ಯಾರು ಆಯ್ಕೆಯಾಗುತ್ತಾರೋ ಇಲ್ಲವೋ, ಈತನನ್ನು ವಿಶ್ವಕಪ್ ಗೆ ಮೊದಲ ಆಯ್ಕೆ ಮಾಡಿದ ರೋಹನ್ ಗವಾಸ್ಕರ್. ಯಾರನ್ನು ಅಂತೇ ಗೊತ್ತೇ?

ನಮಸ್ಕಾರ ಸ್ನೇಹಿತರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಕುರಿತಂತೆ ಲೆಕ್ಕಾಚಾರಗಳು ಆರಂಭವಾಗುವ ಮೊದಲೇ ಭಾರತೀಯ ಕ್ರಿಕೆಟ್ ತಂಡ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಲ್ಲಿ ಯಾರನ್ನು ಆಯ್ಕೆ ಮಾಡುವುದು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾಗಿವೆ. ಹೌದು ಗೆಳೆಯರೇ ಐಪಿಎಲ್ ನಲ್ಲಿ ನೀಡಿರುವ ಪ್ರದರ್ಶನ ಸೇರಿದಂತೆ ಈಗಾಗಲೇ ಪ್ರಾರಂಭವಾಗಿರುವ ಅಂತರಾಷ್ಟ್ರೀಯ ಸರಣಿಗಳಲ್ಲಿ ಹಾಗೂ ಮುಂಬರುವ ಅಂತರಾಷ್ಟ್ರೀಯ ಸರಣಿಗಳಲ್ಲಿ ಯಾರೆಲ್ಲ ಚೆನ್ನಾಗಿ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಲೆಕ್ಕಾಚಾರ ಹಾಕಿ ಖಂಡಿತವಾಗಿ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಆದರೆ ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಅವರ ನೆಚ್ಚಿನ ಆಟಗಾರನನ್ನು ಹಾಕಿಕೊಂಡರೆ ಉತ್ತಮ ಎಂಬುದಾಗಿ ಸಲಹೆ ನೀಡಲು ಪ್ರಾರಂಭಿಸಿದ್ದಾರೆ. ಅದರಲ್ಲಿ ರೋಹನ್ ಗವಾಸ್ಕರ್ ಅವರು ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಲು ತಂಡದಲ್ಲಿ ಆಟಗಾರರ ಇರಲೇಬೇಕು ಎಂಬುದಾಗಿ ಸೂಚನೆ ನೀಡಿದ್ದಾರೆ. ಹೌದು ಗೆಳೆಯರೇ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಗಿರುವ ರೋಹನ್ ಗವಸ್ಕರ್ ಅವರ ಪ್ರಕಾರ ಮುಂಬರುವ ಟಿ20 ವಿಶ್ವಕಪ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲೇಬೇಕು ಎನ್ನುವುದಾಗಿ ಸೂರ್ಯಕುಮಾರ್ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.

ಸೂರ್ಯ ಕುಮಾರ್ ಯಾದವ್ ರವರು ಅಸಾಧಾರಣ ಫಾರ್ಮ್ ನಲ್ಲಿದ್ದಾರೆ ಹೀಗಾಗಿ ಅವರನ್ನು ಟಿ-ಟ್ವೆಂಟಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲೇಬೇಕು ಎಂಬುದಾಗಿ ರೋಹನ್ ಗವಾಸ್ಕರ್ ಅವರು ಹೇಳಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರ ಜೊತೆಗೆ ದಿನೇಶ್ ಕಾರ್ತಿಕ್ ರವರನ್ನು ಕೂಡ ಮುಂದಿನ ವಿಶ್ವಕಪ್ ನಲ್ಲಿ ತಂಡದಲ್ಲಿ ಉಳಿಸಿಕೊಳ್ಳುವುದು ಉತ್ತಮ ಎನ್ನುವುದಾಗಿ ಹೇಳಿದ್ದಾರೆ. ರೋಹನ್ ಗವಸ್ಕರ್ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.