ಜೈಪುರದ ರಾಜಕುಮಾರಿಗೆ ತಾಳಿ ಕಟ್ಟುವ ಮುನ್ನ ಶ್ರೀಶಾಂತ್ ಪ್ರೀತಿ ಮಾಡಿ ಸುತ್ತಾಡಿದ್ದ ಟಾಪ್ 6 ನಟಿಯರು ಯಾರ್ಯಾರು ಗೊತ್ತೇ??

ಜೈಪುರದ ರಾಜಕುಮಾರಿಗೆ ತಾಳಿ ಕಟ್ಟುವ ಮುನ್ನ ಶ್ರೀಶಾಂತ್ ಪ್ರೀತಿ ಮಾಡಿ ಸುತ್ತಾಡಿದ್ದ ಟಾಪ್ 6 ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರಿಕೆಟಿಗ ಶ್ರೀಶಾಂತ್ ರವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಶ್ರೀಶಾಂತ್ ಅವರು ತಮ್ಮ ಬದುಕಿನಲ್ಲಿ ಕ್ರಿಕೆಟ್ ಗಿಂತ ಹೆಚ್ಚಾಗಿ ವಿವಾ’ದಾತ್ಮಕ ವಿಚಾರಗಳಿಗಾಗಿ ಹೆಚ್ಚಾಗಿ ಸುದ್ದಿಯಾದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಅವರು ಜೋದ್ಪುರ ಮೂಲದ ರಾಜಮನೆತನದವರ ಆಗಿರುವ ಭುವನೇಶ್ವರಿ ಕುಮಾರಿ ರವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರನ್ನು ಮದುವೆಯಾಗುವುದಕ್ಕೆ ಮುನ್ನವೇ ಶ್ರೀಶಾಂತ ರವರು 6ಜನ ನಟಿಯರನ್ನು ಡೇಟಿಂಗ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೇಯ ಶರಣ್; ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವ ಶ್ರೇಯಾ ಶರಣ್ ರವರು ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ನಟಿಸುತ್ತಿದ್ದರು ಇಂದಿಗೂ ಕೂಡ ಚಾಲ್ತಿಯಲ್ಲಿರುವ ಬೇಡಿಕೆ ನಟಿಯಾಗಿದ್ದಾರೆ. ಇವರಿಬ್ಬರೂ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಒಟ್ಟಾಗಿ ಕ್ಯಾಮರದಲ್ಲಿ ಕಾಣಿಸಿಕೊಂಡಿದ್ದು ಡಿನ್ನರ್ ಕೂಡ ಜೊತೆಯಾಗಿ ಮಾಡಿದ್ದರು. ಈ ಕಾರಣದಿಂದಾಗಿ ಇವರಿಬ್ಬರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ನಂತರ ಸ್ವತಹ ಶ್ರೇಯ ಶರಣ್ ಅವರ ಮುಂದೆ ಬಂದು ನಮ್ಮಿಬ್ಬರ ನಡುವೆ ಅಂತಹ ಯಾವುದೇ ಸಂಬಂಧಗಳಿಲ್ಲ ಎನ್ನುವುದಾಗಿ ಸ್ಪಷ್ಟೀಕರಣ ನೀಡಿದ್ದರು.

ರಿಯಾ ಸೇನ್; ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ರವರ ಜೊತೆಗೆ ಬ್ರೇಕಪ್ ಮಾಡಿಕೊಂಡ ನಂತರ ನಟಿ ರಿಯಾ ಸೇನ್ ಹಲವಾರು ಬಾರಿ ಶ್ರೀಶಾಂತ ರವರ ಜೊತೆಗೆ ಕಾಣಿಸಿಕೊಂಡಿದ್ದರು ಹಾಗೂ ಕ್ರಿಕೆಟ್ ಮೈದಾನದಲ್ಲಿ ಅವರಿಗೆ ಸಪೋರ್ಟ್ ಮಾಡಲು ಕೂಡ ಸ್ಟೇಡಿಯಂಗೆ ಬರುತ್ತಿದ್ದರು. ಇವರಿಬ್ಬರು ಮದುವೆ ಆಗುವ ಹಂತಕ್ಕೂ ಕೂಡ ಹೋಗಿದ್ದರೆ ಎಂಬುದಾಗಿ ತಿಳಿದುಬಂದಿದ್ದು ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಬ್ರೇಕಪ್ ಆಗಿದೆ.

