Rinku Singh: ಐಪಿಎಲ್ ನಲ್ಲಿ ಬಂದ 55 ಲಕ್ಷ ರೂಪಾಯಿಗಳನ್ನು ರಿಂಕು ಸಿಂಗ್ ರವರು ಏನು ಮಾಡಿದ್ದಾರೆ ಗೊತ್ತಾ?? ತಿಳಿದರೆ ಭೇಷ್ ಅಂತೀರಾ.
Rinku Singh: ಐಪಿಎಲ್ ನಲ್ಲಿ ಬಂದ 55 ಲಕ್ಷ ರೂಪಾಯಿಗಳನ್ನು ರಿಂಕು ಸಿಂಗ್ ರವರು ಏನು ಮಾಡಿದ್ದಾರೆ ಗೊತ್ತಾ?? ತಿಳಿದರೆ ಭೇಷ್ ಅಂತೀರಾ.
Rinku Singh: ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಒಬ್ಬ ಸಾಮಾನ್ಯ ಆಟಗಾರನಾಗಿದ್ದ ರಿಂಕು ಸಿಂಗ್ ರವರು ಇದೀಗ ಭಾರತದ ಮೂಲೆ ಮೂಲೆಯಲ್ಲಿಯೂ ಕೂಡ ತನ್ನ ಹೆಸರನ್ನು ಕ್ರಿಕೆಟ್ ಮೂಲಕ ಪರಿಚಯ ಮಾಡಿಕೊಂಡಿರುವ ಯುವ ಆಟಗಾರ ಎಂದರೆ ತಪ್ಪಾಗಲಾರದು. ಐದು ಭರ್ಜರಿ ಸಿಕ್ಸರ್ ಗಳನ್ನು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ರಿಂಕು ಸಿಂಗ್ ರವರು ಬಡತನದಲ್ಲಿ ಬೆಳೆದು ಬಂದ ಪ್ರತಿಭೆ ಎಂದು ಎಲ್ಲರಿಗೂ ತಿಳಿದಿದೆ. ರೋಹಿತ್ ತಪ್ಪಿನ ನಿರ್ಧಾರಗಳಿಂದ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಟಾಪ್ 5 ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ? ಕನ್ನಡಿಗನು ಲಿಸ್ಟ್ ನಲ್ಲಿ.
ಸಾಮಾನ್ಯ ಗ್ಯಾಸ್ ಸಿಲಿಂಡರ್ ಗಳನ್ನು ಡೆಲಿವರಿ ಮಾಡುವ ವ್ಯಕ್ತಿಯ ಮಗನಾದ ರಿಂಕು ಸಿಂಗ್ ರವರು ಚಿಕ್ಕ ವಯಸ್ಸಿನಿಂದಲೂ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಿ ಇಂದು ಭಾರತದ ಎಲ್ಲೆಡೆ ಹೆಸರುಗಳಿಸಿದ್ದಾನೆ ಎಂದರೆ ನಿಜಕ್ಕೂ ಅದು ಒಂದು ರೀತಿಯ ಹೆಮ್ಮೆಯ ಸಂಗತಿಯಾಗಿದೆ. ಬಡತನ ಈತನಿಗೆ ಯಶಸ್ಸು ಗಳಿಸಲು ಸಾಕಷ್ಟು ಅಡ್ಡಗಾಲು ಹಾಕಿತ್ತು, ಆದರೂ ಕೂಡ ಎಲ್ಲಾ ಕಷ್ಟಗಳನ್ನು ಮೀರಿ ಇಂದು ಸ್ಟಾರ್ ಆಟಗಾರನಾಗಿದ್ದಾನೆ.
