Nandini vs Amul: ಅಮುಲ್ ಬಂದರೆ ತಪ್ಪೇ? ಅಮುಲ್ ಮುಂದೆ ನಂದಿನಿ ಸೋತು ಬಿಡುತ್ತಾ? ಜೆಡಿಎಸ್, ಕಾಂಗ್ರೆಸ್ ಗೆ ಇದು ಕಾಣಿಸುತ್ತಿಲ್ಲವೇ? ಕ್ಯಾಮೆರಾ ಹಿಂದೆ ನಡೆಯುತ್ತಿರುವುದೇನು?

Nandini vs Amul: ಅಮುಲ್ ಬಂದರೆ ತಪ್ಪೇ? ಅಮುಲ್ ಮುಂದೆ ನಂದಿನಿ ಸೋತು ಬಿಡುತ್ತಾ? ಜೆಡಿಎಸ್, ಕಾಂಗ್ರೆಸ್ ಗೆ ಇದು ಕಾಣಿಸುತ್ತಿಲ್ಲವೇ? ಕ್ಯಾಮೆರಾ ಹಿಂದೆ ನಡೆಯುತ್ತಿರುವುದೇನು?

Nandini vs Amul: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಹಾಗೂ ಅಮುಲ್ ವಿಚಾರದಲ್ಲಿ ದೊಡ್ಡ ಸಮರವೇ ನಡೆಯುತ್ತಿದೆ. ಎತ್ತ ನೋಡಿದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿದಂತೆ ಕೆಲವೊಂದು ಕನ್ನಡ ಹೋರಾಟಗಾರರು ನಂದಿನಿ ಮುಗಿಸಲು ಗುಜರಾತಿಗಳು ಅಮೂಲ್ ಕಂಪನಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂಬ ವಾದವನ್ನು ಮಂಡಿಸುತ್ತಿದ್ದಾರೆ.

ಅಷ್ಟಕ್ಕೂ ಇದರಲ್ಲಿ ನಡೆಯುತ್ತಿರುವ ವಿಚಾರಗಳು ಹಾಗೂ ಮುಂದೇನು ಆಗಬಹುದು ಯಾರದ್ದು ತಪ್ಪು ಯಾರದ್ದು ಸರಿ ಎಂಬುವ ಎಲ್ಲಾ ವಿಚಾರಗಳನ್ನು ನಾವು ನಿಮ್ಮ ಮುಂದೆ ಇಡುತ್ತೇವೆ ಕೇಳಿ. ಕೆಲವರು ಈ ಲೇಖನ ನೋಡಿದ ನಂತರ ನಮ್ಮನ್ನು ಗುಜರಾತಿ ವಿರೋಧಿಗಳು ಎನ್ನಬಹುದು ಅಥವಾ ಕನ್ನಡ ವಿರೋಧಿಗಳು ಕೂಡ ಎನ್ನಬಹುದು, ಯಾಕೆಂದರೆ ಸತ್ಯ ಹೇಳಿದರೆ ಹಲವಾರು ಜನರಿಗೆ ಹಾಗೆ ಅನಿಸುತ್ತದೆ. Karnataka-Elections-Astrology-2023: ಚುನಾವಣೆ ಹತ್ತಿರವಿರುವಾಗಲೇ ರಾಜ್ಯ ರಾಜಕಾರಣದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಬೊಂಬೆ: ಖಚಿತವಾಗಿ ಆಗುವ ಭವಿಷ್ಯದಲ್ಲಿ ಹೇಳಿದ್ದೇನು ಗೊತ್ತಾ??