ಶಝಾನ್ ಪದಮ್ಸಿ; ಇವರಿಬ್ಬರು 2011 ರ ವಿಶ್ವಕಪ್ ನಂತರ ಲಾಂಗ್ ಡ್ರೈವ್ ಗೆ ಕೂಡ ಹೋಗಿದ್ದರು. ಹಲವಾರು ಕಡೆಗಳಲ್ಲಿ ಒಟ್ಟಾಗಿ ಕ್ಯಾಮೆರಾ ಕಣ್ಣಿಗೆ ಕೂಡ ಕಾಣಿಸಿಕೊಂಡಿದ್ದರು ಹೀಗಾಗಿ ಇವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂಬುದಾಗಿ ಸುದ್ದಿಗಳು ಹರಿದಾಡಿದ್ದವು. ನಂತರ ಶ್ರೀಶಾಂತ್ ರವರೇ ಮುಂದೆ ಬಂದು ನಮ್ಮಿಬ್ಬರ ನಡುವೆ ಕೇವಲ ಸ್ನೇಹ ಸಂಬಂಧ ಮಾತ್ರ ಇದ್ದು ಅವರು ತುಂಬಾ ಸ್ವೀಟ್ ಎಂಬುದಾಗಿ ಪ್ರಕರಣವನ್ನು ತಿಳಿಗೊಳಿಸಿದ್ದರು.

ಮಿನಿಶ ಲಾಂಬ; ಮಕಾವ್ ನಲ್ಲಿ ನಡೆದಿರುವ ಫಿಲಂ ಅವಾರ್ಡ್ ಫಂಕ್ಷನ್ ನಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಹಾಗೂ ಇವರಿಬ್ಬರ ನಡುವೆ ಚುಂಬನ ಕೂಡ ನಡೆದಿರುವುದಾಗಿ ಸುದ್ದಿ ಕೇಳಿಬಂದಿತ್ತು. ಆದರೆ ಅವರ ಲವ್ ಸ್ಟೋರಿ ವರ್ಷಕ್ಕಿಂತ ಹೆಚ್ಚಿನ ಕಾಲ ನಡೆಯಲಿಲ್ಲ ಎಂಬುದು ಕೂಡ ತಿಳಿದುಕೊಳ್ಳಬೇಕಾಗಿರುವ ವಿಚಾರ.

ಲಕ್ಷ್ಮಿ ರೈ; ಕನ್ನಡ ಮೂಲದಿಂದ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಮಿಂಚನ್ನು ಹರಿಸಿರುವ ಬಹುಬೇಡಿಕೆಯ ನಟಿಯಾಗಿರುವ ಲಕ್ಷ್ಮಿರೈ ರವರ ಜೊತೆಗೂ ಕೂಡ ಶ್ರೀಶಾಂತ್ ರವರ ಹೆಸರು ಜೋರಾಗಿ ಕೇಳಿ ಬಂದಿತ್ತು ಆದರೆ ನಂತರದ ದಿನಗಳಲ್ಲಿ ಶ್ರೀಶಾಂತ್ ರವರೆ ಈ ವಿಚಾರವನ್ನು ಅಲ್ಲಗಳೆದಿದ್ದರು.

ಸುರ್ವೀನ್ ಚಾವ್ಲಾ; ಸಿನಿಮಾ ಚಿತ್ರೀಕರಣದ ಸ್ಟೇಟ್ ಒಂದರಲ್ಲಿ ಇವರಿಬ್ಬರ ಪರಿಚಯ ನಂತರ ಪ್ರೀತಿಗೆ ತಿರುಗುತ್ತದೆ. ಬೆಂಗಳೂರಿನ ಹಲವಾರು ಕಸಿನೋ ಹಾಗೂ ಕ್ಲಬ್ ಗಳಲ್ಲಿ ಇಬ್ಬರು ಕೂಡ ವರ್ಷಗಳ ಕಾಲ ಸುತ್ತಾಡಿ ನಂತರ 2009 ರಲ್ಲಿ ಇವರಿಬ್ಬರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇವರೆಲ್ಲರನ್ನು ಡೇಟಿಂಗ್ ಮಾಡಿದ ನಂತರ ಶ್ರೀಶಾಂತ್ ರವರು 2015 ರಲ್ಲಿ ರಾಜಮನೆತನ ಮೂಲದ ಭುವನೇಶ್ವರಿ ಕುಮಾರಿ ಎನ್ನುವವರನ್ನು ಮದುವೆಯಾಗಿ ಈಗ ಎರಡು ಮಕ್ಕಳ ತಂದೆಯಾಗಿದ್ದಾರೆ. ಶ್ರೀಶಾಂತ್ ರವರ ಕುರಿತಂತೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.