ಕೆಲಸಕ್ಕಿಂತ ಯಾವಾಗಲು ಉದ್ಯಮ ಯಾಕೆ ಬೆಸ್ಟ್ ಗೊತ್ತೇ? ಈ ಯುವತಿ 20000 ಹೂಡಿಕೆ ಮಾಡಿದ ಕಂಪನಿ ಎಷ್ಟು ಗಳಿಸಿದೆ ಗೊತ್ತೇ??
ಕೆಲಸಕ್ಕಿಂತ ಯಾವಾಗಲು ಉದ್ಯಮ ಯಾಕೆ ಬೆಸ್ಟ್ ಗೊತ್ತೇ? ಈ ಯುವತಿ 20000 ಹೂಡಿಕೆ ಮಾಡಿದ ಕಂಪನಿ ಎಷ್ಟು ಗಳಿಸಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಮನಸಿದ್ದರೆ ಮಾರ್ಗ ಎಂಬ ಮಾತನ್ನು ನೀವು ಕೇಳಿರಬಹುದು. ಕೆಲವೊಮ್ಮೆ ಎಷ್ಟೇ ಕಷ್ಟಗಳು ಎದುರಾದರೂ ನಮಗೆ ಸಾಧಿಸುವ ಹಠವಿದ್ದರೆ, ಛಲವಿದ್ದರೆ ಹೇಗಾದರೂ ಮಾಡಿ ಸಾಧನೆಯನ್ನು ಮಾಡಿಯೇತೀರುತ್ತೇವೆ. ಅದರಲ್ಲೂ ಈಗಿನ ಯಂಗ್ ಸ್ಟರ್ಸ್ ತಾವು ಯಾವುದೇ ಕನಸನ್ನು ಕಂಡರೂ ಅದು ನನಸಾಗಲು ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ಚಾಚೂತಪ್ಪದೆ ಮಾಡುತ್ತಾರೆ.
ಹಾಗಾಗಿ ಸಾಕಷ್ಟು ಯುವಕರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ನೀವು ನೋಡಿರಬಹುದು. ಇಂಥ ಒಬ್ಬ ಸಾಧಕಿಯ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಈಕೆ ಕೇವಲ ಸಾಧಕಿ ಅಲ್ಲ ಹಲವರಿಗೆ ಮಾದರಿ, ಛಲವಿರುವವರಿಗೆ ಸ್ಪೂರ್ತಿ. ಅತಿ ಸಣ್ಣ ವಯಸ್ಸಿನಲ್ಲಿ ಆದಷ್ಟು ಸಾಧನೆಯನ್ನು ಮಾಡಿದ್ದಾರೆ ಎಂದರೆ ಇಡೀ ದೇಶವೇ ಅವರತ್ತ ನೋಡುವಂತಹ ಸಾಧನೆಯದು.
ಕನಸು ಹೊಸತಾಗಿರಬೇಕು. ಆಕನಸನ್ನು ಕಾಣುವುದು ಮಾತ್ರವಲ್ಲ ನನಸಾಗಿಸಿಕೊಳ್ಳಬೇಕು ಎಂದು ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿಯೇ ತನ್ನದೇ ಆಹ ಉದ್ಯೋಗವನ್ನು ಶುರುಮಾಡಿದವಳು ಉತ್ತರ ಪ್ರದೇಶದ ಪಂಕುಡಿ ಶ್ರೀ ವಾಸ್ತವ್. ತನ್ನದೇ ಆದ ಸಾಮ್ರಾಜ್ಯ ಕಟ್ಟುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನಿಸಿ ಕೋಟಿ ಕೋಟಿ ಹಣವನ್ನು ತನ್ನ 20 ವರ್ಷ ವಯಸ್ಸಿನಲ್ಲಿಯೇ ದುಡಿಯಲು ಆರಂಭಿಸಿದರು.
ಹೌದು, ತಮ್ಮ 25ನೆಯ ವಯಸ್ಸಿನಲ್ಲಿ 20,000 ಬಂಡವಾಳ ಹೂಡಿಕೆ ಮಾಡಿ ಗ್ರಾಬ್ ಹೌಸ್ ಎನ್ನುವ ಆ್ಯಪ್ ಒಂದನ್ನು ಶುರುಮಾಡಿದರು. ಈ ಅಪ್ಲಿಕೇಶನ್ ರೆಂಟಲ್ ಹೌಸ್ ಅಂದರೆ ಬಾಡಿಗೆ ಮನೆ ಹುಡುಕುವ ಜನರಿಗೆ ಬಹಳ ಅನುಕೂಲ ಮಾಡಿಕೊಂಡುವಂಥ ಅಪ್ಲಿಕೇಶನ್ ಆಗಿತ್ತು. ಇದು ಆಕೆಯ ನಿರೀಕ್ಷೆಗೂ ಮೀರಿ ಸಕ್ಸೆಸ್ ನ್ನು ಕಂಡಿತು. ಒಂದು ಮಾಹಿತಿ ಪ್ರಕಾರ 2016ರ ವೇಳೆಗೆ ಇದರ ವಹಿವಾಟು 720ಕೋಟಿ ರೂಪಾಯಿಗೂ ಮೀರಿದ್ದಾಗಿತ್ತು. ನಂತರ 2016ರಲ್ಲ್ ಕ್ಪಿಕ್ಕರ್ ಕಂಪನಿ ಈ ಕಂಪನಿಯನ್ನು ತನ್ನಲ್ಲಿ ಸೇರಿಸಿಕೊಂಡಿತು. ಕಾರಣ ಪಂಕುಡಿ ಅವರು ಇದನ್ನು ಕ್ವಿಕ್ಕರ್ ಗೆ ಮಾರಾಟ ಮಾಡಿದ್ದರು.
ಇದಾದ ಬಳಿಕ ಮತ್ತೆ ಬ್ಯುಸನೆಸ್ ಕಡೆ ಮುಖ ಮಾಡಿದ ಪಂಕುಡಿ, 2019ರಲ್ಲಿ ಸೋಶಿಯಲ್ ಕಮ್ಯುನಿಟಿ ಸ್ಥಾಪನೆ ಮಾಡಿದರು. ಇದು ಕೇವಲ ಮಹಿಳೆಯರ ಹಿತಾಸಕ್ತಿಗಾಗಿ ಆಕೆ ಆರಂಭಿಸಿದ್ದರು. ಆದರೆ ದುರ್ದೈವ ನೋಡಿ. ಡಿಸೆಂಬರ್ 24, 2021ರಲ್ಲಿ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಈಕೆ ಇಹಲೋಕ ತ್ಯಜಿಸಿದರು. ಕೇವಲ 32 ವರ್ಷದ ಪಂಕುಡಿ ಸಾಕಷ್ಟು ಸಾಧನಿಗಳನ್ನು ಮಾಡಿ, ಮತ್ತಷ್ಟು ಕನಸುಗಳನ್ನು ನನಸಾಗಿಸಿಕೊಳ್ಳುವಷ್ಟರಲ್ಲಿ ಈ ಲೋಕವನ್ನೇ ಬಿಟ್ಟರು. ಆದರೆ ಆಕೆಯನ್ನು ನೆನಪಿಸಿಕೊಳ್ಳುವಂಥ ಸಾಧನೆಯನ್ನು ಮಾಡಿಹೋಗಿದ್ದಾರೆ.