ಮಂಚ ಹಂಚಿಕೊಂಡರೇ ಮಾತ್ರ ಚಾನ್ಸ್ ಎಂದ ನಿರ್ಮಾಪಕನಿಗೆ ನಟಿ ಶ್ರುತಿ ಮರು ಪ್ರಶ್ನೆಗೆ ಬೆಪ್ಪಾದ ನಿರ್ಮಾಪಕ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಯಾರು ಊಹಿಸದಂತಹ ಸಾಧನೆಗಳನ್ನು ಕೂಡ ಮಹಿಳೆಯರು ಮಾಡುತ್ತಿದ್ದಾರೆ. ಆದರೆ ಇಂದಿಗೂ ಕೂಡ ಕೆಲವು ಪುರುಷರು ಮಹಿಳೆಯರನ್ನು ಕೇವಲ ತಮ್ಮ ಉಪಯೋಗಕ್ಕಾಗಿ ಬಳಸುವ ವಸ್ತು ಎಂದುಕೊಂಡಿದ್ದಾರೆ. ಈ ರೀತಿಯ ವರ್ತನೆ ತೋರುವ ಮುನ್ನ ತಮ್ಮ ಮನೆಯಲ್ಲಿಯೂ ಕೂಡ ಕೆಲವು ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ಆ ಪುರುಷರು ಮರೆಯುತ್ತಿರುವುದು ವಿಪರ್ಯಾಸ.

ಇನ್ನು ಈ ರೀತಿಯ ಹಲವಾರು ಪ್ರಕರಣಗಳು ಸಿನಿಮಾರಂಗದಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತವೆ. ಹಲವಾರು ನಟಿಯರು ಈಗಾಗಲೇ ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿದಂತೆ ಕೆಲವು ಖ್ಯಾತ ನಟರು ತಮ್ಮ ವಿರುದ್ಧ ನಡೆದುಕೊಂಡ ರೀತಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಇನ್ನು ಕೆಲವರು ಆ ಸಂದರ್ಭದಲ್ಲಿ ನಾನು ಕೂಡ ಒಪ್ಪಿಕೊಂಡೆ ನನಗೆ ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಹಂಬಲದಿಂದ ನಾನು ಮಂಚ ಹಂಚಿಕೊಳ್ಳಲು ನಿರ್ಧಾರ ಮಾಡಿದೆ ಎನ್ನುವ ಮಾತುಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಇದು ಒಬ್ಬರ ಇಬ್ಬರ ನಟಿಯರ ಅಥವಾ ಚಿಕ್ಕ ಚಿಕ್ಕ ಚಿತ್ರಗಳಲ್ಲಿ ನಟನೆ ಮಾಡಿರುವ ನಟಿಯರ ವಿಷಯವಲ್ಲ ಬದಲಾಗಿ ಬಾಲಿವುಡ್ ನಿಂದ ಹಿಡಿದು ಎಲ್ಲಾ ಚಿತ್ರರಂಗದಲ್ಲಿಯೂ ಪ್ರಸಿದ್ಧಿ ಪಡೆದು ಕೊಂಡಿರುವ ನಟಿಯರಿಗೆ ಈ ರೀತಿಯ ಪ್ರಸಂಗಗಳು ಎದುರಾಗಿದೆ. ಕೆಲವರು ನಟಿಯರು ಇವುಗಳನ್ನು ದಿಟ್ಟವಾಗಿ ಎದುರಿಸಿ ತಕ್ಕ ಉತ್ತರವನ್ನು ನೀಡಿದ್ದಾರೆ, ಅದೇ ರೀತಿಯ ಘಟನೆ ಇದೀಗ ಮತ್ತೊಮ್ಮೆ ನಡೆದಿದ್ದು ನಿರ್ಮಾಪಕರೊಬ್ಬರು ನಟಿಗೆ ಸಿನಿಮಾದಲ್ಲಿ ಅವಕಾಶ ನೀಡಬೇಕು ಎಂದರೆ ಮಂಚ ಹಂಚಿಕೊಳ್ಳಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಈ ನಟಿ ನಿರ್ಮಾಪಕರ ಮಾತನ್ನು ಕೇಳಿ ಉತ್ತರ ನೀಡದೆ ಹೊರಬಂದಿಲ್ಲ ಬದಲಾಗಿ ತಕ್ಕ ಉತ್ತರ ನೀಡಿ ನಿರ್ಮಾಪಕರಿಗೆ ಬೆವರಿಳಿಸಿದ್ದಾರೆ. ಇವರ ಉತ್ತರ ಖಂಡ ನಿರ್ಮಾಪಕನೂ ಕೂಡಲೇ ಬೆವತು ಮರುಮಾತನಾಡದೆ ಸುಮ್ಮನೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೌದು ಸ್ನೇಹಿತರೇ ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಗಳ ಸಾಲಲ್ಲಿ ಇಲ್ಲದೆ ಇದ್ದರೂ ಕೂಡ ಮಾಡಿದ ಕೆಲವೇ ಕೆಲವು ಸಿನಿಮಾಗಳಲ್ಲಿ ಉತ್ತಮ ನಟನೆ ಮಾಡಿ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ರವರು ಇತ್ತೀಚೆಗೆ ಒಂದು ಸಿನಿಮಾದ ಆಡಿಶನ್ ನಡೆಯುತ್ತಿರುವ ಸುದ್ದಿ ಕೇಳಿ ತಾವು ಕೂಡ ಆಡಿಶನ್ ನೀಡಲು ತೆರಳಿದ್ದಾರೆ.