ಸ್ನೇಹಿತರೆ ನಂದಿನಿ ಎಂಬುವುದು ಕನ್ನಡಿಗರಿಗೆ ಒಂದು ಹೆಮ್ಮೆಯ ವಿಚಾರ ಎಂದರೆ ತಪ್ಪಾಗಲಾರದು, ನಂದಿನಿ ಎಂಬುವುದು ಕೇವಲ ಒಂದು ಹಾಲಿನ ಒಕ್ಕೂಟವಾಗಿಲ್ಲ. ಬದಲಾಗಿ ಅದು ಒಂದು ರೀತಿ ನಮ್ಮ ಮನೆಯ ಸದಸ್ಯ ಇದ್ದಂತೆ. ಪ್ರತಿದಿನ ಮುಂಜಾನೆ ಎದ್ದು ಒಂದು ಕಡೆ ರೈತರು ನಂದಿನಿ ಡೈರಿಗೆ ಹಾಲು ಮಾರಾಟ ಮಾಡಲು ಹೊರಟರೇ ಸಾಮಾನ್ಯ ಜನರು ಹಾಲನ್ನು ಖರೀದಿ ಮಾಡಲು ನಂದಿನಿ ಡೈರಿಗೆ ಹೋಗುತ್ತಾರೆ. ನಂದಿನಿಯೇ ಬೇಕು ಎಂದು ಹುಡುಕಿಕೊಂಡು ಖರೀದಿ ಮಾಡಿ ಬರುತ್ತಾರೆ. ಹಾಗಿದ್ದರೂ ಅಮುಲ್ ವಿರುದ್ಧ ಯಾಕೆ ಈ ಅಭಿಯಾನ?? ಹೋರಾಟ?? ಬನ್ನಿ ವಿವರವಾಗಿ ತಿಳಿಸುತ್ತೇವೆ.

Nandini Vs Amul: ಸ್ನೇಹಿತರೇ ಇದೀಗ ಅಮುಲ್ ಎಂಬ ಹಾಲಿನ ಕಂಪನಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹಾಲಿನ ಬ್ರಾಂಡ್, ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದೆ, ಇತ್ತೀಚೆಗಷ್ಟೇ ಬೆಂಗಳೂರು ನಗರದಲ್ಲಿ ಮನೆ ಮನೆ ಡಿಲವರಿ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಾಂಗ್ರೆಸ್, ಜೆಡಿಎಸ್ ಹಾಗೂ ಕನ್ನಡ ಹೋರಾಟಗಾರರು ನಂದಿನಿ ಬ್ರಾಂಡ್ ಮುಗಿಸಲು ಗುಜರಾತಿಗಳು ಹೊಂಚು ಹಾಕಿದ್ದಾರೆ ಎನ್ನುತ್ತಿದ್ದಾರೆ.

ಆದರೆ ನಮಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕನ್ನಡ ಹೋರಾಟಗಾರರು ಮೂರು ಜನರು ಸೇರಿ ಅಮುಲ್ ಬ್ರಾಂಡನ್ನು ವಿರೋಧ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥ ಕಾಣಿಸುತ್ತಿಲ್ಲ, ಯಾಕೆ ಗೊತ್ತೇ?? ನಿಜವಾಗಲೂ ಆರೋಪ ಮಾಡಿದಂತೆ ಅಮುಲ್ ಕರ್ನಾಟಕದಲ್ಲಿ ನಂದಿನಿ ಯನ್ನು ಮುಗಿಸಿ ಬಿಡುತ್ತಾ?? ಇದು ಸಾಧ್ಯನಾ?? ಹಾಗೆ ಅಂದು ಕೊಂಡರೆ ಅವರಿಗಿಂತ ದಡ್ಡರು ಬೇರೆ ಯಾರು ಇಲ್ಲ.

ಯಾಕೆಂದರೆ ಇದುವರೆಗೂ ನಂದಿನಿ ಹಾಲಿನ ಗುಣಮಟ್ಟವನ್ನು ಅಮುಲ್ ತಲುಪಲು ಸಾಧ್ಯವಾಗಿಲ್ಲ, ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ವಿತರಕನನ್ನು ಹೊಂದಿರುವ ನಂದಿನಿ ಬ್ರಾಂಡ್ ಅನ್ನು ಟಚ್ ಮಾಡಲು ಕೂಡ ಅಮೂಲ್ ಕೈಯಲ್ಲಿ ಸಾಧ್ಯವಿಲ್ಲ, ಈಗಾಗಲೇ ಅದು ದೊಡ್ಡ ಜಾಲವಾಗಿ ಬೆಳೆದದ್ದು ಆಗಿದೆ, ಅದೆಷ್ಟೋ ಕೋಟಿ ಜನರಿಗೆ ಬೆಳಗ್ಗೆ ಎದ್ದು ನಂದಿನಿ ಹಾಲಿನಲ್ಲಿ ಕಾಫಿ ಕುಡಿಯದೇ ಇದ್ದರೆ ದಿನ ಆರಂಭವಾದಂತೆ ಎನಿಸುವುದಿಲ್ಲ.

