ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಾರಿ ಪೈಪೋಟಿಯ ನಡುವೆ ಆರ್ಸಿಬಿ ಆಟಗಾರನಿಗೆ ವಿಶ್ವಕಪ್ ಸ್ಥಾನ ಫಿಕ್ಸ್ ಎಂದ ಸಂಜಯ್: ಯಾರು ಗೊತ್ತೇ ಆ ಆಟಗಾರ, ಅದು ಯಾಕಂತೆ ಗೊತ್ತೇ?

589

Get real time updates directly on you device, subscribe now.

ನಮಸ್ಕಾರ ಸ್ನೇಹಿತರ ಸದ್ಯದ ಮಟ್ಟಿಗೆ ಎಲ್ಲಿ ಕೇಳಿದರು ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಗೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಚರ್ಚೆಗಳು ಸುದ್ದಿಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ತುಂಬಿತುಳುಕುತ್ತಿವೆ. ಇನ್ನು ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಆಗಿರುವ ಸಂಜಯ್ ಮಾಂಜ್ರೇಕರ್ ರವರು ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬ ಆರ್ಸಿಬಿ ಆಟಗಾರ ಖಂಡಿತವಾಗಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ನೀವು ವಿರಾಟ್ ಕೊಹ್ಲಿ ಅವರ ಹೆಸರನ್ನು ಹೇಳುತ್ತೇವೆ ಎಂದು ಅಂದುಕೊಂಡಿರಬಹುದು. ನಾವು ಮಾತನಾಡುತ್ತಿರುವುದು ಅವರ ಬಗ್ಗೆ ಅಲ್ಲ ಬದಲಾಗಿ ದಿನೇಶ್ ಕಾರ್ತಿಕ್ ರವರ ಬಗ್ಗೆ. ಹೌದು ಗೆಳೆಯರೇ ಸಂಜಯ್ ಮಾಂಜ್ರೇಕರ್ ರವರ ಪ್ರಕಾರ ಖಂಡಿತವಾಗಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ದಿನೇಶ್ ಕಾರ್ತಿಕ್ ರವರು ಸ್ಥಾನವನ್ನು ಪಡೆಯಲಿದ್ದಾರೆ ಎನ್ನುವುದಾಗಿ ಹೇಳಿದ್ದಾರೆ. ಅದಕ್ಕೆ ಅವರು ಈಗಾಗಲೇ ಕೆಲವೊಂದು ಕಾರಣಗಳನ್ನು ಕೂಡ ನೀಡಿದ್ದಾರೆ.

ಮೂರು ವರ್ಷಗಳ ನಂತರ ಆರ್ಸಿಬಿ ತಂಡದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ಮೂಲಕ ಭಾರತೀಯ ತಂಡಕ್ಕೆ ಕಾಲಿಟ್ಟಿರುವ ದಿನೇಶ್ ಕಾರ್ತಿಕ್ ರವರು ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊನೆಯ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಕೆಳಕ್ರಮಾಂಕದಲ್ಲಿ ಫಿನಿಶರ್ ಜವಾಬ್ದಾರಿಯನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಇತ್ತೀಚಿನ ದಿನಗಳಲ್ಲಿ ಅವರು ಪರಿಪಕ್ವವಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಪ್ರದರ್ಶನದ ಮೂಲಕ ಅವರೇ ತಮ್ಮ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ ಎಂಬುದಾಗಿದೆ ಮಾಂಜ್ರೇಕರ್ ಅವರು ಹೇಳಿದ್ದಾರೆ.

Get real time updates directly on you device, subscribe now.