ನೋಡಲು ಬಹಳ ಸುಂದರವಾಗಿ ಕಾಣುವ ನಟಿಸುತ್ತಿರುವ ಆಡಿಶನ್ ಗೆ ತೆರಳಿದ ಕೂಡಲೆ ನಿರ್ಮಾಪಕ ಹಿಂದೆ ಮುಂದೆ ನೋಡದೆ ನೇರವಾಗಿ ಒಂದು ಹೆಣ್ಣು ಎಂಬುದನ್ನು ಕೂಡ ಗಮನಿಸದೆ ನಿನಗೆ ಚಿತ್ರದಲ್ಲಿ ಅವಕಾಶ ನೀಡುತ್ತೇನೆ. ಆದರೆ ನೀನು ನನ್ನ ಜೊತೆ ಮಲಗಿಕೊಳ್ಳಬೇಕು ಎಂಬ ಷರತ್ತು ವಿಧಿಸಿದ್ದಾರೆ. ಹೀಗೆ ಮಾಡಿದರೆ ಮಾತ್ರ ನಿನಗೆ ಅವಕಾಶ ನೀಡುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಪ್ರಶ್ನೆಯನ್ನು ಕೇಳಿದ ನಟಿ ಶ್ರುತಿ ರವರು ಸುಮ್ಮನೆ ಬಂದು ಬಿಡಬಹುದಾಗಿತ್ತು ಆದರೆ ಅವರು ಆ ರೀತಿ ಮಾಡಲಿಲ್ಲ ಬದಲಾಗಿ,

ಒಹ್ ನನಗೆ ನಟಿಸಲು ಅವಕಾಶ ನೀಡಬೇಕಾದರೆ ನಾವು ನಿನ್ನ ಜೊತೆ ಮಲಗಬೇಕು ಹಾಗಿದ್ದರೆ ಸಿನಿಮಾದಲ್ಲಿ ಹೀರೋ ಕೂಡ ಇರುತ್ತಾನೆ ಹೀರೋ ಯಾರ ಜೊತೆ ಮಲಗಿ ಅವಕಾಶ ಪಡೆಯಬೇಕು ಎಂದು ಮರುಪ್ರಶ್ನೆ ಮಾಡಿದ್ದಾರೆ. ನಟಿ ಶ್ರುತಿ ರವರ ಉತ್ತರವನ್ನು ಕೇಳಿದ ನಿರ್ಮಾಪಕ ಮರುಮಾತನಾಡದೆ ಕೋಪಗೊಂಡು ಅಲ್ಲಿಂದ ಹೋಗಿದ್ದಾನೆ. ನೀವು ಏನೇ ಹೇಳಿ ನಟಿ ಶ್ರುತಿ ರವರಿಗೆ ಇಷ್ಟವಿಲ್ಲದಿದ್ದರೆ ಕೋಪಮಾಡಿಕೊಂಡು ಅಲ್ಲಿಂದ ವಾಪಸ್ಸು ತೆರಳಲು ಕೆಲವೇ ಕೆಲವು ಸೆಕೆಂಡುಗಳು ತೆಗೆದು ಕೊಳ್ಳುತ್ತಿದ್ದವು. ಆದರೆ ನಟಿ ಶ್ರುತಿ ರವರು ಆ ರೀತಿ ಮಾಡದೆ ನಿರ್ಮಾಪಕನಿಗೆ ತಕ್ಕ ಉತ್ತರ ನೀಡಿದ್ದಾರೆ.

Post Author: Ravi Yadav