ಇನ್ನು ಮಧ್ಯಮ ವರ್ಗದ ಜನರು ದರದ ಕುರಿತು ಕೂಡ ಆಲೋಚನೆ ಮಾಡುತ್ತಾರೆ, ಆದರೆ ಅತ್ಯುತ್ತಮ ಗುಣಮಟ್ಟವನ್ನು ನೀಡುವ ನಂದಿನಿ ಹಾಲು ಅಮೂಲ್ ಗಿಂತ ಹತ್ತಾರು ರೂಪಾಯಿ ಕಡಿಮೆಗೆ ಸಿಗುತ್ತದೆ, ಇದರಿಂದ ಅಮುಲ್ ಬಂದರೂ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪನೆ ಮಾಡುವುದು ಅಸಾಧ್ಯ.

ಇನ್ನು ಈಗಾಗಲೇ ಅಮುಲ್ ಕರ್ನಾಟಕಕ್ಕೆ ಬರುವ ಪ್ರಯತ್ನ ಮಾಡಿದೆ, ಅಷ್ಟೇ ಯಾಕೆ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾರಾಟ ಕೂಡ ಮಾಡುತ್ತಿದೆ, ಆದರೆ ಇದುವರೆಗೂ ಬೆಳಗಾವಿ ಹಾಗೂ ಹುಬ್ಬಳ್ಳಿ ಜಿಲ್ಲೆಗಳು ಎರಡು ಸೇರಿಸಿದರೂ ಕೂಡ ಅಮೂಲ್ ದಿನಕ್ಕೆ 500 ಲೀಟರ್ ಕೂಡ ಮಾರಾಟ ಮಾಡುವಲ್ಲಿ ವಿಫಲವಾಗುತ್ತಿದೆ ಎಂಬುದು ನೆನಪಿಡಬೇಕಾದ ವಿಷಯ, ಅದೇನೇ ಆಗಲಿ ನಾವು ಯಾಕೆ ಬೇರೆ ಬ್ರಾಂಡ್ ಗಳಿಗೆ ಮಾರಾಟ ಮಾಡುವ ಅವಕಾಶ ನೀಡಬೇಕು?? ಎಂಬ ಪ್ರಶ್ನೆ ನಿಮಗಿದ್ದರೆ, (ಜೈಪುರದ ರಾಜಕುಮಾರಿಗೆ ತಾಳಿ ಕಟ್ಟುವ ಮುನ್ನ ಶ್ರೀಶಾಂತ್ ಪ್ರೀತಿ ಮಾಡಿ ಸುತ್ತಾಡಿದ್ದ ಟಾಪ್ 6 ನಟಿಯರು ಯಾರ್ಯಾರು ಗೊತ್ತೇ??)

ಸ್ನೇಹಿತರೇ ಒಂದು ನೆನಪಿನಲ್ಲಿ ಇಟ್ಟುಕೊಳ್ಳಿ ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಇಡೀ ಪ್ರಪಂಚದಲ್ಲಿ ಯಾವುದೇ ಬ್ರಾಂಡ್ ಯಾವುದೇ ದೇಶಕ್ಕೆ ಹೋಗಬಹುದು. ಅದರಂತೆ ಯಾವುದೇ ರಾಜ್ಯಕ್ಕೆ ಬೇಕಾದರೂ ಮಾರಾಟ ಮಾಡಲು ಬರಬಹುದು. ಅಮುಲ್ ಒಂದೇ ಅಲ್ಲ, ಈಗಾಗಲೇ ತೆಲಂಗಾಣ ರಾಜ್ಯದಿಂದ ದೊಡ್ಲ , ಆಂಧ್ರ ಪ್ರದೇಶದಿಂದ ಹೆರಿಟೇಜ್, ಮಿಲ್ಕಿ ನೆಕ್ಸ್ಟ್, ಆರೋಕ್ಯ, ತಿರುಮಲ, ಹಟ್ಸನ್, ಹೀಗೆ ಹಲವಾರು ಬ್ರಾಂಡ್ಗಳು ಕರ್ನಾಟಕದಲ್ಲಿ ಇನ್ನೂ ಕಡಿಮೆ ಬೆಲೆಗೆ ಹಾಲನ್ನು ಮಾರಾಟ ಮಾಡುತ್ತಿವೆ. ಇವುಗಳು ಬಂದು ಅದೆಷ್ಟೋ ವರ್ಷ ಆಯಿತು.

