ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ನನಗೆ ಸೇರಿದ್ದು ಎನ್ನುವುದಾಗಿ ಹೇಳುತ್ತಿರುವ ಈ ದಿಯಾ ಕುಮಾರಿ ಯಾರು ಗೊತ್ತೇ??

ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ನನಗೆ ಸೇರಿದ್ದು ಎನ್ನುವುದಾಗಿ ಹೇಳುತ್ತಿರುವ ಈ ದಿಯಾ ಕುಮಾರಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತಾಜ್ ಮಹಲ್ ಕುರಿತಂತೆ ಸಾಕಷ್ಟು ವಿಚಾರಗಳು ನಡೆಯುತ್ತಿವೆ. ತಾಜ್ ಮಹಲ್ ನಮ್ಮ ಕುಟುಂಬಕ್ಕೆ ಸೇರಿದ್ದು ಎನ್ನುವುದಾಗಿ ಜಯಪುರದ ರಾಜವಂಶದ ದಿಯಾ ಕುಮಾರಿ ಎನ್ನುವಾಕೆ ಪ್ರತಿಪಾದಿಸಿದ್ದಾರೆ. ಮುಘಲ್ ದೊರೆ ಆಗಿರುವ ಶಹಜಹಾನ್ ನ ಒತ್ತಡದಿಂದಾಗಿ ನಮ್ಮ ಪೂರ್ವಜರು ಈ ಜಾಗವನ್ನು ನೀಡಿದ್ದರು ಎಂಬುದಾಗಿ ದಿಯಾ ಕುಮಾರಿ ಹೇಳುತ್ತಿದ್ದಾರೆ. ದಿಯಾ ಕುಮಾರಿ ರವರ ಜಯಪುರ ರಾಜಮನೆತನ ಅಕ್ಬರನ ನವರತ್ನಗಳಲ್ಲಿ ಒಂದಾಗಿರುವ ರಾಜಮನೆತನವಾಗಿದೆ. ಅಂದಿನ ಕಾಲದಲ್ಲಿ ಜಯಪುರ ವನ್ನು ಆಮೇರ್ ಎನ್ನುವುದಾಗಿ ಕರೆಯಲಾಗುತ್ತಿತ್ತು.

ಇದೇ ವಂಶದ ಸವಾಯಿ ಭವಾನಿ ಸಿಂಗ್ ತನ್ನನ್ನು ತಾನು ರಾಮನ ವಂಶದವನು ಎಂಬುದಾಗಿ ಹೇಳಿಕೊಳ್ಳುತ್ತಿದ್ದರು. ಭವಾನಿ ಸಿಂಗ್ ಹೇಳುವ ಪ್ರಕಾರ ರಾಮನ ಮಗನಾಗಿರುವ ಕುಶನ 309 ನೇ ವಂಶದವನು ನಾನು ಎಂಬುದಾಗಿ ಹೇಳುತ್ತಾರೆ. ಈ ಮಾತನ್ನು ರಾಜಮನೆತನದ ಹಲವಾರು ಜನರು ಕೂಡ ಸ್ವೀಕರಿಸಿದ್ದಾರೆ. ಸವಾಯಿ ಭವಾನಿ ಸಿಂಗ್ 1970 ಜೂನ್ 24ರಿಂದ 1971 ರ ಡಿಸೆಂಬರ್ 28ರ ತನಕ ಮಹಾರಾಜರಾಗಿದ್ದರು. ಇನ್ನು ಇವರ ಮಗಳೇ ದಿಯಾ ಕುಮಾರಿ. ಗಂಡು ಸಂತಾನ ಇಲ್ಲದಿದ್ದ ಕಾರಣದಿಂದಾಗಿ 2011 ರಲ್ಲಿ ದಿಯಾ ಕುಮಾರಿ ಮಗನನ್ನೇ ಉತ್ತರಾಧಿಕಾರಿಯನ್ನಾಗಿ ಘೋಷಿಸಲಾಯಿತು.

ಪ್ರಾರಂಭಿಕ ವಿದ್ಯಾಭ್ಯಾಸವನ್ನು ದಿಯಾ ಕುಮಾರಿ ದಿಲ್ಲಿ ಹಾಗೂ ಜಯಪುರದಲ್ಲಿ ಮಾಡಿದ್ದಾರೆ. ಉನ್ನತ ವಿದ್ಯಾಭ್ಯಾಸವನ್ನು ದಿಯಾ ಕುಮಾರಿ ಲಂಡನ್ನಲ್ಲಿ ಪಡೆಯುತ್ತಾರೆ. ನಂತರ ದಿಯಾ ಕುಮಾರಿ ನರೇಂದ್ರ ಸಿಂಗ್ ಎನ್ನುವವರನ್ನು 1997 ರಲ್ಲಿ ರಹಸ್ಯವಾಗಿ ಕೋರ್ಟ್ನಲ್ಲಿ ಮದುವೆಯಾಗುತ್ತಾರೆ. ನರೇಂದ್ರ ಸಿಂಗ್ ಯಾವುದೇ ರಾಜಮನೆತನದವರು ಆಗಿರಲಿಲ್ಲ ಹೀಗಾಗಿ ಈ ಮದುವೆ ಸಾಕಷ್ಟು ಚರ್ಚೆಗೆ ಕೂಡ ಒಳಗಾಗಿತ್ತು.

