ಸತ್ತ ವ್ಯಕ್ತಿಯ ಎರಡು ಕಾಲಿನ ಹೆಬ್ಬೆರಳುಗಳನ್ನು ಸೇರಿಸಿ ಒಟ್ಟಿಗೆ ದಾರ ಕಟ್ಟುವುದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇಡೀ ಬ್ರಹ್ಮಾಂಡದಲ್ಲಿ ಯಾರೇ ಆಗಲಿ ಅಥವಾ ಯಾವುದೇ ವಸ್ತುವೇ ಆಗಲಿ ಆರಂಭ ಮತ್ತು ಅಂತ್ಯ ಎರಡು ಇದ್ದೇ ಇರುತ್ತದೆ. ಆರಂಭದಲ್ಲಿ ಖುಷಿ ಪಡುವ ನಾವು ಅಂತ್ಯ ಎಂದ ತಕ್ಷಣ ಒಂದು ಕ್ಷಣ ಇಷ್ಟಪಡುವುದಿಲ್ಲ. ಮನುಷ್ಯನ ಜೀವನವು ಕೂಡ ಅಷ್ಟೇ ಹುಟ್ಟಿನಿಂದ ಆರಂಭವಾಗುವ ಈ ಜೀವನ ಅಂತ್ಯವಾಗುವುದು ಖಚಿತ. ಒಂದಲ್ಲ ಒಂದು ದಿನ ಎಲ್ಲರೂ ಇಹಲೋಕ ತ್ಯಜಿಸಬೇಕಾಗುತ್ತದೆ, ಆದರೆ ಹುಟ್ಟಿನಲ್ಲಿ ಖುಷಿ ಪಡುವ ಜನರು ಅಂತ್ಯವನ್ನು ಅಷ್ಟಾಗಿ ಇಷ್ಟಪಡುವುದಿಲ್ಲ.

ಇನ್ನು ಹಿಂದೂ ಧರ್ಮದ ಕುರಿತು ನಾವು ಮಾತನಾಡುವುದಾದರೇ ಒಬ್ಬ ವ್ಯಕ್ತಿ ಹುಟ್ಟಿದ ಕ್ಷಣದಿಂದಲೇ ಆತನ ಅಂತ್ಯವಾಗುವ ವರೆಗೂ ಹಲವಾರು ಸಂಪ್ರದಾಯಗಳನ್ನು ನಾವು ಆಚರಿಸಿಕೊಂಡು ಬಂದಿರುತ್ತೇವೆ. ಪ್ರತಿಯೊಂದು ಅಭ್ಯಾಸಗಳು ಹಾಗೂ ಸಂಪ್ರದಾಯಗಳಿಗೆ ಅದರದ್ದೇ ಆದ ಮಹತ್ವವಿದ್ದು, ಅಷ್ಟೇ ಅಲ್ಲದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ವೈಜ್ಞಾನಿಕ ಲೋಕ ಇಂದಿಗೂ ಅಚ್ಚರಿ ಪಟ್ಟು ಸಂಶೋಧನೆ ನಡೆಸುತ್ತಿರುವಂತಹ ವಿಚಾರಗಳನ್ನು ನಮ್ಮ ಪೂರ್ವಜರು ಹಲವಾರು ವರ್ಷಗಳಿಂದ ಸಂಪ್ರದಾಯಗಳ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದಾರೆ.

