Karnataka Budget: ರೈತರಿಗೆ ಸೈಲೆಂಟ್ ಆಗಿನೇ ಮತ್ತೊಂದು ಶಾಕ್ ಕೊಟ್ಟ ಸಿದ್ದು- ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಿದ್ದು ಮಾಡಿದ್ದು ತಪ್ಪು ಎಂದದ್ದು ಯಾಕೆ ಗೊತ್ತೇ?

Karnataka Budget: siddaramaiah budget reduced 4000 rupees to farmers. BJP, JDS and farmers association is not happy with decision.

Karnataka Budget: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಜೆಟ್ ಘೋಷಣೆ ಮಾಡಿದೆ. ಬಜೆಟ್ ಘೋಷಣೆಯಾದ ದಿನದಿಂದಲೂ ಕೂಡ ಪರ ಹಾಗೂ ವಿರೋಧದ ಚರ್ಚೆಗಳು ಬಾರಿ ಜೋರಾಗಿ ನಡೆಯುತ್ತಿವೆ. ಅದರಲ್ಲಿಯೂ ಬಿಜೆಪಿ (BJP Karnataka) ಪಕ್ಷದ ಕಾರ್ಯಕರ್ತರು ಇದು ಕೇವಲ ಅಲ್ಪಸಂಖ್ಯಾತರಿಗೆ ಮಾಡಿದ ಬಜೆಟ್ ಎಂಬ ಆರೋಪ ಮಾಡುತ್ತಿದ್ದಾರೆ ಇನ್ನು ಬಿಜೆಪಿ ಪಕ್ಷದ ನಾಯಕರು ಹಾಗೂ ಜೆಡಿಎಸ್ (JDS) ಪಕ್ಷದ ಬೆಂಬಲಿಗರು ಕೂಡ ಬಜೆಟ್ ವಿರುದ್ಧ ಮುಗಿಬಿದ್ದಿದ್ದು ದ್ವೇಷದ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಹಲವಾರು ಯೋಜನೆಗಳನ್ನು ರದ್ದುಗೊಳಿಸಿದೆ. ಇದನ್ನು ಓದಿ: ಗೃಹ ಜ್ಯೋತಿ ಸ್ಕೀಮ್ ನಲ್ಲಿ ಮತ್ತಷ್ಟು ಹೊಸ ರೂಲ್ಸ್ ಸೇರಿಸಿದ ಸಿದ್ದು ಸರ್ಕಾರ- ಈ ಬಾರಿ ಯಾವ ರೂಲ್ಸ್ ಗೊತ್ತೇ?

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯದ ಅಭಿವೃದ್ಧಿಗೆ ಕುಂಠಿತವಾಗುವಂತಹ ಬಜೆಟ್ (Karnataka Budget) ಮಂಡನೆ ಮಾಡಲಾಗಿದೆ, ಈಗಾಗಲೇ ಜನರು ತರಕಾರಿ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಮಯದಲ್ಲಿ ಕಾಂಗ್ರೆಸ್ (Karnataka Congress) ಪಕ್ಷ ಬೆಲೆ ಏರಿಕೆಯನ್ನು ಕಡಿಮೆ ಮಾಡುವ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮಣೆ ಹಾಕದೆ ಹಾಗೂ ಜನರ ಪರವಾದ ಬಜೆಟ್ ಮಂಡನೆ ಮಾಡದೆ ರಾಜ್ಯವನ್ನು ಹಲವಾರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ವಾದ ಮಂಡನೆ ಮಾಡುತ್ತಿದ್ದಾರೆ. ಇದನ್ನು ಓದಿ: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