ನಂತರದ ದಿನಗಳಲ್ಲಿ ದಿಯಾ ಕುಮಾರಿ ರವರು ತಮ್ಮ ಅಜ್ಜಿ ಆಗಿರುವ ರಾಜಮಾತೆ ಗಾಯತ್ರಿದೇವಿ ರವರ ಹೆಜ್ಜೆಯಂತೆ ಅನುಸರಿಸಿ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಭಾರತೀಯ ಜನತಾ ಪಾರ್ಟಿ ಪಕ್ಷದ ಪ್ರಮುಖ ಮುಖಂಡರಾಗಿ ಮೊದಲಿಗೆ ಸವಾಯಿ ಮಾಧೋಪುರ ಕ್ಷೇತ್ರದಿಂದ ಚುನಾವಣೆಯನ್ನು ಗೆಲ್ಲುತ್ತಾರೆ. ನಂತರ ಸದ್ಯಕ್ಕೆ ಈಗ ರಾಜ್ ಸಮಂದ್ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಆಗಿದ್ದರೂ ಕೂಡ ಭಾರಿ ದೊಡ್ಡಮಟ್ಟದ ಪ್ರಭಾವವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.

ದಿಯಾ ಕುಮಾರಿ ರವರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಮೊದಲ ಬಾರಿಗೆ ಯಾವಾಗ ತಾಜ್ ಮಹಲ್ ನಲ್ಲಿರುವ 22 ಕೋಣೆಗಳನ್ನು ತೆರೆದು ಪುರಾತತ್ವ ಇಲಾಖೆಯ ಸಮೀಕ್ಷೆ ನಡೆಸಬೇಕು ಎಂಬುದಾಗಿ ಅಲಹಾಬಾದ್ ಕೋರ್ಟ್ನಲ್ಲಿ ಲಕ್ನೋ ಬೆಂಚ್ ನಲ್ಲಿ ಪ್ರಕರಣವನ್ನು ದಾಖಲಿಸಿದಾಗ. ಇದೇ ಸಂದರ್ಭದಲ್ಲಿ ಅವರು ಈ ಸಂಪತ್ತು ಎನ್ನುವುದು ಜಯಪುರದ ರಾಜಮನೆತನದವರ ಸ್ವತ್ತು ಎಂಬುದಾಗಿ ಪ್ರತಿಪಾದಿಸಿದರು. ಇದು ಹಲವಾರು ಜಮಾನ ಗಳವರೆಗೂ ಕೂಡ ಜಯಪುರದ ರಾಜಮನೆತನದವರ ಅಧೀನದಲ್ಲಿತ್ತು ಎಂಬುದಾಗಿ ಕೂಡ ಇಲ್ಲಿ ವಾದಿಸಿದ್ದಾರೆ.

ಆ ಕಾಲದ ಸಂದರ್ಭದಲ್ಲಿ ಶಹಜಹಾನ್ ನಮ್ಮ ರಾಜ ಮನೆತನದವರಿಂದ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ಎಂಬುದಾಗಿದೆ ಕುಮಾರಿ ಹೇಳಿದ್ದಾರೆ. ಇದಕ್ಕೆ ಪುರಾವೆ ಬೇಕಾದರೆ ಇತಿಹಾಸಕಾರರಿಂದ ನೀವು ಪಡೆದುಕೊಳ್ಳಬಹುದಾಗಿದೆ ಇಷ್ಟು ಮಾತ್ರವಲ್ಲದೆ ಇದಕ್ಕೆ ಸಬುತು ಜಯಪುರದ ರಾಜ ಮನೆತನಕ್ಕೆ ಸಂಬಂಧಿಸಿದ ದಾಖಲೆಗಳ ಒಟ್ಟುಮಾಡಿ ಇಡುವಂತಹ ಪ್ರದೇಶದಲ್ಲಿ ಸಿಗಬಹುದು ಆಗಿದೆ ಎಂಬುದಾಗಿ ಕೂಡ ದಿಯಾ ಕುಮಾರಿ ಹೇಳಿದ್ದಾರೆ. ಇದಲ್ಲದೆ ಸಾಕಷ್ಟು ಸಾಕ್ಷಾಧಾರಗಳು ನಮ್ಮ ಬಳಿ ಕೂಡ ಇದೆ ಎಂಬುದಾಗಿ ದಿಯಾ ಕುಮಾರಿ ರವರು ಹೇಳಿದ್ದಾರೆ. ಈ ಪ್ರಕರಣ ಯಾವ ಹಂತವನ್ನು ತಲುಪುವುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.