ಆರ್ಸಿಬಿ ಪ್ಲೇ ಆಫ್ ಗೆ ಏರಿಸಿರುವ ಟಿಮ್ ಡೇವಿಡ್ ತನ್ನ ಲೆಕ್ಕಾಚಾರದ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ರಚಿಸಿ ಆಯ್ಕೆ ಮಾಡಿದ್ದು ಯಾವ್ಯಾವ ಆಟಗಾರರನ್ನು ಗೊತ್ತೇ??

ಆರ್ಸಿಬಿ ಪ್ಲೇ ಆಫ್ ಗೆ ಏರಿಸಿರುವ ಟಿಮ್ ಡೇವಿಡ್ ತನ್ನ ಲೆಕ್ಕಾಚಾರದ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ರಚಿಸಿ ಆಯ್ಕೆ ಮಾಡಿದ್ದು ಯಾವ್ಯಾವ ಆಟಗಾರರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿಮ್ ಡೇವಿಡ್ ಸಿಂಗಾಪುರ್ ಮೂಲದ ದೈತ್ಯ ಆಟಗಾರ. ವಿಶ್ವಾದ್ಯಂತ ಟಿ 20 ಕ್ರಿಕೆಟ್ ನಲ್ಲಿ ಆಡುವ ಇವರು ಹೊಡಿಬಡಿ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇವರು ಆಡಿದ್ದರು. ಈ ಭಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಮುಂಬೈ ಇಂಡಿಯನ್ಸ್ ತಂಡದ ಪರ ಅದ್ಭುತ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಈಗ ಅವರು ವಿಶ್ವ ಟಿ 20 ಸಾರ್ವಕಾಲಿಕ ಶ್ರೇಷ್ಠ ಇಲೆವೆನ್ ತಂಡವೊಂದನ್ನು ಪ್ರಕಟಿಸಿದ್ದಾರೆ.

ಆದರೇ ಆ ತಂಡದಲ್ಲಿ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾಗೆ ಸ್ಥಾನ ಕಲ್ಪಿಸಲಾಗಿಲ್ಲ. ಬನ್ನಿ ಟಿಮ್ ಡೇವಿಡ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದನ್ನು ತಿಳಿಯೋಣ. ತಂಡದ ಆರಂಭಿಕರಾಗಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಗೂ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಗೆ ಸ್ಥಾನ ಕಲ್ಪಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಕಿಂಗ್ ಕೊಹ್ಲಿ ವಿರಾಟ್ ಗೆ ಸ್ಥಾನ ಕಲ್ಪಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ ಸ್ಥಾನ ಪಡೆದಿದ್ದಾರೆ.

ಐದನೇ ಕ್ರಮಾಂಕದಲ್ಲಿ ವಿಂಡಿಸ್ ನ ದೈತ್ಯ ಪ್ರತಿಭೆ ಕೀರನ್ ಪೋಲಾರ್ಡ್, ಆರನೇ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಏಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಆಂಡ್ರೆ ರಸೆಲ್, ಎಂಟನೇ ಕ್ರಮಾಂಕದಲ್ಲಿ ಡ್ವೇನ್ ಬ್ರಾವೋ, ಒಂಬತ್ತನೇ ಕ್ರಮಾಂಕದಲ್ಲಿ ರಶೀದ್ ಖಾನ್, ಹತ್ತನೇ ಕ್ರಮಾಂಕದಲ್ಲಿ ಸುನಿಲ್ ನರೈನ್ ಸ್ಥಾನ ಪಡೆದರೇ ಹನ್ನೊಂದನೇ ಕ್ರಮಾಂಕದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ – ಕ್ರಿಸ್ ಗೇಲ್, ಶೇನ್ ವಾಟ್ಸನ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೀರನ್ ಪೋಲಾರ್ಡ್, ಎಂ.ಎಸ್.ಧೋನಿ,ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ರಶೀದ್ ಖಾನ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್.