Plastic Rice:ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್.

Plastic Rice:ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್. Detect Plastic Rice by using these tricks

Plastic Rice- Detect Plastic Rice by using these tricks– ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ವಿಷಯದಲ್ಲಿ ಕಲಬೆರಕೆ ಮಾಡುವುದು ಜಾಸ್ತಿಯಾಗಿದೆ. ಕಲಬೆರಕೆ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಖಾಯಿಲೆಗಳು ಕೂಡ ಬರುತ್ತದೆ. ಆರೋಗ್ಯ ಚೆನ್ನಾಗಿರುವುದಕ್ಕೆ ಉತ್ತಮ ಆಹಾರ ಸೇವಿಸುವುದು ಬಹಳ ಮುಖ್ಯ ಆಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಕಲಬೆರಕೆ ಅಕ್ಕಿಯ (Plastic Rice) ಹಾವಳಿ ಜಾಸ್ತಿಯಾಗಿದೆ, ಪ್ಲಾಸ್ಟಿಕ್ ಅಕ್ಕಿ ಬಳಸಲಾಗುತ್ತಿದೆ ಎನ್ನುವ ದೂರು ಕೇಳಿಬರುತ್ತಿದೆ. ಚೆನ್ನಾಗಿರುವ ಅಕ್ಕಿಯ ಜೊತೆಗೆ ಪ್ಲಾಸ್ಟಿಕ್ ಅಕ್ಕಿಯನ್ನು ಬಳಸಲಾಗುತ್ತದೆ. Business Idea- ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.

Detect-Plastic-Rice-by-using-these-tricks explained in kannada
Detect-Plastic-Rice-by-using-these-tricks explained in kannada

ಈ ರೀತಿ ಪ್ಲಾಸ್ಟಿಕ್ ಅಕ್ಕಿ ಸೇವಿಸಿದರೆ, ಆರೋಗ್ಯಕ್ಕೆ ಹಾನಿ ಆಗುವುದು ಗ್ಯಾರಂಟಿ. ಹಾಗಿದ್ದರೆ ಪ್ಲಾಸ್ಟಿಕ್ ಅಕ್ಕಿ ಯಾವುದು ಎಂದು ಗುರುತಿಸುವುದು ಹೇಗೆ ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಪ್ಲಾಸ್ಟಿಕ್ ಅಕ್ಕಿ ಗುರುತಿಸುವುದು ಬಹಳ ಸುಲಭವಾಗಿದೆ. ಒಂದು ಗ್ಲಾಸ್ ತೆಗೆದುಕೊಂಡು, ಅದಕ್ಕೆ ನೀರು ಹಾಕಿ, ಈ ನೀರಿಗೆ ಒಂದು ಸ್ಪೂನ್ ಅಕ್ಕಿ ಹಾಕಿ.

ಒಂದು ಗ್ಲಾಸ್ ನೀರಿಗೆ ಅಕ್ಕಿ ಹಾಕಿದ ನಂತರ, ಗ್ಲಾಸ್ ಅನ್ನು ಚೆನ್ನಾಗಿ ಶೇಕ್ ಮಾಡಿ.. ಈ ರೀತಿ ಮಾಡಿದಾಗ ಅಕ್ಕಿ ನೀರಿನ ಮೇಲ್ಗಡೆ ತೇಲುತ್ತಿರುವುದನ್ನು ನೀವು ನೋಡಬಹುದು. ಅಕ್ಕಿ ತೇಲುತ್ತಿದ್ದರೆ ಇದು ನಕಲಿ ಅಕ್ಕಿ (Plastic Rice) ಅಥವಾ ಪ್ಲಾಸ್ಟಿಕ್ ಅಕ್ಕಿ ಆಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಇದನ್ನು ಓದಿ: ದೇಶವೇ ಮೆಚ್ಚುವಂತೆ ಚಿಲ್ಲರೆ ಬೆಲೆ ಹೀರೋ HF ಡೀಲಕ್ಸ್ ಬಿಡುಗಡೆ ಮಾಡಿದ ಹೀರೋ- ವಿಶೇಷತೆ, ಬೆಲೆ ಡೀಟೇಲ್ಸ್.

ಅಕ್ಕಿ ನಿಜವಾದ ಅಕ್ಕಿಯೋ ಅಥವಾ ಪ್ಲಾಸ್ಟಿಕ್ ಅಕ್ಕಿಯೋ ಎಂದು ತಿಳಿದುಕೊಳ್ಳಲು ಲೈಟರ್ ನ ಸಹಾಯ ಕೂಡ ಪಡೆಯಬಹುದು. ಲೈಟರ್ ಬಳಸಿ ಅಕ್ಕಿಯ ಬಗ್ಗೆ ಹೇಗೆ ಕಂಡುಹಿಡಿಯುವುದಕ್ಕೆ ಈ ರೀತಿ ಮಾಡಬೇಕು.., ಲೈಟರ್ ತೆಗೆದುಕೊಂಡು ಅದರಿಂದ ನೀವು ಅಕ್ಕಿಯನ್ನು ಸುಡಬೇಕು.

ಲೈಟರ್ ಇಂದ ಅಕ್ಕಿಯನ್ನು ಸುಟ್ಟ ನಂತರ ಅದರಿಂದ ಪ್ಲಾಸ್ಟಿಕ್ ಸ್ಮೆಲ್ ಬಂದರೆ, ಆಗ ಅದು ಪ್ಲಾಸ್ಟಿಕ್ ಅಕ್ಕಿ ಆಗಿರುತ್ತದೆ. ಇದು ಕೂಡ ಪ್ಲಾಸ್ಟಿಕ್ ಅಕ್ಕಿಯನ್ನು ಕಂಡು ಹಿಡಿಯಲು ಮತ್ತೊಂದು ವಿಧಾನ ಆಗಿದೆ. ಇಂಥ ಅಕ್ಕಿಯನ್ನು ಪ್ಲಾಸ್ಟಿಕ್ ಸಹಾಯದಿಂದ ತಯಾರಿಸುತ್ತಾರೆ.