ವಯಸ್ಸಾದ ತಾಯಿಯನ್ನು ಕಾಡಿನಲ್ಲಿ ಬಿಡಲು ಹೋದಾಗ ನಡೆದದ್ದೇನು ಗೊತ್ತಾ?? ಜೀವನ ಪಾಠದ ಜೊತೆ ಕಣ್ಣೀರಿನ ಕಥೆ.

ನಮಸ್ಕಾರ ಸ್ನೇಹಿತರೇ, ತಾಯಿಯು ತನ್ನ ಕರುಳ ಬಳ್ಳಿಯನ್ನು ಕಿತ್ತು ನಮಗೆ ಕೊಟ್ಟಿರುತ್ತಾರೆ, ಅಂತಹ ತಾಯಿಯ ಋಣವನ್ನು ನಾವು ಸಾವಿರ ಜನ್ಮ ತಾಳಿದರೂ ತೀರಿಸಲು ಸಾಧ್ಯವಿಲ್ಲ. ಅದಕ್ಕೆ ಹೇಳುವುದು ದೇವರು ಪ್ರತಿ ಸ್ಥಳದಲ್ಲಿ ಪ್ರತಿcಕ್ಷಣದಲ್ಲೂ ಇರಲು ಸಾಧ್ಯವಾಗದ ಕಾರಣ ತಾಯಿಯನ್ನು ಸೃಷ್ಟಿಸಿದ್ದಾನೆ ಎಂದು. ದೇವರ ಬಳಿ ನಾವು ಕೇಳಿಕೊಂಡರೆ ನಮ್ಮ ಆಸೆಗಳು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ, ಆದರೆ ನಾವು ಕೇಳದೇ ಇದ್ದರೂ ಕೂಡ ನಮ್ಮ ಆರೈಕೆ ಮಾಡಿ ನಮ್ಮ ಎಲ್ಲಾ ಆಸೆಗಳನ್ನು ಪೂರೈಸುವ ಕೆಲಸ ತಾಯಿಯಿಂದ ಮಾತ್ರ ಸಾಧ್ಯ.

ಇಂತಹ ತಾಯಿಯನ್ನು ನೂರಾರು ವರ್ಷಗಳ ಹಿಂದೆ ಜಪಾನ್ ದೇಶದಲ್ಲಿ ಹಲವಾರು ಜನರು ಒಂದು ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದರು. ಎಲ್ಲರೂ ಅಲ್ಲ ಕೇವಲ ಒಂದು ಜನಾಂಗದ ಜನರು ತಮ್ಮ ವಯಸ್ಸಾದ ಪೋಷಕರು ಅವರ ಕೆಲಸವನ್ನು ಕೂಡ ಅವರು ಮಾಡಲಾಗದಂತಹ ಸ್ಥಿತಿಯಲ್ಲಿ ಇದ್ದಾಗ, ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರನ್ನು ದೂ’ಷಿಸುವ ಬದಲು ತಂದೆ ಅಥವಾ ತಾಯಿಯನ್ನು ದೂರದ ಕಾಡಿನಲ್ಲಿರುವ ಬೆಟ್ಟದ ಮೇಲೆ ಬಿಟ್ಟು ಬರುತ್ತಿದ್ದರು. ಅಲ್ಲಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲಾಗದೆ ಆಹಾರ ಸಿಗದೆ ವಯಸ್ಸಾದವರು ಹಸಿವಿನಿಂದ ಕೆಲವು ದಿನಗಳ ಬಳಿಕ ಇಹಲೋಕದಲ್ಲಿ ತ್ಯಜಿಸುತ್ತಿದ್ದರು.