ಇನ್ನು ಐಪಿಎಲ್ ನಲ್ಲಿ ಹೀಗೆ ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಿರುವ ರಿಂಕು ಸಿಂಗ್ (Rinku Singh) ಕಳೆದ ವರ್ಷ ಕೇವಲ 55 ಲಕ್ಷ ರೂಪಾಯಿಗಳಿಗೆ ಹರಜಾಗಿದ್ದರೂ, ಈತನಿಗೆ 55 ಲಕ್ಷ ರೂಪಾಯಿ ತುಂಬಾ ದೊಡ್ಡ ಮೊತ್ತ, ಆದರೆ ಐಪಿಎಲ್ ಎಂಬ ದುಡ್ಡಿನ ಟೂರ್ನಿಯಲ್ಲಿ 55 ಲಕ್ಷ ಯಾವುದೇ ಲೆಕ್ಕಕ್ಕೆ ಬರುವುದಿಲ್ಲ ಕೋಟಿ ಕೋಟಿ ಖರ್ಚು ಮಾಡಿ ಆಟಗಾರರನ್ನು ಕೊಂಡುಕೊಳ್ಳಲಾಗುತ್ತದೆ. ಆದರೆ ಹೀಗೆ ಕೋಟಿ ಕೋಟಿಗಳಿಸಿರುವ ಆಟಗಾರರು ಮಾಡದಂತಹ ಕೆಲಸವನ್ನು ಈತ ತಾನು ಪಡೆದ 55 ಲಕ್ಷಗಳಿಂದ ಮಾಡಿದ್ದಾನೆ.
ಹೌದು ಸ್ನೇಹಿತರೇ, ಇದೀಗ ಕೇಳಿ ಬಂದಿರುವ ಮಾಹಿತಿಯ ಪ್ರಕಾರ ರಿಂಕು ಸಿಂಗ್ (Rinku Singh)ರವರು ತಾನು ಬಂದ ಹಾದಿಯನ್ನು ಮರೆಯದೆ ತಾನು ಕಷ್ಟ ಪಟ್ಟಂತೆ ಇತರ ಕ್ರಿಕೆಟ್ ಆಟಗಾರರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಕಷ್ಟ ಆಗಬಾರದು ಎಂಬ ಕಾರಣದಿಂದ ಐಪಿಎಲ್ ನಲ್ಲಿ ಬಂದಿರುವ ದುಡ್ಡಿನಲ್ಲಿ ಬಾಲ್ಯದ ಕೋಚ್ ಜೊತೆ ಸೇರಿ ಸಂಪೂರ್ಣ ವೆಚ್ಚವನ್ನು ಬರಿಸಿ 50 ಲಕ್ಷ ರೂಪಾಯಿಗಳ ಖರ್ಚಿನೊಂದಿಗೆ ಕ್ರಿಕೆಟ್ ಆಟಗಾರರಿಗೆ ವಿಶೇಷ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು 14 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಪ್ರತಿ ರೂಮಿನಲ್ಲಿ ನಾಲ್ಕು ಜನರು ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಒಂದು ಶಟರ್ ರೀತಿಯಲ್ಲಿ ಜಾಗ ಕಾಲಿಬಿಟ್ಟಿದ್ದು ಅದರ ಪಕ್ಕದಲ್ಲಿಯೇ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಆಟಗಾರರಿಗೆ ಊಟದ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಅಲ್ಲಿಗೆ ಉಚಿತ ಊಟದ ವ್ಯವಸ್ಥೆ ಮಾಡಿ ಕ್ಯಾಂಟೀನ್ ಕೂಡ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಿಜಕ್ಕೂ ತಾನು ಪಡೆದ ಕಡಿಮೆ ಹಣದಲ್ಲಿ ಇತರರಿಗೆ ಒಳ್ಳೆಯದು ಮಾಡಬೇಕು ಎಂದು ಆಲೋಚನೆ ಮಾಡಿದ ರಿಂಕು ಸಿಂಗ್ ರವರಿಗೆ ನಮ್ಮ ಕರುನಾಡ ವಾಣಿ ತಂಡದಿಂದ ಒಂದು ಬಿಗ್ ಸಲ್ಯೂಟ್. ಪ್ರೀತಿ ಮಾಡಿ ಮದುವೆಯಾದರು, ಗಂಡನ ಸ್ನೇಹಿತ ಕಷ್ಟ ಎಂದು ಮನೆಗೆ ಬಂದಾಗ, ಹೆಂಡತಿ ಆಸೆ ಮಿತಿ ಮೀರಿ ಏನಾಯ್ತು ಗೊತ್ತೇ? ಸ್ನೇಹಿತನನ್ನು ನಂಬಿದವನ ಕತೆ ಏನಾಗಿದೆ ಗೊತ್ತೇ?