ಹಿರಿಯ ನಟಿ ಲಕ್ಷ್ಮಿ ದೇವಿರವರ ಮೊಮ್ಮಗಳು ಕೂಡ ಖ್ಯಾತ ಧಾರವಾಹಿ ನಟಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿಯರಲ್ಲಿ ಒಬ್ಬರಾಗಿರುವ ಹಿರಿಯ ನಟಿ ಎಂಎನ್ ಲಕ್ಷ್ಮೀದೇವಿ ರವರು ಯಾರಿಗೆ ತಿಳಿದಿಲ್ಲ ಹೇಳಿ. 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ಲಕ್ಷ್ಮೀದೇವಿ ರವರು ಹಲವಾರು ಚಿತ್ರಗಳಲ್ಲಿ ಕೆಲವೇ ಕೆಲವು ನಿಮಿಷಗಳ ಕಾಲ ಪಾತ್ರ ಮಾಡಿದರೂ ಕೂಡ ಆ ಕೆಲವು ನಿಮಿಷಗಳಲ್ಲಿ ಪ್ರೇಕ್ಷಕರು ಮರೆಯದಂತಹ ನಟನೆ ಮಾಡಿದ್ದಾರೆ. ಸಾಮಾನ್ಯವಾಗಿ 90ರ ದಶಕದ ಜನರಿಗೆ ಲಕ್ಷ್ಮೀದೇವಿ ಎಂದ ತಕ್ಷಣ ಇವರು ನೆನಪಾಗುತ್ತಾರೆ. ಆದರೆ ಇತ್ತೀಚಿನ ಜನತೆಗೆ ಎಂಎನ್ ಲಕ್ಷ್ಮೀದೇವಿ ಯಾರು ಎಂಬುದನ್ನು ಹೇಳುವುದಾದರೆ ಯುವ ಜನತೆ ಸಾಮಾನ್ಯವಾಗಿ ಗೂಗ್ಲಿ ಮೂವಿ ನೋಡಿರುತ್ತೀರಾ, ಹೌದು ಯಶ್ ನಟನೆಯ ಗೂಗ್ಲಿ ಮೂವಿ ಯಲ್ಲಿ ಕಾರಿನಲ್ಲಿ ಸ್ನೇಹಿತನ ಮದುವೆಗೆ ಯಶ್ ರವರು ತೆರಳುವಾಗ ನಟಿ ಕೃತಿ ಕರಬಂಧ ರವರ ಜೊತೆ ಯಶ್ ಕಾರ್ ಹತ್ತುವ ಅಜ್ಜಿ ಮತ್ಯಾರು ಅಲ್ಲ ಇವರೇ ಲಕ್ಷ್ಮೀದೇವಿ.

ಮೂಲತಹ ಮಂಡ್ಯದವರೇ ಲಕ್ಷ್ಮೀದೇವಿ ರವರು ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಎಂಟ್ರಿಕೊಟ್ಟರು. ತದನಂತರ ನೃತ್ಯ ಕಲಿತು ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದರು. ಕೆಲವೊಂದು ಸಿನಿಮಾಗಳಲ್ಲಿ ರಾಧೆಯಾಗಿ ಗಮನಸೆಳೆದಿರುವ ಲಕ್ಷ್ಮೀದೇವಿ ರವರು ಹಲವರು ನಾಟಕಗಳಲ್ಲಿಯೂ ಕೂಡ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ಹುಣಸೂರು ಕೃಷ್ಣಮೂರ್ತಿ ರವರ ಎಲ್ಲಾ ಚಿತ್ರಗಳಲ್ಲಿಯೂ ಇವರಿಗೆ ಒಂದು ಪಾತ್ರ ನೀಡಲಾಗುತ್ತಿತ್ತು. ಅಷ್ಟರಮಟ್ಟಿಗೆ ಅದ್ಭುತ ನಟನೆಯನ್ನು ಕರಗತ ಮಾಡಿಕೊಂಡಿದ್ದರು. ಹೀಗ್ಯಾಕೆ ಇವರ ವಿಷಯ ಎಂದುಕೊಂಡಿರಾ ನಾವು ಎಂದು ತಿಳಿಸಲು ಹೊರಟಿರುವುದು ಇದೆ ಎಂಎನ್ ಲಕ್ಷ್ಮೀದೇವಿ ರವರ ಮೊಮ್ಮಗಳ ಬಗ್ಗೆ.

ಎಂಎನ್ ಲಕ್ಷ್ಮೀದೇವಿ ರವರ ಮೊಮ್ಮಗಳು ಯಾರು ಎಂದು ಆಲೋಚನೆ ಮಾಡುತ್ತಿರುವಿರಾ?? ಇವರ ಕುರಿತು ಒಂದು ಚಿಕ್ಕ ಕ್ಲೂ ದೊರಕಿದರೂ ಕೂಡ ನೀವು ಬಹಳ ಸುಲಭವಾಗಿ ಗೆಸ್ ಮಾಡಿ ಬಿಡುತ್ತೀರಿ. ಹೌದು ಸ್ನೇಹಿತರೇ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ವಿವಿಧ ರೀತಿಯ ಪಾತ್ರಗಳಿಗೆ ಜೀವ ತುಂಬಿರುವ ದೀಪಿಕಾ ಶರಣ್ ರವರು ಲಕ್ಷ್ಮೀದೇವಿ ರವರ ಮೊಮ್ಮಗಳು. ದೀಪಿಕಾ ಶರಣ್ ಅವರು ಹಲವಾರು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಇತ್ತೀಚೆಗೆ ಮನೆಮಾತಾಗಿದ್ದ ಯಾರೆ ನೀ ಮೋಹಿನಿ ಧಾರವಾಹಿಯಲ್ಲಿಯೂ ಕೂಡ ದೀಪಿಕಾಶರಣ್ ರವರು ನಟನೆ ಮಾಡಿದ್ದರು. ಇದರ ಜೊತೆಗೆ ಪದ್ಮಾವತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದ ದೀಪಿಕಾ ಶರಣ್ ರವರು ಕೆಲವೇ ಕೆಲವು ದಿನಗಳ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಿಂದ ಕೇಳಿ ಬಂದಿದೆ.

Facebook Comments

Post Author: Ravi Yadav