ಹೀಗೆ ಒಬ್ಬ ಮಗ ಕೂಡ ತನ್ನ ವಯಸ್ಸಾದ ತಾಯಿಯನ್ನು ಬೆಟ್ಟದ ಮೇಲೆ ಬಿಟ್ಟು ವಾಪಸು ಬರೋಣ ಹೇಗಿದ್ದರೂ ಎಲ್ಲರೂ ಹೀಗೆ ಮಾಡುತ್ತಿದ್ದಾರೆ, ನನ್ನ ಕೈಯಲ್ಲಿ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ನಡೆಯಲಾಗದ ತಾಯಿಯನ್ನು ಬುಜದ ಮೇಲೆ ಹೊತ್ತುಕೊಂಡು ಬೆಟ್ಟದ ಕಡೆಗೆ ಹೊರಡುತ್ತಾನೆ. ಕಾಡು ಆರಂಭವಾಗುತ್ತಿದ್ದಂತೆ ಭುಜದ ಮೇಲಿದ್ದ ತಾಯಿ ತನ್ನ ಕೈಗೆ ಸಿಗುವ ಎಲ್ಲಾ ರೆಂಬೆಗಳು ಹಾಗೂ ಮರದ ಕಡ್ಡಿಗಳನ್ನು ಮುರಿದು ದಾರಿಯುದ್ದಕ್ಕೂ ಹಾಕುತ್ತಿರುತ್ತಾರೆ. ಒಂದೆರಡು ಬಾರಿಯಲ್ಲ ಹಲವಾರು ಬಾರಿ ಈ ರೀತಿ ಮಾಡಿದಾಗ ಆ ಮಗನು ಯಾಕೆ ಈ ರೀತಿ ಕಡ್ಡಿಗಳನ್ನು ರೆಂಬೆಗಳನ್ನು ಮುರಿದು ನೆಲಕ್ಕೆ ಹಾಕುತ್ತಿದ್ದೀಯಾ ಎಂದು ತಾಯಿಯನ್ನು ಪ್ರಶ್ನೆ ಮಾಡುತ್ತಾನೆ.

ಇದಕ್ಕೆ ಉತ್ತರ ನೀಡಿದ ತಾಯಿ, ನನಗೇನೋ ವಯಸ್ಸಾಯಿತು, ನನ್ನನ್ನು ಆ ಬೆಟ್ಟದ ಮೇಲೆ ಬಿಟ್ಟುಬರಲು ನೀನು ಹೊತ್ತುಕೊಂಡು ಹೋಗುತ್ತಿದ್ದೀಯಾ. ಆ ಬೆಟ್ಟದ ದಾರಿ ನನಗೆ ತಿಳಿದಿದೆ, ಅದೇ ಒಂದು ವೇಳೆ ನೀನು ನನ್ನನ್ನು ಬಿಟ್ಟು ವಾಪಸ್ಸು ಬರುವಾಗ ದಾರಿ ತಪ್ಪಿದರೆ ಈ ಕಾಡಿನಲ್ಲಿ ದಾರಿ ಹುಡುಕಿ ಮನೆಗೆ ಹೋಗುವುದು ನಿಜಕ್ಕೂ ಕಷ್ಟದ ಸಂಗತಿ. ಆದ ಕಾರಣ ನಾನು ಇಲ್ಲಿ ಈ ರೀತಿ ಗೊಂಬೆಗಳು, ಅಥವಾ ಕಡ್ಡಿಗಳನ್ನು ಮುರಿದು ಹಾಕಿದ್ದರೇ ನೀನು ವಾಪಸು ಬರುವಾಗ ಇವುಗಳನ್ನು ನೋಡಿಕೊಂಡು ನೀನು ಮನೆಗೆ ಬಹಳ ಸುಲಭವಾಗಿ ತೆರಳಬಹುದು, ದಾರಿ ತಪ್ಪುವ ಪ್ರಸಂಗವೇ ಎದುರಾಗುವುದಿಲ್ಲ ಎಂದು ಉತ್ತರ ನೀಡುತ್ತಾರೆ.

