ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ರವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವು ಚಿಕ್ಕವರಿದ್ದಾಗ ಹಲವಾರು ಮಕ್ಕಳ ಚಿತ್ರಗಳನ್ನು ನೋಡಿ ಬೆಳೆದಿದ್ದೇವೆ. ಹೀಗೆ ನಾವು ನೋಡಿದ ಹಲವಾರು ಮಕ್ಕಳ ಚಿತ್ರಗಳಲ್ಲಿ ಬೇಬಿ ಇಂದಿರಾ ರವರು ಬಾಲನಟಿಯಾಗಿ ಸಾಕಷ್ಟು ಹೆಸರು ಗಳಿಸುವುದರಲ್ಲಿ ಯಶಸ್ವಿಯಾಗಿದ್ದರು. ಹಲವಾರು ಮಕ್ಕಳ ಚಿತ್ರಗಳಲ್ಲಿ ಅಭಿನಯಿಸಿರುವ ಬೇಬಿ ಇಂದಿರಾ ರವರು ಅದ್ಭುತ ನಟನೆಯ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಮೊದಲಿಗೆ ಡಾಕ್ಟರ್ ರಾಜಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ರವರ ಅಭಿನಯದ ಜನ್ಮ ರಹಸ್ಯ ಎಂಬ ಸಿನಿಮಾದ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಬೇಬಿ ಇಂದಿರಾ ರವರು ತದನಂತರ ಪುಟಾಣಿ ಏಜೆಂಟ್ 123, ಸಿಂಹದಮರಿ ಸೈನ್ಯ ಸೇರಿದಂತೆ ಮಕ್ಕಳ ಭಾಗ್ಯ ಸಿನಿಮಾದಲ್ಲಿ ಬಾಲನಟಿಯಾಗಿ ನಟನೆ ಮಾಡಿದ್ದಾರೆ.

ರವಿಚಂದ್ರನ್, ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್ ಹೀಗೆ ಎಂಬತ್ತರ ದಶಕದಲ್ಲಿ ಹಲವಾರು ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಪಡೆದುಕೊಂಡ ಬೇಬಿ ಇಂದಿರಾ ರವರು ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಕೂಡ ಬಾಲನಟಿಯಾಗಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಚಿತ್ರರಂಗಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ಬೇಬಿ ಇಂದಿರಾ ರವರು 1984 ರಲ್ಲಿ ಅರ್ಜುನ್ ಸರ್ಜಾ ರವರಿಗೆ ನಾಯಕಿಯಾಗಿ ಮಳೆ ಬಂತು ಮಳೆ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಇದಾದ ಬಳಿಕ, ತಮಿಳು ಚಿತ್ರರಂಗದಲ್ಲಿ ಬಾಲನಟನಾಗಿ ಅಂದಿನ ಕಾಲದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಮಾಸ್ಟರ್ ಶ್ರೀಧರ್ ರವರನ್ನು ಬೇಬಿ ಇಂದಿರಾ ರವರು ಮದುವೆಯಾಗುತ್ತಾರೆ. ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದ ಬೇಬಿ ಇಂದಿರಾ ರವರು ತದನಂತರ ಯಾವುದೇ ಚಿತ್ರಗಳಲ್ಲಿಯೂ ನಟನೆ ಮಾಡಲಿಲ್ಲ.

ಈ ದಂಪತಿಗಳಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ದುರಾದೃಷ್ಟವಶಾತ್ ಕಳೆದ 2013ರಲ್ಲಿ ಬೇಬಿ ಇಂದಿರಾ ಅವರ ಪತಿ ಮಾಸ್ಟರ್ ಶ್ರೀಧರ್ ರವರು ಇಹಲೋಕ ತ್ಯಜಿಸಿದ್ದಾರೆ. ಇದಾದ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿರುವ ಬೇಬಿ ಇಂದಿರಾ ರವರಿಗೆ ಈಗಾಗಲೇ 50ಕ್ಕೂ ಹೆಚ್ಚು ವಯಸ್ಸಾಗಿದ್ದು ತಮ್ಮ ಪತಿಯ ಮೂಲವಾದ ಚೆನ್ನೈನಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಐದು ಭಾಷೆಗಳಲ್ಲಿ ಬಾಲನಟನಾಗಿ ಮಿಂಚಿದ ಬೇಬಿ ಇಂದಿರಾ ರವರು ನಾಯಕಿಯಾದ ಬಳಿಕ ಯಾವುದೇ ಅವಕಾಶಗಳನ್ನು ಪಡೆಯಲಿಲ್ಲ, ಆದಕಾರಣ ಇದೀಗ ಅವರು ಸಂಪೂರ್ಣ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

Post Author: Ravi Yadav