ಇನ್ನು ಕಾಂಗ್ರೆಸ್ ಪಕ್ಷದ ನಾಯಕರು ಎಂದಿನಂತೆ ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷಣೆ ಈ ವಾಕ್ಯದೊಂದಿಗೆ ಎಲ್ಲರಿಗೂ ಸಮನಾದ ವಾತಾವರಣ ಸೃಷ್ಟಿ ಮಾಡಲು ಅಲ್ಪಸಂಖ್ಯಾತರು ದಲಿತರು ಶೋಷಿತ ಸಮುದಾಯದವರು ಸೇರಿದಂತೆ ಪ್ರತಿಯೊಬ್ಬರನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ (Karnataka Budget) ಘೋಷಣೆ ಮಾಡಲಾಗಿದೆ ಹಾಗೂ ಇದು ಬಡವರ ಬಜೆಟ್ ಎಂದು ತಮ್ಮ ಬಜೆಟ್ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಕಾಂಗ್ರೆಸ್ ಪಕ್ಷ ಮಾಡಿದ ಅದೊಂದು ತಪ್ಪು ಜನರು ಪಕ್ಷಾತೀತವಾಗಿ ಕಾಂಗ್ರೆಸ್ ಪಕ್ಷದ ನಿರ್ಧಾರಗಳು ತಪ್ಪು ಎಂಬ ಮಾತನ್ನು ಹೇಳುವಂತೆ ಮಾಡಿದೆ, ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷದ ಈ ನಿರ್ಧಾರದ ವಿರುದ್ಧ ಕೆಲವರು ಕಾಂಗ್ರೆಸ್ ಕಾರ್ಯಕರ್ತರು (Congress Members) ಕೂಡ ಈ ರೀತಿ ಮಾಡಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದು ಏನೆಂದರೆ ಈಗಾಗಲೇ ಮಳೆ ಬಾರದೆ ಸಂಕಷ್ಟದಲ್ಲಿ ಸಿಲುಕಿರುವ ಕರುನಾಡಿನ ರೈತರಿಗೆ ಇನ್ನು ಮುಂದೆ ಹಣ ಕಡಿತಗೊಂಡು ಸಿಗಲಿದೆ.

ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ನರೇಂದ್ರ ಮೋದಿ ರವರ ಸರ್ಕಾರವು ದೇಶದ ಪ್ರತಿಯೊಬ್ಬ ರೈತನಿಗೂ ಕೂಡ ವರ್ಷಕ್ಕೆ ಆರು ಸಾವಿರ ಲೆಕ್ಕದಲ್ಲಿ ಮೂರು ಕಂತಿನಲ್ಲಿ ಎರಡು ಸಾವಿರ ರೂಪಾಯಿಯಂತೆ ಬಿಡುಗಡೆ ಮಾಡುತ್ತಿದೆ, ಇದು ದೇಶದ ಎಲ್ಲಾ ರೈತರಿಗೆ ತಲುಪುತ್ತಿದೆ. ಆದರೆ ಕರ್ನಾಟಕ ರಾಜ್ಯ ಒಂದು ಹೆಜ್ಜೆ ಮುಂದೆ ಹೋಗಿ ರೈತರಿಗೆ ಈ 6,000ಗಳ ಜೊತೆ ನಾಲ್ಕು ಸಾವಿರ ಹೆಚ್ಚುವರಿ ಯನ್ನಾಗಿ ನೀಡಿ ಒಟ್ಟಾರೆ ಐದು ಕಂತುಗಳಾಗಿ 2,000ಗಳಂತೆ 10,000 ನೀಡುತ್ತಿತ್ತು, ಈ ಯೋಜನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಜಾರಿಗೆ ತಂದಿದ್ದರು. ಇದನ್ನು ಓದಿ: ಪೆಟ್ರೋಲ್ ಕೇವಲ 15 ರೂಪಾಯಿ ಸಿಗಲಿದೆ- ಅಚ್ಚರಿಯ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ- ನಿಮ್ಮ ಮಾತು ಸತ್ಯ ಎಂದ ಆರ್ಥಿಕ ತಜ್ಞರು. ಹೇಗೆ ಗೊತ್ತೇ?

ಆದರೆ ಬಜೆಟ್ ನಲ್ಲಿ ಸಿದ್ದರಾಮಯ್ಯ (Siddaramaiah) ರವರು ಈ ಕುರಿತು ಯಾವುದೇ ಅನುದಾನ ಘೋಷಣೆ ಮಾಡದೆ ಹಾಗೂ ಇನ್ನು ಮುಂದೆ ರಾಜ್ಯದ ರೈತರಿಗೆ ಈ ಹೆಚ್ಚುವರಿ ನಾಲ್ಕು ಸಾವಿರ ರೂಪಾಯಿಗಳು ಸಿಗದಂತೆ ಆದೇಶ ಹೊರಡಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪಕ್ಷ ಅಧಿಕೃತ ಪೇಜ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ರೈತರ ಮೇಲೆ ನಿಮಗೆ ಯಾಕೆ ದ್ವೇಷ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ಅವರ ಮುಂದೆ ಇಟ್ಟಿದೆ. ಹಲವಾರು ಉಚಿತ ಯೋಜನೆಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗೆ ನೀಡುತ್ತಿರುವ ನಾಲ್ಕು ಸಾವಿರ ರೂಪಾಯಿ ಹೆಚ್ಚಾಗಿದೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