ತಾಯಿಯ ಉತ್ತರವನ್ನು ಕೇಳಿದ ಮಗ, ನನ್ನ ತಾಯಿಗೆ ವಯಸ್ಸಾಗಿರಬಹುದು. ಆದರೆ ನನ್ನ ಮೇಲಿರುವ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ನಾನು ಯಾವುದೇ ಕೆಲಸ ಮಾಡದೆ ಇದ್ದಾಗ ಇವರು ನನ್ನನ್ನು ಸಾಕಿದ್ದಾರೆ, ಹೀಗ್ಯಾಕೆ ನಾನು ಅವರನ್ನು ನೋಡಿಕೊಳ್ಳಬಾರದು ಎಂದು ಕಣ್ಣೀರು ಸುರಿಸುತ್ತಾ ಆಲೋಚನೆ ಮಾಡಿ ನಾನು ಎಂತಹ ದೊಡ್ಡ ತಪ್ಪು ಮಾಡಲು ಹೊರಟಿದ್ದೇನೆ, ತನ್ನ ಕೊನೆಯ ಕ್ಷಣಗಳಲ್ಲಿಯು ಕೂಡ ನಾನು ಸುರಕ್ಷಿತವಾಗಿ ಮನೆಗೆ ತಲುಪಲಿ ಎಂದು ಬಯಸುವ ತಾಯಿಯನ್ನು ಅನ್ಯಾಯವಾಗಿ ಕಾಡಿಗೆ ಬಿಟ್ಟು ಬರಲು ಹೇಗೆ ನಾನು ಯೋಚನೆ ಮಾಡಿದೆ, ಈ ರೀತಿಯ ಯೋಚನೆ ಕೂಡ ತಪ್ಪು ಎಂದು ಅರಿತುಕೊಂಡು ವಾಪಸು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ನಿರ್ಧಾರ ಮಾಡಿ ಮತ್ತೆ ತಾಯಿಯನ್ನು ಭುಜದ ಮೇಲೆ ಕೂರಿಸಿಕೊಂಡು ಮನೆಗೆ ವಾಪಸ್ಸು ತೆರಳುತ್ತಾನೆ.

ಸ್ನೇಹಿತರೇ ಈ ಮೇಲಿನ ಕಥೆಯನ್ನು ಓದಿದ್ದೀರಾ ಎಂದು ಕೊಂಡಿದ್ದೇವೆ. ಆದರೆ ಕಥೆ ಓದುವುದಷ್ಟೇ ಅಲ್ಲ ಸ್ನೇಹಿತರೇ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ, ದುಡ್ಡು ಒಂದು ಇದ್ದರೆ ಸಾಕು ಎನ್ನುವ ಇಡೀ ಪ್ರಪಂಚವನ್ನು ನೀವು ನೋಡಿದ್ದೀರಾ. ಎಲ್ಲರೂ ಇಂದು ಹಣದ ಹಿಂದೆ ಹೋಗುತ್ತಿದ್ದಾರೆ, ಆದರೆ ಹಣ ಎಷ್ಟೇ ಇದ್ದರೂ ಕೂಡ ನೀವು ಹೆತ್ತ ತಾಯಿಯನ್ನು ಪಡೆಯಲು ಸಾಧ್ಯವಿಲ್ಲ, ಒಮ್ಮೆ ಕಳೆದುಕೊಂಡರೆ ಸಾವಿರ ಕೋಟಿ ಕೊಟ್ಟರೂ ಕೂಡ ತಾಯಿ ಮರಳಿ ಬರುವುದಿಲ್ಲ. ಆದ್ದರಿಂದ ತಂದೆ ತಾಯಿಯ ವಿಷಯಗಳಲ್ಲಿ ನಿಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ. ಒಟ್ಟಿನಲ್ಲಿ ಅದೇನೇ ಆಗಲಿ ತಾಯಿಯನ್ನು ಕಾಡಿಗೆ ಬಿಡುವ ಮುಂಚೆ ಆತನಿಗೆ ಜ್ಞಾನೋದಯವಾಗಿದ್ದು ದೇವರ ಅನುಗ್ರಹ ಆದಷ್ಟೆ ಸಂತೋಷವಾಯಿತು.

Facebook Comments

Post Author: Ravi Yadav