ಮನುಷ್ಯ ಹುಟ್ಟಿದ ತಕ್ಷಣ ಒಂದು ರೀತಿಯಲ್ಲಿ ಸಂಪ್ರದಾಯಗಳನ್ನು ಆಚರಣೆ ಮಾಡಿದರೆ ಅದೇ ರೀತಿ ಮನುಷ್ಯನ ಅಂತ್ಯಕ್ರಿಯೆ ಮಾಡುವಾಗ ಕೂಡ ವಿವಿಧ ರೀತಿಯ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಅಂತ್ಯಕ್ರಿಯೆ ಮಾಡುವ ಮುನ್ನ ಸತ್ತ ವ್ಯಕ್ತಿಯ ಎರಡು ಕಾಲಿನ ಹೆಬ್ಬೆರಳು ಗಳನ್ನು ಒಟ್ಟಿಗೆ ಕಟ್ಟಿರುತ್ತಾರೆ, ಹೀಗ್ಯಾಕೆ ಎರಡು ಕಾಲಿನ ಹೆಬ್ಬೆರಳುಗಳನ್ನು ಒಟ್ಟಿಗೆ ಕಟ್ಟಿರುತ್ತಾರೆ ಎಂದು ನಿಮಗೆ ಗೊತ್ತೇ?? ಬನ್ನಿ ಈ ಕುರಿತು ಧಾರ್ಮಿಕ ಹಾಗೂ ವೈಜ್ಞಾನಿಕ ಎರಡು ಕಾರಣಗಳನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೆ ಮನುಷ್ಯ ಇಹಲೋಕ ತ್ಯಜಿಸಿದ ಬಳಿಕ ಆತನ ಅಂತ್ಯಕ್ರಿಯೆ ನಡೆಯುವವರೆಗೂ ಆತನ ಆತ್ಮ ಭೂಮಿಯಲ್ಲಿಯೇ ತಿರುಗಾಡುತ್ತಿರುತ್ತದೆ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆದಕಾರಣ ಹೀಗೆ ತಿರುಗಾಡುತ್ತಿರುವ ಆತ್ಮ ಆ ವ್ಯಕ್ತಿಯ ಮನೆಗೆ ಪ್ರವೇಶ ಮಾಡಬಾರದು ಎಂದು ನಂಬಿರುವ ಕಾರಣ ಪ್ರವೇಶಿಸದಂತೆ ತಡೆಯಲು ಎರಡು ಕಾಲಿನ ಹೆಬ್ಬೆರಳುಗಳನ್ನು ಒಟ್ಟಿಗೆ ಕಟ್ಟಿರುತ್ತಾರೆ ಎನ್ನಲಾಗುತ್ತದೆ. ಹೀಗೆ ಆ ವ್ಯಕ್ತಿಯ ಆತ್ಮ ಮನೆಯ ಒಳಗಡೆ ಬರುವುದನ್ನು ತಡೆದು ನಿಲ್ಲಿಸಲು ಎರಡು ಕಾಲಿನ ಹೆಬ್ಬೆರಳುಗಳನ್ನು ಕಟ್ಟಲಾಗುತ್ತದೆ ಎಂದು ಧಾರ್ಮಿಕ ಕಾರಣಗಳನ್ನು ನೋಡಬಹುದಾಗಿದೆ.

ಇನ್ನೂ ವೈಜ್ಞಾನಿಕ ಕಾರಣ ದ ಕುರಿತು ಗಮನಹರಿಸುವುದಾದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಸತ್ತ ನಂತರ ದೇಹದಲ್ಲಿನ ರಕ್ತ ಸಂಚಾರ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಹೀಗೆ ರಕ್ತ ಸಂಚಾರ ಸಂಪೂರ್ಣವಾಗಿ ನಿಲ್ಲುವ ಕಾರಣ ಕೆಲವು ಸಮಯದ ಬಳಿಕ ಎರಡು ಕಾಲುಗಳು ಬಿಗಿಯಾಗಿ ಅಗಲವಾದರೆ ಅವುಗಳನ್ನು ಮತ್ತೆ ಒಟ್ಟಿಗೆ ಸೇರಿಸುವುದು ಕಷ್ಟ ಎನ್ನುವ ಕಾರಣದಿಂದ ಈ ರೀತಿ ಎರಡು ಕಾಲಿನ ಹೆಬ್ಬೆರಳು ಗಳನ್ನು ಒಟ್ಟಿಗೆ ಕಟ್ಟಿರುತ್ತಾರೆ. ಬಹುಶಹ ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದಲೂ ಹೀಗೆ ಎರಡು ಹೆಬ್ಬೆರಳುಗಳನ್ನು ಕಟ್ಟುವ ಪದ್ಧತಿ ಆಚರಿಸಿಕೊಂಡು ಬಂದಿರಬಹುದು, ಅದೇನೇ ಆಗಲಿ ಹುಟ್ಟಿನ ನಂತರ ಮಕ್ಕಳಿಗೆ ಸೊಂಟದ ಸುತ್ತ ಕಟ್ಟುವ ದಾರ ಹಾಗೆ ಮನುಷ್ಯನು ಇಹಲೋಕ ತ್ಯಜಿಸಿದ ಬಳಿಕ ದಾರಾ ಕಟ್ಟುವುವು ಕೂಡ ಒಂದು ಆಚರಣೆಯಾಗಿ ಬೆಳೆದುಕೊಂಡು ಬಂದಿದೆ.

Post Author: Ravi Yadav