ಆದರೆ ಯಾವುದೇ ಬ್ರಾಂಡುಗಳು ನಂದಿನಿಯ ಮಾರುಕಟ್ಟೆಯನ್ನು ಇಲ್ಲಿಯವರೆಗೂ ಕೊಂಚ ಕಡಿಮೆ ಮಾಡಲು ಕೂಡ ಆಗಿಲ್ಲ, ಬದಲಾಗಿ ನಂದಿನಿ ದಿನೇ ದಿನೇ ಬೆಳೆಯುತ್ತಿದೆ. ಯಾಕೆಂದರೆ ನಂದಿನಿಗೆ ಇರುವ ಗುಣಮಟ್ಟದ, ನಂದಿನಿ ಜೊತೆ ಕರ್ನಾಟಕದ ಜನರಿಗೆ ಇರುವ ಭಾಂದವ್ಯ ಅಂತದ್ದು. ಅಷ್ಟೇ ಯಾಕೆ ನಂದಿನಿ ಕೇವಲ ಕರ್ನಾಟಕದ ಜನರ ಬ್ರಾಂಡ್ ಆಗಿ ಉಳಿದುಕೊಂಡಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲದೆ ನಂದಿನಿ ಇನ್ನಿತರ ರಾಜ್ಯಗಳಿಗೆ ಕೂಡ ಹೋಗಿದೆ, ಆದರೆ ಅಲ್ಲಿ ಯಾರು ಅದನ್ನು ವಿರೋಧ ಕೂಡ ಮಾಡಿಲ್ಲ, ಬದಲಾಗಿ ಇಷ್ಟ ಪಟ್ಟು ಖರೀದಿ ಮಾಡಿ ಬಳಸುತ್ತಿದ್ದಾರೆ,

ನಂದಿನಿ ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಮೊದಲಾದ ಪ್ರಮುಖ ನಗರಗಳಲ್ಲಿ ಅಮೂಲ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದು ಆರಂಭಿಸಿದೆ, ಬೇರೆ ರಾಜ್ಯಗಳಲ್ಲಿ ಹತ್ತಾರು ಮಳಿಗೆಗಳು ಆರಂಭವಾಗಿವೆ ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಶ್ವವೇ ಮೆಚ್ಚಿರುವ ತಿರುಪತಿ ಪ್ರಸಾದ ತಯಾರು ಮಾಡಲು ಕೂಡ ನಂದಿನಿ ಹಾಲು ಬಳಸುತ್ತಾರೆ. ಹೀಗೆ ನಂದಿನಿ ಕೂಡ ರಾಷ್ಟ್ರೀಯ ಮಟ್ಟದ ಬ್ರಾಂಡ್ ಹಾಗೆ ಬೆಳೆಯುತ್ತಿದೆ, ಇಂತಹ ಸಮಯದಲ್ಲಿ ನಂದಿನಿಯನ್ನು ಕರ್ನಾಟಕಕ್ಕೆ ಸೀಮಿತಗೊಳಿಸಿ, ಕರ್ನಾಟಕಕ್ಕೆ ಬೇರೆ ಯಾವುದೇ ಹಾಲಿನ ಬ್ರಾಂಡುಗಳನ್ನು ಕರೆತರಬೇಡಿ ಎಂದರೆ ಹೇಗೆ ಸಾಧ್ಯ.

