುತ್ತಾಳೆ. ಇದನ್ನು ಓದಿ..Relationship: ಗಂಡ ನೈಟ್ ಡ್ಯೂಟಿ ಮನೆಗೆ ಬರುವಷ್ಟರಲ್ಲಿ ಸುಸ್ತಾಗಿರುತಿದ್ದ ಹೆಂಡತಿ, ಅನುಮಾನ ಪಟ್ಟು ಸಿಸಿಟಿವಿ ಇಟ್ಟಾಗ ಬಯಲಿಗೆ ಬಂದದ್ದು ಏನು ಗೊತ್ತೇ??

ಕನಸುಗಳಿಗೆ ತೊಂದರೆ: ಪ್ರತಿ ಹೆಣ್ಣಿಗೂ ತನ್ನ ಜೀವನದ ಬಗ್ಗೆ ಕನಸಿರುತ್ತದೆ. ಮೊದಲೆಲ್ಲಾ ಹೆಣ್ಣು ಮದುವೆಯಾದ ನಂತರ ಗಂಡ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರಬೇಕಿತ್ತು. ಆದರೆ ಈಗ ಆ ರೀತಿ ಇಲ್ಲ, ಹೆಣ್ಣು ಸ್ವಾತಂತ್ರ್ಯವಾಗಿರಬೇಕು ಸ್ವಾವಲಂಬಿಯಾಗಿರಬೇಕು ಎಂದು ಬಯಸುತ್ತಾಳೆ. ಗಂಡನ ಮೇಲು ಡಿಪೆಂಡ್ ಆಗಿರುವುದಕ್ಕೆ ಹೆಣ್ಣು ಇಷ್ಟಪಡುವುದಿಲ್ಲ. ಒಂದು ವೇಳೆ ಗಂಡನ ಮನೆಯಲ್ಲಿ ಅದಕ್ಕೆ ತೊಂದರೆ ಆದರೆ ಅಲ್ಲಿಂದ ಹೊರಬಂದು ಆದರೂ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದುಕೊಂಡು ಅದಕ್ಕಾಗಿ ಪ್ರಯತ್ನ ಮಾಡುತ್ತಾಳೆ. ವಿಚ್ಛೇದನಕ್ಕೆ ಇದು ಕೂಡ ಒಂದು ಕಾರಣ ಆಗಬಹುದು.

ಮಾನಸಿಕ ನಿಂದನೆ: ಮದುವೆ ನಂತರ ಪ್ರತಿ ಹೆಣ್ಣಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಮನೆಯ ಕೆಲಸಗಳನ್ನು ಅವಳೇ ವಹಿಸಿಕೊಳ್ಳಬೇಕಾಗುತ್ತದೆ. ಆಗ ನೀವು ಹೆಂಡತಿಯನ್ನು ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಹಾಗೆ ನಡೆಸಿಕೊಳ್ಳಬಾರದು. ಆಕೆಯನ್ನು ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳಬೇಕು. ಎಲ್ಲಾ ಕೆಲಸಗಳನ್ನು ಅದರ ಒತ್ತಡಗಳನ್ನು ಹೆಂಡತಿಯ ಮೇಲೆಯೇ ಹೇರಿ, ಆಕೆ ಅದನ್ನು ಪೂರ್ತಿ ಮಾಡಲು ಸಾಧ್ಯವಾಗದೆ ಹೋದರೆ ಬಯ್ಯುವುದು ಹೀಗೆಲ್ಲಾ ಮಾನಸಿಕವಾಗಿ ತೊಂದರೆ ಕೊಟ್ಟರೆ, ಆ ಸಂಬಂಧದಿಂದ ಹೊರ ಬರುವುದನ್ನು ಬಿಟ್ಟು ಆಕೆಗೆ ದಾರಿ ಅಂತೂ ಇರುವುದಿಲ್ಲ. ಹಾಗಾಗಿ ಹೆಂಡತಿ ಮಾನಸಿಕವಾಗಿ ಚೆನ್ನಾಗಿರುವುದು ಕೂಡ ತುಂಬಾ ಮುಖ್ಯವಾಗುತ್ತದೆ. ಇದನ್ನು ಓದಿ..Relationship: ವಯಸ್ಸು 30 ವರ್ಷ ದಾಟಿದ ಮೇಲೆ ಮದುವೆಯಾದರೆ ಏನಾಗುತ್ತದೆ ಗೊತ್ತೇ? ಇಂಗೆಲ್ಲ ಆಗುತ್ತಾ?? ಕೊನೆಗೂ ಬಯಲಾಯ್ತು ಸತ್ಯ.