ಪ್ಲೇಆಫ್ ಹಂತಕ್ಕೆ ತೇರ್ಗಡೆಯಾದರೂ ಮುಗಿದಿಲ್ಲ ಆರ್ಸಿಬಿ ಸಮಸ್ಯೆ, ಪಂದ್ಯ ಆಡದೆಯೇ ಟೂರ್ನಿಯಿಂದ ಹೊರ ಬೀಳಲಿದೆಯೇ?? ಅದೇಗೆ ಗೊತ್ತೇ??
ಪ್ಲೇಆಫ್ ಹಂತಕ್ಕೆ ತೇರ್ಗಡೆಯಾದರೂ ಮುಗಿದಿಲ್ಲ ಆರ್ಸಿಬಿ ಸಮಸ್ಯೆ, ಪಂದ್ಯ ಆಡದೆಯೇ ಟೂರ್ನಿಯಿಂದ ಹೊರ ಬೀಳಲಿದೆಯೇ?? ಅದೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೆ ಹೇಗೋ ತೇರ್ಗಡೆಯಾಯ್ತು ಎಂದು ಅಂದುಕೊಂಡು ಆರ್ಸಿಬಿ ಅಭಿಮಾನಿಗಳಿಗೆ ಈಗ ಕಹಿಸುದ್ದಿ ಎದುರಾಗಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಮೇಲೆ ಅತ್ಯಂತ ಹೆಚ್ಚು ಅಂಕಗಳನ್ನು ಹೊಂದಿರುವ ಆಧಾರದ ಮೇಲೆ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗಿತ್ತು.
ಇನ್ನು ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಬೇಕಾಗಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದುರಾದೃಷ್ಟಕ್ಕೆ ಕೊಲ್ಕತ್ತದಲ್ಲಿ ಒಂದು ವಾರದವರೆಗೆ ಎಡಬಿಡದಂತೆ ಗುಡುಗು ಸಹಿತ ಮಳೆ ಇರಲಿದೆ ಎಂಬುದಾಗಿ ಹವಮಾನ ವರದಿ ಸಿಕ್ಕಿದೆ. ಇದರಿಂದ ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೇಗೆ ನಷ್ಟ ಎಂಬುದಾಗಿ ನೀವು ಕೇಳಬಹುದು ಅದಕ್ಕೆ ಕೂಡ ಒಂದು ಕಾರಣವಿದೆ.
ಹೌದು ಗೆಳೆಯರೆ ಮಳೆ ಬರುತ್ತಿರುವ ಕಾರಣದಿಂದಾಗಿ ಯಾವುದೇ ಬೇರೆ ದಿನಗಳನ್ನು ಎಲಿಮಿನೇಟರ್ ಪಂದ್ಯಗಳಿಗಾಗಿ ಮೀಸಲಾಗಿರಿಸಿಲ್ಲ. ಐಪಿಎಲ್‌ನ ಬಿಗಿಯಾದ ವೇಳಾಪಟ್ಟಿಯಿಂದಾಗಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಕ್ವಾಲಿಫೈಯರ್ 1 ಗೆ ಯಾವುದೇ ಮೀಸಲು ದಿನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಟೈಟಾನ್ಸ್ ಲೀಗ್ ಹಂತ ಮುಗಿದ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ನೇರವಾಗಿ ಫೈನಲ್ ತಲುಪಲಿದೆ. ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2 ರಲ್ಲಿ ಆಡುವ ಅವಕಾಶವನ್ನು ಪಡೆಯುತ್ತದೆ. ಅಲ್ಲಿ ಅವರು ಎಲಿಮಿನೇಟರ್ ವಿಜೇತ ತಂಡವನ್ನು ಎದುರಿಸುತ್ತಾರೆ. ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯವೂ ಮಳೆಯಿಂದ ರದ್ದಾದರೆ ಲಕ್ನೋ ಸೂಪರ್ ಜೈಂಟ್ಸ್ ಕ್ವಾಲಿಫೈಯರ್-2 ತಲುಪಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲು ಮಳೆ ನಿಲ್ಲುವುದು ಪ್ರಮುಖವಾಗಿದೆ.