ಒಂದು ವೇಳೆ ಬೇರೆ ರಾಜ್ಯಗಳಲ್ಲಿ ಇದೇ, ರೀತಿ ಅಲ್ಲಿನ ಜನರು ನಂದಿನಿ ಬೇಡ ಎಂದರೆ, ನಂದಿನಿ ಹಾಲಿನ ಬೇಡಿಕೆ ಕಡಿಮೆಯಾಗುವುದರಿಂದ ರೈತರಿಗೆ ಇನ್ನು ಕಡಿಮೆ ಬೆಲೆ ನೀಡುತ್ತದೆ ಹಾಗೂ ಹಾಲಿನ ಪ್ರಮಾಣ, ಮಾರುಕಟ್ಟೆ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ನಾವು ಅಲ್ಲಿ ಹೋದರೆ ಹೆಮ್ಮೆ, ಅವರು ಇಲ್ಲಿ ಬಂದರೆ, ಗುಜರಾತಿಗಳ ಪ್ಲಾನ್. ಏನ್ ಲಾಜಿಕ್ ಸ್ವಾಮಿ. ಇನ್ನು ಅಪ್ಪಿ ತಪ್ಪಿ ಒಂದು ವೇಳೆ ನಿಮಗೆ ನಂದಿನ ಸೋಲುವ ಭಯ ಇದ್ದರೇ, ಒಂದೇ ಒಂದು ಚಿಕ್ಕ ಅಂಕಿ ಅಂಶ ಹೇಳುತ್ತೇವೆ ಕೇಳಿ,

ಬೆಂಗಳೂರಿನಲ್ಲಿ ಪ್ರತಿದಿನ 33 ಲಕ್ಷ ಲೀಟರ್ ಹಾಲು ವ್ಯಾಪಾರ ವಹಿವಾಟು ನಡೆಯುತ್ತದೆ. ಅದರಲ್ಲಿ 27 ಲಕ್ಷ ಲೀಟರ್ ಹಾಲು ನಂದಿನಿ ಬ್ರಾಂಡ್ ನದ್ದು ಆಗಿರುತ್ತದೆ ಎಂಬುದು ನಿಮಗೆ ನೆನಪಿರಲಿ, ಇನ್ನು ಈ ರೀತಿ ಇರುವಾಗ ಗುಜರಾತಿನ ಅಮೂಲ್ ಯಾಕೆ ಬೇಕು ಎಂದರೆ ಸ್ನೇಹಿತರೇ, ನಮ್ಮ ವ್ಯಾಪಾರ ನಮ್ಮದು, ಅವರ ವ್ಯಾಪಾರ ಅವರದ್ದು. ಇದು ಕೇವಲ ವ್ಯಾಪಾರ, ಅವರು ಬರಲಿ, ಆದರೆ ನಂದಿನಿ ಬ್ರಾಂಡನ್ನು ಖರೀದಿ ಮಾಡಿ ಬಳಸುವುದನ್ನು ಮರೆಯಬೇಡಿ. Business: ಒಮ್ಮೆ ಹೂಡಿಕೆ ಮಾಡಿ, ಜೀವನ ಪೂರ್ತಿ ಕೂತುಕೊಂಡು ದುಡ್ಡು ಮಾಡುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭಿಸಬೇಕು ಗೊತ್ತೆ??

ಇನ್ನು ಇಷ್ಟೆಲ್ಲ ಹೇಳಿದ ಬಳಿಕ ರಾಜಕೀಯ ನಾಯಕರಿಗೆ ನಾವು ಹೇಳುವುದು ಏನು ಎಂದರೆ, ನಿಮಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎನಿಸಿದರೆ ಖಂಡಿತ ರಾಜಕೀಯ ಮಾಡಿ, ಆದರೆ ಕನ್ನಡಿಗರಿಗೆ ಭಾವನಾತ್ಮಕವಾಗಿ ಹತ್ತಿರವಾಗಿರುವ ನಂದಿನಿ ವಿಚಾರದಲ್ಲಿ ಮಾತ್ರ ಬೇಡ ಎಂಬುದು ನಮ್ಮ ಬೇಡಿಕೆ ಧನ್ಯವಾದಗಳು, ಇನ್ನು ಕೊನೆಯದಾಗಿ ಕೇವಲ ಅಮುಲ್ ಬ್ರಾಂಡ್ ಒಂದೇ ಅಲ್ಲ ಈ ರೀತಿಯ ನೂರು ಬ್ರಾಂಡುಗಳು ಕರ್ನಾಟಕಕ್ಕೆ ಬರಲಿ, ನಾನು ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ಅವುಗಳನ್ನು ಸ್ವಾಗತಿಸುತ್ತೇನೆ, ಆದರೆ ಪ್ರತಿದಿನ ಬೆಳಗ್ಗೆ ಎದ್ದು ನಂದಿನಿ ಹಾಲನ್ನೇ ಖರೀದಿ ಮಾಡುತ್ತೇನೆ.